ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೀಂ ಇಂಡಿಯಾ ಬಲಿಷ್ಠ ಪ್ಲೇಯಿಂಗ್ ಇಲೆವೆನ್‌ ಜೊತೆ ಆಡುವುದು ಯಾವಾಗ ಎಂದ ಮಾಜಿ ಕ್ರಿಕೆಟಿಗ

Team India Should Stick To Best Possible XI In T20Is Against South Africa: Rajkumar Sharma

ದೆಹಲಿಯ ಮಾಜಿ ಕ್ರಿಕೆಟಿಗ ಮತ್ತು ವಿರಾಟ್ ಕೊಹ್ಲಿ ಬಾಲ್ಯದ ಕೋಚ್ ರಾಜ್‌ಕುಮಾರ್ ಶರ್ಮಾ, ಟೀಮ್ ಇಂಡಿಯಾ ತಮ್ಮ ಆಡುವ ಹನ್ನೊಂದರ ಬಳಗದಲ್ಲಿ ಮಾಡಿದ ನಿರಂತರ ಬದಲಾವಣೆಗಳನ್ನು ಪ್ರಶ್ನಿಸಿದ್ದಾರೆ. ಅದರಲ್ಲೂ ಭಾರತ ತಂಡದಲ್ಲಿ ಬೌಲರ್ ಗಳನ್ನು ನಿರಂತರವಾಗಿ ಬದಲಾಯಿಸತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

ಟಿ20 ವಿಶ್ವಕಪ್‌ನಲ್ಲಿ ಭುವನೇಶ್ವರ್ ಬದಲಿಗೆ ಈತ ಆಡಿದರೆ ಉತ್ತಮ ಎಂದ ಪಾಕಿಸ್ತಾನದ ಮಾಜಿ ಕ್ರಿಕೆಟಿಗಟಿ20 ವಿಶ್ವಕಪ್‌ನಲ್ಲಿ ಭುವನೇಶ್ವರ್ ಬದಲಿಗೆ ಈತ ಆಡಿದರೆ ಉತ್ತಮ ಎಂದ ಪಾಕಿಸ್ತಾನದ ಮಾಜಿ ಕ್ರಿಕೆಟಿಗ

ಭುವನೇಶ್ವರ್ ಕುಮಾರ್ ಮತ್ತು ಜಸ್ಪ್ರೀತ್ ಬುಮ್ರಾ ಬದಲಿಗೆ ಅರ್ಷದೀಪ್ ಸಿಂಗ್ ಮತ್ತು ದೀಪಕ್ ಚಹಾರ್ ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಟಿ20 ಪಂದ್ಯದಲ್ಲಿ ಆಡಿದರು. ಭುವನೇಶ್ವರ್ ಏಷ್ಯಾ ಕಪ್ 2022 ಮತ್ತು ಆಸ್ಟ್ರೇಲಿಯಾ ವಿರುದ್ಧದ ಸರಣಿ ಎರಡರಲ್ಲೂ ಪ್ರಮುಖವಾಗಿ ಕಾಣಿಸಿಕೊಂಡಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಆಡಿದ ಬುಮ್ರಾ ಗಾಯದ ಸಮಸ್ಯೆಯಿಂದಾಗಿ ದಕ್ಷಿಣ ಆಫ್ರಿಕಾ ವಿರುದ್ಧದ ಉಳಿದ ಎರಡು ಪಂದ್ಯಗಳಿಂದ ಹೊರಗುಳಿದಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧದ ಉಳಿದ ಎರಡು ಟಿ20 ಪಂದ್ಯಗಳಲ್ಲಿ ಟೀಮ್ ಇಂಡಿಯಾ ತಮ್ಮ ಅತ್ಯುತ್ತಮ ತಂಡದೊಂದಿಗೆ ಆಡಬೇಕೆಂದು ರಾಜ್‌ಕುಮಾರ್ ಹೇಳಿದ್ದಾರೆ. ಗಾಯದ ಸಮಸ್ಯೆ, ಫಿಟ್ನೆಸ್ ಸಮಸ್ಯೆಯಿಂದಾಗಿ ಟೀಂ ಇಂಡಿಯಾದಲ್ಲಿ ಆಟಗಾರರನ್ನು ಬದಲಾಯಿಸುತ್ತಿರುವುದು ಉತ್ತಮ ಬೆಳವಣಿಗೆಯಲ್ಲ ಎಂದು ಅವರು ಹೇಳಿದ್ದಾರೆ.

