ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುವ ಚಿಂತನೆಯಲ್ಲಿ ಭಾರತದ ಸ್ಟಾರ್ ಆಲ್‌ರೌಂಡರ್: ವರದಿ

Team India star all-rounder Thinking of retirement from Test cricket: Report

ಭಾರತೀಯ ಕ್ರಿಕೆಟ್ ತಂಡದ ಪ್ರಮುಖ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಇತ್ತೀಚೆಗೆ ಗಾಯದ ಸಮಸ್ಯೆಯಿಂದ ನಿರಂತರವಾಗಿ ಬಳಲುತ್ತಿದ್ದಾರೆ. 2019 ಏಕದಿನ ವಿಶ್ವಕಪ್‌ನ ನಂತರ ಗಾಯಕ್ಕೆ ತುತ್ತಾದ ಪಾಂಡ್ಯ ನಂತರ ಸುದೀರ್ಘ ಕಾಲದ ವಿಶ್ರಾಂತಿಯ ಬಳಿಕವೂ ಸಂಪೂರ್ಣವಾಗಿ ಫಿಟ್ ಆಗಲು ಸಾಧ್ಯವಾಗಲಿಲ್ಲ. ಇತ್ತೀಚೆಗೆ ಪೂರ್ಣ ಪ್ರಮಾಣದ ಬ್ಯಾಟರ್ ಆಗಿ ಕಣಕ್ಕಿಳಿದರೂ ಅದರಲ್ಲಿ ಯಶಸ್ಸು ಸಾಧ್ಯವಾಗದೆ ಟೀಕೆ ಎದುರಿಸಿದ್ದಾರೆ. ಆಲ್‌ರೌಂಡರ್ ಆಗಿ ಕಣಕ್ಕಿಳಿದರೆ ಮಾತ್ರವೇ ಹಾರ್ದಿಕ್ ಪಾಂಡ್ಯ ತಂಡದಲ್ಲಿರಲು ಸೂಕ್ತ ಎಂಬ ಅಭಿಪ್ರಾಯಗಳು ವ್ಯಕ್ತವಾಯಿತು. ಕಳೆದ ಟಿ20 ವಿಶ್ವಕಪ್‌ನಲ್ಲಿ ಒಂದೆರಡು ಓವರ್‌ಗಳ ಬೌಲಿಂಗ್ ಮಾಡಿದರೂ ನಂತರ ಫಿಟ್‌ನೆಸ್ ಪಡೆದುಕೊಳ್ಳಲು ಸೂಚಿಸಿ ಅವರನ್ನು ಕಿವೀಸ್ ವಿರುದ್ಧದ ಸರಣಿಯಿಂದ ಹೊರಗಿಡಲು ನಿರ್ಧರಿಸಲಾಯಿತು.

ಇದೀಗ ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಸಜ್ಜಾಗುತ್ತಿದೆ. ಈ ಪ್ರವಾಸಕ್ಕೆ ಹಾರ್ದಿಕ್ ಪಾಂಡ್ಯ ಆಯ್ಕೆಯಾಗುವ ಸಾಧ್ಯತೆ ಬಹಳ ಕಡಿಮೆಯಿದೆ. ಈ ಸಂದರ್ಭದಲ್ಲಿ ಬಿಸಿಸಿಐ ಮೂಲಗಳಿಂದ ಮಹತ್ವದ ಮಾಹಿತಿಯೊಂದು ಹೊರಬಿದ್ದಿದೆ. ಟೀಮ್ ಇಂಡಿಯಾದ ಪ್ರಮುಖ ಆಲ್‌ರೌಂಡರ್ ಆಗಿ ಮಿಂಚಿ ಸಾಕಷ್ಟ ಭರವಸೆ ಮೂಡಿಸಿದ್ದ ಹಾರ್ದಿಕ್ ಪಾಂಡ್ಯ ಸುದೀರ್ಘ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಲಿದ್ದಾರೆ ಎನ್ನಲಾಗಿದೆ.

ತವರಿನಲ್ಲಿ ವೇಗವಾಗಿ 300 ಟೆಸ್ಟ್‌ ವಿಕೆಟ್ ಪಡೆದ ಬೌಲರ್ಸ್‌: ಭಾರತದವರೆಷ್ಟು?ತವರಿನಲ್ಲಿ ವೇಗವಾಗಿ 300 ಟೆಸ್ಟ್‌ ವಿಕೆಟ್ ಪಡೆದ ಬೌಲರ್ಸ್‌: ಭಾರತದವರೆಷ್ಟು?

ಬೆನ್ನು ನೋವಿನ ಕಾರಣಕ್ಕೆ ಟೆಸ್ಟ್‌ಗೆ ವಿದಾಯ?

ಬೆನ್ನು ನೋವಿನ ಕಾರಣಕ್ಕೆ ಟೆಸ್ಟ್‌ಗೆ ವಿದಾಯ?

