ರಿಷಭ್ ಪಂತ್ ಪದಾರ್ಪಣೆ ಮಾಡಿದ್ದ ಪಂದ್ಯದಲ್ಲಿ ಆಡಿದ್ದ ಈ ಐವರು ಆಟಗಾರರು ಈಗ ತಂಡದಲ್ಲಿಯೇ ಇಲ್ಲ!

2016ರ ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾದ ಉಪನಾಯಕನಾಗಿದ್ದ ರಿಷಭ್ ಪಂತ್ ನಂತರದ ವರ್ಷದಲ್ಲಿಯೇ ಹಿರಿಯ ಟೀಮ್ ಇಂಡಿಯಾ ಪರ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡುವ ಅವಕಾಶ ಪಡೆದುಕೊಂಡರು. ಹೌದು, 2017ರಲ್ಲಿ ಭಾರತದಲ್ಲಿ ನಡೆಯುತ್ತಿದ್ದ ಇಂಗ್ಲೆಂಡ್ ವಿರುದ್ಧದ ಟಿ ಟ್ವೆಂಟಿ ಸರಣಿಯ ಮೂರನೇ ಪಂದ್ಯದಲ್ಲಿ ರಿಷಭ್ ಪಂತ್ ಟೀಮ್ ಇಂಡಿಯಾ ಪರ ಕಣಕ್ಕಿಳಿಯುವ ಅವಕಾಶ ಪಡೆದರು.

ಲೀಸೆಸ್ಟರ್‌ಶೈರ್ ಟೆಸ್ಟ್: ಕೈಹಿಡಿದ ಮಾಜಿ ಆರ್‌ಸಿಬಿ ಆಟಗಾರ; ಭಾರತದ ಪರ ಅರ್ಧಶತಕ ಬಾರಿಸಿದ್ದು ಈತನೊಬ್ವನೇಲೀಸೆಸ್ಟರ್‌ಶೈರ್ ಟೆಸ್ಟ್: ಕೈಹಿಡಿದ ಮಾಜಿ ಆರ್‌ಸಿಬಿ ಆಟಗಾರ; ಭಾರತದ ಪರ ಅರ್ಧಶತಕ ಬಾರಿಸಿದ್ದು ಈತನೊಬ್ವನೇ

ಅಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ಕಣಕ್ಕಿಳಿದ ರಿಷಭ್ ಪಂತ್ ಅಂದಿನಿಂದ ಇಂದಿನವರೆಗೂ ಟೀಮ್ ಇಂಡಿಯಾದ ಪ್ರಮುಖ ಆಟಗಾರರಲ್ಲಿ ಒಬ್ಬರಾಗಿಬಿಟ್ಟಿದ್ದಾರೆ. ಹೀಗೆ ತಂಡದ ಖಾಯಂ ಸದಸ್ಯರ ಪಟ್ಟಿಯಲ್ಲಿ ಗುರುತಿಸಿಕೊಂಡಿರುವ ರಿಷಭ್ ಪಂತ್ ಪ್ರಸ್ತುತ ನಡೆಯುತ್ತಿರುವ ಪಂದ್ಯಗಳಲ್ಲಿಯೂ ತಂಡದ ಪ್ರಮುಖ ವಿಕೆಟ್ ಕೀಪರ್ ಆಗಿ ತಮ್ಮ ಸ್ಥಾನವನ್ನು ಗಟ್ಟಿಯಾಗಿ ಉಳಿಸಿಕೊಂಡಿದ್ದಾರೆ.

ಅತಿಹೆಚ್ಚು ಅಂತರರಾಷ್ಟ್ರೀಯ ರನ್ ಕಲೆಹಾಕಿರುವ ಸಕ್ರಿಯ ಆಟಗಾರರ ಪಟ್ಟಿ; ನಂಬರ್ 1 ಯಾರು?ಅತಿಹೆಚ್ಚು ಅಂತರರಾಷ್ಟ್ರೀಯ ರನ್ ಕಲೆಹಾಕಿರುವ ಸಕ್ರಿಯ ಆಟಗಾರರ ಪಟ್ಟಿ; ನಂಬರ್ 1 ಯಾರು?

ಇನ್ನು ರಿಷಭ್ ಪಂತ್ ಪದಾರ್ಪಣೆ ಮಾಡಿದ್ದ ಇಂಗ್ಲೆಂಡ್ ವಿರುದ್ಧದ ಆ ಪಂದ್ಯದಲ್ಲಿ ಕಣಕ್ಕಿಳಿದಿದ್ದ ಉಳಿದ 10 ಆಟಗಾರರು ಸದ್ಯ ಏನು ಮಾಡುತ್ತಿದ್ದಾರೆ ಎಂಬುದರ ಕುರಿತ ಮಾಹಿತಿ ಮುಂದೆ ಓದಿ.

