ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಓವಲ್‌ನಲ್ಲಿ ಪಂದ್ಯ ವೀಕ್ಷಿಸಿದ ಟೀಮ್ ಇಂಡಿಯಾ ಆಟಗಾರರ ಲೈಫ್ ಪಾರ್ಟ್ನರ್ಸ್

Team India players life Partners watching 4th Test match between India vs England

ಲಂಡನ್: ಇಂಗ್ಲೆಂಡ್ ಪ್ರವಾಸದಲ್ಲಿರುವ ಟೀಮ್ ಇಂಡಿಯಾ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ನಾಲ್ಕನೇ ಟೆಸ್ಟ್‌ ಪಂದ್ಯ ಆಡುತ್ತಿದೆ. ಐದು ಪಂದ್ಯಗಳ ಈ ಸುದೀರ್ಘ ಸರಣಿ ಆಗಸ್ಟ್ 4ರಂದು ಆರಂಭಗೊಂಡು ಸೆಪ್ಟೆಂಬರ್‌ 14ರಂದು ಕೊನೆಗೊಳ್ಳಲಿದೆ. ಪ್ರವಾಸ ಸುದೀರ್ಘ ಸಮಯದ್ದಾಗಿರುವುದರಿಂದ ಟೀಮ್ ಇಂಡಿಯಾ ಆಟಗಾರರ ಜೊತೆಗೆ ಅವರವರ ಪತ್ನಿಯರೂ ಸದ್ಯ ಇಂಗ್ಲೆಂಡ್‌ನಲ್ಲಿದ್ದಾರೆ.

ಪಿಕೆಎಲ್ 2021: ಹರಾಜಿನ ಬಳಿಕ ದಬಾಂಗ್ ಡೆಲ್ಲಿ ಸಂಪೂರ್ಣ ಆಟಗಾರರ ಪಟ್ಟಿಪಿಕೆಎಲ್ 2021: ಹರಾಜಿನ ಬಳಿಕ ದಬಾಂಗ್ ಡೆಲ್ಲಿ ಸಂಪೂರ್ಣ ಆಟಗಾರರ ಪಟ್ಟಿ

ಭಾರತೀಯ ತಂಡದಲ್ಲಿ ಸದ್ಯ ಇರುವ ಹೆಚ್ಚಿನ ಆಟಗಾರರಿಗೆ ಮದುವೆಯಾಗಿದೆ. ರೋಹಿತ್ ಶರ್ಮಾ, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ರವೀಂದ್ರ ಜಡೇಜಾ, ಉಮೇಶ್ ಯಾದವ್, ಜಸ್‌ಪ್ರೀತ್‌ ಬೂಮ್ರಾ, ಮೊಹಮ್ಮದ್ ಶಮಿ, ಇಶಾಂತ್ ಶರ್ಮಾ, ಹನುಮ ವಿಹಾರಿ, ಮಯಾಂಕ್ ಅಗರ್ವಾಲ್, ವೃದ್ಧಿಮಾನ್ ಸಾಹ, ಸೂರ್ಯಕುಮಾರ್ ಯಾದವ್ ಮೊದಲಾದವರು ದಾಂಪತ್ಯ ಜೀವನಕ್ಕೆ ಕಾಲಿಸಿರಿದ್ದಾರೆ.

ಮದುವೆಯಾದ ಆಟಗಾರರಲ್ಲಿ ಜಸ್‌ಪ್ರೀತ್‌ ಬೂಮ್ರಾ ಪತ್ನಿ ಸಂಜನಾ ಗಣೇಶನ್, ಅಜಿಂಕ್ಯ ರಹಾನೆ ಪತ್ನಿ ರಾಧಿಕಾ ಥೋಪಾವ್ಕರ್, ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ, ಉಮೇಶ್ ಯಾದವ್ ಪತ್ನಿ ತಾನ್ಯಾ, ವಧ್ವಾ, ಇಶಾಂತ್ ಶರ್ಮಾ ಪತ್ನಿ ಪ್ರತಿಮಾ ಸಿಂಗ್, ಆರ್ ಅಶ್ವಿನ್ ಪತ್ನಿ ಪ್ರೀತಿ ನಾರಾಯಣನ್ ಮೊದಲಾದವರು ಕೆನ್ನಿಂಗ್ಟನ್ ಓವಲ್‌ ಸ್ಟೇಡಿಯಂನಲ್ಲಿ ನಡೆದ ನಾಲ್ಕನೇ ಟೆಸ್ಟ್ ಪಂದ್ಯದ ವೇಳೆ ಜೊತೆಯಾಗಿ ಪಂದ್ಯ ವೀಕ್ಷಿಸಿ ಗಮನ ಸೆಳೆದಿದ್ದಾರೆ. ಟೀಮ್ ಇಂಡಿಯಾ ಆಟಗಾರರ ಲೈಫ್ ಪಾರ್ಟ್ನರ್ಸ್ ಜೊತೆಯಾಗಿರುವ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮತ್ತೆ ಅಶ್ವಿನ್ ಕಡೆಗಣಿಸಿದ ಟೀಮ್ ಇಂಡಿಯಾ; ಶಮಿ, ಇಶಾಂತ್ ಶರ್ಮಾ ಕೂಡ ತಂಡದಿಂದ ಹೊರಕ್ಕೆ!ಮತ್ತೆ ಅಶ್ವಿನ್ ಕಡೆಗಣಿಸಿದ ಟೀಮ್ ಇಂಡಿಯಾ; ಶಮಿ, ಇಶಾಂತ್ ಶರ್ಮಾ ಕೂಡ ತಂಡದಿಂದ ಹೊರಕ್ಕೆ!

