ಭಾರತದ ಬೌಲಿಂಗ್ ದುರ್ಬಲವಾಗಲು ಇದೇ ಕಾರಣ ಎಂದ ಆಕಾಶ್ ಚೋಪ್ರಾ

ಏಷ್ಯಾಕಪ್‌ ಟೂರ್ನಿಯಿಂದ ಭಾರತದ ಬೌಲಿಂಗ್ ಬಗ್ಗೆ ಟೀಕೆಗಳು ಕೇಳಿಬರುತ್ತಲೇ ಇವೆ. ಹರ್ಷಲ್ ಪಟೇಲ್, ಜಸ್ಪ್ರೀತ್ ಬುಮ್ರಾ ಗಾಯದ ಸಮಸ್ಯೆಯಿಂದ ಏಷ್ಯಾಕಪ್‌ನಲ್ಲಿ ಭಾರತದ ಬೌಲಿಗ್ ದುರ್ಬಲವಾಗಿತ್ತು. ಸೂಪರ್ 4 ಹಂತದಲ್ಲೇ ಪಾಕಿಸ್ತಾನ ಮತ್ತು ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಸೋಲುವ ಮೂಲಕ ಏಷ್ಯಾಕಪ್‌ನಿಂದ ಹೊರಬಿದ್ದಿತ್ತು.

ಕೆರಿಬಿಯನ್ ಪ್ರೀಮಿಯರ್ ಲೀಗ: 3ನೇ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿದ ಜಮೈಕಾ ತಲ್ಲವಾಸ್ಕೆರಿಬಿಯನ್ ಪ್ರೀಮಿಯರ್ ಲೀಗ: 3ನೇ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿದ ಜಮೈಕಾ ತಲ್ಲವಾಸ್

ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಬುಮ್ರಾ ಮತ್ತು ಪಟೇಲ್ ತಂಡಕ್ಕೆ ವಾಪಸ್ ಆಗಿದ್ದರೂ ಕೂಡ ಸ್ಲಾಗ್ ಓವರ್ ಗಳಲ್ಲಿ ಹೆಚ್ಚಿನ ರನ್ ಬಿಟ್ಟುಕೊಟ್ಟಿದ್ದರು. ಮೊಹಾಲಿಯಲ್ಲಿ ನಡೆದ ಮೊದಲನೇ ಪಂದ್ಯದಲ್ಲಿ 208 ರನ್ ಗಳಿಸಿದ ಹೊರತಾಗಿಯೂ ಸೋಲನುಭವಿಸಿದ್ದರು. ನಂತರ ಆಸ್ಟ್ರೇಲಿಯಾ ವಿರುದ್ಧದ ಎರಡೂ ಪಂದ್ಯಗಳನ್ನು ಗೆದ್ದರು, ಅದು ಚೇಸಿಂಗ್ ಮಾಡಿದಾಗ ಗೆಲುವು ಪಡೆಯತು.

ಕೊನೆಯಾಗಿ ಮೊದಲು ಬ್ಯಾಟ್ ಮಾಡಿದ ನಾಲ್ಕು ಪಂದ್ಯಗಳಲ್ಲಿ ಮೂರು ಪಂದ್ಯವನ್ನು ಟೀಂ ಇಂಡಿಯಾ ಸೋತಿದೆ. ಮತ್ತೆ ಗಾಯದ ಸಮಸ್ಯೆಗೆ ತುತ್ತಾಗಿರುವ ಬುಮ್ರಾ ಟಿ20 ವಿಶ್ವಕಪ್‌ನಲ್ಲಿ ಆಡುವ ಬಗ್ಗೆ ಅನುಮಾನ ಶುರುವಾಗಿದೆ. ಟೀಂ ಇಂಡಿಯಾದ ಬೌಲಿಂಗ್ ಮೊದಲೇ ದುರ್ಬಲವಾಗಿದೆ ಎನ್ನುವ ಸುದ್ದಿಯ ಮಧ್ಯೆ ಅನುಭವಿ ಬುಮ್ರಾ ಅನುಪಸ್ಥಿತಿ ಭಾರತವನ್ನು ಕಾಡಲಿದೆ.

ಬೌಲಿಂಗ್ ಮಾತ್ರ ಭಾರತದ ಸಮಸ್ಯೆಯಲ್ಲ

ಬೌಲಿಂಗ್ ಮಾತ್ರ ಭಾರತದ ಸಮಸ್ಯೆಯಲ್ಲ

ಟೀಂ ಇಂಡಿಯಾದ ಬೌಲಿಂಗ್ ಬಗ್ಗೆ ಎಲ್ಲರೂ ಟೀಕೆ ಮಾಡುತ್ತಿರುವಾಗ, ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಮತ್ತೊಂದು ಸಮಸ್ಯೆ ಬಗ್ಗೆ ಗಮನ ಸೆಳೆದಿದ್ದಾರೆ. ಇತ್ತೀಚಿನ ದಿನಗಳಲ್ಲಿ ಭಾರತದ ಫೀಲ್ಡಿಂಗ್ ಕಳಪೆಯಾಗಿದೆ ಎನ್ನುವ ವಿಚಾರವನ್ನು ಗಮನಿಸಿರುವ ಅವರು. ಭಾರತದ ಸೋಲಿಗೆ ಇದೂ ಒಂದು ಕಾರಣ ಎಂದು ಹೇಳಿದ್ದಾರೆ.

