ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

WTC ಫೈನಲ್‌ಗೂ ಮುನ್ನ ಬೇರೆ ಪಂದ್ಯವನ್ನಾಡುತ್ತಿದೆ ಟೀಮ್ ಇಂಡಿಯಾ; ಕೊಹ್ಲಿ ಪಡೆಯ ಹೊಸ ತಂತ್ರ

Team India to play 4 day intra-squad practice match ahead of WTC Final
Virat ಪಡೆಗೆ ಅಭ್ಯಾಸದ ಪಂದ್ಯದಿಂದ ನಿರಾಸೆ! | Oneindia Kannada

ಸದ್ಯ ವಿಶ್ವದಾದ್ಯಂತ ಇರುವ ಕ್ರಿಕೆಟ್ ಅಭಿಮಾನಿಗಳ ಚಿತ್ತ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವೆ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯದತ್ತ ನೆಟ್ಟಿದೆ. ಜೂನ್ 18-22ರವರೆಗೆ ನಡೆಯಲಿರುವ ಈ ಪ್ರತಿಷ್ಟಿತ ಪಂದ್ಯದ ಕುರಿತು ಈಗಾಗಲೇ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದು ಮಾಜಿ ಕ್ರಿಕೆಟಿಗರು, ಕ್ರಿಕೆಟ್ ಪಂಡಿತರು ಹಾಗೂ ಕ್ರೀಡಾಭಿಮಾನಿಗಳು ತಮ್ಮ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ.

ಅಂದು ದ್ರಾವಿಡ್ ಹೇಳಿದ್ದ ಆ ಮಾತಿನಿಂದಲೇ ಇಂದು ನಾನು ಯಶಸ್ವಿಯಾಗಿದ್ದೇನೆ: ಅಜಿಂಕ್ಯ ರಹಾನೆ

ಈ ಮಹತ್ವದ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯಕ್ಕೆ ಕೇವಲ ಇನ್ನೊಂದು ವಾರ ಬಾಕಿಯಿದ್ದು ಟೀಮ್ ಇಂಡಿಯಾದ ಆಟಗಾರರು ನೆಟ್‌ ಅಭ್ಯಾಸಗಳನ್ನು ಆರಂಭಿಸಿದ್ದಾರೆ. ಅತ್ತ ನ್ಯೂಜಿಲೆಂಡ್ ತಂಡ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯಕ್ಕೂ ಮುನ್ನ ಇಂಗ್ಲೆಂಡ್ ವಿರುದ್ಧ 2 ಟೆಸ್ಟ್ ಪಂದ್ಯಗಳನ್ನಾಡುತ್ತಿದೆ. ಇಂಗ್ಲೆಂಡ್ ವಿರುದ್ಧ ನ್ಯೂಜಿಲೆಂಡ್ ತಂಡ ಆಡುತ್ತಿರುವ ಈ 2 ಟೆಸ್ಟ್ ಪಂದ್ಯಗಳು ನ್ಯೂಜಿಲೆಂಡ್ ತಂಡಕ್ಕೆ ಅಭ್ಯಾಸದ ರೀತಿ ಅನುಕೂಲವಾಗಲಿದೆ ಮತ್ತು ಭಾರತ ತಂಡ ಯಾವುದೇ ಅಭ್ಯಾಸ ಪಂದ್ಯಗಳನ್ನಾಡಲಿದೆ ನೇರವಾಗಿ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯವನ್ನಾಡಲಿದೆ, ಆದ್ದರಿಂದ ನ್ಯೂಜಿಲೆಂಡ್ ತಂಡಕ್ಕೆ ಅನುಕೂಲ ಹೆಚ್ಚಿರಲಿದೆ ಎಂಬ ಚರ್ಚೆಗಳು ನಡೆದಿದ್ದವು.

WTC Final ಗೆಲ್ಲಬೇಕೆಂದರೆ ಆ ಸ್ಟಾರ್ ಬೌಲರ್‌ನ್ನು ತಂಡದಿಂದ ಕೈಬಿಟ್ಟು ಸಿರಾಜ್‌ಗೆ ಅವಕಾಶ ಕೊಡಿ: ಹರ್ಭಜನ್ ಸಿಂಗ್

ಆದರೆ ಇದೀಗ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾ ತಂಡದ ಆಟಗಾರರು 4 ದಿನಗಳ ಇಂಟ್ರಾಸ್ಕ್ವಾಡ್ ಟೆಸ್ಟ್ ಪಂದ್ಯವನ್ನಾಡಲಿದ್ದಾರೆ. ಹೌದು ಇಂಗ್ಲೆಂಡ್ ಪ್ರವಾಸ ಕೈಗೊಂಡಿರುವ ಭಾರತ ತಂಡದ ಆಟಗಾರರನ್ನು ಎರಡು ತಂಡಗಳನ್ನಾಗಿ ವಿಂಗಡಿಸಿ 4 ದಿನಗಳ ಟೆಸ್ಟ್ ಪಂದ್ಯವನ್ನಾಡಲಿದೆ. ಈ ಪಂದ್ಯವನ್ನು ವೀಕ್ಷಿಸಲು ಯಾವುದೇ ವೀಕ್ಷಕರಿಗೂ ಅವಕಾಶವಿರುವುದಿಲ್ಲ ಮತ್ತು ರನ್ ಬಗ್ಗೆ ಕೂಡ ಯಾವುದೇ ಮಾಹಿತಿಯನ್ನು ಕೊಡುವುದಿಲ್ಲ ಎನ್ನಲಾಗುತ್ತಿದೆ. ಶುಕ್ರವಾರದಿಂದ (ಜೂನ್ 11) 4ದಿನಗಳ ಕಾಲ ಈ ಪಂದ್ಯ ನಡೆಯಲಿದ್ದು,ಈ ಪಂದ್ಯದ ಮೂಲಕ ಇಂಗ್ಲೆಂಡ್ ನೆಲದ ಕುರಿತು ಟೀಮ್ ಇಂಡಿಯಾ ಆಟಗಾರರಿಗೆ ಅನುಭವವಾಗಲಿದೆ. ಮತ್ತು ಮುಂಬರುವ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯಕ್ಕೆ ಇದು ಅಭ್ಯಾಸ ಪಂದ್ಯ ಕೂಡ ಎನ್ನಬಹುದು. ಅಷ್ಟೇ ಅಲ್ಲದೆ ಈ ಪಂದ್ಯವನ್ನು ಆಡುವುದರ ಮೂಲಕ ಈ ಕೆಳಕಂಡ ಅನುಕೂಲಗಳು ತಂಡಕ್ಕೆ ಸಿಗಲಿವೆ.

