ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾ ಆಡಬಾರದಿತ್ತು: ವಾಸಿಂ ಜಾಫರ್

ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನಿಂದ ಜಸ್ಪ್ರೀತ್ ಬುಮ್ರಾ ಹೊರಬಿದ್ದಿರುವ ಬಗ್ಗೆ ಭಾರತದ ಮಾಜಿ ಬ್ಯಾಟರ್ ವಾಸಿಂ ಜಾಫರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಜಸ್ಪ್ರೀತ್ ಬುಮ್ರಾ ಈಗಾಗಲೇ ಬೆನ್ನಿನ ಮೇಲೆ ಒತ್ತಡದ ಮುರಿತವನ್ನು ಹೊಂದಿರಬಹುದು ಮತ್ತು ಆಸ್ಟ್ರೇಲಿಯಾ ವಿರುದ್ಧ ಅಂತಿಮ ಎರಡು ಟಿ 20 ಪಂದ್ಯಗಳನ್ನು ಆಡಿದ ನಂತರ ಅದು ಉಲ್ಬಣಗೊಂಡಿದೆ ಎಂದು ಜಾಫರ್ ಹೇಳಿದ್ದಾರೆ.

ಭಾರತದ ವಿರುದ್ಧದ ಪಂದ್ಯಕ್ಕೆ ಯೋಜನೆ ಸಿದ್ಧ: ಟೀಮ್ ಇಂಡಿಯಾಗೆ ಖಡಕ್ ಎಚ್ಚರಿಕೆ ನೀಡಿದ ಪಾಕ್ ವೇಗಿಭಾರತದ ವಿರುದ್ಧದ ಪಂದ್ಯಕ್ಕೆ ಯೋಜನೆ ಸಿದ್ಧ: ಟೀಮ್ ಇಂಡಿಯಾಗೆ ಖಡಕ್ ಎಚ್ಚರಿಕೆ ನೀಡಿದ ಪಾಕ್ ವೇಗಿ

ಬುಧವಾರ ಸೆಪ್ಟೆಂಬರ್ 28 ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟಿ20 ಪಂದ್ಯಕ್ಕೂ ಸಹ ಬುಮ್ರಾ ಅಲಭ್ಯರಾಗಿದ್ದರು. ನಂತರ ಅವರು ಗಾಯದ ಸಮಸ್ಯೆಯಿಂದಾಗಿ ಟಿ20 ವಿಶ್ವಕಪ್‌ನಿಂದ ಹೊರಬಿದ್ದಿದ್ದಾರೆ ಎಂದು ಹೇಳಲಾಗಿದೆ. ಗಾಯದ ಸಮಸ್ಯೆಗೆ ಯಾವುದೇ ಶಸ್ತ್ರಚಿಕಿತ್ಸೆ ಅಗತ್ಯವಿಲ್ಲದೇ ಇದ್ದರು ಕನಿಷ್ಠ 4 ರಿಂದ 5 ತಿಂಗಳು ವಿಶ್ರಾಂತಿಯ ಅಗತ್ಯವಿದೆ ಎಂದು ಹೇಳಾಗಿದೆ.

ಈ ಬಗ್ಗೆ ಮಾತನಾಡಿರುವ ವಾಸಿಂ ಜಾಫರ್, ಭಾರತ ತಂಡ ಆಯ್ಕೆದಾರರು ಬುಮ್ರಾ ವಿಚಾರದಲ್ಲಿ ಅವಸರ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಪೂರ್ತಿ ಚೇತರಿಸಿಕೊಳ್ಳುವ ಮುನ್ನವೇ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾಗವಹಿಸುವಂತೆ ಮಾಡಿದ್ದು ಅವರ ಗಾಯ ಉಲ್ಬಣಗೊಳ್ಳಲು ಕಾರಣವಾಯಿತು ಎಂದು ಅವರು ಹೇಳಿದ್ದಾರೆ.

