ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

2019-2020ರಲ್ಲಿ ಭಾರತ ತವರಿನಲ್ಲಿ ಆಡುವ ಕ್ರಿಕೆಟ್‌ ಸರಣಿಗಳ ವಿವರ ಇಲ್ಲಿದೆ

ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಎರಡು ಟಿ20-ಐ ಪಂದ್ಯಗಳ ಆತಿಥ್ಯ ಲಭಿಸಿದೆ.

ಇಂಡಿಯಾದಲ್ಲಿ ನಡೆಯಲಿದೆ ಭರ್ಜರಿ ಕ್ರಿಕೆಟ್ ಟೂರ್ನಿಗಳು..? | Oneindia Kannada
Team Indias action packed 2019-2020 home cricket season

ಹೊಸದಿಲ್ಲಿ, ಜುಲೈ 17: ಕಳೆದ ನಾಲ್ಕು ತಿಂಗಳ ಅವಧಿಯಲ್ಲಿ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಮತ್ತು ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ನಂತರ ಎರಡು ಅದ್ಭುತ ಟೂರ್ನಿಗಳು ಕ್ರಿಕೆಟ್‌ ಅಭಿಮಾನಿಗಳಿಗೆ ರೋಚಕ ಪಂದ್ಯಗಳ ರಸದೌತಣವನ್ನು ಉಣಬಡಿಸಿವೆ.

ಟೀಮ್‌ ಇಂಡಿಯಾ ವಿಶ್ವಕಪ್‌ನ ಸೆಮಿಫೈನಲ್ಸ್‌ ಸೋಲಿನ ಬಳಿಕ ತಾಯ್ನಾಡಿಗೆ ಹಿಂದಿರುಗಿದ್ದು, ಅಲ್ಪ ವಿಶ್ರಾಂತಿ ತೆಗೆದುಕೊಳ್ಳಲಿದೆ. ಬಳಿಕ ಇದೇ ತಿಂಗಳ ಅಂತ್ಯದ ಹೊತ್ತಿಗೆ ಟೆಸ್ಟ್, ಏಜದಿನ ಹಾಗೂ ಟಿ20 ಸರಣಿಗಳ ಸಲುವಾಗಿ ವೆಸ್ಟ್‌ ಇಂಡೀಸ್‌ಗೆ ಪ್ರಯಾಣ ಬೆಳೆಸಲಿದೆ. ಅಂದಗಾಗೆ ವೆಸ್ಟ್‌ ಇಂಡೀಸ್‌ ಸರಣಿ ನಂತರ ಭಾರತ ತಾಯ್ನಾಡಿನಲ್ಲಿ ಬಲಿಷ್ಠ ಮತ್ತು ದುರ್ಬಲ ತಂಡಗಳ ಎದುರು ಸಾಲು ಸಾಲು ಸರಣಿಗಳನ್ನು ಆಡಲಿದೆ.

ಧೋನಿಗೆ ಟೀಮ್‌ ಇಂಡಿಯಾದ ಕದ ಮುಚ್ಚುವ ಸಮಯ ಹತ್ತಿರ?!ಧೋನಿಗೆ ಟೀಮ್‌ ಇಂಡಿಯಾದ ಕದ ಮುಚ್ಚುವ ಸಮಯ ಹತ್ತಿರ?!

ವೆಸ್ಟ್‌ ಇಂಡೀಸ್‌ ಪ್ರವಾಸದ ಬಳಿಕ ಭಾರತ ತಂಡ ಮರಳಿ ಪ್ರವಾಸ ಕೈಗೊಳ್ಳಲಿರುವುದು 2020ರ ಫೆಬ್ರವರಿಯಲ್ಲಿ. ನ್ಯೂಜಿಲೆಂಡ್‌ಗೆ ತೆರಳಲಿರುವ ಭಾರತ ಟಿ20 ವಿಶ್ವಕಪ್‌ ಪೂರ್ವ ಸಿದ್ಧತೆಗಾಗಿ 5 ಟಿ20-ಐ ಪಂದ್ಯಗಳನ್ನಾಡಲಿದೆ. ಇದರಲ್ಲಿ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ವಿರುದ್ಧ ಟಿ20 ಪಂದ್ಯಗಳನ್ನಾಡಲಿದೆ.

