ಟೀಮ್‌ ಇಂಡಿಯಾದ ಸಹಾಯಕ ಕೋಚ್‌ಗಳ ನೇಮಕಾತಿ ಪ್ರಕ್ರಿಯೆ ಶುರು

ಹೊಸದಿಲ್ಲಿ, ಆಗಸ್ಟ್‌ 19: ರವಿ ಶಾಸ್ತ್ರಿ ಅವರೇ ಟೀಮ್‌ ಇಂಡಿಯಾದ ಮುಖ್ಯ ಕೋಚ್‌ ಸ್ಥಾನದಲ್ಲಿ ಮುಂದುವರಿಯಲಿದ್ದಾರೆ ಎಂದು ಕ್ರಿಕೆಟ್‌ ಸಲಹಾ ಸಮಿತಿ (ಸಿಎಸಿ) ಕಳೆದ ಶುಕ್ರವಾರ ಗ್ರೀನ್‌ ಸಿಗ್ನಲ್‌ ನೀಡಿತ್ತು. ಇದೀಗ ತಂಡಕ್ಕೆ ಅಗತ್ಯವಿರುವ ಐದು ಮಂದಿಯ ತರಬೇತಿ ಬಳಗದ ನೇಮಕಾತಿ ಪ್ರಕ್ರಿಯೆ ಆರಂಭಗೊಂಡಿದ್ದು, ಗುರುವಾರ ಅಂತ್ಯಗೊಳ್ಳಲಿದೆ.

ಎಂಎಸ್‌ಕೆ ಪ್ರಸಾದ್‌ ಸಾರಥ್ಯದ ಟೀಮ್‌ ಇಂಡಿಯಾದ ಆಯ್ಕೆ ಸಮಿತಿಯು ತರಬೇತಿ ಬಳಗದ ನೇಮಕಾತಿ ಪ್ರಕ್ರಿಯೆಯನ್ನು ನಡೆಸಲಿದ್ದು, ಶಾಸ್ತ್ರಿ ಜೊತೆಗೆ ಕೈಜೋಡಿಸಲಿರುವ ಬ್ಯಾಟಿಂಗ್‌, ಬೌಲಿಂಗ್‌ ಹಾಗೂ ಫೀಲ್ಡಿಂಗ್‌ ಕೋಟ್‌ ಮತ್ತು ಸ್ಟ್ರೆಂತ್‌ ಅಂಡ್‌ ಕಂಡೀಷನಿಂಗ್‌ ಕೋಚ್‌ ಹಾಗೂ ಫಿಸಿಯೊಗಳನ್ನು ನೇಮಕ ಮಾಡಲಿದೆ.

ವಿಂಡೀಸ್‌ ವಿರುದ್ಧದ ಅಭ್ಯಾಸ ಪಂದ್ಯ, ಚೇತೇಶ್ವರ್‌ ಪೂಜಾರ ಶತಕ ವೈಭವ

ಸೋಮವಾರವೇ ಆಯ್ಕೆ ಪ್ರಕ್ರಿಯೆ ಆರಂಭಗೊಂಡಿದ್ದು ಗುರುವಾರ ಅಂತ್ಯಗೊಳ್ಳಲಿದೆ. ಯಾವ ಯಾವ ಸ್ಥಾನಕ್ಕೆ ಯಾರೆಲ್ಲ ಆಯ್ಕೆಯಾಗಿದ್ದಾರೆ ಎಂಬುದು ಗುರುವಾರ ಬಹಿರಂಗವಾಗಲಿದೆ. "ಆಯ್ಕೆ ಪ್ರಲ್ರೊಯೆ ಸೋಮವಾರ ಆರಂಭವಾಗಿದೆ. ಯಾರೆಲ್ಲಾ ಆಯ್ಕೆಯಾಗಿದ್ದಾರೆ ಎಂಬುದನ್ನು ಗುರುವಾರ ತಿಳಿಸಲಾಗುತ್ತದೆ," ಎಂದು ಬಿಸಿಸಿಐ ಅಧಿಕಾರಿಗಳು ಸುದ್ದಿ ಸಂಸ್ಥೆಗೆ ತಿಳಿಸಿವೆ.

ಬಿಸಿಸಿಐನ ನೂರನ ಸಂವಿಧಾನದ ಪ್ರಕಾರ ಕ್ರಿಕೆಟ್‌ ಸಲಹಾ ಸಮಿತಿಯು ಮುಖ್ಯ ಕೋಚ್‌ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರೆ, ಟೀಮ್‌ ಇಂಡಿಯಾದ ಆಯ್ಕೆ ಸಮಿತಿಯು ಸಹಾಯಕ ಸಿಬ್ಬಂದಿಗಳ ನೇಮಕ ಮಾಡಲಿದೆ.

ಸ್ಮಿತ್‌ಗೆ ಪೆಟ್ಟು ನೀಡಿ ನಗುತ್ತಿದ್ದ ಆರ್ಚರ್‌ಗೆ ಬೌನ್ಸರ್‌ ಎಸೆದ ಅಖ್ತರ್‌!