ಬಲಿಷ್ಠ ಪ್ಲೇಯಿಂಗ್ ಇಲೆವೆನ್‌ ಜೊತೆ ಆಡುವುದು ಯಾವಾಗ?

ಬಲಿಷ್ಠ ಪ್ಲೇಯಿಂಗ್ ಇಲೆವೆನ್‌ ಜೊತೆ ಆಡುವುದು ಯಾವಾಗ?

"ನಮ್ಮ ಬಲಿಷ್ಠ ಹನ್ನೊಂದರ ಬಳಗದ ಜೊತೆ ನಾವು ಯಾವಾಗ ಆಡುತ್ತೇವೆ ಎಂಬುದು ನನ್ನ ಪ್ರಶ್ನೆ? ಟಿ20 ವಿಶ್ವಕಪ್‌ಗೆ ಮೊದಲು ನಮಗೆ ಕೇವಲ ಎರಡು ಪಂದ್ಯಗಳಿವೆ ಮತ್ತು ನಮ್ಮ ಮೊದಲ ಆಯ್ಕೆಯ ಆಡುವ ಹನ್ನೊಂದರ ಬಳಗದ ಎಲ್ಲಾ ಗಾಯಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳುತ್ತಿದೆ ಎಂದು ನಮಗೆ ಇನ್ನೂ ತಿಳಿದಿಲ್ಲ." ಎಂದು ರಾಜ್‌ಕುಮಾರ್ ಶರ್ಮಾ ತಿಳಿಸಿದ್ದಾರೆ.

ವಿಶ್ವಕಪ್‌ ಹತ್ತಿರದಲ್ಲೇ ಇರುವಾಗ ತಂಡದಲ್ಲಿ ಬದಲಾವಣೆ ಮಾಡುವುದರಿಂದ ಆಟಗಾರರ ಪ್ರದರ್ಶನದ ಮೇಲೆ ಪರಿಣಾಮ ಬೀರಲಿದೆ ಎಂದು ಅವರು ಹೇಳಿದ್ದಾರೆ.

ವಿಶ್ವದ ಅತ್ಯುತ್ತಮ ಟಿ20 ಆಟಗಾರ ಈತ: ಭಾರತೀಯನನ್ನು ಹೊಗಳಿದ ವೇಯ್ನ್ ಪಾರ್ನೆಲ್

ಚಾಹರ್, ಅರ್ಷ್‌ದೀಪ್ ಉತ್ತಮವಾಗಿ ಬೌಲಿಂಗ್ ಮಾಡಿದರು

ಚಾಹರ್, ಅರ್ಷ್‌ದೀಪ್ ಉತ್ತಮವಾಗಿ ಬೌಲಿಂಗ್ ಮಾಡಿದರು

ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯ ಮೊದಲನೇ ಪಂದ್ಯದಲ್ಲಿ ಭಾರತ ತಂಡದ ಬೌಲಿಂಗ್ ಪ್ರದರ್ಶನದ ಬಗ್ಗೆ ರಾಜ್‌ಕುಮಾರ್ ಶರ್ಮಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

"ನಮ್ಮ ಪ್ರಮುಖ ಆಟಗಾರರ ಅನುಪಸ್ಥಿತಿಯಲ್ಲಿ ಗೆಲುವು ಪಡೆಯುವುದು ನಿರ್ಣಾಯಕವಾಗಿತ್ತು. ಜಸ್ಪ್ರೀತ್ ಬುಮ್ರಾ ಅವರಿಗೆ ಬೆನ್ನಿನ ಗಾಯವಾಗಿದೆ ಎಂದು ಘೋಷಿಸಿದಾಗ ನಮ್ಮ ಬೌಲಿಂಗ್ ನಿಜವಾಗಿಯೂ ದುರ್ಬಲವಾಗಿತ್ತು. ಹಾಗಾಗಿ, ಅರ್ಶ್ದೀಪ್ ಸಿಂಗ್ ಮತ್ತು ದೀಪಕ್ ಚಾಹರ್ ಅವರ ಬೌಲಿಂಗ್‌ ಬಗ್ಗೆ ನನಗೆ ಸಂತಸವಾಗುತ್ತಿದೆ. 15 ಎಸೆತಗಳ ಅಂತರದಲ್ಲಿ ಐದು ವಿಶ್ವ ದರ್ಜೆಯ ಬ್ಯಾಟರ್‌ಗಳನ್ನು ಔಟ್ ಮಾಡುವುದು ಅದ್ಭುತ ಪ್ರಯತ್ನವಾಗಿದೆ ಎಂದು ಅವರು ಹೇಳಿದರು.

