ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ರೋಹಿತ್ ಆಡಿದ್ದ ಮೊದಲ ಏಕದಿನ ಪಂದ್ಯದಲ್ಲಿ ಕಣಕ್ಕಿಳಿದವರಲ್ಲಿ ಈಗಲೂ ತಂಡದಲ್ಲಿರುವುದು ಓರ್ವ ಮಾತ್ರ!

Team Indias playing 11 from Rohit Sharmas debut ODI match; Where are they now?

ರೋಹಿತ್ ಶರ್ಮಾ ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್‍ಗೆ ಪದಾರ್ಪಣೆ ಮಾಡಿ ಕಳೆದ ಜೂನ್ 23ಕ್ಕೆ 15 ವರ್ಷಗಳು ಉರುಳಿವೆ. ಹೌದು, 2007ರ ಜೂನ್ 23ರಂದು ನಡೆದ ಐರ್ಲೆಂಡ್ ವಿರುದ್ಧದ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ಟೀಮ್ ಇಂಡಿಯಾ ಪರ ಅದೇ ಪ್ರಥಮ ಬಾರಿಗೆ ಕಣಕ್ಕಿಳಿದಿದ್ದರು.

ಭಾರತ vs ಐರ್ಲೆಂಡ್: ಆಡಿರುವ 4 ಟಿ20 ಪಂದ್ಯಗಳಲ್ಲಿ ಯಾವ ತಂಡ ಎಷ್ಟು ಪಂದ್ಯ ಗೆದ್ದಿದೆ? ಇಲ್ಲಿದೆ ಮಾಹಿತಿಭಾರತ vs ಐರ್ಲೆಂಡ್: ಆಡಿರುವ 4 ಟಿ20 ಪಂದ್ಯಗಳಲ್ಲಿ ಯಾವ ತಂಡ ಎಷ್ಟು ಪಂದ್ಯ ಗೆದ್ದಿದೆ? ಇಲ್ಲಿದೆ ಮಾಹಿತಿ

ಆ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಐರ್ಲೆಂಡ್ 193 ರನ್‌ಗಳಿಗೆ ಆಲ್ ಔಟ್ ಆಗಿತ್ತು ಹಾಗೂ ಡೆಕ್ವರ್ತ್ ಲೂಯಿಸ್ ನಿಯಮದ ಪ್ರಕಾರ ಟೀಂ ಇಂಡಿಯಾ ಗೆಲ್ಲಲು 39 ಓವರ್‌ಗಳಲ್ಲಿ 171 ರನ್ ದಾಖಲಿಸಬೇಕಿತ್ತು. ಹಾಗೂ ಕೇವಲ 1 ವಿಕೆಟ್ ನಷ್ಟಕ್ಕೆ 34.5 ಓವರ್‌ಗಳಲ್ಲಿ ಈ ಗುರಿಯನ್ನು ಮುಟ್ಟಿದ ಟೀಮ್ ಇಂಡಿಯಾ ಗೆಲುವನ್ನು ದಾಖಲಿಸಿತ್ತು.

ಐರ್ಲೆಂಡ್ ಕ್ರೀಡಾಂಗಣದಲ್ಲಿಯೂ ಡಿಕೆಗೆ ಜೈಕಾರ; ದಿನೇಶ್ ಕಾರ್ತಿಕ್ ಕ್ರೇಜ್ ವಿಡಿಯೋ ಹಂಚಿಕೊಂಡ ಐರ್ಲೆಂಡ್ ಕ್ರಿಕೆಟಿಗಐರ್ಲೆಂಡ್ ಕ್ರೀಡಾಂಗಣದಲ್ಲಿಯೂ ಡಿಕೆಗೆ ಜೈಕಾರ; ದಿನೇಶ್ ಕಾರ್ತಿಕ್ ಕ್ರೇಜ್ ವಿಡಿಯೋ ಹಂಚಿಕೊಂಡ ಐರ್ಲೆಂಡ್ ಕ್ರಿಕೆಟಿಗ

ಇನ್ನು ರೋಹಿತ್ ಶರ್ಮಾ ಆಡಿದ್ದ ಪ್ರಥಮ ಅಂತರರಾಷ್ಟ್ರೀಯ ಏಕದಿನ ಪಂದ್ಯದಲ್ಲಿ ಕಣಕ್ಕಿಳಿದಿದ್ದ ಇತರೆ 10 ಆಟಗಾರರು ಯಾರು ಹಾಗೂ ಅವರು ಸದ್ಯ ಏನು ಮಾಡುತ್ತಿದ್ದಾರೆ ಎಂಬುದರ ಕುರಿತಾದ ಮಾಹಿತಿ ಕೆಳಕಂಡಂತಿದೆ.