ಭಾರತದ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ, ಇತ್ತೀಚಿನ ದಿನಗಳಲ್ಲಿ ಟೀಂ ಇಂಡಿಯಾಗೆ ಹೆಚ್ಚು ಹಾನಿಯುಂಟುಮಾಡಿದ್ದು ಕಳಪೆ ಫೀಲ್ಡಿಂಗ್ ಎಂದು ಹೇಳಿದ್ದಾರೆ. ಟೀಂ ಇಂಡಿಯಾ ಈಗಾಗಲೇ ಕೆಲವು ಸರಳ ಕ್ಯಾಚ್‌ಗಳನ್ನು ಕೈಬಿಟ್ಟಿದೆ, ಇದು ಬೌಲಿಂಗ್ ವಿಭಾಗದ ಮೇಲಿನ ಒತ್ತಡವನ್ನು ಹೆಚ್ಚಿಸಿದೆ ಎಂದು ಹೇಳಿದ್ದಾರೆ.

'ವಿರಾಟ್ ಕೊಹ್ಲಿ, ನಿವೃತ್ತಿಗೂ ಮುನ್ನ ಪಾಕಿಸ್ತಾನದಲ್ಲಿ ಒಮ್ಮೆ ಆಡಿ'; ಪಾಕ್ ಅಭಿಮಾನಿಯ ಪೋಸ್ಟರ್ ವೈರಲ್

ಕ್ಯಾಚ್‌ಗಳನ್ನು ಬಿಟ್ಟರೆ ಒತ್ತಡ ಹೆಚ್ಚಾಗುತ್ತದೆ

ಕ್ಯಾಚ್‌ಗಳನ್ನು ಬಿಟ್ಟರೆ ಒತ್ತಡ ಹೆಚ್ಚಾಗುತ್ತದೆ

"ನಮ್ಮ ಬೌಲಿಂಗ್ ಎಷ್ಟು ದುರ್ಬಲವಾಗಿದೆ ಮತ್ತು ಎಷ್ಟು ರನ್ ಗಳಿಸಿದರೂ ಹೇಗೆ ನಮಗೆ ರಕ್ಷಿಸಲು ಸಾಧ್ಯವಾಗುತ್ತಿಲ್ಲ ಎಂಬುದರ ಕುರಿತು ಈಗಾಗಲೇ ಸಾಕಷ್ಟು ಚರ್ಚೆ ಮಾಡಲಾಗಿದೆ. ಆದರೆ ವಾಸ್ತವವೆಂದರೆ ಬೌಲರ್‌ಗಳು ವಿಕೆಟ್ ಪಡೆಯುವ ಅವಕಾಶವನ್ನು ಸೃಷ್ಟಿಸಿದಾಗ, ನಮ್ಮ ಫೀಲ್ಡರ್‌ಗಳು ಕೆಲವು ಕ್ಯಾಚ್‌ಗಳನ್ನು ಹಿಡಿಯಲು ಸಾಧ್ಯವಾಗುವುದಿಲ್ಲ, ಅದು ಬೌಲರ್‌ಗಳನ್ನು ಮತ್ತಷ್ಟು ದುರ್ಬಲರನ್ನಾಗಿಸುತ್ತದೆ" ಎಂದು ಹೇಳಿದ್ದಾರೆ.

ಟೀಂ ಇಂಡಿಯಾ ಪ್ರತಿ ಆರು ಕ್ಯಾಚ್‌ಗಳಲ್ಲಿ ನಾಲ್ಕು ಕ್ಯಾಚ್‌ಗಳನ್ನಷ್ಟೇ ಹಿಡಿಯಲು ಸಾಧ್ಯವಾಗಿದೆ. ಎರಡು ಕ್ಯಾಚ್‌ಗಳನ್ನು ಕೈಚೆಲ್ಲುತ್ತಿರುವುದು ಫೀಲ್ಡಿಂಗ್ ಗುಣಮಟ್ಟವನ್ನು ತೋರಿಸುತ್ತದೆ ಎಂದು ಹೇಳಿದರು.