 ಅವರಿನ್ನೂ ಸಂಪೂರ್ಣವಾಗಿ ಚೇತರಿಸಿಕೊಂಡಿರಲಿಲ್ಲ

ಅವರಿನ್ನೂ ಸಂಪೂರ್ಣವಾಗಿ ಚೇತರಿಸಿಕೊಂಡಿರಲಿಲ್ಲ

ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಬುಮ್ರಾ ಸಂಪೂರ್ಣವಾಗಿ ಚೇತರಿಸಿಕೊಂಡಿರಲಿಲ್ಲ. ಆಸ್ಟ್ರೇಲಿಯಾ ಸರಣಿಯಲ್ಲಿ ಅವರು ಗಾಯಕ್ಕೆ ಒಳಗಾಗಿದ್ದರು, ಒತ್ತಡದಲ್ಲಿ ಎರಡು ಪಂದ್ಯಗಳಲ್ಲಿ ಆಡಿದ ನಂತರ, ಗಾಯದ ಗಂಭೀರತೆ ಹೆಚ್ಚಾಗಿದೆ ಎಂದು ವಾಸಿಂ ಜಾಫರ್ ಹೇಳಿದ್ದಾರೆ.

ಸಂಪೂರ್ಣವಾಗಿ ಚೇತರಿಸಿಕೊಳ್ಳುವ ಮುನ್ನವೇ ಅವರನ್ನು ಕ್ರಿಕೆಟ್ ಆಡಲು ಒತ್ತಾಯಿಸಲಾಗಿದೆ ಎಂದು ಜಾಫರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

RSWS 2022: ಫೈನಲ್ ತಲುಪಿದ ಇಂಡಿಯಾ ಲೆಜೆಂಡ್ಸ್: ತಂಡದ ಪ್ರದರ್ಶನಕ್ಕೆ ಸಚಿನ್ ತೆಂಡೂಲ್ಕರ್ ಸಂತಸ

ಆಸ್ಟ್ರೇಲಿಯಾ ವಿರುದ್ಧ ಎರಡುಪಂದ್ಯಗಳಲ್ಲಿ ಕಣಕ್ಕೆ

ಆಸ್ಟ್ರೇಲಿಯಾ ವಿರುದ್ಧ ಎರಡುಪಂದ್ಯಗಳಲ್ಲಿ ಕಣಕ್ಕೆ

ನಾಗ್ಪುರದಲ್ಲಿ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಬುಮ್ರಾ ಪ್ರಭಾವಶಾಲಿ ಪ್ರದರ್ಶನವನ್ನು ನೀಡಿದರು, ಅದ್ಭುತವಾಗಿ ಯಾರ್ಕರ್ ಬೌಲಿಂಗ್ ಮಾಡುವ ಮೂಲಕ ಆರೋನ್ ಫಿಂಚ್‌ರನ್ನು ಔಟ್ ಮಾಡಿದರು. ಆದರೆ ಹೈದರಾಬಾದ್‌ನಲ್ಲಿ ನಡೆದ ಸರಣಿಯ ಕೊನೆಯ ಪಂದ್ಯದಲ್ಲಿ ನಾಲ್ಕು ಓವರ್‌ಗಳಲ್ಲಿ 50 ರನ್‌ಗಳನ್ನು ಬಿಟ್ಟುಕೊಟ್ಟರು.

ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗೂ ಆಯ್ಕೆಯಾಗಿದ್ದ ಬುಮ್ರಾ ಮೊದಲನೇ ಟಿ20 ಪಂದ್ಯದಲ್ಲಿ ಕಣಕ್ಕಿಳಿಯಲಿಲ್ಲ. ಎರಡನೇ ಪಂದ್ಯಕ್ಕಾಗಿ ಟೀಂ ಇಂಡಿಯಾ ಗುವಾಹಟಿಗೆ ತೆರಳಿದ್ದು, ಬುಮ್ರಾ ತಂಡದೊಂದಿಗೆ ತೆರಳಲಿಲ್ಲ.

