ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

WTC Final ವರೆಗೆ ಟೀಮ್ ಇಂಡಿಯಾ ಬಂದಿದ್ಹೇಗೆ?: ರೋಚಕ ಕತೆ!

Team Indias Road To ICC World Test Championship (WTC) Final 2021

ನವದೆಹಲಿ: ಐಸಿಸಿ ವರ್ಲ್ಡ್ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್ ಪಂದ್ಯಕ್ಕೆ ಭಾರತ-ನ್ಯೂಜಿಲೆಂಡ್ ಸಜ್ಜಾಗಿದೆ. ಜೂನ್ 18-22ರ ವರೆಗೆ ಇಂಗ್ಲೆಂಡ್‌ನ ಸೌತಾಂಪ್ಟನ್‌ನ ಏಜಸ್ ಬೌಲ್‌ನಲ್ಲಿ ಫೈನಲ್ ಪಂದ್ಯ ನಡೆಯಲಿದೆ. ಚೊಚ್ಚಲ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಪಂದ್ಯದಲ್ಲಿ ಚಾಂಪಿಯನ್ಸ್ ಯಾರಾಗಲಿದ್ದಾರೆ ಎಂದು ವಿಶ್ವವೇ ಕುತೂಹಲದಿಂದ ಕಾಯುತ್ತಿದೆ. ಒಟ್ಟು 9 ತಂಡಗಳು ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಂಡಿದ್ದವು. ಆದರೆ ಫೈನಲ್‌ಗೆ ಎರಡೇ ತಂಡಗಳು ಉಳಿದಿವೆ. ಇದರ ಹಿಂದೆ ಕುತೂಹಲಕಾರಿ ಕತೆಯಿದೆ.

ನ್ಯೂಜಿಲೆಂಡ್ ವಿರುದ್ಧ WTC Finalನಲ್ಲಿ ಕಣಕ್ಕಿಳಿಯುವ ಸಂಭಾವ್ಯ ಭಾರತ XIನ್ಯೂಜಿಲೆಂಡ್ ವಿರುದ್ಧ WTC Finalನಲ್ಲಿ ಕಣಕ್ಕಿಳಿಯುವ ಸಂಭಾವ್ಯ ಭಾರತ XI

ಟೆಸ್ಟ್‌ ಕ್ರಿಕೆಟ್‌ ಇನ್ನಷ್ಟು ಕುತೂಹಲಕಾರಿಯೆನಿಸಲಿ ಎಂಬ ಉದ್ದೇಶದಿಂದ ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಟೆಸ್ಟ್‌ ಚಾಂಪಿಯನ್‌ಶಿಪ್‌ ಅನ್ನು ಪರಿಚಯಿಸಿತ್ತು. 2019-21ರ ವರೆಗೆ ಮೊದಲ ಆವೃತ್ತಿ ನಡೆಯುತ್ತಿದೆ. ಮುಂದಿನ ಆವೃತ್ತಿ 2021-23ರ ವರೆಗೆ ನಡೆಯಲಿದೆ. ಸರಣಿಗೆ 120ರಂತೆ ಅಂದರೆ 2 ಪಂದ್ಯಗಳ ಸರಣಿಯಾದರೆ ಪಂದ್ಯಕ್ಕೆ 60 ಅಂಕವಿರುತ್ತದೆ.

1. ಭಾರತ vs ವೆಸ್ಟ್‌ ಇಂಡೀಸ್, 2019

1. ಭಾರತ vs ವೆಸ್ಟ್‌ ಇಂಡೀಸ್, 2019

ಟೀಮ್ ಇಂಡಿಯಾದ ವರ್ಲ್ಡ್ ಟೆಸ್ಟ್‌ ಚಾಂಪಿಯನ್‌ಶಿಪ್‌ ಪಯಣ ಶುರುವಾಗಿದ್ದು ವೆಸ್ಟ್‌ ಇಂಡೀಸ್ ವಿರುದ್ಧದ ಸರಣಿಯೊಂದಿಗೆ. ಕೆರಿಬಿಯನ್ ನಾಡಿಗೆ ಪ್ರಯಾಣಿಸಿದ್ದ ವಿರಾಟ್ ಕೊಹ್ಲಿ ಪಡೆ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-0ಯ ಜಯ ಗಳಿಸಿತು. ಇಶಾಂತ್ ಶರ್ಮಾ (5/43), ಅಜಿಂಕ್ಯ ರಹಾನೆ (102), ಜಸ್‌ಪ್ರೀತ್‌ ಬೂಮ್ರಾ (5/7) ನೆರವಿನಿಂದ ಭಾರತ ಸರಣಿ ಗೆದ್ದು ಪಾಯಿಂಟ್ಸ್‌ ಕಲೆ ಹಾಕಿತ್ತು.