ಈ ಬಾರಿಯೂ ಭಾರತ ನೀರಸ ಬ್ಯಾಟಿಂಗ್‌
ನಾಲ್ಕನೇ ಟೆಸ್ಟ್‌ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತ ತಂಡ ಈ ಪಂದ್ಯದಲ್ಲೂ ಕೆಟ್ಟ ಬ್ಯಾಟಿಂಗ್‌ ಮುಂದುವರೆಸಿದೆ. ಆರಂಭಿಕ ಬ್ಯಾಟ್ಸ್‌ಮನ್‌ ರೋಹಿತ್ ಶರ್ಮಾ 11 ರನ್ ಬಾರಿಸಿ ಕ್ರಿಸ್ ವೋಕ್ಸ್ ಓವರ್‌ನಲ್ಲಿ ವಿಕೆಟ್ ಕೀಪರ್ ಜಾನಿ ಬೇರ್ಸ್ಟೋವ್‌ಗೆ ಕ್ಯಾಚಿತ್ತು ನಿರ್ಗಮಿಸಿದ್ದರೆ, ಮತ್ತೊಬ್ಬ ಆರಂಭಿಕ ಆಟಗಾರ ಕೆಎಲ್ ರಾಹುಲ್ 17 ರನ್ ಬಾರಿ ಜೇಮ್ಸ್ ಆ್ಯಂಡರ್ಸನ್‌ಗೆ ವಿಕೆಟ್‌ ನೀಡಿದ್ದಾರೆ. ಮೂರನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಂದಿದ್ದ ಚೇತೇಶ್ವರ್ ಪೂಜಾರ ಕೂಡ 4 ರನ್ ಬಾರಿಸಿ ಜೇಮ್ಸ್ ಆ್ಯಂಡರ್ಸನ್ ಓವರ್‌ನಲ್ಲಿ ಬೇರ್ಸ್ಟೋವ್‌ಗೆ ಕ್ಯಾಚ್‌ ನೀಡಿ ನಿರ್ಗಮಿಸಿದ್ದಾರೆ. ಆಲ್ ರೌಂಡರ್ ರವೀಂದ್ರ ಜಡೇಜಾ ಕೂಡ 10 ರನ್ ಬಾರಿಸಿ ಔಟ್ ಆಗಿದ್ದಾರೆ. ಇನ್ನು ವಿರಾಟ್ ಕೊಹ್ಲಿ 50, ರವೀಂದ್ರ ಜಡೇಜಾ 10, ಅಜಿಂಕ್ಯ ರಹಾನೆ 14 ರನ್ ಬಾರಿಸಿ ವಿಕೆಟ್‌ ಒಪ್ಪಿಸಿದ್ದಾರೆ. 51ನೇ ಓವರ್‌ ಮುಕ್ತಾಯವಾಗಿ ಟೀ ಬ್ರೇಕ್ ವೇಳೆ ಭಾರತ 6 ವಿಕೆಟ್‌ ಕಳೆದು 122 ರನ್ ಬಾರಿಸಿತ್ತು. ರಿಷಭ್ ಪಂತ್ ಮತ್ತು ಶಾರ್ದೂಲ್ ಠಾಕೂರ್ ಆಡುತ್ತಿದ್ದರು.

Story first published: Friday, September 3, 2021, 10:02 [IST]
Other articles published on Sep 3, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X