ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನಾಯಕತ್ವದ ಚರ್ಚೆಗೆ ಮಸಾಲೆ ಹಾಕಲ್ಲ, ನಮ್ಮ ನಾಯಕ ಕೊಹ್ಲಿ ಎಂದ ರಹಾನೆ

Team india vice captain Ajinkya Rahane on Captaincy debate

ಟೀಮ್ ಇಂಡಿಯಾ ನಾಯಕತ್ವದ ಚರ್ಚೆ ಕುರಿತ ಪ್ರಶ್ನೆಗೆ ಉಪ ನಾಯಕ ಅಜಿಂಕ್ಯ ರಹಾನೆ ಖಡಕ್ ಆಗಿ ಉತ್ತರವನ್ನು ನೀಡಿದ್ದಾರೆ. ನಮ್ಮ ನಾಯಕ ವಿರಾಟ್ ಕೊಹ್ಲಿಯೇ ಎಂದು ಅಜಿಂಕ್ಯ ರಹಾನೆ ಮಾಧ್ಯಮಗಳ ಮುಂದೆ ಮತ್ತೊಮ್ಮೆ ಹೇಳಿಕೆಯನ್ನು ನೀಡಿದ್ದಾರೆ. ಈ ಮೂಲಕ ನಾಯಕತ್ವದ ಚರ್ಚೆಗೆ ಹೆಚ್ಚಿನ ಮಹತ್ವ ನೀಡುವ ಅಗತ್ಯವಿಲ್ಲ ಎಂದಿದ್ದಾರೆ.

"ಕೆಲ ಸಂದರ್ಭಗಳಲ್ಲಿ ಸಾಮರ್ಥ್ಯ ಕಡಿಮೆಯಿರುವ ಪರಿಸ್ಥಿತಿಗಳು ಇರುತ್ತದೆ. ಆದರೆ ಅದು ನಾಯಕತ್ವ ಬದಲಾವಣೆಯಿಂದಾಗಿ ಸಂಭವಿಸಿದೆ ಎಂದಾಗಿರುವುದಿಲ್ಲ. ನಾನು ಮೊದಲೇ ಹೇಳಿದಂತೆ ವಿರಾಟ್ ಕೊಹ್ಲಿ ನಮ್ಮ ನಾಯಕ ಮತ್ತು ಆತನೇ ನಮ್ಮ ನಾಯಕನಾಗಿ ಉಳಿಯುತ್ತಾರೆ" ಎಂದು ಅಜಿಂಕ್ಯ ರಹಾನೆ ಹೇಳಿದ್ದಾರೆ.

ಯುರೋ ಮಿಲಿಯನ್ ಈ ವಾರ ಭಾರತೀಯರಿಗೆ ಯೂರೋ 163 ಮಿ. ಜಾಕ್‌ಪಾಟ್ ನೀಡಲಿದೆ!ಯುರೋ ಮಿಲಿಯನ್ ಈ ವಾರ ಭಾರತೀಯರಿಗೆ ಯೂರೋ 163 ಮಿ. ಜಾಕ್‌ಪಾಟ್ ನೀಡಲಿದೆ!

ಇನ್ನೂ ಮುಂದುವರಿದು ಮಾತನಾಡಿದ ರಹಾನೆ "ನೀವು ಇನ್ನಷ್ಟು ನೀವು ಈ ಬಗ್ಗೆ ಮತ್ತಷ್ಟು ಕೆದರಿದರೂ ಪರವಾಗಿಲ್ಲ, ದುರದೃಷ್ಟವಶಾತ್ ಈ ಬಗ್ಗೆ ನೀವು ಯಾವುದೇ ಮಸಾಲೆಯನ್ನು(ವಿವಾದಗಳನ್ನು) ಪಡೆಯಲಾರಿರಿ" ಎಂದು ಮಾಧ್ಯಮಗಳಿಗೆ ಅಜಿಂಕ್ಯ ರಹಾನೆ ಖಡಕ್ಕಾಗಿಯೇ ಪ್ರತಿಕ್ರಿಯಿಸಿದ್ದಾರೆ.

ಇನ್ನು ಇದೇ ಸಂದರ್ಭದಲ್ಲಿ ಅಜಿಂಕ್ಯ ರಹಾನೆ ಅನುಭವಿ ಆಟಗಾರ ರೋಹಿತ್ ಶರ್ಮಾ ಅವರನ್ನು ಕೂಡ ಸಮರ್ಥಿಸಿಕೊಂಡಿದ್ದಾರೆ. "ರೋಹಿತ್ ಶರ್ಮಾ ಟೀಮ್ ಇಂಡಿಯಾದ ಪ್ರಮುಖ ಸದಸ್ಯ. ಆತ ಆಸ್ಟ್ರೇಲಿಯಾದಲ್ಲಿ 100 ಅಥವಾ 150 ರನ್ ಬಾರಿಸಿಲ್ಲ ಎಂಬುದು ವಿಷಯವಲ್ಲ. ಆತ ಅದ್ಭುತವಾಗಿ ಬ್ಯಾಟಿಂಗ್ ಪ್ರದರ್ಶಿಸಿದ್ದು ಪ್ರಮುಖ ಕೊಡುಗೆಯನ್ನು ನೀಡಿದ್ದಾರೆ. ಎರಡು ಕೆಟ್ಟ ಇನ್ನಿಂಗ್ಸ್‌ಗಳು ಕೆಟ್ಟ ಆಟಗಾರನನ್ನಾಗಿ ಮಾಡಲಾರದು" ಎಂದಿದ್ದಾರೆ.

Story first published: Saturday, February 13, 2021, 8:56 [IST]
Other articles published on Feb 13, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X