ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸಚಿನ್ ಆಗ ವರ್ಲ್ಡ್‌ಕ್ಲಾಸ್ ಪ್ಲೇಯರ್ ಆಗಿ ಕಾಣಿಸಿದ್ದರು: ಗತಕಾಲ ನೆನೆದ ಮಂಜ್ರೇಕರ್

Team India was too dependent on Sachin Tendulkar in the 90s: Sanjay Manjrekar

ಮುಂಬೈ, ಮೇ 18: 1990ರ ವೇಳೆ ಟೀಮ್ ಇಂಡಿಯಾವು 'ಕ್ರಿಕೆಟ್ ದೇವರು' ಸಚಿನ್ ತೆಂಡೂಲ್ಕರ್ ಅವರಿಗೆ ತುಂಬಾನೆ ಅವಲಂಭಿತವಾಗಿತ್ತು ಎಂದು ಕಾಮೆಂಟೇಟರ್, ಭಾರತದ ಮಾಜಿ ಆಟಗಾರ ಸಂಜಯ್ ಮಂಜ್ರೇಕರ್ ಹೇಳಿದ್ದಾರೆ. ತೆಂಡೂಲ್ಕರ್, ವಿಶ್ವ ಕ್ರಿಕೆಟ್‌ನ ಸಾರ್ವಕಾಲಿಕ ಬೆಸ್ಟ್ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾಗಿದ್ದವರು.

ಕೊಹ್ಲಿಗೆ ಬಾಬರ್‌ ಅಝಾಮ್ ಹೋಲಿಸಿದ್ದಕ್ಕೆ ಪ್ರತಿಕ್ರಿಯಿಸಿದ ಯೂನಿಸ್ ಖಾನ್ಕೊಹ್ಲಿಗೆ ಬಾಬರ್‌ ಅಝಾಮ್ ಹೋಲಿಸಿದ್ದಕ್ಕೆ ಪ್ರತಿಕ್ರಿಯಿಸಿದ ಯೂನಿಸ್ ಖಾನ್

1989ರಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಭಾರತವನ್ನು 664 ಪಂದ್ಯಗಳಲ್ಲಿ ಪ್ರತಿನಿಧಿಸಿದ್ದಾರೆ. ಸುಮಾರು 34,000 ಮಿಕ್ಕಿ ರನ್ ದಾಖಲೆ ಹೊಂದಿದ್ದಾರೆ. ಅಲ್ಲದೆ ಶತಕಗಳ ಶತಕದ ವಿಶ್ವದಾಖಲೆಯೂ ಸಚಿನ್ ಹೆಸರಿನಲ್ಲಿದೆ.

ಭಾರತ ವಿರುದ್ಧದ 17 ವರ್ಷಗಳ ಹಿಂದಿನ ಪಂದ್ಯ ನೆನೆದು ಮರುಕ ಪಟ್ಟ ಅಖ್ತರ್!ಭಾರತ ವಿರುದ್ಧದ 17 ವರ್ಷಗಳ ಹಿಂದಿನ ಪಂದ್ಯ ನೆನೆದು ಮರುಕ ಪಟ್ಟ ಅಖ್ತರ್!

'ಸಚಿನ್ ತೆಂಡೂಲ್ಕರ್ 1989ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಅದಾಗಿ ಒಂದು ವರ್ಷದಲ್ಲಿ ನ್ಯೂಜಿಲೆಂಡ್‌ನಲ್ಲಿ 80 ರನ್ ಬಾರಿಸಿದ್ದರು. ಸಚಿನ್ ಮೊದಲ ಶತಕ ಬಾರಿಸಿದ್ದು 1991/92ರಲ್ಲಿ ಇಂಗ್ಲೆಂಡ್ ವಿರುದ್ಧ. ಜಗತ್ತು ಆಗ ಸಚಿನ್ ಅವರನ್ನು ವರ್ಲ್ಡ್ ಕ್ಲಾಸ್ ಆಟಗಾರನಾಗಿ ನೋಡುತ್ತಿತ್ತು,' ಎಂದು ಸಚಿನ್ ದಿನಗಳನ್ನು ನೆನೆದ ಮಂಜ್ರೇಕರ್ ಹೇಳಿದರು.

