ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೀಮ್ ಇಂಡಿಯಾದಲ್ಲಿ ಬದಲಾವಣೆ ಗಾಳಿ ಬೀಸಿದೆ: ಹಾರ್ದಿಕ್‌ ಪಾಂಡ್ಯಗೆ ಟಿ20ಯಿಂದ ಕೊಕ್

ಟಿ20 ವಿಶ್ವಕಪ್‌ನಲ್ಲಿ ಸೆಮಿಫೈನಲ್ ಪ್ರವೇಶಿಸಲು ಸಾಧ್ಯವಾಗದೇ ಹೊರಬಿದ್ದ ಟೀಮ್ ಇಂಡಿಯಾದಲ್ಲಿ ಸದ್ಯ ಬದಲಾವಣೆ ಗಾಳಿ ಬೀಸಿದೆ. ಆಯ್ಕೆಗಾರರು ಹೊಸ ಪ್ರತಿಭೆಗಳಿಗೆ ಮಣೆ ಹಾಕಿದ್ದು, ಪರ್ಫಾಮೆನ್ಸ್ ನೀಡದ ಸ್ಟಾರ್‌ ಆಟಗಾರರಿಗೂ ತಂಡದಿಂದ ಕೊಕ್ ನೀಡಿದ್ದಾರೆ.

ಪ್ರಮುಖ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಕೂಡ ಇದ್ರಿಂದ ಹೊರತಾಗಿಲ್ಲ. ನ್ಯೂಜಿಲೆಂಡ್ ವಿರುದ್ಧ ಮೂರು ಪಂದ್ಯಗಳ ಟಿ20 ಸರಣಿಯಿಂದ ಪಾಂಡ್ಯನನ್ನ ತಂಡದಿಂದ ಹೊರಗಿಡಲಾಗಿದೆ. ಈ ಮೂಲಕ ಆಯ್ಕೆಗಾರರು ಕಠಿಣ ನಿರ್ಧಾರ ತೆಗೆದುಕೊಂಡಿದ್ದಾರೆ.

ಹೊಸ ಕೋಚ್ ರಾಹುಲ್ ದ್ರಾವಿಡ್ ಮತ್ತು ಹೊಸ ಟೀಮ್ ಇಂಡಿಯಾ ಟಿ20 ನಾಯಕ ರೋಹಿತ್ ಶರ್ಮಾ ಮುಂದಾಳತ್ವದಲ್ಲಿ ಬದಲಾವಣೆ ಕಂಡು ಬಂದಿದೆ. ಇದರ ಜೊತೆಗೆ ಸೂಪರ್‌ಸ್ಟಾರ್ ವಿರಾಟ್‌ ಕೊಹ್ಲಿ, ಜಸ್ಪ್ರೀತ್‌ ಬುಮ್ರಾ ಮತ್ತು ರವೀಂದ್ರ ಜಡೇಜಾಗೆ ವಿಶ್ರಾಂತಿ ನೀಡಲಾಗಿದೆ. ಇನ್ನು ಹಾರ್ದಿಕ್ ಪಾಂಡ್ಯನನ್ನ ತಂಡದಿಂದಲೇ ಕೈ ಬಿಡಲಾಗಿದ್ದು, ವರುಣ್ ಚಕ್ರವರ್ತಿ ಜೊತೆಗೆ ರಾಹುಲ್ ಚಹರ್ ಕೂಡ ಸ್ಥಾನಗಿಟ್ಟಿಸುವಲ್ಲಿ ವಿಫಲರಾಗಿದ್ದಾರೆ.