ಬಿಸಿಸಿಐ ಮೂಲಗಳ ವರದಿಯನ್ನು ಆಧರಿಸಿ ಇನ್‌ಸೈಡ್ ಸ್ಪೋರ್ಟ್ ಈ ವರದಿಯನ್ನು ಮಾಡಿದೆ. ಬೆನ್ನು ನೋವಿನ ಕಾರಣದಿಂದಾಗಿ ಹಾರ್ದಿಕ್ ಪಾಂಡ್ಯ ಇತ್ತೀಚೆಗೆ ಬೌಲಿಂಗ್‌ನಿಂದ ದೂರವುಳಿದಿದ್ದರು. ಅದೇ ಕಾರಣದಿಂದಾಗಿ ಪಾಂಡ್ಯ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿಯನ್ನು ಹೇಳುವ ಸಾಧ್ಯತೆಯಿದೆ ಎನ್ನಲಾಗಿದೆ. ವೈಟ್‌ಬಾಲ್ ಕ್ರಿಕೆಟ್ ಹಾಗೂ ಐಪಿಎಲ್‌ಅನ್ನು ದೃಷ್ಟಿಯಲ್ಲಿಟ್ಟುಕೊಂಡು ಹಾರ್ದಿಕ್ ಪಾಂಡ್ಯ ಈ ನಿರ್ಧಾರವನ್ನು ತೆಗೆದುಕೊಳ್ಳಲಿದ್ದಾರೆ ಎಂದು ಬಿಸಿಸಿಐ ಮೂಲಗಳು ಮಾಹಿತಿ ನೀಡಿದೆ.

ಅಧಿಕೃತವಾಗಿ ತಿಳಿಸಿಲ್ಲ ಪಾಂಡ್ಯ

ಅಧಿಕೃತವಾಗಿ ತಿಳಿಸಿಲ್ಲ ಪಾಂಡ್ಯ

ಇನ್ನು ಈ ನಿವೃತ್ತಿಯ ವಿಚಾರವನ್ನು ಹಾರ್ದಿಕ್ ಪಾಂಡ್ಯ ಇನ್ನೂ ಬಹಿರಂಗಪಡಿಸಿಲ್ಲ. ಆದರೆ ಬಿಸಿಸಿಐಗೆ ಈ ವಿಚಾರವಾಗಿ ಮಾಹಿತಿಯನ್ನು ನೀಡಿದ್ದಾರೆ ಎಂದು ಬಿಸಿಸಿಐನ ಉನ್ನತಾಧಿರಿಯೊಬ್ಬರು ಇನ್‌ಸೈಡ್ ಸ್ಪೋರ್ಟ್‌ಗೆ ಮಾಹಿತಿ ನೀಡಿದ್ದಾರೆ. ಹಾರ್ದಿಕ್ ಪಾಂಡ್ಯ 2018ರಲ್ಲಿ ಇಂಗ್ಲೆಂಡ್ ವಿರುದ್ಧಧ ಸರಣಿಯಲ್ಲಿ ಕೊನೆಯ ಬಾರಿಗೆ ಟೆಸ್ಟ್‌ನಲ್ಲಿ ಕಣಕ್ಕಿಳಿದಿದ್ದರು. ಅದಾದ ಬಳಿಕ ಟೆಸ್ಟ್ ಕ್ರಿಕೆಟ್‌ನಲ್ಲಿ ಪಾಂಡ್ಯ ಆಡುವ ಅವಕಾಶ ಪಡೆದುಕೊಂಡಿಲ್ಲ. ದಕ್ಷಿಣ ಆಫ್ರಿಕಾ ಪ್ರವಾಸದಿಂದಲೂ ಪಾಂಡ್ಯ ಹೊರಗುಳಿಯಲಿದ್ದಾರೆ.