ಬುಮ್ರಾ ಅನುಪಸ್ಥಿತಿ ಭಾರತ ತಂಡಕ್ಕೆ ಕಾಡಲಿದೆ

ಬುಮ್ರಾ ಅನುಪಸ್ಥಿತಿ ಭಾರತ ತಂಡಕ್ಕೆ ಕಾಡಲಿದೆ

ಬುಮ್ರಾ ಗಾಯಗೊಂಡಿರುವುದು ಟಿ20 ವಿಶ್ವಕಪ್‌ನಲ್ಲಿ ಭಾರತದ ಅವಕಾಶಗಳಿಗೆ ದೊಡ್ಡ ಹೊಡೆತ ಎಂದು ರಾಜ್‌ಕುಮಾರ್ ಶರ್ಮಾ ಹೇಳಿದ್ದಾರೆ. ಟಿ20 ವಿಶ್ವಕಪ್‌ಗೆ ಬುಮ್ರಾ ಚೇತರಿಸಿಕೊಳ್ಳಲು ವಿಫಲವಾದರೆ, ಟೀಂ ಇಂಡಿಯಾ ಬೌಲಿಂಗ್ ದಾಳಿ ದುರ್ಬಲವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಅರ್ಶ್ದೀಪ್ ಮತ್ತು ಚಾಹರ್ ಉತ್ತಮ ಪ್ರದರ್ಶನ ನೀಡಿರುವುದು ಸಮಾಧಾನಕರ ಅಂಶವಾದರೂ, ವಿಶ್ವಕಪ್‌ನಂತಜ ದೊಡ್ಡ ವೇದಿಕೆಯಲ್ಲಿ ಒತ್ತಡದಲ್ಲಿ ಉತ್ತಮ ಪ್ರದರ್ಶನ ನೀಡಲು ಅನುಭವ ಮುಖ್ಯವಾಗುತ್ತದೆ ಎಂದು ಅವರು ಹೇಳಿದ್ದಾರೆ.

ಒತ್ತಡದಲ್ಲಿ ಹೇಗೆ ಆಡುತ್ತಾರೆ ನೋಡಬೇಕು

ಒತ್ತಡದಲ್ಲಿ ಹೇಗೆ ಆಡುತ್ತಾರೆ ನೋಡಬೇಕು

"ಈ ಯುವ ಆಟಗಾರರಲ್ಲಿ ಪಂದ್ಯ ಗೆಲ್ಲುವ ಸಾಮರ್ಥ್ಯಕ್ಕೆ ಬಂದಾಗ ಖಂಡಿತವಾಗಿಯೂ ಯಾವುದೇ ಸಂದೇಹವಿಲ್ಲ. ಆದರೆ ಅವರು ವಿಶ್ವಕಪ್‌ನ ಒತ್ತಡವನ್ನು ತೆಗೆದುಕೊಳ್ಳಲು ಮತ್ತು ಇನ್ನೂ ಪ್ರದರ್ಶನ ನೀಡಲು ಸಮರ್ಥರಾಗುತ್ತಾರೆಯೇ ಎಂಬುದು ಕಾದು ನೋಡಬೇಕಾಗಿದೆ" ಎಂದು ಹೇಳಿದ್ದರು.

ಭಾನುವಾರ (ಅಕ್ಟೋಬರ್ 2) ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಭಾರತ ಯಾರಿಗೆ ಅವಕಾಶ ನೀಡಲಿದೆ ಎನ್ನುವುದನ್ನು ನೋಡುವುದು ಕುತೂಹಲಕಾರಿಯಾಗಿದೆ.

Story first published: Saturday, October 1, 2022, 22:24 [IST]
Other articles published on Oct 1, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X