ತಂಡಕ್ಕೆ ಕಂಬ್ಯಾಕ್ ಮಾಡಿದ ಯುಜವೇಂದ್ರ ಚಹಾಲ್

ತಂಡಕ್ಕೆ ಕಂಬ್ಯಾಕ್ ಮಾಡಿದ ಯುಜವೇಂದ್ರ ಚಹಾಲ್

ಟಿ20 ವಿಶ್ವಕಪ್‌ನಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದ ಹರಿಯಾಣ ಮೂಲದ ಸ್ಪಿನ್ನರ್ ಯುಜವೇಂದ್ರ ಚಹಾಲ್ ಕಳೆದ ಐಪಿಎಲ್ ಸೀಸನ್‌ನಲ್ಲಿ ಅದ್ಭುತ ಪ್ರದರ್ಶನದ ಮೂಲಕ ಆಯ್ಕೆಗಾರರ ತೀರ್ಮಾನವನ್ನ ಪ್ರಶ್ನಿಸಿದ್ರು. ಲೀಡಿಂಟ್ ವಿಕೆಟ್ ಟೇಕರ್ ಸ್ಪಿನ್ನರ್ ಆಗಿದ್ದ ಚಹಾಲ್ ಇದೀಗ ಮತ್ತೆ ಟೀಮ್ ಇಂಡಿಯಾಕ್ಕೆ ಕಂಬ್ಯಾಕ್ ಮಾಡಿದ್ದಾರೆ.

ವೆಂಕಟೇಶ್ ಅಯ್ಯರ್‌ಗೆ ಮಣೆ

ವೆಂಕಟೇಶ್ ಅಯ್ಯರ್‌ಗೆ ಮಣೆ

ದುಬೈನಲ್ಲಿ ನಡೆದ ಐಪಿಎಲ್‌ 14ನೇ ಆವೃತ್ತಿಯಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್‌ (ಕೆಕೆಆರ್‌) ಪರ ಸ್ಫೋಟಕ ಆರಂಭದ ಜೊತೆಗೆ ಮನರಂಜಿಸಿದ ಮಧ್ಯಪ್ರದೇಶದ ಆಟಗಾರ ವೆಂಕಟೇಶ್ ಅಯ್ಯರ್ ಕೂಡ ಆಯ್ಕೆಗಾರರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಲೀಡಿಂಗ್ ವಿಕೆಟ್ ಟೇಕರ್ ಆಗಿ ಆರ್‌ಸಿಬಿ ಪರ ಮಿಂಚಿನ ಹರ್ಷಲ್ ಪಟೇಲ್ ಮೊದಲ ಬಾರಿಗೆ ಬ್ಲೂ ಜರ್ಸಿ ತೊಡಲಿದ್ದಾರೆ.

ಭುವನೇಶ್ವರ್ ಕುಮಾರ್‌ಗೆ ಮತ್ತೊಂದು ಅವಕಾಶ

ಭುವನೇಶ್ವರ್ ಕುಮಾರ್‌ಗೆ ಮತ್ತೊಂದು ಅವಕಾಶ

ಇತ್ತೀಚಿನ ಸೀಸನ್‌ಗಳಲ್ಲಿ ತುಂಬಾ ಸಾಧಾರಣ ಪ್ರದರ್ಶನ ತೋರುತ್ತಿರುವ ಭುವನೇಶ್ವರ್‌ ಕುಮಾರ್‌ಗೆ ಆಯ್ಕೆಗಾರರು ಮತ್ತೊಂದು ಅವಕಾಶ ನೀಡಿದಂತಿದೆ. ಇನ್ನು ಶಾರ್ದೂಲ್ ಠಾಕೂರ್ ಮತ್ತು ಮೊಹಮ್ಮದ್ ಶಮಿ ಭವಿಷ್ಯ ಕೂಡ ಡೋಲಾಯಮಾನವಾಗಿದೆ.

ಹಾರ್ದಿಕ್ ಪಾಂಡ್ಯ ಮೇಲೆ ಹೆಚ್ಚು ಅವಲಂಬಿತವಾಗಿದ್ದೇ ತಪ್ಪಾಯ್ತ?

ಹಾರ್ದಿಕ್ ಪಾಂಡ್ಯ ಮೇಲೆ ಹೆಚ್ಚು ಅವಲಂಬಿತವಾಗಿದ್ದೇ ತಪ್ಪಾಯ್ತ?