 ವಿಶ್ವಕಪ್‌ವರೆಗೆ ಅವರು ಮೈದಾನಕ್ಕೆ ಇಳಿಯಬಾರದಿತ್ತು

ವಿಶ್ವಕಪ್‌ವರೆಗೆ ಅವರು ಮೈದಾನಕ್ಕೆ ಇಳಿಯಬಾರದಿತ್ತು

ಬುಮ್ರಾ ಆಸ್ಟ್ರೇಲಿಯ ವಿರುದ್ಧ ಟಿ20 ಪಂದ್ಯಗಳನ್ನು ಆಡಬಾರದಿತ್ತು ಎಂದು ವಾಸಿಂ ಜಾಫರ್ ಹೇಳಿದ್ದಾರೆ. ಅವರು ಚೇತರಿಸಿಕೊಳ್ಳಲು ಇನ್ನೂ ಅವಕಾಶ ಇತ್ತು, ವಿಶ್ವಕಪ್ ವೇಳೆಗೆ ಅವರು ಸಂಪೂರ್ಣವಾಗಿ ಸಿದ್ಧವಾಗಿರುತ್ತಿದ್ದರು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

"ಬಹುಶಃ ಹಿನ್ನೋಟದಲ್ಲಿ, ಅವರು ಅವನನ್ನು ಆಸ್ಟ್ರೇಲಿಯ ವಿರುದ್ಧ ಆಡಲು ಧಾವಿಸಿದ್ದಾರೆಯೇ ಎಂದು ನಾನು ಭಾವಿಸುತ್ತೇನೆ. ಅವನು ಸ್ವಲ್ಪ ಹೆಚ್ಚು ಸಮಯ ತೆಗೆದುಕೊಂಡಿರಬಹುದು ಮತ್ತು ಬಹುಶಃ ವಿಶ್ವಕಪ್‌ಗೆ ತಯಾರಾಗಿರಬಹುದು. ಗಾಯದ ಗಂಭೀರತೆ ನನಗೆ ತಿಳಿದಿಲ್ಲ ಆದರೆ ಅದು ನನಗೆ ಅನಿಸುತ್ತದೆ, ಬಿಸಿಸಿಐ ಅವನನ್ನು ಆಡಲು ತುಂಬಾ ಮುಂಚೆಯೇ ತಳ್ಳಿದಂತಾಗಿದೆ ಆದ್ದರಿಂದ ಗಾಯ ಮರುಕಳಿಸಿದೆ ಎಂದು ಹೇಳಿದ್ದಾರೆ.

ಬುಮ್ರಾ ಸ್ಥಾನವನ್ನು ತುಂಬುವ ಬೌಲರ್

ಬುಮ್ರಾ ಸ್ಥಾನವನ್ನು ತುಂಬುವ ಬೌಲರ್

ಜಸ್ಪ್ರೀತ್ ಬುಮ್ರಾ ಗಾಯಗೊಂಡು ವಿಶ್ವಕಪ್‌ನಿಂದ ಹೊರಬಿದ್ದಿರುವುದು ಟೀಂ ಇಂಡಿಯಾ ಆಯ್ಕೆದಾರರಿಗೆ ತಲೆನೋವಾಗಿದೆ. ಅವರ ಬದಲಾಗಿ ಯಾವ ಆಟಗಾರರಿಗೆ ಮಣೆ ಹಾಕುತ್ತಾರೆ ಎಂದು ನೋಡಬೇಕಾಗಿದೆ.

ಅನುಭವದ ಆಧಾರದ ಮೇಲೆ ಮೊಹಮ್ಮದ್ ಶಮಿ 15 ಸದಸ್ಯರ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇದೆ. ದೀಪಕ್ ಚಹಾರ್ ಕೂಡ ದಕ್ಷಿಣ ಆಫ್ರಿಕಾ ವಿರುದ್ಧ ಉತ್ತಮ ಪ್ರದರ್ಶನ ನೀಡಿದರೆ ತಂಡಕ್ಕೆ ಸೇರುವ ಸಾಧ್ಯತೆ ಇದೆ.

ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗೆ ಬುಮ್ರಾ ಬದಲಿಗೆ ಮೊಹಮ್ಮದ್ ಸಿರಾಜ್ ಅವರನ್ನು ಹೆಸರಿಸಲಾಗಿದೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Thursday, September 29, 2022, 23:54 [IST]
Other articles published on Sep 29, 2022

Latest Videos

  + More
  POLLS
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Yes No
  Settings X