ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

2021ರ ಟೀಮ್ ಇಂಡಿಯಾದ ಸಂಪೂರ್ಣ ವೇಳಾಪಟ್ಟಿ ಹೇಗಿದೆ ನೋಡಿ

Team Indias Complete Cricket Schedule 2021: Upcoming T20s, ODIs & Tests Series

ಕೊರೊನಾ ವೈರಸ್‌ನಿಂದಾಗಿ 2020ರ ಅನೇಕ ಕ್ರಿಕೆಟ್ ಸರಣಿಗಳು ರದ್ದಾಗಿದೆ. ಇದೀಗ ಹೊಸ ವರ್ಷಕ್ಕೆ ಜಗತ್ತು ಕಾಲಿಟ್ಟಿದ್ದು ಹೊದ ಭರವಸೆಗಳೊಂದಿಗೆ ಮುನ್ನುಗ್ಗುತ್ತಿದೆ. ಈ ವರ್ಷ ಕ್ರಿಕೆಟ್ ಪ್ರೇಮಿಗಳು ಸಾಕಷ್ಟು ನಿರೀಕ್ಷೆಯನ್ನಿಟ್ಟುಕೊಂಡು ಎದುರು ನೋಡುತ್ತಿದ್ದಾರೆ. ಟೀಮ್ ಇಂಡಿಯಾ ಕ್ರಿಕೆಟ್ ಸರಣಿಗಳ ವೇಳಾಪಟ್ಟಿ ಕೂಡ ಅಭಿಮಾನಿಗಳ ಈ ನಿರೀಕ್ಷೆಗೆ ಪೂರಕವಾಗಿದೆ.

ಸದ್ಯ ಟೀಮ್ ಇಂಡಿಯಾ ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದು ಟೆಸ್ಟ್ ಸರಣಿಯನ್ನಾಡುತ್ತಿದೆ. ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಎರಡು ಪಂದ್ಯಗಳು ಮುಕ್ತಾಯವಾಗಿದ್ದು 1-1ರಿಂದ ಸರಣಿ ಸಮಬಲಗೊಂಡಿದೆ. ಎರಡು ಪಂದ್ಯಗಳು ಈ ಸರಣಿಯಲ್ಲಿ ಬಾಕಿಯಿದ್ದು ಯಾರ ಕೈ ಮೇಲಾಗಲಿದೆ ಎಂಬ ಕುತೂಹಲ ಎಲ್ಲರಲ್ಲಿದೆ.

ಮೆಲ್ಬರ್ನ್‌ನಲ್ಲಿ ಹೊಸ ವರ್ಷದ ಸಂಭ್ರಮಾಚರಿಸಿದ ಟೀಮ್ ಇಂಡಿಯಾಮೆಲ್ಬರ್ನ್‌ನಲ್ಲಿ ಹೊಸ ವರ್ಷದ ಸಂಭ್ರಮಾಚರಿಸಿದ ಟೀಮ್ ಇಂಡಿಯಾ

ಹಾಗಾದರೆ 2021ರ ಕ್ಯಾಲೆಂಡರ್ ವರ್ಷದಲ್ಲಿ ಟೀಮ್ ಇಂಡಿಯಾ ಯಾವೆಲ್ಲಾ ಸರಣಿಯಲ್ಲಿ ಪಾಲ್ಗೊಳ್ಳಲಿದೆ? ಯಾವೆಲ್ಲಾ ಮಹತ್ವದ ಟೂರ್ನಿಗಳು ನಡೆಯಲಿದ ಎಂಬುದನ್ನು ಈ ವರದಿಯಲ್ಲಿ ನೋಡೋಣ..

2021ರಲ್ಲಿ ಮಹತ್ವದ ಸರಣಿಗಳು

2021ರಲ್ಲಿ ಮಹತ್ವದ ಸರಣಿಗಳು

2021 ರಲ್ಲಿ ಟೀಮ್ ಇಂಡಿಯಾ ಕೆಲ ಪ್ರಮುಖ ದ್ವಿಪಕ್ಷೀಯ ಕ್ರಿಕೆಟ್ ಸರಣಿಯಲ್ಲಿ ಪಾಲ್ಗೊಳ್ಳಲಿದೆ. ಇದರಲ್ಲಿ ಇಂಗ್ಲೆಂಡ್ ವಿರುದ್ಧ ತವರಿನಲ್ಲಿ ಹಾಗೂ ವಿದೇಶದಲ್ಲಿ ಸರಣಿ ಸಾಕಷ್ಟು ಮಹತ್ವದ್ದಾಗಿದೆ. ಜೊತೆಗೆ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿ ಹಾಗೂ ಟಿ20 ವಿಶ್ವಕಪ್ ಅಭಿಮಾನಿಗಳ ಕುತೂಹಲವನ್ನು ಹೆಚ್ಚಿಸಿದೆ.