ಸ್ಟಾರ್ ಆಲ್‌ರೌಂಡರ್ ಎಂದುಕೊಂಡು ಹಾರ್ದಿಕ್ ಪಾಂಡ್ಯರನ್ನ ಪ್ರತಿ ಸರಣಿಗೂ ಆಯ್ಕೆ ಮಾಡುತ್ತಿದ್ದ ಆಯ್ಕೆಗಾರರು ಇದೀಗ ದೊಡ್ಡ ಪಾಠ ಕಲಿತಂತಿದೆ. ಪಾಂಡ್ಯ ಇತ್ತೀಚಿನ ದಿನಗಳಲ್ಲಿ ಬೌಲಿಂಗ್‌ನಲ್ಲೂ ಕಳೆಗುಂದಿದ್ದಾರೆ. ಸಂಪೂರ್ಣ ಬ್ಯಾಟ್ಸ್‌ಮನ್ ಎಂದು ಕೂಡ ತಂಡದಲ್ಲಿ ಇರಿಸಿಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ಆಯ್ಕೆಗಾರರು ಉತ್ತಮ ಬ್ಯಾಟ್ಸ್‌ಮನ್ ಜೊತೆಗೆ ಟಿ20, ಏಕದಿನ ಫಾರ್ಮೆಟ್‌ನಲ್ಲಿ ಬೌಲಿಂಗ್ ಮಾಡುವ ಆಲ್‌ರೌಂಡರ್ ಹುಡುಕಾಟದಲ್ಲಿದ್ದಾರೆ. ಇದೇ ಕಾರಣಕ್ಕೆ ವೆಂಕಟೇಶ್ ಅಯ್ಯರ್ ನಂತಹ ಪ್ರತಿಭೆಗಳಿಗೆ ಮಣೆ ಹಾಕಲಾಗುತ್ತಿದೆ.

ಹೊಸ ವಿಕೆಟ್ ಕೀಪರ್‌ಗಾಗಿ ಹುಡುಕಾಟ

ಹೊಸ ವಿಕೆಟ್ ಕೀಪರ್‌ಗಾಗಿ ಹುಡುಕಾಟ

ಟೆಸ್ಟ್‌ ಕ್ರಿಕೆಟ್‌ನಲ್ಲಿ ಸದ್ಯ ರಿಶಭ್ ಪಂತ್ ವಿಕೆಟ್ ಕೀಪರ್ ಆಗಿ ಕಾಣಬಹುದು. ಆದರೆ ಬ್ಯಾಕಪ್ ವಿಕೆಟ್ ಕೀಪರ್ ಆಗಿ ವೃದ್ದಿಮಾನ್ ಸಾಹಾ ಅವರನ್ನು ಆಯ್ಕೆ ಮಾಡಲು ಸಾಧ್ಯವಿಲ್ಲ. ಈಗಾಗಲೇ 37 ವರ್ಷದ ಸಾಹಾ ಅವರನ್ನು ಭವಿಷ್ಯದ ದೃಷ್ಟಿಯಿಂದ ಆಯ್ಕೆ ಮಾಡಲು ಸಾಧ್ಯವಿಲ್ಲ. ಹೀಗಾಗಿ ಟೀಮ್ ಇಂಡಿಯಾ ಆಯ್ಕೆಗಾರರುಬದಲಿ ವಿಕೆಟ್ ಕೀಪರ್ ಹುಡುಕಾಟದಲ್ಲಿದ್ದಾರೆ.

Team India ಹೊಸ ರೂಪ ಪಡೆದುಕೊಂಡಿದೆ | Oneindia Kannada
ನ್ಯೂಜಿಲೆಂಡ್ ವಿರುದ್ಧ ಭಾರತದ ಟಿ20 ತಂಡ ಹೀಗಿದೆ

ನ್ಯೂಜಿಲೆಂಡ್ ವಿರುದ್ಧ ಭಾರತದ ಟಿ20 ತಂಡ ಹೀಗಿದೆ

ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ಋತುರಾಜ್ ಗಾಯಕ್ವಾಡ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್-ಕೀಪರ್), ಇಶಾನ್ ಕಿಶನ್ (ವಿಕೆಟ್-ಕೀಪರ್), ವೆಂಕಟೇಶ್ ಅಯ್ಯರ್, ಯುಜುವೇಂದ್ರ ಚಾಹಲ್, ಆರ್ ಅಶ್ವಿನ್, ಅಕ್ಷರ್ ಪಟೇಲ್, ಅವೇಶ್ ಖಾನ್, ಭುವನೇಶ್ವರ್ ಕುಮಾರ್, ದೀಪಕ್ ಚಾಹರ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್

Story first published: Wednesday, November 10, 2021, 12:40 [IST]
Other articles published on Nov 10, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X