ಭರತ್‌ ಅರುಣ್‌ ಸ್ಥಾನ ಭದ್ರ

ಇದೇ ವೇಳೆ ಬೌಲಿಂಗ್‌ ಕೋಚ್‌ ಸ್ಥಾನದಲ್ಲಿ ಭರತ್‌ ಅರುಣ್‌ ಮುಂದುವರಿಯುವ ಸಾಧ್ಯತೆ ಹೆಚ್ಚಿದೆ. ಭರತ್‌ ಅರುಣ್‌ ಮಾರ್ಗದರ್ಶನಲ್ಲಿ ಟೀಮ್‌ ಇಂಡಿಯಾದ ಬ್ಯಾಟ್ಸ್‌ಮನ್‌ಗಳು ಅಮೋಘ ಅಭಿವೃದ್ಧಿ ಕಂಡಿದ್ದಾರೆ. ಇದೇ ವೇಳೆ ಕ್ಷೇತ್ರರಕ್ಷಣೆಯ ವಿಭಾಗದಲ್ಲೂ ಆರ್‌. ಶ್ರೀಧರ್‌ ಅವರ ಗರಡಿಯಲ್ಲಿ ಭಾರತ ತಂಡದ ಆಟಗಾರರು ಅದ್ಭುತ ಪ್ರಗತಿ ಕಂಡಿದ್ದಾರೆ ಎಂದು ಮುಖ್ಯ ಕೋಚ್‌ ರವಿ ಶಾಸ್ತ್ರಿ ಗುಣಗಾನ ಮಾಡಿದ್ದಾರೆ. ಹೀಗಾಗಿ ಫೀಲ್ಡಿಂಗ್‌ ಕೋಚ್‌ ಸ್ಥಾನಕ್ಕೆ ಅರ್ಜಿ ಹಾಕಿರುವ ದಕ್ಷಿಣ ಆಫ್ರಿಕಾದ ಜಾಂಟಿ ರೋಡ್ಸ್‌ಗೆ ಬರುಗೈಲಿ ಹಿಂದಿರುಗುವಂತಾಗುವುದು ಖಚಿತವಾದಂತಿದೆ.

ಪಾಂಡ್ಯ ಬ್ರದರ್ಸ್‌ ಖರೀದಿಸಿರುವ ಹೊಸ ಕಾರಿನ ಬೆಲೆಯೆಷ್ಟೂ ಗೊತ್ತಾ?

"ಕಳೆದ 4-5 ವರ್ಷಗಳಲ್ಲಿ ಅತಿ ಹೆಚ್ಚು ಅಭಿವೃದ್ಧಿ ಕಂಡಿರುವುದು ಫೀಲ್ಡಿಂಗ್‌ ವಿಭಾಗ. ಹೀಗಾಗಿ ವಿಶ್ವದ ಅತ್ಯುತ್ತಮ ಫೀಲ್ಡಿಂಗ್‌ ತಂಡವಾಗಿ ಭಾರತ ಹೊರಹೊಮ್ಮಿದೆ. ಭಾರತ ತಂಡದಲ್ಲಿ ಆಡಬಯಸುವ ಆಟಗಾರರು ಅದ್ಭುತ ಫೀಲ್ಡರ್‌ಗಳು ಕೂಡ ಆಗಿರಬೇಕು ಎಂಬುದು ಈ ಮೂಲಕ ಸ್ಪಷ್ಟವಾಗಿದೆ," ಎಂದು ಕೋಚ್‌ ಸ್ಥಾನಕ್ಕೆ ಮರು ಆಯ್ಕೆ ಆದ ಸಂದರ್ಭದಲ್ಲಿ ಶಾಸ್ತ್ರಿ ಹೇಳಿದ್ದರು.

ಐಸಿಸಿ ಟೆಸ್ಟ್‌ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ 60 ಅಂಕ ಬಾಚಿಕೊಂಡ ಶ್ರೀಲಂಕಾ

ಬ್ಯಾಟಿಂಗ್‌ ಕೋಚ್‌ ಬದಲಾವಣೆ ಸಾಧ್ಯತೆ

ಟೀಮ್‌ ಇಂಡಿಯಾದ ಬ್ಯಾಟಿಂಗ್‌ ಬಲಿಷ್ಠವಾಗಿದೆ. ಆದರೆ, 4ನೇ ಕ್ರಮಾಂಕದಲ್ಲಿ ಆಡಬಲ್ಲ ಸ್ಥಿರ ಬ್ಯಾಟ್ಸ್‌ಮನ್‌ ಯಾರು ಎಂಬುದನ್ನು ಕಂಡುಕೊಳ್ಳಲು ಇನ್ನು ಸಾಧ್ಯವಗಿಲ್ಲ. ಹೀಗಾಗಿ ಬ್ಯಾಟಿಂಗ್‌ ಕೋಚ್‌ ಸಂಜಯ್‌ ಬಾಂಗರ್‌ ಅವರ ತಲದಂಡವಾಗಿ ಅವರ ಸ್ಥಾನದಲ್ಲಿ ನೂತನ ಬ್ಯಾಟಿಂಗ್‌ ಕೋಚ್‌ ತಂಡ ಸೇರಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಭಾರತದ ಮಾಜಿಗಳಾದ ವಿಕ್ರಮ್‌ ರಾಥೋಡ್‌ ಮತ್ತು ಪ್ರವೀಣ್‌ ಆಮ್ರೆ ಬ್ಯಾಟಿಂಗ್‌ ಕೋಚ್‌ ಸ್ಥಾನ ಪಡೆಯುವ ರೇಸ್‌ನಲ್ಲಿ ಮುಂದಿದ್ದಾರೆ.

For Quick Alerts
ALLOW NOTIFICATIONS
For Daily Alerts
 

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Monday, August 19, 2019, 16:23 [IST]
Other articles published on Aug 19, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X