ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ದಕ್ಷಿಣ ಆಫ್ರಿಕಾ ಪ್ರವಾಸದ ಬಗ್ಗೆ ಮಹತ್ವದ ಹೇಳಿಕೆ ನೀಡಿದ ಬಿಸಿಸಿಐ ಖಜಾಂಚಿ ಅರುಣ್ ಧುಮಲ್

Team India tour of South Africa on as of now said BCCI Treasurer Arun Dhumal

ಭಾರತ ಹಾಗೂ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿ ಅಂತ್ಯವಾದ ಕೂಡಲೇ ಟೀಮ್ ಇಂಡಿಯಾ ಮತ್ತೊಂದು ಬಹುನಿರೀಕ್ಷಿತ ಪ್ರವಾಸವನ್ನು ಕೈಗೊಳ್ಳಲಿದೆ. ದಕ್ಷಿಣ ಆಫ್ರಿಕಾಗೆ ತೆರಳಿ ಟೀಮ್ ಇಂಡಿಯಾ ಮೂರು ಮಾದರಿಯ ಸರಣಿಯನ್ನು ಕೂಡ ಎರಡು ತಂಡಗಳು ಆಡಲು ಸಿದ್ಧತೆಗಳು ಆಗಿದೆ. ಆದರೆ ಈಗ ಕೊರೊನಾವೈರಸ್ ಈ ಪ್ರವಾಸಕ್ಕೆ ಅಡ್ಡಿಯಾಗುವ ಸಾಧ್ಯತೆಯಿದೆ. ದಕ್ಷಿಣ ಆಫ್ರಿಕಾದಲ್ಲಿ ಕೊರೊನಾವೈರಸ್ ಹೊಸ ರೂಪದಲ್ಲಿ ಮತ್ತೊಮ್ಮೆ ಅಟ್ಟಹಾಸವನ್ನು ಆರಂಭಿಸಿರುವುದು ವಿಶ್ವಾದ್ಯಂತ ಆತಂಕ ಮೂಡಿಸಿದೆ.

ಆದರೆ ಈ ಕ್ಷಣದವರೆಗೂ ದಕ್ಷಿಣ ಆಫ್ರಿಕಾ ಪ್ರವಾಸವನ್ನು ವೇಳಾಪಟ್ಟಿಯಂತೆಯೇ ಕಾರ್ಯರೂಪದಲ್ಲಿದೆ ಎಂದು ಬಿಸಿಸಿಐನ ಖಜಾಂಚಿ ಅರುಣ್ ಧುಮಲ್ ಹೇಳಿದ್ದಾರೆ. ಬಿಸಿಸಿಐ ದಕ್ಷಿಣ ಆಫ್ರಿಕಾದಲ್ಲಿ ಕೊರೊನಾವೈರಸ್‌ನ ತೀವ್ರತೆಯ ಬಗ್ಗೆ ಸಾಕಷ್ಟು ಎಚ್ಚರಿಕೆಯಿಂದ ಗಮನಿಸುತ್ತಿದ್ದು ಸದ್ಯಕ್ಕೆ ರದ್ದುಗೊಳಿಸುವ ಬಗ್ಗೆ ನಿರ್ಧಾರವನ್ನು ತೆಗೆದುಕೊಂಡಿಲ್ಲ.

ಐಪಿಎಲ್: ಧೋನಿ ಬಿಟ್ಟು ಈ 4 ಪ್ರಮುಖ ಆಟಗಾರರನ್ನು ಸಿಎಸ್‌ಕೆ ಉಳಿಸಿಕೊಳ್ಳಲಿದೆ ಎಂದ ಮಾಜಿ ಕ್ರಿಕೆಟಿಗ!ಐಪಿಎಲ್: ಧೋನಿ ಬಿಟ್ಟು ಈ 4 ಪ್ರಮುಖ ಆಟಗಾರರನ್ನು ಸಿಎಸ್‌ಕೆ ಉಳಿಸಿಕೊಳ್ಳಲಿದೆ ಎಂದ ಮಾಜಿ ಕ್ರಿಕೆಟಿಗ!