ವಿಶ್ವ ಚಾಂಪಿಯನ್ಸ್‌ ತಂಡದ ಕೋಚ್‌ ಜೊತೆಗೆ ನೈಟ್‌ ರೈಡರ್ಸ್‌ ಒಪ್ಪಂದವಿಶ್ವ ಚಾಂಪಿಯನ್ಸ್‌ ತಂಡದ ಕೋಚ್‌ ಜೊತೆಗೆ ನೈಟ್‌ ರೈಡರ್ಸ್‌ ಒಪ್ಪಂದ

ಇನ್ನು ತವರಿನಂಗಣದಲ್ಲಿ ನಡೆಯಲಿರುವ ಸರಣಿಗಳ ಕುರಿತಾಗಿ ಹೇಳುವುದಾದರೆ 2019-2020ರ ಅವಧಿಯಲ್ಲಿ ಭಾರತ ಒಟ್ಟು 5 ಟೆಸ್ಟ್‌, 9 ಏಕದಿನ ಹಾಗೂ 12 ಟಿ20-ಐ ಪಂದ್ಯಗಳನ್ನಾಡಲಿದ್ದು, ಅಭಿಮಾನಿಗಳಿಗೆ ಭರಪೂರ ಕ್ರಿಕೆಟ್‌ ಮನರಂಜನೆ ನೀಡಲು ಸಜ್ಜಾಗುತ್ತಿದೆ. ಮುಂಬರುವ ಸೆಪ್ಟೆಂಬರ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ 3 ಟಿ20 ಪಂದ್ಯಗಳೊಂದಿದೆ ಭಾರತ ತಂಡದ ತವರಿನಂಗಣದ ಸರಣಿ ಸವಾಲುಗಳು ಆರಂಭವಾಗಲಿದೆ.

ಭಾರತ ತಂಡ 2019-2020ರ ಅವಧಿಯಲ್ಲಿ ತಾಯ್ನಾಡಿನಲ್ಲಿ ಯಾವ ಯಾವ ತಂಡಳ ವಿರುದ್ಧ ಎಷ್ಟು ಪಂದ್ಯಗಳನ್ನು ಆಡಲಿದೆ ಎಂಬ ಸಂಪೂರ್ಣ ವಿವರ ಇಲ್ಲಿದೆ.

 ಭಾರತ vs ದಕ್ಷಿಣ ಆಫ್ರಿಕಾ, 2019 (3 ಟಿ20-ಐ ಮತ್ತು 3 ಟೆಸ್ಟ್‌)

ಭಾರತ vs ದಕ್ಷಿಣ ಆಫ್ರಿಕಾ, 2019 (3 ಟಿ20-ಐ ಮತ್ತು 3 ಟೆಸ್ಟ್‌)

ಬೆಂಗಳೂರಿನಲ್ಲಿ ಟಿ20 ಪಂದ್ಯ
ಸೆ.15, 2019; ಮೊದಲ ಟಿ20 (ಧರ್ಮಶಾಲಾ)
ಸೆ.18, 2019; ಎರಡನೇ ಟಿ20 (ಮೊಹಾಲಿ)
ಸೆ.22, 2019; ಮೂರನೇ ಟಿ20 (ಬೆಂಗಳೂರು)
ಅ.2-6, 2019; ಪ್ರಥಮ ಟೆಸ್ಟ್‌ (ವೈಝಾಗ್‌)
ಅ.10-14, 2019; ದ್ವಿತೀಯ ಟೆಸ್ಟ್‌ (ರಾಂಚಿ)
ಅ.19-23, 2019; ತೃತೀಯ ಟೆಸ್ಟ್‌ (ಪುಣೆ)

 ಭಾರತ vs ಬಾಂಗ್ಲಾದೇಶ (3 ಟಿ20-ಐ ಮತ್ತು 2 ಟೆಸ್ಟ್‌)

