ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಂಡೀಸ್ ವಿರುದ್ಧ 3-0 ಅಂತರದಲ್ಲಿ ಸರಣಿ ಗೆಲುವು: ಪಾಕ್‌ ವಿರುದ್ಧ ಅಂತರ ಕಾಯ್ದುಕೊಂಡ ಟೀಂ ಇಂಡಿಯಾ

Team india

ವೆಸ್ಟ್‌ ಇಂಡೀಸ್‌ನಲ್ಲಿ ಮೊಟ್ಟ ಮೊದಲ ಬಾರಿಗೆ ಏಕದಿನ ಸರಣಿಯಲ್ಲಿ ಆತಿಥೇಯರನ್ನ ವೈಟ್‌ವಾಶ್ ಮಾಡಿದ ಟೀಂ ಇಂಡಿಯಾ 3-0 ಅಂತರದಲ್ಲಿ ಭರ್ಜರಿ ಗೆಲುವು ದಾಖಲಿಸಿದೆ. ಈ ಗೆಲುವಿನ ಜೊತೆಗೆ ಟೀಂ ಇಂಡಿಯಾ ಏಕದಿನ ರ್ಯಾಂಕಿಂಗ್‌ನಲ್ಲಿ ತನ್ನ ಮೂರನೇ ಸ್ಥಾನವನ್ನ ಮತ್ತಷ್ಟು ಭದ್ರಪಡಿಸಿಕೊಂಡಿದ್ದು, ಪಾಕಿಸ್ತಾನ ವಿರುದ್ಧ ಹೆಚ್ಚಿನ ಪಾಯಿಂಟ್ಸ್ ಅಂತರ ಕಾಯ್ದುಕೊಂಡಿದೆ.

ಬುಧವಾರ ಮೂರನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 119ರನ್‌ಗಳ ಬೃಹತ್ ಜಯಗಳಿಸುವುದರ ಮೂಲಕ ಆತಿಥೇಯರನ್ನ ವೈಟ್‌ವಾಶ್ ಮಾಡಿತು. ಪೋರ್ಟ್‌ ಆಫ್‌ ಸ್ಪೇನ್‌ನಲ್ಲಿ ನಡೆದ ಮೂರು ಏಕದಿನ ಪಂದ್ಯಗಳಲ್ಲಿ ಪ್ರಭಾವಶಾಲಿ ಪ್ರದರ್ಶನ ನೀಡಿದ ಶಿಖರ್ ಧವನ್ ನಾಯಕತ್ವದ ಭಾರತ, ಏಕದಿನ ಕ್ರಿಕೆಟ್‌ನಲ್ಲಿ ಮೊದಲ ಬಾರಿಗೆ ವಿಂಡೀಸ್ ತಂಡವನ್ನ ಅವರದ್ದೇ ನೆಲದಲ್ಲಿ ವೈಟ್‌ವಾಶ್ ಮಾಡಿದೆ.

ಸತತ ಮೂರನೇ ಏಕದಿನ ಸರಣಿ ಗೆಲುವು, ರ್ಯಾಂಕಿಂಗ್‌ ಪಾಯಿಂಟ್ಸ್‌ ಏರಿಕೆ

ಸತತ ಮೂರನೇ ಏಕದಿನ ಸರಣಿ ಗೆಲುವು, ರ್ಯಾಂಕಿಂಗ್‌ ಪಾಯಿಂಟ್ಸ್‌ ಏರಿಕೆ

ಭಾರತಕ್ಕೆ ಇದು ಸತತ ಮೂರನೇ ಏಕದಿನ ಸರಣಿಗೆ ಗೆಲುವಾಗಿದ್ದು, ಟೀಂ ಇಂಡಿಯಾ ಪಾಯಿಂಟ್ಸ್‌ 110ಕ್ಕೆ ಏರಿಕೆಯಾಗಿದೆ. ಈ ಮೂಲಕ ನಾಲ್ಕನೇ ಸ್ಥಾನದಲ್ಲಿರುವ ಪಾಕಿಸ್ತಾನ ತಂಡವನ್ನು(106) ನಾಲ್ಕು ಪಾಯಿಂಟ್ಸ್ ಅಂತರ ಕಾಯ್ದುಕೊಂಡಿದೆ.

ಟೀಂ ಇಂಡಿಯಾ ಕಳೆದ 9 ಏಕದಿನ ಸರಣಿಯಲ್ಲಿ 8ನ್ನು ಗೆದ್ದುಕೊಂಡಿರುವುದು ವಿಶೇಷ. ಇದೇ ವರ್ಷದ ಆರಂಭದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಅವರದ್ದೇ ನೆಲದಲ್ಲಿ ಟೀಂ ಇಂಡಿಯಾ ಸೋಲನ್ನ ಕಂಡಿತು.

