ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತದ ಮಹಿಳಾ ಟಿ20 ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್‌ಗೆ ಕೊರೊನಾವೈರಸ್ ದೃಢ

Team India womens t20 captain Harmanpreet Kaur has tested positive for COVID-19

ಭಾರತ ಮಹಿಳಾ ಕ್ರಿಕೆಟ್‌ನ ಟಿ20 ತಂಡದ ನಾಯಕ ಹರ್ಮನ್‌ಪ್ರೀತ್ ಕೌರ್‌ಗೆ ಕೊರೊನಾ ವೈರಸ್ ತಗುಲಿರುವುದು ದೃಢಪಟ್ಟಿದೆ. ಸಣ್ಣ ಮಟ್ಟಿಗೆ ಕೊರೊನಾ ವೈರಸ್‌ನ ಲಕ್ಷಣಗಳು ಹರ್ಮನ್‌ಪ್ರೀತ್ ಅವರಲ್ಲಿ ಕಾಣಿಸಿಕೊಂಡಿದೆ ಎಂದು ಮಾಹಿತಿ ದೊರೆತಿದೆ. ಸಣ್ಣ ಪ್ರಮಾಣದ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಹರ್ಮನ್‌ಪ್ರೀತ್ ಕೋವಿಡ್ ಪರೀಕ್ಷೆಗೆ ಒಳಗಾಗಿದ್ದರು.

ಹರ್ಮನ್‌ಪ್ರೀತ್ ಕೌರ್ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಿಂದ ಗಾಯದ ಕಾರಣದಿಂದಾಗಿ ಹೊರಗುಳಿದಿದ್ದಾರೆ. ಏಕದಿನ ಸರಣಿಯಲ್ಲಿ ಪಾಲ್ಗೊಂಡಿದ್ದ ಹರ್ಮನ್‌ಪ್ರೀತ್ ಕೌರ್ ಮಾರ್ಚ್ 17ರಂದು ನಡೆದಿದ್ದ ಅಂತಿಮ ಹಾಗೂ ಐದನೇ ಏಕದಿನ ಪಂದ್ಯದಲ್ಲಿ ಗಾಯಗೊಂಡಿದ್ದರು. ಹೀಗಾಗಿ ಚುಟುಕು ಸರಣಿಯಿಂದ ಹೊರಗುಳಿದಿದ್ದರು.

ಐಪಿಎಲ್ 2021: ಧೋನಿ ವಿಶೇಷ ಸಾಮರ್ಥ್ಯದ ಬಗ್ಗೆ ಹೇಳಿಕೆ ನೀಡಿದ ಕೆ ಗೌತಮ್ಐಪಿಎಲ್ 2021: ಧೋನಿ ವಿಶೇಷ ಸಾಮರ್ಥ್ಯದ ಬಗ್ಗೆ ಹೇಳಿಕೆ ನೀಡಿದ ಕೆ ಗೌತಮ್

ಸಣ್ಣ ಪ್ರಮಾಣದ ಜ್ವರ

ಸಣ್ಣ ಪ್ರಮಾಣದ ಜ್ವರ

"ಆಕೆ ಮನೆಯಲ್ಲಿಯೇ ಸೆಲ್ಫ್ ಐಸೋಲೇಶನ್‌ನಲ್ಲಿ ಇದ್ದಾರೆ. ಸೋಮವಾರ ಅವರಿಗೆ ಕೋವಿಡ್ ಪರೀಕ್ಷೆಯನ್ನು ನಡೆಸಲಾಗಿದ್ದು ಇಂದು(ಮಂಗಳವಾರ) ವರದಿ ಬಂದಿದೆ. ಕಳೆದ ನಾಲ್ಕು ದಿನಗಳಿಂದ ಅವರಿಗೆ ಸಣ್ಣ ಪ್ರಮಾಣದಲ್ಲಿ ಜ್ವರ ಕಾಣಿಸಿಕೊಂಡಿತ್ತು. ಅವರು ಉತ್ತಮವಾಗಿ ಸ್ಪಂದಿಸುತ್ತಿದ್ದು ಶೀಘ್ರದಲ್ಲಿಯೇ ಚೇತರಿಕೆ ಕಾಣಲಿದ್ದಾರೆ" ಎಂದು ಹರ್ಮನ್‌ಪ್ರೀತ್ ಆಪ್ತರು ಪಿಟಿಐಗೆ ಮಾಹಿತಿ ನೀಡಿದ್ದಾರೆ.

ಆಫ್ರಿಕಾ ಸರಣಿ ಬಳಿಕ ತಗುಲಿರುವ ಸಾಧ್ಯತೆ

ಆಫ್ರಿಕಾ ಸರಣಿ ಬಳಿಕ ತಗುಲಿರುವ ಸಾಧ್ಯತೆ

"ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯ ಸಂದರ್ಭದಲ್ಲಿ ಅವರು ನಿರಂತರವಾಗಿ ಕೊರೊನಾ ಪರೀಕ್ಷೆಗೆ ಒಳಗಾಗಿದ್ದರು. ಹಾಗಾಗಿ ಅವರಿಗೆ ಸರಣಿಯಿಂದ ಹೊರಗುಳಿದ ನಂತರವೇ ಕೊರೊನಾ ತಗುಲಿರುವ ಸಾಧ್ಯತೆಯಿದೆ": ಎಂದು ಮೂಲಗಳು ಮಾಹಿತಿಯನ್ನು ನೀಡಿದೆ.

ಸಚಿನ್, ಯೂಸುಫ್, ಇರ್ಪಾನ್‌ಗೂ ಕೊರೊನಾ

ಸಚಿನ್, ಯೂಸುಫ್, ಇರ್ಪಾನ್‌ಗೂ ಕೊರೊನಾ

ಇದಕ್ಕೂ ಮುನ್ನ ಭಾರತದ ಮಾಜಿ ಕ್ರಿಕೆಟಿಗರಾದ ಸಚಿನ್ ತೆಂಡೂಲ್ಕರ್, ಯೂಸೂಫ್ ಪಠಾಣ್, ಎಸ್ ಬದ್ರೀನಾಥ್ ಹಾಗೂ ಇರ್ಫಾನ್ ಪಠಾಣ್‌ಗೆ ಕೊರೊನಾ ವೈರಸ್ ದೃಢಪಟ್ಟಿತ್ತು. ಈ ಎಲ್ಲರು ರೋಡ್‌ ಸೇಫ್ಟಿ ವರ್ಲ್ಡ್‌ ಸೀರೀಸ್‌ನಲ್ಲಿ ಭಾಗಿಯಾಗಿದ್ದರು. ಎಲ್ಲರೂ ಹೋಮ್ ಐಸೋಲೇಶನ್‌ನಲ್ಲಿದ್ದು ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದಾರೆ.

Story first published: Tuesday, March 30, 2021, 16:41 [IST]
Other articles published on Mar 30, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X