ಒಪ್ಪಂದದ ಆಟಗಾರರಿಗೆ ಶೀಘ್ರವೆ ಕೌಶಲ ಆಧಾರಿತ ತರಬೇತಿ ಶಿಬಿರ: ಬಿಸಿಸಿಐಒಪ್ಪಂದದ ಆಟಗಾರರಿಗೆ ಶೀಘ್ರವೆ ಕೌಶಲ ಆಧಾರಿತ ತರಬೇತಿ ಶಿಬಿರ: ಬಿಸಿಸಿಐ

'ವಯಸ್ಸೂ ಕೂಡ ಗಣನೆಗೆ ಬರುತ್ತದೆ. ಕೇವಲ 17ರ ಹರೆಯದಲ್ಲಿ ಸಚಿನ್ ಗುಣಮಟ್ಟದ ದಾಳಿಯಿಂದ ಸೆಳೆಯುತ್ತಿದ್ದರು. ನಮಗೆ ಅಂದರೆ ಭಾರತ ತಂಡಕ್ಕೆ ಸಚಿನ್ ನಾಳೆ ವಿಭಿನ್ನ ಆಟಗಾರನಾಗಿ ಬೆಳೆಯುತ್ತಾರೆ ಎನ್ನುವುದರಲ್ಲಿ ಅನುಮಾನವಿರಲಿಲ್ಲ,' ಎಂದು ರವಿಚಂದ್ರನ್ ಅಶ್ವಿನ್ ಜೊತೆ ಇನ್‌ಸ್ಟಾಗ್ರಾಮ್‌ ವೀಡಿಯೋ ಚಾಟ್‌ನಲ್ಲಿ ಸಂಜಯ್ ಅಭಿಪ್ರಾಯಿಸಿದರು.

ಭಾರತದ ಪ್ರಧಾನಿ ವಿರುದ್ಧ ಅಫ್ರಿದಿ ಆಡಿದ ಮಾತಿಗೆ ಗಂಭೀರ್ ಮಾತಿನ ಏಟುಭಾರತದ ಪ್ರಧಾನಿ ವಿರುದ್ಧ ಅಫ್ರಿದಿ ಆಡಿದ ಮಾತಿಗೆ ಗಂಭೀರ್ ಮಾತಿನ ಏಟು

'ದುರದೃಷ್ಟವೆಂದರೆ 96/97ರ ವೇಳೆಗೆ ಭಾರತ ಕ್ರಿಕೆಟ್ ತಂಡ ಸಚಿನ್ ಅವರನ್ನು ತುಂಬಾನೆ ಅವಲಂಭಿತವಾಗಿತ್ತು. ಯಾಕೆಂದರೆ ಆಗ ತೆಂಡೂಲ್ಕರ್ ಅವರ ಆಟದಲ್ಲಿನ ಸ್ಥಿರತೆ ಅದ್ಭುತವಾಗಿತ್ತು. ಅಲ್ಲದೆ ಸಚಿನ್ ಆಗ ಭಾರತ ಪರ ಪಾರಮ್ಯ ಮೆರೆಯುವ ಮೊದಲ ಆಟಗಾರನಾಗಿ, ಒಳ್ಳೆಯ ರನ್ ತರಬಲ್ಲ ಹೊಡೆತಗಳನ್ನು ಕೊಡುವ ಬ್ಯಾಟ್ಸ್‌ಮನ್‌ ಆಗಿ ಕಾಣಿಸಿದ್ದರು,' ಎಂದು ಮಂಜ್ರೇಕರ್ ವಿವರಿಸಿದರು.

Story first published: Monday, May 18, 2020, 15:54 [IST]
Other articles published on May 18, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X