ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

World Test Championship 2ನೇ ಆವೃತ್ತಿಗೆ ಭಾರತದ ವೇಳಾಪಟ್ಟಿ ಪ್ರಕಟ!

Team India’s schedule for second edition of the World Test Championship announced
ನ್ಯೂಜಿಲೆಂಡ್ ವಿರುದ್ಧ ಸೇಡು ತೀರಿಸಿಕೊಳ್ಳೋದಕ್ಕೆ ಟೀಮ್ ಇಂಡಿಯಾಗೆ ಸಿಕ್ತು ಮತ್ತೊಂದು ಚಾನ್ಸ್ | Oneindia Kannada

ಸೌಥಾಂಪ್ಟನ್: ಐಸಿಸಿ ವರ್ಲ್ಡ್ ಟೆಸ್ಟ್‌ ಚಾಂಪಿಯನ್‌ಶಿಪ್ ಪಾಯಿಂಟ್ಸ್ ಟೇಬಲ್‌ನಲ್ಲಿ ಟೀಮ್ ಇಂಡಿಯಾ ಸುಮಾರು ಎರಡು ವರ್ಷಗಳಿಂದ ಪಾರಮ್ಯ ಮೆರೆದಿತ್ತು. ಕ್ರಿಕೆಟ್‌ನ ಸಾಂಪ್ರದಾಯಿಕ ಮಾದರಿಯಾಗಿರುವ ಟೆಸ್ಟ್‌ನ ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ವಿರಾಟ್ ಕೊಹ್ಲಿ ಪಡೆ ವಿಶ್ವದ ಗಮನ ಸೆಳೆದಿತ್ತು. ಆದರೆ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಪಂದ್ಯದಲ್ಲಿ ಟ್ರೋಫಿ ಗೆಲ್ಲುವಲ್ಲಿ ಭಾರತ ಎಡವಿದೆ. ಬುಧವಾರವಷ್ಟೇ ಮುಕ್ತಾಯವಾಗಿರುವ WTC ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ 8 ವಿಕೆಟ್‌ಗಳಿಂದ ಸೋತಿದೆ.

WTC Final: ನಗದು ಪುರಸ್ಕಾರ, ಕುತೂಹಲಕಾರಿ ದಾಖಲೆಗಳ ಸಂಪೂರ್ಣ ವಿವರWTC Final: ನಗದು ಪುರಸ್ಕಾರ, ಕುತೂಹಲಕಾರಿ ದಾಖಲೆಗಳ ಸಂಪೂರ್ಣ ವಿವರ

ಭಾರತ ಮತ್ತು ನ್ಯೂಜಿಲೆಂಡ್‌ ಎರಡರ ಪಾಲಿಗೂ ತಟಸ್ಥ ತಾಣವಾಗಿದ್ದ ಇಂಗ್ಲೆಂಡ್‌ನ ಸೌಥಾಂಪ್ಟನ್‌ನಲ್ಲಿರುವ ಏಜಸ್ ಬೌಲ್ ಸ್ಟೇಡಿಯಂನಲ್ಲಿ ನಡೆದ WTC Final ಪಂದ್ಯದಲ್ಲಿ ಭಾರತ ರನ್ನರ್ಸ್ ಸ್ಥಾನಕ್ಕೆ ತೃಪ್ತಿಪಟ್ಟಿದೆ. ಆದರೆ ಭಾರತ ಈಗಾಗಲೇ ದ್ವಿತೀಯ ಆವೃತ್ತಿಯ WTCಗೆ ಸಿದ್ಧವಾಗಿದೆ. ಅದರ ವೇಳಾಪಟ್ಟಿಯೂ ಪ್ರಕಟವಾಗಿದೆ.

ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌

ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌

ಟೆಸ್ಟ್ ಕ್ರಿಕೆಟ್‌ಗೆ ಇನ್ನಷ್ಟು ಮೆರಗು ನೀಡುವ ಸಲುವಾಗಿ ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ವರ್ಲ್ಡ್ ಟೆಸ್ಟ್ ಚಾಂಪಿಯನ್‌ಶಿಪ್‌ ಅನ್ನು 2019ರಲ್ಲಿ ಪರಿಚಯಿಸಿತು. WTC ಆರಂಭಿಕ ಆವೃತ್ತಿ 2019ರಿಂದ 2021ರ ವರೆಗೆ ಅಂದರೆ ಬುಧವಾರ (ಜೂನ್ 23)ಕ್ಕೆ ಕೊನೆಯಾಗಿದೆ. ಮುಂದಿನ ಆವೃತ್ತಿ 2021ರಿಂದ 2023ರ ವರೆಗೆ ನಡೆಯಲಿದೆ. ಒಂದು ರಾಷ್ಟ್ರೀಯ ತಂಡ ತವರಿನಲ್ಲಿ ಆಡುವ ಮತ್ತು ವಿದೇಶದಲ್ಲಿ ಆಡುವ ಟೆಸ್ಟ್‌ ಸರಣಿಗಳು ಟೆಸ್ಟ್‌ ಚಾಂಪಿಯನ್‌ಶಿಪ್‌ಗೆ ಒಳಪಟ್ಟಿರುತ್ತವೆ. ತಂಡದ ಗೆಲುವಿಗೆ ಆಧರಿಸಿ ಅಂಕ ನೀಡಲಾಗುತ್ತದೆ. ಪ್ರತೀ ಸರಣಿಗೆ 120ರಂತೆ ಅಂಕವಿರುತ್ತದೆ. ಅಂದರೆ 2 ಪಂದ್ಯಗಳ ಟೆಸ್ಟ್‌ ಸರಣಿಯಾದರೆ ಪ್ರತೀ ಪಂದ್ಯಕ್ಕೂ 60 ಅಂಕ, 3 ಪಂದ್ಯಗಳ ಟೆಸ್ಟ್ ಸರಣಿಯಾದರೆ ಪ್ರತೀ ಪಂದ್ಯಕ್ಕೂ 40 ಅಂಕ ಹೀಗೆ ಅಂಕಗಳನ್ನು ವಿಭಾಜಿಸಲಾಗಿದೆ.

ಮುಂದಿನ WTC ಆವೃತ್ತಿ ಆರಂಭ?

ಮುಂದಿನ WTC ಆವೃತ್ತಿ ಆರಂಭ?

WTC ಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋತಿರುವ ಟೀಮ್ ಇಂಡಿಯಾಕ್ಕೆ ಶೀಘ್ರವೇ ಹೊಸ ಆವೃತ್ತಿಯ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್ ಪಂದ್ಯ ಎದುರಾಗಲಿದೆ. ಐಸಿಸಿ ವೇಳಾಪಟ್ಟಿಯ ಪ್ರಕಾರ ಜುಲೈ 2021ರಿಂದ ದ್ವಿತೀಯ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಶುರುವಾಗಲಿದೆ. ಭಾರತಕ್ಕೆ ಆಗಸ್ಟ್‌ ತಿಂಗಳಲ್ಲಿ WTC ಭಾಗವಾಗಿ ಮೊದಲ ಟೆಸ್ಟ್‌ ಸರಣಿ ಶುರುವಾಗಲಿದೆ. ಇಂಗ್ಲೆಂಡ್‌ನಲ್ಲಿರುವ ಭಾರತ ಆತಿಥೇಯರ ವಿರುದ್ಧ ಟೆಸ್ಟ್‌ ಚಾಂಪಿಯನ್‌ಶಿಪ್‌ ಸರಣಿ ಆಡಲಿದೆ.

ಭಾರತ-ನ್ಯೂಜಿಲೆಂಡ್ ಮುಖಾಮುಖಿ ಯಾವಾಗ?

ಭಾರತ-ನ್ಯೂಜಿಲೆಂಡ್ ಮುಖಾಮುಖಿ ಯಾವಾಗ?