1. ಫೆಬ್ರವರಿ-ಮಾರ್ಚ್, 2021

1. ಫೆಬ್ರವರಿ-ಮಾರ್ಚ್, 2021

ಇಂಡಿಯಾ vs ಇಂಗ್ಲೆಂಡ್: ಭಾರತದಲ್ಲಿ ಈ ಪೂರ್ಣ ಪ್ರಮಾಣದ ಸರಣಿ ನಡೆಯಲಿದ್ದು ಫೆಬ್ರವರಿಯಲ್ಲಿ ಆರಂಭವಾಗಲಿದೆ. ನಾಲ್ಕು ಟೆಸ್ಟ್, ಮೂರು ಏಕದಿನ ಹಾಗೂ ಐದು ಟಿ20 ಪಂದ್ಯಗಳು ನಡೆಯಲಿದೆ. ಎಲ್ಲ ಪಂದ್ಯಗಳು ಕೂಡ ತವರಿನಲ್ಲೇ ನಡೆಯಲಿದೆ.

2. ಏಪ್ರಿಲ್-ಮೇ, 2021

2. ಏಪ್ರಿಲ್-ಮೇ, 2021

ಏಪ್ರಿಲ್-ಮೇ ತಿಂಗಳ ಅವಧಿಯಲ್ಲಿ ಐಪಿಎಲ್‌ನ 14ನೇ ಆವೃತ್ತಿ ನಡೆಯಲಿದೆ. 2020ರ ಐಪಿಎಲ್‌ಅನ್ನು ಕೊರೊನಾ ವೈರಸ್‌ನ ಕಾರಣದಿಂದಾಗಿ ಯುಎಇನಲ್ಲಿ ಆಯೋಜನೆ ಮಾಡಲಾಗಿತ್ತು. ಆದರೆ ಈ ಬಾರಿ ಭಾರತದ ನೆಲದಲ್ಲೇ ಆಯೋಜಿಸಲು ಬಿಸಿಸಿಐ ಪ್ರಯತ್ನ ನಡೆಸುತ್ತಿದೆ.

3. ಜೂನ್-ಜುಲೈ, 2021

3. ಜೂನ್-ಜುಲೈ, 2021

ಟೀಮ್ ಇಂಡಿಯಾ vs ಶ್ರೀಲಂಕಾ: ಏಪ್ರಿಲ್ ತಿಂಗಳಿನಲ್ಲಿ ಭಾರತ ಶ್ರಿಲಂಕಾಗೆ ಪ್ರವಾಸ ತೆರಳಲಿದ್ದು ಸೀಮಿತ ಓವರ್‌ಗಳ ಸರಣಿಯಲ್ಲಿ ಭಾಗಿಯಾಗಲಿದೆ. ಮೂರು ಏಕದಿನ ಹಾಗೂ 5 ಟಿ20 ಪಂದ್ಯಗಳು ನಡೆಯಲಿದೆ. ಈ ವೈಟ್‌ಬಾಲ್ ಸರಣಿಯ ಬಳಿಕ ಏಷ್ಯಾಕಪ್ ನಡೆಯಲಿದ್ದು ಎಲ್ಲಿ ಆಯೋಜನೆಯಾಗಲಿದೆ ಎಂಬ ಬಗ್ಗೆ ಇನ್ನಷ್ಟೇ ನಿರ್ಧಾರವಾಗಬೇಕಿದೆ. ಬಹುತೇಕ ಇದು ಶ್ರೀಲಂಕಾದಲ್ಲೇ ನಡೆಯುವ ಸಾಧ್ಯತೆ ಹೆಚ್ಚಿದೆ. ಅದಾದ ಬಳಿಕ ಭಾರತ ಜುಲೈ ತಿಂಗಳ ಮಧ್ಯಂತರದಲ್ಲಿ ಜಿಂಬಾಬ್ವೆಗೆ ಪ್ರಯಾಣವನ್ನು ಬೆಳೆಸಲಿದ್ದು ಸೀಮಿತ ಓವರ್‌ಗಳ ಸರಣಿಯಲ್ಲಿ ಭಾಗಿಯಾಗಲಿದೆ.