ಬಿಸಿಸಿಐ ಅಧಿಕಾರಿ ಮಾತು

ಬಿಸಿಸಿಐ ಅಧಿಕಾರಿ ಮಾತು

"ಹಾರ್ದಿಕ್ ಪಾಂಡ್ಯ ಇತ್ತೀಚೆಗೆ ನಿರಂತರವಾಗಿ ಗಾಯದಿಂದ ಬಳಲುತ್ತಿದ್ದಾರೆ. ಹೀಗಾಗಿ ಅವರು ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಪಡೆಯುವ ಯೋಚನೆಯಲ್ಲಿದ್ದಾರೆ. ಆದರೆ ಈ ಬಗ್ಗೆ ಅವರು ಅಧಿಕೃತವಾಗಿ ನಮಗೆ ತಿಳಿಸಿಲ್ಲ. ಈ ನಿರ್ಧಾರದಿಂದಾಗಿ ಅವರಿಗೆ ವೈಟ್‌ಬಾಲ್ ಕ್ರಿಕೆಟ್‌ನ ಮೇಲೆ ಹೆಚ್ಚಿನ ಗಮನಹರಿಸಲು ಸಾಧ್ಯವಾಗಲಿದೆ. ಈಗ ಅವರು ಹೇಗಿದ್ದರೂ ನಮ್ಮ ಟೆಸ್ಟ್ ಕ್ರಿಕೆಟ್ ಯೋಜನೆಯಲ್ಲಿಲ್ಲ. ಈ ನಿರ್ಧಾರ ನಿಜಕ್ಕೂ ದೊಡ್ಡ ನಷ್ಟವಾಲಿದೆ. ಆದರೆ ನಾವು ಬ್ಯಾಕ್‌ಅಪ್‌ಗೆ ಸಿದ್ಧವಾಗಲೇಬೇಕಿದೆ" ಎಂದು ಬಿಸಿಸಿಐನ ಹಿರಿಯ ಅಧಿಕಾರಿಯ ಹೇಳಿಕೆಯನ್ನು ಉಲ್ಲೇಖಿಸಿ ಇನ್‌ಸೈಡ್ ಸ್ಪೋರ್ಟ್ ವರದಿ ಮಾಡಿದೆ.

ಕ್ರಿಕೆಟ್ ಗೆ ಗುಡ್ ಬೈ ಹೇಳಿದ ಹರ್ಭಜನ್ ಸಿಂಗ್ | Oneindia Kannada
ಶಸ್ತ್ರಚಿಕಿತ್ಸೆಯ ನಂತರ ಪರಿಣಾಮಕಾರಿಯಾಗಿಲ್ಲ ಪಾಂಡ್ಯ ಆಟ

ಶಸ್ತ್ರಚಿಕಿತ್ಸೆಯ ನಂತರ ಪರಿಣಾಮಕಾರಿಯಾಗಿಲ್ಲ ಪಾಂಡ್ಯ ಆಟ

ಗಾಯದ ಕಾರಣದಿಂದಾಗಿ ಹಾರ್ದಿಕ್ ಪಾಂಡ್ಯ ಬೌಲಿಂಗ್ ನಡೆಸಲು ಇನ್ನು ಕೂಡ ಕಷ್ಟ ಪಡುತ್ತಿದ್ದಾರೆ. ಶಸ್ತ್ರಚಿಕಿತ್ಸೆಗೆ ಒಳಗಾದ ನಂತರ ಪರಿಣಾಮಕಾರಿಯಾಗಿ ಹಾಗೂ ಸ್ಥಿರವಾಗಿ ಬೌಲಿಂಗ್ ದಾಳಿ ನಡೆಸಲು ಹಾರ್ದಿಕ್ ಪಾಂಡ್ಯ ಅವರಿಂದ ಸಾಧ್ಯವಾಗುತ್ತಿಲ್ಲ. 2020 ಹಾಗೂ 2021ರ ಐಪಿಎಲ್‌ನಲ್ಲಿ ಹಾರ್ದಿಕ್ ಸಂಪೂರ್ಣವಾಗಿ ಬೌಲಿಂಗ್ ಮಾಡಿರಲಿಲ್ಲ. ತವರಿನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧಧ ಸರಣಿಯಲ್ಲಿ ಪಾಂಡ್ಯ ಬೌಲಿಂಗ್ ನಡೆಸಿದ್ದರಾದರೂ ಅವರಿಂದ ಈ ಹಿಂದಿನ ರೀತಿಯ ಪರಿಣಾಮಕಾರಿ ಬೌಲಿಂಗ್ ಬಂದಿರಲಿಲ್ಲ. ಶ್ರೀಲಂಕಾ ಹಾಗೂ ಟಿ20 ವಿಶ್ವಕಪ್‌ನಲ್ಲಿ ಸಣ್ಣ ಪ್ರಮಾಣದಲ್ಲಿ ಬೌಲಿಂಗ್ ನಡೆಸಿದರೂ ಅವರು ಬೌಲಿಂಗ್ ಮಾಡಲು ಕಷ್ಟಪಡುವುದು ಸ್ಪಷ್ಟವಾಗಿತ್ತು. ಒಟ್ಟಾರೆಯಾಗಿ ಕಳೆದ 12 ತಿಂಗಳಿನಲ್ಲಿ ಹಾರ್ದಿಕ್ ಪಾಂಡ್ಯ ಟಿ20 ಹಾಗೂ ಏಕದಿನ ಕ್ರಿಕೆಟ್‌ನಲ್ಲಿ ಒಟ್ಟಾಗಿ ಕೇವಲ 46 ಓವರ್‌ಗಳ ಬೌಲಿಂಗ್ ಮಾತ್ರವೇ ನಡೆಸಿದ್ದಾರೆ.

Story first published: Wednesday, December 8, 2021, 9:01 [IST]
Other articles published on Dec 8, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X