2. ಭಾರತ vs ದಕ್ಷಿಣ ಆಫ್ರಿಕಾ, 2019

2. ಭಾರತ vs ದಕ್ಷಿಣ ಆಫ್ರಿಕಾ, 2019

ವಿಂಡೀಸ್ ಸರಣಿಯ ಬಳಿಕ ಭಾರತಕ್ಕೆ ಪ್ರವಾಸ ಬಂದಿದ್ದ ದಕ್ಷಿಣ ಆಫ್ರಿಕಾ ತಂಡ ಟೆಸ್ಟ್ ಚಾಂಪಿಯನ್‌ಶಿಪ್ ಅಂಗವಾಗಿ ಮೂರು ಪಂದ್ಯಗಳ ಟೆಸ್ಟ್ ಸರಣಿ ಆಡಿತ್ತು. ಈ ಮೂರು ಸರಣಿಯಲ್ಲಿ ಭಾರತ 3-0ಯಿಂದ ಗೆದ್ದಿತ್ತು. ಮೊದಲ ಟೆಸ್ಟ್‌ನಲ್ಲಿ ಮಯಾಂಕ್ ಅಗರ್ವಾಲ್ (215), ರೋಹಿತ್ ಶರ್ಮಾ (176) ಮಿನುಗಿದ್ದನ್ನು ನೀವು ನೆನಪಿಸಿಕೊಳ್ಳಬಹುದು.

3. ಭಾರತ vs ಬಾಂಗ್ಲಾದೇಶ, 2019

3. ಭಾರತ vs ಬಾಂಗ್ಲಾದೇಶ, 2019

ಭಾರತಕ್ಕೆ ಪ್ರವಾಸ ಬಂದಿದ್ದ ಬಾಂಗ್ಲಾದೇಶ ಕ್ರಿಕೆಟ್ ತಂಡ ಎರಡು ಪಂದ್ಯಗಳ ಟೆಸ್ಟ್ ಸರಣಿ ಆಡಿತ್ತು. ಇದರಲ್ಲಿ ಒಂದು ಡೇ-ನೈಟ್ ಟೆಸ್ಟ್‌ ಕೂಡ ಸೇರಿತ್ತು. ಎರಡೂ ಪಂದ್ಯಗಳನ್ನೂ ಟೀಮ್ ಇಂಡಿಯಾ ಗೆದ್ದಿತ್ತು. ಆರಂಭಿಕ ಪಂದ್ಯದಲ್ಲಿ ಮಯಾಂಕ್ ಅಗವಾರ್ಲ್ (243), ಇಶಾಂತ್ ಶರ್ಮಾ (5/22) ಗಮನಾರ್ಹ ಪ್ರದರ್ಶನ ನೀಡಿದ್ದರು.

4. ನ್ಯೂಜಿಲೆಂಡ್ vs ಭಾರತ, 2020

4. ನ್ಯೂಜಿಲೆಂಡ್ vs ಭಾರತ, 2020

ಭಾರತ ತಂಡ ಟೆಸ್ಟ್‌ ಚಾಂಪಿಯನ್‌ಶಿಪ್‌ ನಲ್ಲಿ ಸರಣಿ ಸೋಲಿನ ಕಹಿ ಅನುಭವ ಅನುಭವಿಸಿದ್ದು ಈಗ ಫೈನಲ್‌ನಲ್ಲಿ ಎದುರಾಗಿರುವ ಇದೇ ನ್ಯೂಜಿಲೆಂಡ್ ವಿರುದ್ಧ. ನ್ಯೂಜಿಲೆಂಡ್‌ಗೆ ಪ್ರವಾಸ ಹೋಗಿದ್ದ ಭಾರತ ತಂಡ ಅಲ್ಲಿ ಎರಡು ಪಂದ್ಯಗಳ ಟೆಸ್ಟ್‌ ಸರಣಿ ಆಡಿತ್ತು. ಈ ಸರಣಿಯ ಎರಡೂ ಪಂದ್ಯಗಳನ್ನೂ ಸೋತು ಭಾರತ ಮುಖಭಂಗ ಅನುಭವಿಸಿತ್ತು.

