ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿರಾಟ್ ಕೊಹ್ಲಿಗೆ ಭಾರತ ಅವಲಂಬಿತವಾಗಿರಬಾರದು: ಮಾಂಟಿ ಪನೇಸರ್

Team India should not be dependent on Virat Kohli: Monty Panesar

ಲಂಡನ್: ಆಸ್ಟ್ರೆಲಿಯಾ ವಿರುದ್ಧದ ಆರಂಭಿಕ ಟೆಸ್ಟ್‌ ಬಳಿಕ ವಿರಾಟ್ ಕೊಹ್ಲಿ ಪಿತೃತ್ವ ರಜೆ ಪಡೆದುಕೊಳ್ಳಲಿರುವುದರಿಂದ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಮೊದಲ ಪಂದ್ಯ ಗೆದ್ದು ಭಾರತ ತಂಡ 1-0ಯ ಮುನ್ನಡೆ ಸಾಧಿಸುತ್ತೆ ಎಂದು ಭಾರತೀಯ ಅಭಿಮಾನಿಗಳು ಭಾವಿಸಿದ್ದರು. ಆದರೆ ಹಾಗಾಗಲಿಲ್ಲ.

ಭಾರತ ವಿರುದ್ಧದ ದ್ವಿತೀಯ ಟೆಸ್ಟ್‌ಗೆ ಆಸ್ಟ್ರೇಲಿಯಾ ಪ್ಲೇಯಿಂಗ್ XI ಪ್ರಕಟಭಾರತ ವಿರುದ್ಧದ ದ್ವಿತೀಯ ಟೆಸ್ಟ್‌ಗೆ ಆಸ್ಟ್ರೇಲಿಯಾ ಪ್ಲೇಯಿಂಗ್ XI ಪ್ರಕಟ

ಆರಂಭಿಕ ಪಂದ್ಯದಲ್ಲಿ ಕೊಹ್ಲಿ ಇದ್ದರೂ ಕೂಡ ಭಾರತ ಹೀನಾಯ ಸೋಲು ಕಂಡಿತು. ಇನ್ನು ಉಳಿದ ಮೂರು ಪಂದ್ಯಗಳಲ್ಲಿ ಕೊಹ್ಲಿ ಆಡುತ್ತಿಲ್ಲ. ಹೀಗಾಗಿ ಟೀಮ್ ಇಂಡಿಯಾದ ಪಾಡೇನೋ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ ಕೊಹ್ಲಿ ಹೊರತಾಗಿಯೂ ಭಾರತ ಬಲಿಷ್ಠ ತಂಡವಾಗಿರಬೇಕು ಎಂದು ಇಂಗ್ಲೆಂಡ್ ಮಾಜಿ ಕ್ರಿಕೆಟರ್ ಮಾಂಟಿ ಪನೇಸರ್ ಹೇಳಿದ್ದಾರೆ.

'ನಾವು ಮುಂದೆ ನೋಡಬೇಕು. ಭಾರತೀಯ ಕ್ರಿಕೆಟ್‌ನ ಭವಿಷ್ಯ ಏನು? ಇದನ್ನು ಕಂಡುಕೊಳ್ಳಲು ಇದೇ ನಮಗೆ ಪ್ರಶಸ್ತ ಕಾಲ. ವಿರಾಟ್ ಕೊಹ್ಲಿ ನಾಳೆ ಒಂದಿನ ನಿವೃತ್ತರಾಗ್ತಾರೆ. ಹಾಗಾಗಿ ಭಾರತ ಅಂಥ ಒಬ್ಬ ಕ್ಲಾಸ್ ಆಟಗಾರನಿಗೆ ಅವಲಂಬಿತವಾಗಬಾರದು. ಬೇರೆ ಆಟಗಾರರೂ ಜವಾಬ್ದಾರಿ ತೆಗೆದುಕೊಳ್ಳಬೇಕು. ಇನ್ನುಳಿದ ಮೂರು ಪಂದ್ಯಗಳಲ್ಲಿ ನಾವಿದನ್ನು ಸಾಭೀತುಪಡಿಸಿ ತೋರಿಸಬೇಕಾಗಿದೆ,' ಎಂದು ಪನೇಸರ್ ಹೇಳಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧ ಮೇಲುಗೈ ಸಾಧಿಸಲು ಭಾರತಕ್ಕೆ ಇನ್ನೂ ಅವಕಾಶವಿದೆ: ಡ್ಯಾರೆನ್ ಲೆಹ್ಮನ್ಆಸ್ಟ್ರೇಲಿಯಾ ವಿರುದ್ಧ ಮೇಲುಗೈ ಸಾಧಿಸಲು ಭಾರತಕ್ಕೆ ಇನ್ನೂ ಅವಕಾಶವಿದೆ: ಡ್ಯಾರೆನ್ ಲೆಹ್ಮನ್

ಆರಂಭಿಕ ಪಂದ್ಯದ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಭಾರತ ಕೇವಲ 36 ರನ್‌ಗೆ ಇನ್ನಿಂಗ್ಸ್‌ ಮುಗಿಸಿತ್ತು. 8 ವಿಕೆಟ್ ಸೋಲನುಭವಿಸಿತ್ತು. ದ್ವಿತೀಯ ಪಂದ್ಯ ಡಿಸೆಂಬರ್ 26ರಂದು ಮೆಲ್ಬರ್ನ್ ಕ್ರಿಕೆಟ್ ಗ್ರೌಂಡ್‌ನಲ್ಲಿ 5 amಗೆ ಆರಂಭವಾಗಲಿದೆ. ಪಂದ್ಯ ಗೆದ್ದುಕೊಳ್ಳುವ ಯೋಜನೆಯಲ್ಲಿ ಭಾರತವಿದೆ.

Story first published: Thursday, December 24, 2020, 20:21 [IST]
Other articles published on Dec 24, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X