ಡಿಸೆಂಬರ್ ಮಧ್ಯಭಾಗದಿಂದ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಸರಣಿ ಆರಂಭವಾಗಲಿದ್ದು ಡಿಸೆಂಬರ್ 8 ಅಥವಾ 9ಕ್ಕೆ ಟೀಮ್ ಇಂಡಿಯಾ ಮುಂಬೈನಿಂದ ಜೋಹನ್ಸ್‌ಬರ್ಗ್‌ಗೆ ಪ್ರಯಾಣ ಬೆಳೆಸಲಿದೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಎರಡನೇ ಪಂದ್ಯ ಡಿಸೆಂಬರ್ 7ರಂದು ಅಂತ್ಯವಾಗಲಿದ್ದು ನಂತರ ಭಾರತ ತಂಡ ಮುಂದಿನ ಪ್ರವಾಸ ಕೈಗೊಳ್ಳಲಿದೆ. ಸದ್ಯ ಈ ಪ್ರವಾಸ ಕೈಗೊಳ್ಳಲಿರುವ ಭಾರತೀಯ ತಂಡದ ಆಯ್ಕೆ ಕೂಡ ಇನ್ನೂ ನಡೆದಿಲ್ಲ.

ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಭಾರತ ಟೆಸ್ಟ್ ಏಕದಿನ ಹಾಗೂ ಟಿ20 ಪಂದ್ಯಗಳ ಸರಣಿಯಲ್ಲಿ ಭಾಗಿಯಾಗಲಿದೆ. ಮೊದಲಿಗೆ ಮೂರು ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದ್ದು ನಂತರ ಮೂರು ಪಂದ್ಯಗಳ ಏಕದಿನ ಸರಣಿ ನಡೆಯಲಿದೆ. ಅದಾದ ಬಳಿಕ ನಾಲ್ಕು ಪಂದ್ಯಗಳ ಟಿ20 ಸರಣಿ ಆಯೋಜನೆಯಾಗಲಿದೆ. ಡಿಸೆಂಬರ್ 17ರಿಂದ ಆರಂಭವಾಗಿ ಜನವರಿ 26ರವರೆಗೆ ಈ ಸರಣಿ ನಡೆಯಲಿದೆ. ಈ ಮಧ್ಯೆ ಭಾರತ 'ಎ' ತಂಡ ಈಗಾಗಲೇ ದಕ್ಷಿಣ ಆಫ್ರಿಕಾಗೆ ಈಗಾಗಲೇ ಪ್ರವಾಸ ಕೈಗೊಂಡಿದ್ದು ಅಲ್ಲಿ ನಾಲ್ಕು ದಿನಗಳ ಮೂರು ಅನಧಿಕೃತ ಟೆಸ್ಟ್ ಸರಣಿಯಲ್ಲಿ ಭಾಗಿಯಾಗಿದೆ. ಈ ತಂಡವನ್ನು ಕೂಡ ಬಿಸಿಸಿಐ ವಾಪಾಸ್ ಕರೆಸಿಕೊಳ್ಳದೆ ಸರಣಿಯನ್ನು ಮುಂದುವರಿಸಲು ನಿರ್ಧರಿಸಿದೆ.

80 ಟೆಸ್ಟ್ ಪಂದ್ಯಗಳಲ್ಲಿ ಹರ್ಭಜನ್ ಸಿಂಗ್‌ ದಾಖಲೆ ಮೀರಿಸುವುದು ನಿಜಕ್ಕೂ ಅದ್ಭುತ: ರಾಹುಲ್‌ ದ್ರಾವಿಡ್‌80 ಟೆಸ್ಟ್ ಪಂದ್ಯಗಳಲ್ಲಿ ಹರ್ಭಜನ್ ಸಿಂಗ್‌ ದಾಖಲೆ ಮೀರಿಸುವುದು ನಿಜಕ್ಕೂ ಅದ್ಭುತ: ರಾಹುಲ್‌ ದ್ರಾವಿಡ್‌