5. ಭಾರತ vs ಆಸ್ಟ್ರೇಲಿಯಾ, 2020-21

5. ಭಾರತ vs ಆಸ್ಟ್ರೇಲಿಯಾ, 2020-21

ನ್ಯೂಜಿಲೆಂಡ್ ನಲ್ಲಿ ಸರಣಿ ಸೋಲಿನ ಬೇಸರದಲ್ಲಿದ್ದ ಆಸ್ಟ್ರೇಲಿಯಾಕ್ಕೆ ಪ್ರವಾಸ ಹೋಗಿತ್ತು. ನಾಲ್ಕು ಪಂದ್ಯಗಳ ಈ ಟೆಸ್ಟ್‌ ಸರಣಿಯ ಆರಂಭಿಕ ಪಂದ್ಯದಲ್ಲಿ ಭಾರತ ಹೀನಾಯವಾಗಿ ಸೋತಿತ್ತು. ಅದೇ ಸಮಯದಲ್ಲಿ ಭಾರತೀಯ ತಂಡದ ಅನುಭವಿಗಳು ಗಾಯಕ್ಕೀಡಾಗಿ ತಂಡದಿಂದ ಹೊರ ಬಿದ್ದಿದ್ದರು. ಆಸೀಸ್ ಸರಣಿಯಲ್ಲೂ ಭಾರತ ಹೀನಾಯವಾಗಿ ಸೋಲಲಿದೆ ಎಂದ ಮುನ್ಸೂಚನೆ ಲಭಿಸಿತ್ತು. ಆದರೆ ಅನುಭವಿಗಳೇ ಇಲ್ಲದ ಭಾರತೀಯ ತಂಡ ಅನುಭವಿಗಳಿದ್ದ ಆಸೀಸ್ ಬಲಿಷ್ಠ ತಂಡವನ್ನು 2-1ರಿಂದ ಸೋಲಿಸಿತ್ತು. ಈ ಪಂದ್ಯ ಟೆಸ್ಟ್‌ ಸರಣಿ, ಕ್ರಿಕೆಟ್ ಇತಿಹಾಸದಲ್ಲಿ ರೋಚಕ ಮತ್ತು ಸ್ಫೂರ್ತಿದಾಯಕ ಟೆಸ್ಟ್ ಸರಣಿ ಎನಿಸಿದೆ.

6. ಭಾರತ vs ಇಂಗ್ಲೆಂಡ್, 2021

6. ಭಾರತ vs ಇಂಗ್ಲೆಂಡ್, 2021

ಭಾರತಕ್ಕೆ ಪ್ರವಾಸ ಬಂದಿದ್ದ ಇಂಗ್ಲೆಂಡ್ ತಂಡ ಇಲ್ಲಿ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿ ಆಡಿತ್ತು. ಇದರಲ್ಲಿ ಭಾರತ 3-1ರಿಂದ ಗೆದ್ದು ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ಗೆ ಪ್ರವೇಶ ಗಿಟ್ಟಿಸಿಕೊಂಡಿತ್ತು. ಅದಾಗಾಗಲೇ ನ್ಯೂಜಿಲೆಂಡ್ ತಂಡ ಫೈನಲ್‌ಗೆ ಆಯ್ಕೆಯಾಗಿ ಆಗಿತ್ತು. ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಆರ್‌ ಅಶ್ವಿನ್ (5/43), ಅಕ್ಷರ್ ಪಟೇಲ್ (6/38, 5/32) ಅತ್ಯುತ್ತಮ ಪ್ರದರ್ಶನಕ್ಕಾಗಿ ಗಮನ ಸೆಳೆದಿದ್ದರು.

Story first published: Tuesday, June 15, 2021, 12:42 [IST]
Other articles published on Jun 15, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X