4. ಆಗಸ್ಟ್-ಸಪ್ಟೆಂಬರ್, 2021

4. ಆಗಸ್ಟ್-ಸಪ್ಟೆಂಬರ್, 2021

ಭಾರತ vs ಇಂಗ್ಲೆಂಡ್: ಈ ವರ್ಷದಲ್ಲಿ ಎರಡನೇ ಬಾರಿಗೆ ಆಗಸ್ಟ್ ಸಪ್ಟೆಂಬರ್ ತಿಂಗಳಿನಲ್ಲಿ ದ್ವಿಪಕ್ಷೀಯ ಟೆಸ್ಟ್ ಸರಣಿಯಲ್ಲಿ ಭಾರತ ಹಾಗೂ ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗಲಿದೆ. ವರ್ಷಾರಂಭದಲ್ಲಿ ಭಾರತದಲ್ಲಿ ಈ ಸರಣಿ ನಡೆದರೆ ಆಗಸ್ಟ್ ಸಪ್ಟೆಂಬರ್ ಅವಧಿಯಲ್ಲಿ ಇಂಗ್ಲೆಂಡ್ ಈ ಸರಣಿಗೆ ಆತಿಥ್ಯವನ್ನು ವಹಿಸಲಿದೆ. ಐದು ಪಂದ್ಯಗಳ ಟೆಸ್ಟ್ ಸರಣಿ ಮಾತ್ರವೇ ನಡೆಯಲಿದೆ.

5. ಅಕ್ಟೋಬರ್, 2021

5. ಅಕ್ಟೋಬರ್, 2021

ಭಾರತ vs ದಕ್ಷಿಣ ಆಫ್ರಿಕಾ: ಭಾರತದಲ್ಲಿ ನಡೆಯುವ ಟಿ20 ವಿಶ್ವಕಪ್‌ಗೆ ಮುನ್ನ ದಕ್ಷಿಣ ಆಫ್ರಿಕಾ ತಂಡ ಭಾರತ ಪ್ರವಾಸವನ್ನು ಕೈಗೊಂಡು ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಪಾಲ್ಗೊಳ್ಳಲಿದೆ. ಈ ಸರಣಿಯ ಬಳಿಕ ಟಿ20 ವಿಶ್ವಕಪ್ ಭಾರತದಲ್ಲಿ ನಡೆಯಲಿದ್ದು ಅಕ್ಟೋಬರ್ ಮಧ್ಯಂತರದಲ್ಲಿ ಆರಂಭವಾಗುವ ಈ ಮಹತ್ವದ ಟೂರ್ನಿ ನವೆಂಬರ್ ತಿಂಗಳಲ್ಲಿ ಅಂತ್ಯವಾಗಲಿದೆ.

6 ನವೆಂಬರ್-ಡಿಸೆಂಬರ್, 2021

6 ನವೆಂಬರ್-ಡಿಸೆಂಬರ್, 2021

ಭಾರತ vs ನ್ಯೂಜಿಲೆಂಡ್: ಈ ವರ್ಷಾಂತ್ಯದಲ್ಲಿ ಟೀಮ್ ಇಂಡಿಯಾ ನ್ಯೂಜಿಲೆಂಡ್ ಪ್ರವಾಸವನ್ನು ಕೈಗೊಳ್ಳಲಿದೆ. ಈ ಪ್ರವಾಸದಲ್ಲಿ ಎರಡು ಟೆಸ್ಟ್ ಹಾಗೂ ಮೂರು ಟಿ20 ಪಂದ್ಯಗಳ ಸರಣಿಯಲ್ಲಿ ಭಾಗಿಯಾಗಲಿದೆ. ಹೀಗೆ ಇಡೀ ವರ್ಷ ಟೀಮ್ ಇಂಡಿಯಾ ಸಾಕಷ್ಟು ವಹತ್ವದ ಟೂರ್ನಿಗಳಲ್ಲಿ ಪಾಲ್ಗೊಳ್ಳಲಿದೆ.

Story first published: Saturday, January 2, 2021, 9:29 [IST]
Other articles published on Jan 2, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X