ಆಟಗಾರರು ಪಂದ್ಯಗಳನ್ನಾಡಿ ತಿಂಗಳು ಕಳೆದಿದೆ

ಆಟಗಾರರು ಪಂದ್ಯಗಳನ್ನಾಡಿ ತಿಂಗಳು ಕಳೆದಿದೆ

ಹೌದು ಕಳೆದ ಮೇ 4ರಂದು ಐಪಿಎಲ್ ಟೂರ್ನಿ ಸ್ಥಗಿತಗೊಂಡು ಮುಂದೂಡಲ್ಪಟ್ಟಿತು. ಇದಾದ ಬಳಿಕ ತಂಡದ ಯಾವುದೇ ಆಟಗಾರರು ಯಾವುದೇ ಕ್ರಿಕೆಟ್ ಪಂದ್ಯವನ್ನು ಕೂಡ ಆಡಿಲ್ಲ. ಹೀಗಾಗಿ ಈ ಇಂಟ್ರಾಸ್ಕ್ವ್ಯಾಡ್ ಪಂದ್ಯವನ್ನು ಆಡುವುದರ ಮೂಲಕ ತಿಂಗಳಿನಿಂದ ಕ್ರಿಕೆಟ್ ಆಡದೇ ಇರುವ ಟೀಮ್ ಇಂಡಿಯಾ ಆಟಗಾರರಿಗೆ ಅನುಕೂಲವಾಗುವುದಂತೂ ಖಚಿತ.

ಅದರಲ್ಲಿಯೂ ಕೆಎಲ್ ರಾಹುಲ್‌ಗೆ ಈ ಪಂದ್ಯದಿಂದ ಅನುಕೂಲ ಹೆಚ್ಚು

ಅದರಲ್ಲಿಯೂ ಕೆಎಲ್ ರಾಹುಲ್‌ಗೆ ಈ ಪಂದ್ಯದಿಂದ ಅನುಕೂಲ ಹೆಚ್ಚು

ಟೀಮ್ ಇಂಡಿಯಾ ಆಡಲಿರುವ ಈ ಇಂಟ್ರಾಸ್ಕ್ವಾಡ್ ಪಂದ್ಯದಿಂದ ಕೆಎಲ್ ರಾಹುಲ್ ಹೆಚ್ಚಿನ ಅನುಕೂಲವನ್ನು ಹೊಂದಲಿದ್ದಾರೆ. ಐಪಿಎಲ್ ಮುಂದೂಡಲ್ಪಡುವುದಕ್ಕೂ ಮುನ್ನ ಅಪೆಂಡಿಸಿಟಿಸ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಕೆಎಲ್ ರಾಹುಲ್ ನಂತರ ಯಾವುದೇ ಪಂದ್ಯಗಳನ್ನು ಆಡಿಲ್ಲ. ಹೀಗಾಗಿ ಶಸ್ತ್ರಚಿಕಿತ್ಸೆಯ ಬಳಿಕ ಚೇತರಿಸಿಕೊಂಡಿರುವ ಕೆಎಲ್ ರಾಹುಲ್ ಈ ಪಂದ್ಯವನ್ನು ಆಡುವುದರ ಮೂಲಕ ಆತ್ಮವಿಶ್ವಾಸದ ಜೊತೆಗೆ ಒಂದೊಳ್ಳೆ ಅಭ್ಯಾಸ ಕೂಡ ಸಿಗಲಿದೆ.

ಇಂಗ್ಲೆಂಡ್ ವಾತಾವರಣ ತಿಳಿಯಲಿದೆ

ಇಂಗ್ಲೆಂಡ್ ವಾತಾವರಣ ತಿಳಿಯಲಿದೆ

ಟೀಮ್ ಇಂಡಿಯಾ ತಂಡ ಇಂಗ್ಲೆಂಡ್ ತಲುಪಿದ್ದರೂ ಸಹ ಪಂದ್ಯದ ವೇಳೆ ಇಂಗ್ಲೆಂಡ್ ವಾತಾವರಣ ಪ್ರಸ್ತುತ ಹೇಗಿರಲಿದೆ ಎಂಬುದು ಆಟಗಾರರಿಗೆ ತಿಳಿದಿರುವುದಿಲ್ಲ. ಹೀಗಾಗಿ 4 ದಿನಗಳ ಕಾಲ ನಡೆಯುವ ಈ ಪಂದ್ಯ ಭಾರತೀಯ ಆಟಗಾರರಿಗೆ ಇಂಗ್ಲೆಂಡ್ ವಾತಾವರಣ ಪಂದ್ಯದ ವೇಳೆ ಯಾವ ರೀತಿ ಇರಲಿದೆ ಎಂಬ ಅನುಭವವಾಗಲಿದೆ.

Story first published: Friday, June 11, 2021, 12:11 [IST]
Other articles published on Jun 11, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X