ಆರಂಭಿಕ ಆಟಗಾರರು

ಆರಂಭಿಕ ಆಟಗಾರರು

ರೋಹಿತ್ ಶರ್ಮಾ ಆಡಿದ್ದ ಪ್ರಥಮ ಏಕದಿನ ಪಂದ್ಯದಲ್ಲಿ ಆರಂಭಿಕರಾಗಿ ಸೌರವ್ ಗಂಗೂಲಿ ಮತ್ತು ಸಚಿನ್ ತೆಂಡೂಲ್ಕರ್ ಕಣಕ್ಕಿಳಿದಿದ್ದರು. ಸಚಿನ್ ತೆಂಡೂಲ್ಕರ್ 4 ರನ್ ಕಲೆಹಾಕಿ ಔಟ್ ಆದರೆ, ಸೌರವ್ ಗಂಗೂಲಿ 73 ರನ್ ಕಲೆಹಾಕಿದ್ದರು. ಸದ್ಯ ಈ ಇಬ್ಬರೂ ಕ್ರಿಕೆಟ್‍ನಿಂದ ನಿವೃತ್ತಿ ಹೊಂದಿದ್ದು, ಸೌರವ್ ಗಂಗೂಲಿ ಬಿಸಿಸಿಐನ ಅಧ್ಯಕ್ಷನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಮಧ್ಯಮ ಕ್ರಮಾಂಕ

ಮಧ್ಯಮ ಕ್ರಮಾಂಕ

ಸಚಿನ್ ತೆಂಡೂಲ್ಕರ್ ವಿಕೆಟ್ ಬೀಳುತ್ತಿದ್ದಂತೆ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದ ಗೌತಮ್ ಗಂಭೀರ್ ಅಜೇಯ 80 ರನ್ ಬಾರಿಸಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು. ಸದ್ಯ ಗೌತಮ್ ಗಂಭೀರ್ ಕ್ರಿಕೆಟ್‍ಗೆ ನಿವೃತ್ತಿ ಘೋಷಿಸಿದ್ದು, ರಾಜಕೀಯ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಈ ತಂಡದಲ್ಲಿ ಇನ್ನುಳಿದ ಮಧ್ಯಮ ಕ್ರಮಾಂಕದ ಆಟಗಾರರೆಂದರೆ ರಾಹುಲ್ ದ್ರಾವಿಡ್ ಮತ್ತು ದಿನೇಶ್ ಕಾರ್ತಿಕ್. ಈ ಪಂದ್ಯದಲ್ಲಿ ಟೀಮ್ ಇಂಡಿಯಾವನ್ನು ನಾಯಕನಾಗಿ ಮುನ್ನಡೆಸಿದ್ದ ರಾಹುಲ್ ದ್ರಾವಿಡ್ ಸದ್ಯ ಟೀಮ್ ಇಂಡಿಯಾದ ಹೆಡ್ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದರೆ, ಅಂದಿನ ಪಂದ್ಯದಲ್ಲಿ ವಿಕೆಟ್ ಕೀಪಿಂಗ್ ಮಾಡಿದ್ದ ದಿನೇಶ್ ಕಾರ್ತಿಕ್ ಇತ್ತೀಚೆಗಷ್ಟೇ ಉತ್ತಮ ಪ್ರದರ್ಶನ ನೀಡಿ ಮರಳಿ ತಂಡ ಸೇರಿದ್ದಾರೆ. ಈ ಮೂಲಕ ದಿನೇಶ್ ಕಾರ್ತಿಕ್ ರೋಹಿತ್ ಶರ್ಮಾ ಕಣಕ್ಕಿಳಿದಿದ್ದ ಪ್ರಥಮ ಏಕದಿನ ಪಂದ್ಯದಲ್ಲಿ ಆಡಿ ಇಂದಿಗೂ ಸಕ್ರಿಯನಾಗಿರುವ ಏಕೈಕ ಆಟಗಾರ ಎನಿಸಿಕೊಂಡಿದ್ದಾರೆ.

ಆಲ್ ರೌಂಡರ್ಸ್ ಮತ್ತು ಬೌಲರ್‌ಗಳು

ಆಲ್ ರೌಂಡರ್ಸ್ ಮತ್ತು ಬೌಲರ್‌ಗಳು

ಇನ್ನು ಈ ಪಂದ್ಯದಲ್ಲಿ ಕಣಕ್ಕಿಳಿದಿದ್ದ ಉಳಿದ ಆಟಗಾರರಾದ ಯುವರಾಜ್ ಸಿಂಗ್, ಪಿಯೂಷ್ ಚಾವ್ಲಾ, ಅಜಿತ್ ಅಗರ್ಕರ್, ಆರ್ ಪಿ ಸಿಂಗ್ ಮತ್ತು ಶ್ರೀಶಾಂತ್ ಸದ್ಯ ಕ್ರಿಕೆಟ್ ಜಗತ್ತಿನಿಂದ ದೂರ ಉಳಿದಿದ್ದಾರೆ.

Story first published: Tuesday, June 28, 2022, 10:37 [IST]
Other articles published on Jun 28, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X