Ind vs WI 1st T20: ಪಂದ್ಯದ ಪ್ರಿವ್ಯೂ, ಟೀಂ ಇಂಡಿಯಾ ಪ್ಲೇಯಿಂಗ್ 11

ಐಸಿಸಿ ಏಕದಿನ ರ್ಯಾಂಕಿಂಗ್‌ನಲ್ಲಿ ಕಿವೀಸ್‌ ಅಗ್ರಸ್ಥಾನ

ಐಸಿಸಿ ಏಕದಿನ ರ್ಯಾಂಕಿಂಗ್‌ನಲ್ಲಿ ಕಿವೀಸ್‌ ಅಗ್ರಸ್ಥಾನ

ಏಕದಿನ ತಂಡದ ರ್ಯಾಂಕಿಂಗ್‌ನಲ್ಲಿ ನ್ಯೂಜಿಲೆಂಡ್ ತಂಡ ಅಗ್ರಸ್ಥಾನ ಕಾಯ್ದುಕೊಂಡಿದೆ. 128 ಪಾಯಿಂಟ್ಸ್‌ನೊಂದಿಗೆ ಕಿವೀಸ್‌ ಮೊದಲ ಸ್ಥಾನದಲ್ಲಿದ್ದು, ಟೀಂ ಇಂಡಿಯಾ ವಿರುದ್ಧ ಏಕದಿನ ಸರಣಿ ಸೋಲು ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಸರಣಿ 1-1ರ ಸಮಬಲದ ನಡುವೆ ಇಂಗ್ಲೆಂಡ್‌ (119) ಎರಡನೇ ಸ್ಥಾನವನ್ನು ಉಳಿಸಿಕೊಂಡಿದೆ. ಭಾರತ ಮೂರನೇ ಸ್ಥಾನದಲ್ಲಿದ್ದು, ಬಾಬರ್ ಅಜಮ್ ನಾಯಕತ್ವದ ಪಾಕಿಸ್ತಾನ ಶ್ರೀಲಂಕಾ ವಿರುದ್ಧ ಟೆಸ್ಟ್ ಸರಣಿಯಲ್ಲಿ ಭಾಗಿಯಾಗಿದ್ದು, ನಾಲ್ಕನೇ ಸ್ಥಾನದಲ್ಲಿಯೇ ಉಳಿದಿದೆ.

ಪಾಕಿಸ್ತಾನಕ್ಕೆ ಮುಂದಿನ ಮೂರು ಪಂದ್ಯಗಳ ಏಕದಿನ ಸರಣಿಯು ನೆದರ್ಲೆಂರ್ಡ್ಸ್‌ ವಿರುದ್ಧ ಇರುವುದರಿಂದ ಇನ್ನಷ್ಟು ಪಾಯಿಂಟ್ಸ್‌ ಗಳಿಸುವ ಅವಕಾಶವನ್ನ ಹೊಂದಿದೆ.

ನನಗೆ 50 ಅನ್ನು 100 ಆಗಿ ಪರಿವರ್ತಿಸಲು ಚೆನ್ನಾಗಿ ತಿಳಿದಿದೆ: ಶತಕದ ಬರ ಎದುರಿಸುತ್ತಿರುವ ಪ್ರಶ್ನೆಗೆ ಧವನ್ ಉತ್ತರ

ಶ್ರೀಲಂಕಾ ವಿರುದ್ಧ ಪಾಕ್‌ಗೆ ಹೀನಾಯ ಸೋಲು

ಶ್ರೀಲಂಕಾ ವಿರುದ್ಧ ಪಾಕ್‌ಗೆ ಹೀನಾಯ ಸೋಲು

ಗಾಲೆ ಅಂತರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನ 246ರನ್‌ಗಳ ಹೀನಾಯ ಸೋಲನ್ನ ಕಂಡಿದೆ. ಶ್ರೀಲಂಕಾ ನೀಡಿದ್ದ ಬೃಹತ್ ರನ್‌ಗಳ ಗುರಿ ಬೆನ್ನತ್ತಿದ ಬಾಬರ್ ಅಜಮ್ ಪಡೆ ಎರಡನೇ ಇನ್ನಿಂಗ್ಸ್‌ನಲ್ಲಿ 261ರನ್‌ಗಳಿಗೆ ಆಲೌಟ್‌ ಆಗುವ ಮೂಲಕ ಸೋಲನ್ನ ಅನುಭವಿಸಿತು. ಆದರೂ ಸಹ ಮೊದಲ ಪಂದ್ಯದಲ್ಲಿ ಗೆದ್ದ ಕಾರಣ ಎರಡು ಪಂದ್ಯಗಳ ಟೆಸ್ಟ್‌ ಸರಣಿಯು 1-1ರಿಂದ ಸಮಬಲಗೊಂಡಿದೆ.

Story first published: Thursday, July 28, 2022, 16:42 [IST]
Other articles published on Jul 28, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X