ಭಾರತ vs ಬಾಂಗ್ಲಾದೇಶ (3 ಟಿ20-ಐ ಮತ್ತು 2 ಟೆಸ್ಟ್‌)

ನ.03, 2019; ಮೊದಲ ಟಿ20 (ದಿಲ್ಲಿ)
ನ.07, 2019; ಎರಡನೇ ಟಿ20 (ರಾಜ್‌ಕೋಟ್‌)
ನ.10, 2019; ಮೂರನೇ ಟಿ20 (ನಾಗ್ಪುರ)
ನ.14-18, 2019; ಪ್ರಥಮ ಟೆಸ್ಟ್‌ (ಇಂದೋರ್‌)
ನ.22-26, 2019; ದ್ವಿತೀಯ ಟೆಸ್ಟ್‌ (ಕೋಲ್ಕೊತಾ)

ಭಾರತ vs ವೆಸ್ಟ್‌ ಇಂಡೀಸ್‌ (3 ಟಿ20-ಐ ಮತ್ತು 3 ಒಡಿಐ)

ಭಾರತ vs ವೆಸ್ಟ್‌ ಇಂಡೀಸ್‌ (3 ಟಿ20-ಐ ಮತ್ತು 3 ಒಡಿಐ)

ಡಿ.06, 2019; ಮೊದಲ ಟಿ20 (ಮುಂಬೈ)
ಡಿ.08, 2019; ಎರಡನೇ ಟಿ20 (ತಿರುವನಂತಪುರ)
ಡಿ.11, 2019; ಮೂರನೇ ಟಿ20 (ಹೈದರಾಬಾದ್‌)
ಡಿ.15, 2019; ಪ್ರಥಮ ಒಡಿಐ (ಚೆನ್ನೈ)
ಡಿ.18, 2019; ದ್ವಿತೀಯ ಒಡಿಐ (ವೈಝಾಗ್‌)
ಡಿ.22, 2019; ತೃತೀಯ ಒಡಿಐ (ಕಟಕ್‌)

ಭಾರತ vs ಜಿಂಬಾಬ್ವೆ (3 ಟಿ20-ಐ)

ಭಾರತ vs ಜಿಂಬಾಬ್ವೆ (3 ಟಿ20-ಐ)

ಜ.05, 2020; ಮೊದಲ ಟಿ20 (ಗುವಾಹಟಿ)
ಜ.07, 2020; ಎರಡನೇ ಟಿ20 (ಇಂದೋರ್‌)
ಜ.10, 2020; ಮೂರನೇ ಟಿ20 (ಪುಣೆ)

ಭಾರತ vs ಆಸ್ಟ್ರೇಲಿಯಾ (3 ಟಿ20-ಐ)

ಭಾರತ vs ಆಸ್ಟ್ರೇಲಿಯಾ (3 ಟಿ20-ಐ)

ಜ.14, 2020; ಮೊದಲ ಟಿ20 (ಮುಂಬೈ)
ಜ.17, 2020; ಎರಡನೇ ಟಿ20 (ರಾಜ್‌ಕೋಟ್‌)
ಜ.19, 2020; ಮೂರನೇ ಟಿ20 (ಬೆಂಗಳೂರು)

ಭಾರತ vs ದಕ್ಷಿಣ ಆಫ್ರಿಕಾ, 2020 (3 ಒಡಿಐ)

ಭಾರತ vs ದಕ್ಷಿಣ ಆಫ್ರಿಕಾ, 2020 (3 ಒಡಿಐ)

ಮಾ.12, 2020; ಮೊದಲ ಒಡಿಐ (ಧರ್ಮಶಾಲಾ)
ಮಾ.12, 2020; ಎರಡನೇ ಒಡಿಐ (ಲಖನೌ)
ಮಾ.12, 2020; ಮೂರನೇ ಒಡಿಐ (ಕೋಲ್ಕೊತಾ)

Story first published: Wednesday, July 17, 2019, 19:06 [IST]
Other articles published on Jul 17, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X