ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸಾರ್ವಕಾಲಿಕ ದಾಖಲೆ ಬರೆದ ರಾಸ್‌ ಟೇಯ್ಲರ್: ಮಾಧ್ಯಮದ ಮುಂದೆ ಕಣ್ಣೀರು!

ನ್ಯೂಜಿಲ್ಯಾಂಡ್ ಆಟಗಾರ ರಾಸ್ ಟೇಲರ್ ಸೋಮವಾರ ರಾತ್ರಿ ಕಣ್ಣೀರಿಟ್ಟು ತಮ್ಮ ಮೆಂಟರ್‌ಗೆ ಸಲ್ಲಿಸಿದ್ದಾರೆ. ನ್ಯೂಜಿಲ್ಯಾಂಡ್ ಪರವಾಗಿ ಟೆಸ್ಟ್‌ನಲ್ಲಿ ಸಾರ್ವಕಾಲಿಕ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಕೀರ್ತಿಗೆ ಪಾತ್ರರಾದ ಬಳಿಕ ರಾಸ್ ಟೇಲರ್ ಭಾವುಕರಾಗಿ ಮಾತನಾಡಿದ್ದಾರೆ.

ರಾಸ್ ಟೇಲರ್ ನ್ಯೂಜಿಲ್ಯಾಂಡ್ ಕ್ರಿಕೆಟ್‌ನ ಪ್ರತಿಭಾನ್ವಿತ ಆಟಗಾರ. ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್‌ನಲ್ಲಿ ರಾಸ್‌ ಟೇಲರ್ ಟೆಸ್ಟ್‌ನಲ್ಲಿ ನ್ಯೂಜಿಲ್ಯಾಂಡ್ ಪರವಾಗಿ ಅತಿ ಹೆಚ್ಚು ರನ್‌ಗಳಿಸಿದ ಆಟಗಾರ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ನ್ಯೂಜಿಲ್ಯಾಂಡ್‌ ಮಾಜಿ ನಾಯಕ ಸ್ಟೀಫನ್ ಫ್ಲೇಮಿಂಗ್ ಹೆಸರಿನಲ್ಲಿದ್ದ ಈ ದಾಖಲೆಯನ್ನು ರಾಸ್ ಟೇಯ್ಲರ್ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.

ಈ ದಾಖಲೆಗೆ ಪಾತ್ರರಾದ ಬಳಿಕ ರಾಸ್ ಟೇಯ್ಲರ್ ಆಸ್ಟ್ರೇಲಿಯಾದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದರು. ಈ ಸಂಭ್ರಮವನ್ನು ಹಂಚಿಕೊಳ್ಳುವ ಸಂದರ್ಭದಲ್ಲಿ ಕಣ್ಣೀರಿಟ್ಟ ಘಟನೆ ನಡೆಯಿತು. ನ್ಯೂಜಿಲ್ಯಾಂಡ್‌ನ ಗ್ರೇಟ್‌ ಬ್ಯಾಟ್ಸ್‌ಮನ್ ಹಾಗೂ ಟೇಯ್ಲರ್ ಅವರ ಮೆಂಟರ್ ಆಗಿದ್ದ ಮಾರ್ಟಿನ್ ಕ್ರೌ ಅವರನ್ನು ನೆನೆದ ಟೇಯ್ಲರ್ ಭಾವುಕರಾಗಿ ಕಣ್ಣೀರು ಸುರಿಸಿದರು.

ಯಾರು ಈ ಮಾರ್ಟಿನ್ ಕ್ರೌ ?

ಯಾರು ಈ ಮಾರ್ಟಿನ್ ಕ್ರೌ ?

ಮಾರ್ಕಟಿನ್ ಕ್ರೌ ನ್ಯೂಜಿಲ್ಯಾಂಡ್‌ನ ಟೆಸ್ಟ್‌ ಹಾಗೂ ಏಕದಿನ ತಂಡದ ನಾಯಕರೂ ಆಗಿದ್ದರು. ಮಾತ್ರವಲ್ಲದೆ ನ್ಯೂಜಿಲ್ಯಾಂಡ್ ಕ್ರಿಕೆಟ್‌ನಲ್ಲಿ ಗ್ರೇಟ್‌ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಅನಾರೋಗ್ಯದಿಂದ ಮಾರ್ಟಿನ್ 2016ರ ಮಾರ್ಚ್ 3 ರಂದು ತಮ್ಮ 53ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದರು.