ಆರಂಭಿಕ ಆಟಗಾರರು

ಆರಂಭಿಕ ಆಟಗಾರರು

ರಿಷಭ್ ಪಂತ್ ಪದಾರ್ಪಣೆ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕಿಳಿದಿದ್ದ ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಸದ್ಯ ಟೀಮ್ ಇಂಡಿಯಾದ ಪ್ರಮುಖ ಆಟಗಾರರಾಗಿದ್ದಾರೆ. ವಿರಾಟ್ ಕೊಹ್ಲಿ ಸದ್ಯ ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದರೆ, ಟೀಮ್ ಇಂಡಿಯಾದ ಉಪನಾಯಕನ ಸ್ಥಾನ ಗಿಟ್ಟಿಸಿಕೊಂಡಿರುವ ಕೆಎಲ್ ರಾಹುಲ್ ಸದ್ಯ ಗಾಯದ ಸಮಸ್ಯೆಯಿಂದ ಹೊರಗುಳಿದು ವಿಶ್ರಾಂತಿ ಪಡೆಯುತ್ತಿದ್ದಾರೆ.

ಮಧ್ಯಮ ಕ್ರಮಾಂಕ

ಮಧ್ಯಮ ಕ್ರಮಾಂಕ

ಈ ಪಂದ್ಯದಲ್ಲಿ ಪದಾರ್ಪಣೆ ಮಾಡಿದ್ದ ರಿಷಬ್ ಪಂತ್ ಹಾಗೂ ಎಂಎಸ್ ಧೋನಿ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದರು. ಇನ್ನು ಎಂಎಸ್ ಧೋನಿ ಸದ್ಯ ಅಂತರರಾಷ್ಟ್ರೀಯ ಕ್ರಿಕೆಟ್‍ನಿಂದ ನಿವೃತ್ತಿ ಪಡೆದು ಹೊರಗುಳಿದಿದ್ದು, ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗಳಲ್ಲಿ ಆಡುತ್ತಿದ್ದಾರೆ.

ಆಲ್ ರೌಂಡರ್ಸ್

ಆಲ್ ರೌಂಡರ್ಸ್

ರಿಷಭ್ ಪಂತ್ ಪದಾರ್ಪಣೆ ಮಾಡಿದ್ದ ಈ ಪಂದ್ಯದಲ್ಲಿ ಆಲ್ ರೌಂಡರ್ಸ್ ಆಟಗಾರರಾಗಿ ಸುರೇಶ್ ರೈನಾ, ಯುವರಾಜ್ ಸಿಂಗ್ ಮತ್ತು ಹಾರ್ದಿಕ್ ಪಾಂಡ್ಯ ಕಣಕ್ಕಿಳಿದಿದ್ದರು. ಈ ಪೈಕಿ ಸುರೇಶ್ ರೈನಾ ಸದ್ಯ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರೆ, ಯುವರಾಜ್ ಸಿಂಗ್ ಕೂಡ ಅಂತಾರಾಷ್ಟ್ರೀಯ ಕ್ರಿಕೆಟ್‍ನಿಂದ ಹೊರಗುಳಿದಿದ್ದಾರೆ ಹಾಗೂ ಹಾರ್ದಿಕ್ ಪಾಂಡ್ಯ ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ವಾಪಸಾಗಿದ್ದಾರೆ.

ಬೌಲರ್‌ಗಳು

ಬೌಲರ್‌ಗಳು

ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಪರ ಬೌಲರ್‌ಗಳಾದ ಆಶಿಷ್ ನೆಹ್ರಾ, ಜಸ್ ಪ್ರೀತ್ ಬೂಮ್ರಾ, ಯುಜ್ವೇಂದ್ರ ಚಹಲ್ ಹಾಗೂ ಅಮಿತ್ ಮಿಶ್ರಾ ಕಣಕ್ಕಿಳಿದಿದ್ದರು. ಸದ್ಯ ಜಸ್ ಪ್ರೀತ್ ಬುಮ್ರಾ ಟೀಂ ಇಂಡಿಯಾದ ಪ್ರಮುಖ ಬೌಲರ್ ಆಗಿದ್ದರೆ, ಯಜುವೇಂದ್ರ ಚಾಹಲ್ ಇತ್ತೀಚೆಗಷ್ಟೇ ಅಂತರರಾಷ್ಟ್ರೀಯ ಕ್ರಿಕೆಟ್‍ಗೆ ಮರಳಿದ್ದಾರೆ ಹಾಗೂ ಉಳಿದ ಆಶಿಶ್ ನೆಹ್ರಾ ಮತ್ತು ಅಮಿತ್ ಮಿಶ್ರಾ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ದೂರ ಉಳಿದಿದ್ದಾರೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Friday, June 24, 2022, 21:01 [IST]
Other articles published on Jun 24, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X