WTC ಫೈನಲ್‌ನಲ್ಲಿ ಸೋತಿರುವ ಭಾರತ ತಂಡ ಮುಯ್ಯಿ ತೀರಿಸಿಕೊಳ್ಳುವುದಕ್ಕಾಗಿ ಕಾಯುತ್ತಿದೆ. ನವೆಂಬರ್‌ನಲ್ಲಿ ಮತ್ತೆ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ ಮುಖಾಮುಖಿಯಾಗಲಿವೆ. ಭಾರತಕ್ಕೆ ಪ್ರವಾಸ ಬರಲಿರುವ ಕೇನ್ ವಿಲಿಯಮ್ಸನ್ ಪಡೆ ಭಾರತದಲ್ಲಿ ಎರಡು ಪಂದ್ಯಗಳ ಟೆಸ್ಟ್ ಸರಣಿ ಆಡಲಿದೆ. ಹಾಗಂತ ಈ ವೇಳಾಪಟ್ಟಿ ಇನ್ನೂ ಬಿಡುಗಡೆಯಾಗಿಲ್ಲ, ಆದರೆ ಈ ಟೆಸ್ಟ್ ಸರಣಿ ಟಿ20 ವಿಶ್ವಕಪ್‌ ಬಳಿಕ ನಡೆಯುವ ನಿರೀಕ್ಷೆಯಿದೆ.

ಭಾರತದ ಮುಂದಿನ WTC ವೇಳಾಪಟ್ಟಿ

ಭಾರತದ ಮುಂದಿನ WTC ವೇಳಾಪಟ್ಟಿ

ವಿರಾಟ್ ಕೊಹ್ಲಿ ಬಳಗಕ್ಕೆ ಮುಂದಿನ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಅಂಗವಾಗಿ ಒಟ್ಟಿಗೆ ಆರು ಟೆಸ್ಟ್‌ ಸರಣಿಗಳು ನಡೆಯಲಿವೆ. ಇದರಲ್ಲಿ ಮೂರು ತವರಿನಲ್ಲಿ ನಡೆಯುವ ಸರಣಿಗಳಾದರೆ ಉಳಿದ ಮೂರು ವಿದೇಶದಲ್ಲಿ ನಡೆಯುವ ಸರಣಿಗಳು. ಆಗಸ್ಟ್ 4ರಿಂದ ಸೆಪ್ಟೆಂಬರ್ 14ರ ವರೆಗೆ ಇಂಗ್ಲೆಂಡ್ ವಿರುದ್ಧ ಭಾರತ ಐದು ಪಂದ್ಯಗಳ ಟೆಸ್ಟ್ ಸರಣಿ ಆಡಲಿದೆ. ಇದು ಸದ್ಯಕ್ಕೆ ಭಾರತ ಅಡುತ್ತಿರುವ WTC 2ನೇ ಆವೃತ್ತಿಯ ಚೊಚ್ಚಲ ಟೆಸ್ಟ್‌ ಸರಣಿ.
ಭಾರತದ ಇಂಗ್ಲೆಂಡ್ ಪ್ರವಾಸ, 2021ರ ವೇಳಾಪಟ್ಟಿ
* ಆಗಸ್ಟ್ 4-8: ಇಂಗ್ಲೆಂಡ್ ವಿರುದ್ಧ ಭಾರತ, ಮೊದಲ ಟೆಸ್ಟ್, ಟ್ರೆಂಟ್ ಬ್ರಿಡ್ಜ್
* ಆಗಸ್ಟ್ 12-16: ಇಂಗ್ಲೆಂಡ್ ವಿರುದ್ಧ ಭಾರತ, ಎರಡನೇ ಟೆಸ್ಟ್, ಲಾರ್ಡ್ಸ್
* ಆಗಸ್ಟ್ 25-29: ಇಂಗ್ಲೆಂಡ್ ವಿರುದ್ಧ ಭಾರತ, ಮೂರನೇ ಟೆಸ್ಟ್, ಹೆಡಿಂಗ್ಲಿ
* ಸೆಪ್ಟೆಂಬರ್ 2-6: ಇಂಗ್ಲೆಂಡ್ ವಿರುದ್ಧ ಭಾರತ, ನಾಲ್ಕನೇ ಟೆಸ್ಟ್, ಕೆನ್ನಿಂಗ್ಟನ್ ಓವಲ್
* ಸೆಪ್ಟೆಂಬರ್ 10-14: ಇಂಗ್ಲೆಂಡ್ ವಿರುದ್ಧ ಭಾರತ, ಐದನೇ ಟೆಸ್ಟ್, ಓಲ್ಡ್ ಟ್ರಾಫರ್ಡ್

Story first published: Thursday, June 24, 2021, 21:13 [IST]
Other articles published on Jun 24, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X