ಇನ್ನು ದಕ್ಷಿಣ ಆಫ್ರಿಕಾದ ವಿದೇಶಾಂಗ ಇಲಾಖೆ ಮಂಗಳವಾರ ಭಾರತದ ಪ್ರವಾಸದ ಬಗ್ಗೆ ಪ್ರಮುಖ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು ಭಾರತೀಯ ತಂಡಕ್ಕೆ ಭರವಸೆ ನೀಡಿದೆ. ಸುರಕ್ಷಿತ ಬಯೋಬಬಲ್ ವ್ಯವಸ್ಥೆ ಮಾಡಿ ಪ್ರವಾಸಿ ಭಾರತ ತಂಡಕ್ಕೆ ಎಲ್ಲಾ ರೀತಿಯ ಆರೋಗ್ಯ ಹಾಗೂ ಸುರಕ್ಷತೆಯ ಭದ್ರತೆಯನ್ನು ನೀಡುವುದಾಗಿ ತಿಳಿಸಿದೆ.

ಐಪಿಎಲ್ 2022 ರಿಟೆನ್ಷನ್: ಆರ್‌ಸಿಬಿಯ ಈ ಇಬ್ಬರು ಆಟಗಾರರು ಮಾತ್ರ ಸೇಫ್, ಉಳಿದವರ ಕಥೆ?ಐಪಿಎಲ್ 2022 ರಿಟೆನ್ಷನ್: ಆರ್‌ಸಿಬಿಯ ಈ ಇಬ್ಬರು ಆಟಗಾರರು ಮಾತ್ರ ಸೇಫ್, ಉಳಿದವರ ಕಥೆ?

ಇನ್ನು ಬಿಸಿಸಿಐ ಖಜಾಂಚಿ ಅರುಣ್ ಧುಮಲ್ "ನಾವು ಕ್ರಿಕೆಟ್ ದಕ್ಷಿಣ ಆಪ್ರಿಕಾದ ಜೊತೆಗೆ ಇದ್ದೇವೆ. ಆದರೆ ಪ್ರಮುಖ ವಿಷಯವೆಂದರೆ ನಾವು ಆಟಗಾರರ ಸುರಕ್ಷತೆಯಲ್ಲಿ ರಾಜಿಯಾಗಲಾರೆವು. ಈವರೆಗೆ ತೀರ್ಮಾನ ಕೈಗೊಂಡಿರುವಂತೆ ಆಟಗಾರರು ಚಾರ್ಟರ್ಡ್ ವಿಮಾನದ ಮೂಲಕ ಜೋಹನ್ಸ್‌ಬರ್ಗ್‌ಗೆ ತೆರಳಿ ಬಯೋಬಬಲ್‌ಗೆ ಸೇರ್ಪಡೆಯಾಗಲಿದ್ದಾರೆ" ಎಂದು ಪಿಟಿಐಗೆ ವಿವರಿಸಿದ್ದಾರೆ. ಕ್ರಿಕೆಟ್ ದಕ್ಷಿಣ ಆಫ್ರಿಕಾದೊಂದಿಗೆ ನಾವು ಸತತವಾಗಿ ಸಂಪರ್ಕದಲ್ಲಿದ್ದು ಸರಣಿಯಲ್ಲಿ ರಾಜಿ ಮಾಡಿಕೊಳ್ಳದಿರಲು ನಮ್ಮ ಕೈಯ್ಯಲ್ಲಿ ಸಾಧ್ಯವಿರುವ ಪ್ರಯತ್ನ ನಡೆಸಲಿದ್ದೇವೆ. ಪರಿಸ್ಥಿತಿ ಉಲ್ಬಣಗೊಂಡರೆ ಆಟಗಾರರ ಸುರಕ್ಷತೆಯನ್ನು ನಾವು ಪರಿಗಣಿಸಬೇಕಿದೆ" ಎಂದು ಅರುಣ್ ಧುಮಲ್ ಹೇಳಿದ್ದಾರೆ.

Story first published: Wednesday, December 1, 2021, 10:34 [IST]
Other articles published on Dec 1, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X