ಪಾಕಿಸ್ತಾನಕ್ಕಿಂತ ಟೀಂ ಇಂಡಿಯಾ ಹೆಚ್ಚಿನ ಕ್ಯಾಚ್ ಬಿಟ್ಟಿದೆ

ಪಾಕಿಸ್ತಾನಕ್ಕಿಂತ ಟೀಂ ಇಂಡಿಯಾ ಹೆಚ್ಚಿನ ಕ್ಯಾಚ್ ಬಿಟ್ಟಿದೆ

ಭಾರತ ಈ ವರ್ಷ ಪಾಕಿಸ್ತಾನಕ್ಕಿಂತ ಹೆಚ್ಚು ಕ್ಯಾಚ್‌ಗಳನ್ನು ಕೈಬಿಟ್ಟಿದೆ ಎಂದು ಆಕಾಶ್ ಚೋಪ್ರಾ ಆಘಾತಕಾರಿ ಅಂಕಿಅಂಶವನ್ನುಬಹಿರಂಗಪಡಿಸಿದ್ದಾರೆ. ಕ್ಯಾಚ್‌ಗಳನ್ನು ಕೈಬಿಟ್ಟಿದ್ದಕ್ಕಾಗಿ ಹೆಚ್ಚಿನ ಅಭಿಮಾನಿಗಳು ಪಾಕಿಸ್ತಾನ ತಂಡವನ್ನು ಟ್ರೋಲ್ ಮಾಡುತ್ತಾರೆ ಎಂದು ಆಕಾಶ್ ಚೋಪ್ರಾ ಹೇಳಿದ್ದಾರೆ.

ಪಾಕಿಸ್ತಾನ ಹಲವು ಕ್ಯಾಚ್‌ಗಳನ್ನು ಬಿಡುತ್ತದೆ ಎಂದು ನಾವು ಹೇಳುತ್ತೇವೆ, ಆದರೆ ವಾಸ್ತವವೆಂದರೆ ನಾವು ಅವರಿಗಿಂತ ಹೆಚ್ಚು ಕ್ಯಾಚ್‌ಗಳನ್ನು ಬಿಡುತ್ತೇವೆ. ಟೀಂ ಇಂಡಿಯಾ ಒಟ್ಟು ಕ್ಯಾಚ್‌ಗಳಲ್ಲಿ ಕೇವಲ 75.8 ಪ್ರತಿಶತದಷ್ಟು ಮಾತ್ರ ಹಿಡಿಯಲು ಸಾಧ್ಯವಾಗಿದೆ. ಶೇಕಡಾ 74.3 ಅಂಕಗಳೊಂದಿಗೆ ಶ್ರೀಲಂಕಾ ಭಾರತಕ್ಕಿಂತ ಕೆಟ್ಟ ದಾಖಲೆಯನ್ನು ಹೊಂದಿದೆ.

ಟಿ20 ವಿಶ್ವಕಪ್‌ನಲ್ಲಿ ಇದು ಮುಖ್ಯವಾಗುತ್ತದೆ

ಟಿ20 ವಿಶ್ವಕಪ್‌ನಲ್ಲಿ ಇದು ಮುಖ್ಯವಾಗುತ್ತದೆ

ಅಕ್ಟೋಬರ್ ತಿಂಗಳಲ್ಲಿ ಆಸ್ಟ್ರೇಲಿಯಾದಲ್ಲಿ ಆರಂಭವಾಗಲಿರುವ ಟಿ20 ವಿಶ್ವಕಪ್‌ ಪಂದ್ಯಾವಳಿಯಲ್ಲಿ ಭಾರತ ಫಿಲ್ಡಿಂಗ್‌ನಲ್ಲೂ ಸುಧಾರಣೆಯಾಗಬೇಕು ಎಂದು ಆಕಾಶ್ ಚೋಪ್ರಾ ಹೇಳಿದ್ದಾರೆ.

ವಿಶ್ವದ ಬಲಿಷ್ಠ ತಂಡಗೊಳಿಂದಿಗೆ ವಿಶ್ವಕಪ್‌ಗಾಗಿ ಸೆಣೆಸಾಡುವಾಗ ಮೈದಾನದಲ್ಲಿ ಸಿಗುವ ಪ್ರತಿ ಅವಕಾಶವನ್ನು ಬಳಸಿಕೊಳ್ಳಬೇಕಾಗುತ್ತದೆ. ರೋಹಿತ್ ಶರ್ಮಾ ಮತ್ತು ತಂಡ ವಿಶ್ವಕಪ್ ವೇಳೆಗೆ ತಮ್ಮ ಬ್ಯಾಟಿಂಗ್, ಬೌಲಿಂಗ್ ಅಷ್ಟೇ ಅಲ್ಲದೆ ಉತ್ತಮ ಫೀಲ್ಡಿಂಗ್ ಕಡೆಗೂ ಗಮನ ಕೊಡಬೇಕು ಎಂದು ಹೇಳಿದ್ದಾರೆ.

For Quick Alerts
ALLOW NOTIFICATIONS
For Daily Alerts
Story first published: Saturday, October 1, 2022, 16:40 [IST]
Other articles published on Oct 1, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X