ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಯೋಗ ಟೀಚರ್ ಮತ್ತು ಕ್ರೀಡಾ ಮನಶಾಸ್ತ್ರಜ್ಞರನ್ನು ಆಸ್ಟ್ರೇಲಿಯಾಗೆ ಕರೆದೊಯ್ಯಲು ಟೀಮ್ ಇಂಡಿಯಾ ಮನವಿ

Team India Request For A Yoga Teacher And Sports Psychologist For Upcoming Australia Tour

ಭಾರತೀಯ ಕ್ರಿಕೆಟ್ ತಂಡವು ಪೂರ್ಣ ಪ್ರಮಾಣದ ಸರಣಿಗಾಗಿ ಆಸ್ಟ್ರೇಲಿಯಾ ಪ್ರವಾಸಕ್ಕೆ ಸಜ್ಜಾಗಿದ್ದು, ಇದು ಆರು ಸೀಮಿತ ಓವರ್‌ಗಳ ಅಂತರರಾಷ್ಟ್ರೀಯ (3 ಏಕದಿನ + 3 ಟಿ 20 ) ಗಳನ್ನು ಒಳಗೊಂಡಿರುತ್ತದೆ ಮತ್ತು ನಂತರ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯನ್ನು ಒಳಗೊಂಡಿರುತ್ತದೆ.

ಸರಣಿ ಪ್ರಾರಂಭವಾಗುವ ಮೊದಲು ಭೇಟಿ ನೀಡುವ ಭಾರತೀಯರು ಕಡ್ಡಾಯವಾಗಿ ಕ್ವಾರಂಟೈನ್‌ಗೆ ಒಳಗಾಗಲು ಕ್ರಿಕೆಟ್ ಆಸ್ಟ್ರೇಲಿಯಾ ಅಂತಿಮವಾಗಿ ನ್ಯೂ ಸೌತ್ ವೇಲ್ಸ್ ಸರ್ಕಾರದಿಂದ ಅನುಮತಿ ಪಡೆಯಿತು.

ಭಾರತ vs ಆಸ್ಟ್ರೇಲಿಯಾ 2020-21ರ ಕ್ರಿಕೆಟ್ ಸರಣಿ: ಟೆಸ್ಟ್‌, ಏಕದಿನ, ಟಿ20 ಸಂಪೂರ್ಣ ವೇಳಾಪಟ್ಟಿಭಾರತ vs ಆಸ್ಟ್ರೇಲಿಯಾ 2020-21ರ ಕ್ರಿಕೆಟ್ ಸರಣಿ: ಟೆಸ್ಟ್‌, ಏಕದಿನ, ಟಿ20 ಸಂಪೂರ್ಣ ವೇಳಾಪಟ್ಟಿ

ವಿರಾಟ್ ಕೊಹ್ಲಿ ನೇತೃತ್ವದ ತಂಡವು ಸಿಡ್ನಿಯಲ್ಲಿ 14 ದಿನಗಳ ಕ್ವಾರಂಟೈನ್‌ಗೆ ಒಳಗಾಗಲಿದೆ, ಅಲ್ಲಿ ಅವರಿಗೆ ಒಂದು ವಾರದ ನಂತರ ಅಭ್ಯಾಸ ಮಾಡಲು ಅವಕಾಶವಿರುತ್ತದೆ.

ಈ ಸರಣಿಯನ್ನು ಕಟ್ಟುನಿಟ್ಟಾದ ಜೈವಿಕ ಭದ್ರತಾ ಪ್ರೋಟೋಕಾಲ್‌ಗಳ ಅಡಿಯಲ್ಲಿ ಆಡಲಾಗುವುದು ಮತ್ತು ಆಟಗಾರರು ಇಂತಹ ಕಠಿಣ ಪರಿಸ್ಥಿತಿಗಳಲ್ಲಿ ಸಮಯವನ್ನು ಕಳೆಯಲು, ಭಾರತೀಯರಿಗೆ ತಮ್ಮ ಕುಟುಂಬಗಳೊಂದಿಗೆ ಪ್ರಯಾಣಿಸಲು ಅವಕಾಶ ನೀಡುವಂತೆ ಬಿಸಿಸಿಐ ಈ ಹಿಂದೆ ಸಿಎಗೆ ಕೋರಿತ್ತು, ಈ ಕ್ರಮವನ್ನು ನಿರಾಕರಿಸಲಾಗಿದೆ ಎಂದು ವರದಿಯಾಗಿದೆ.

ಕುಟುಂಬ ಸದಸ್ಯರನ್ನು ಕರೆದೊಯ್ಯುವ ವಿನಂತಿಯನ್ನು ಕ್ರಿಕೆಟ್ ಆಸ್ಟ್ರೇಲಿಯಾ ನಿರಾಕರಿಸಲಾದ ಹಿನ್ನೆಲೆ, ಭಾರತೀಯ ಕ್ರಿಕೆಟ್ ತಂಡದ ಆಡಳಿತವು ಬಿಸಿಸಿಐಗೆ ಕ್ರೀಡಾ ಮನಶಾಸ್ತ್ರಜ್ಞ ಮತ್ತು ಯೋಗ ತರಬೇತುದಾರನನ್ನು ಆಸ್ಟ್ರೇಲಿಯಾಕ್ಕೆ ಕರೆದೊಯ್ಯಲು ವಿನಂತಿಯನ್ನು ಸಲ್ಲಿಸಿದೆ, ಈ ವಿನಂತಿಯನ್ನು ಸಿಎ ಸ್ವೀಕರಿಸುವ ಸಾಧ್ಯತೆಯಿದೆ.

ಕ್ರೀಡಾ ಮನಶ್ಶಾಸ್ತ್ರಜ್ಞರ ಮಟ್ಟಿಗೆ ಹೇಳುವುದಾದರೆ, ಪ್ರಸ್ತುತ ಬಯೋ-ಬಬಲ್‌ನ ಭಾಗವಾಗಿರುವ ಹಲವಾರು ಆಟಗಾರರು ತಮ್ಮ ಕುಂದುಕೊರತೆಗಳನ್ನು ಬಿಸಿಸಿಐಗೆ ವ್ಯಕ್ತಪಡಿಸಿದ ನಂತರ ತಂಡದ ಆಡಳಿತ ಮಂಡಳಿಯು ಈ ವಿನಂತಿಯನ್ನು ಮಾಡಿದ್ದಾರೆ.

Story first published: Friday, October 23, 2020, 14:49 [IST]
Other articles published on Oct 23, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X