ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸ್ಪಿನ್ನರ್ ಕುಲ್ದೀಪ್ ಯಾದವ್ ಪರವಾಗಿ ಬ್ಯಾಟ್ ಬೀಸಿದ ಇರ್ಫಾನ್ ಪಠಾಣ್

Team India should play with Kuldeep Yadav in Test England says Irfan Pathan

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ಶುಕ್ರವಾರದಿಂದ ಆರಂಭವಾಗಲಿದೆ. ಹೀಗಾಗಿ ಈ ಟೆಸ್ಟ್ ಪಂದ್ಯಕ್ಕೆ ಟೀಮ್ ಇಂಡಿಯಾದ ಆಡುವ ಬಳಗ ಹೇಗಿರಲಿದೆ ಎಂಬ ಕುತೂಹಲ ಮೂಡಿದೆ. ಭಾರತದಲ್ಲೇ ಪಂದ್ಯ ನಡೆಯುತ್ತಿರುವ ಕಾರಣ ಸ್ಪಿನ್ ವಿಭಾಗದ ಮೇಲೆ ಹೆಚ್ಚಿನ ನಿರೀಕ್ಷೆಗಳು ಇರುತ್ತದೆ. ಹಾಗಾಗಿ ಎರಡನೇ ಸ್ಪಿನ್ನರ್ ಆಗಿ ಯಾರನ್ನು ಕಣಕ್ಕಿಳಿಸಲಾಗುತ್ತದೆ ಎಂಬುದು ಕುತೂಹಲ ಮೂಡಿಸಿದೆ. ಟೀಮ್ ಇಂಡಿಯಾದ ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್ ಈ ಬಗ್ಗೆ ತಮ್ಮ್ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

"ತಂಡದ ಮ್ಯಾನೇಜ್‌ಮೆಂಟ್ ಕುಲ್ದೀಪ್ ಯಾದವ್ ಅವರನ್ನು ಬೆಂಬಲಿಸುವುದು ಬಹಳ ಮುಖ್ಯವಾಗುತ್ತದೆ. ಯಾಕೆಂದರೆ ಆತನೋರ್ವ ವಿಶೇಷವಾದ ಪ್ರತಿಭೆ. ನಿವು ನಿತ್ಯವೂ ಎಡಗೈ ರಿಸ್ಟ್ ಸ್ಪಿನ್ನರ್‌ಅನ್ನು ಗುರುತಿಸಲು ಸಾಧ್ಯವಿಲ್ಲ. ಆತ ವಿಶೇಷವಾದ ಬೌಲರ್. ಆತನಲ್ಲಿ 25-26ನೇ ವಯಸ್ಸಿನಲ್ಲಿಯೇ ಪರಿಪಕ್ಷತೆಯನ್ನು ಗಳಿಸಿಕೊಂಡಿದ್ದಾರೆ. ಆತನಿಗೆ ಯಾವಾಗ ಅವಕಾಶ ದೊರೆಯುತ್ತದೋ ಆಗ ಆತ ಉತ್ತಮವಾಗಿ ಪ್ರದರ್ಶನವನ್ನು ನೀಡಲಿದ್ದಾರೆ ಎಂಬ ಬಗ್ಗೆ ನನಗೆ ಬಹಳ ವಿಶ್ವಾಸವಿದೆ ಎಂದಿದ್ದಾರೆ ಇರ್ಫಾನ್ ಪಠಾನ್.

ರಹಾನೆಯಿಂದ ಕೊಹ್ಲಿಗೆ ನಾಯಕತ್ವ ಚರ್ಚೆಗೀಡಾಗಲಿದೆ: ಪೀಟರ್ಸನ್ರಹಾನೆಯಿಂದ ಕೊಹ್ಲಿಗೆ ನಾಯಕತ್ವ ಚರ್ಚೆಗೀಡಾಗಲಿದೆ: ಪೀಟರ್ಸನ್

"ಇಂಗ್ಲೆಂಡ್ ವಿಚಾರವಾಗಿ ಬಂದರೆ ಇತಿಹಾಸವನ್ನು ಗಮನಿಸಿದಾಗ ಲೆಗ್ ಸ್ಪಿನ್ ಬೌಲರ್‌ಗಳಿಗೆ ಯಾವಾಗಲೂ ಉತ್ತಮ ಪ್ರದರ್ಶನವನ್ನು ನೀಡುವ ಅವಕಾಶವಿರುತ್ತದೆ. ನನ್ನ ಅಭಿಪ್ರಾಯದಂತೆ ಯಾವಾಗ ಕುಲ್ದೀಪ್‌ಗೆ ಅವಕಾಶ ದೊರೆಯುತ್ತದೆಯೋ ಆಗ ಉತ್ತಮ ಕೊಡುಗೆಯನ್ನು ನೀಡಬಲ್ಲರು" ಎಂದು ಇರ್ಫಾನ್ ಪಠಾಣ್ ಹೇಳಿಕೆ ನೀಡಿದ್ದಾರೆ.

ಕುಲ್ದೀಪ್ ಯಾದವ್ ಕೊನೆಯ ಬಾರಿಗೆ 2019ರ ಜನವರಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಸಿಡ್ನಿಯಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳದಿದ್ದರು. ಆ ಬಳಿಕ ತಮ್ಮ ಅವಕಾಶಕ್ಕಾಗಿ ಅವರು ಕಾಯುತ್ತಲೇ ಇದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಇತ್ತೀಚಿನ ಸರಣಿಯಲ್ಲಿ ಒಂದೇ ಒಂದು ಅವಕಾಶ ಕುಲ್ದೀಪ್‌ಗೆ ದೊರೆಯಲಿಲ್ಲ. ಈವರೆಗೆ 6 ಟೆಸ್ಟ್ ಪಂದ್ಯಗಳನ್ನು ಆಡಿರುವ ಕುಲ್ದೀಪ್ 24 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

ಐಸಿಸಿ ತಿಂಗಳ ಆಟಗಾರ ಪ್ರಶಸ್ತಿಗೆ ಪಂತ್ ಸೇರಿ ಮೂವರು ನಾಮನಿರ್ದೇಶನಐಸಿಸಿ ತಿಂಗಳ ಆಟಗಾರ ಪ್ರಶಸ್ತಿಗೆ ಪಂತ್ ಸೇರಿ ಮೂವರು ನಾಮನಿರ್ದೇಶನ

ಟೀಮ್ ಇಂಡಿಯಾ ಪರವಾಗಿ ಅನುಭವಿ ಸ್ಪಿನ್ನರ್ ಆರ್ ಅಶ್ವಿನ್ ಕಣಕ್ಕಿಳಿಯುವುದರಲ್ಲಿ ಅನುಮಾನವಿಲ್ಲ. ಆದರೆ ಎರಡನೇ ಸ್ಪಿನ್ನರ್ ಆಯ್ಕೆಯ ಬಗ್ಗೆ ವಾಶಿಂಗ್ಟನ್ ಸುಂದರ್ ಕಾಗೂ ಕುಲ್ದೀಪ್ ಯಾದವ್ ಆಯ್ಕೆಯ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿದೆ. ಆದರೆ ತಂಡದ ಮ್ಯಾನೇಜ್‌ಮೆಂಟ್ ಯಾವ ನಿರ್ಧಾರ ತೆಗೆದುಕೊಳ್ಳಲಿದೆ ಎಂಬುದು ಕುತೂಹಲಕಾರಿಯಾಗಿದೆ.

Story first published: Wednesday, February 3, 2021, 13:59 [IST]
Other articles published on Feb 3, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X