142 ವರ್ಷಗಳಲ್ಲೇ ಮೊದಲು! ಇಂಗ್ಲೆಂಡ್ ಪರವಾಗಿ ವಿಶೇಷ ದಾಖಲೆ ಮಾಡಿದ ಬೆನ್ ಸ್ಟ್ರೋಕ್ಸ್

ಒಂದು ಟೆಸ್ಟ್ ಆಡುವುದು ಕನಸಾಗಿತ್ತು

ಒಂದು ಟೆಸ್ಟ್ ಆಡುವುದು ಕನಸಾಗಿತ್ತು

ನ್ಯೂಜಿಲ್ಯಾಂಡ್ ಪರವಾಗಿ ಕೇವಲ ಒಂದೇ ಒಂದು ಟೆಸ್ಟ್ ಪಂದ್ಯವನ್ನು ಆಡುವುದು ನನ್ನ ಕನಸಾಗಿತ್ತು. ಅಂತಾ ಸಂದರ್ಭದಲ್ಲಿ ತನ್ನ ಮೆಂಟರ್ ಆಗಿದ್ದ ಮಾರ್ಟಿನ್ ಕ್ರೌ ನ್ಯೂಜಿಲ್ಯಾಂಡ್ ಪರವಾಗಿ ಅತಿ ಹೆಚ್ಚಿ ಟೆಸ್ಟ್ ಸ್ಕೋರ್ ಗಳಿಸುವ ಆಟಗಾರ ತಾನಾಗಬೇಕು ಎಂದು ಬಯಸಿದ್ದರು. ಅದು ತನ್ನಿಂದ ಸಾಧ್ಯವಾಗಿದೆ ಎಂದು ಬಾವುಕರಾಗಿ ನುಡಿದಿದ್ದಾರೆ. ಮಾರ್ಟಿನ್ ಹೇಳಿದ್ದಾಗ ನಾನು ಅವರ ಮಾತನ್ನು ನಂಬಿರಲೆ ಇಲ್ಲ. ಆದರೆ ಅವರ ಮಾರ್ಗದರ್ಶನ ಈ ಸಾಧನೆಗೆ ಪ್ರೇರಣೆಯಾಗಿದೆ ಎಂದು ಮಾರ್ಟಿನ್ ಕ್ರೌ ಅವರನ್ನು ರಾಸ್ ಟೇಯ್ಲರ್ ನೆನಪಿಸಿಕೊಂಡರು.

ಮಾಜಿ ನಾಯಕನನ್ನು ಎರಡನೇ ಸ್ಥಾನಕ್ಕೆ ತಳ್ಳಿದ ಟೇಯ್ಲರ್

ಮಾಜಿ ನಾಯಕನನ್ನು ಎರಡನೇ ಸ್ಥಾನಕ್ಕೆ ತಳ್ಳಿದ ಟೇಯ್ಲರ್

ನ್ಯೂಜಿಲ್ಯಾಂಡ್ ಪರವಾಗಿ ರಾಸ್ ಟೇಯ್ಲರ್ 99 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಈ ಪಂದ್ಯಗಳಲ್ಲಿ 7174 ರನ್ ಗಳಿಸಿದ್ದಾರೆ ನ್ಯೂಜಿಲ್ಯಾಂಡ್‌ನ ಈ ಕ್ರಿಕೆಟಿಗ. ಈ ಮೂಲಕ ಈ ವರೆಗೂ ಟೆಸ್ಟ್‌ನಲ್ಲಿ ಅತಿ ಹೆಚ್ಚು ರನ್‌ಗಳಿಸಿದ ಆಟಗಾರ ಎಂಬ ಕೀರ್ತಿ ಹೊಂದಿದ್ದ ಸ್ಟೀಫನ್ ಫ್ಲೆಮಿಂಗ್ ಅವರನ್ನು ಎರಡನೇ ಸ್ಥಾನಕ್ಕೆ ತಳ್ಳಿದ್ದಾರೆ.

ಭಾರತ vs ಶ್ರೀಲಂಕಾ 2nd ಟಿ20: ಪಂದ್ಯಕ್ಕೂ ಮುನ್ನ ತಿಳಿಯಲೇಬೇಕಾದ ಪ್ರಮುಖಾಂಶಗಳು

ಮತ್ತೊಂದು ದಾಖಲೆ ಮುರಿಯುವ ಅವಕಾಶ

ಮತ್ತೊಂದು ದಾಖಲೆ ಮುರಿಯುವ ಅವಕಾಶ

ನ್ಯೂಜಿಲ್ಯಾಂಡ್ ಮಾಜಿ ನಾಯಕ ಸ್ಟೀಫನ್ ಫ್ಲೆಮಿಂಗ್ ನ್ಯೂಜಿಲ್ಯಾಂಡ್‌ ವಿಶ್ವ ಕ್ರಿಕೆಟ್‌ನ ಅದ್ಭುತ ನಾಯಕರಲ್ಲಿ ಒಬ್ಬರು. ನ್ಯೂಜಿಲ್ಯಾಂಡ್ ಪರವಾಗಿ 7172 ಗಳಿಸಿದ ದಾಖಲೆಯನ್ನು ಫ್ಲೆಮಿಂಗ್ ಹೊಂದಿದ್ದಾರೆ. ಸದ್ಯ 111 ಪಂದ್ಯಗಳನ್ನು ಆಡಿ ನ್ಯೂಜಿಲ್ಯಾಂಡ್ ಪರವಾಗಿ ಅತಿ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಆಡಿದ ದಾಖಲೆಯೂ ಪ್ಲೆಮಿಂಗ್ ಹೆಸರಿನಲ್ಲಿದೆ. ಈ ದಾಖಲೆಯನ್ನು ಟೇಯ್ಲರ್ ಮುರಿಯಬೇಕಾದರೆ ಇನ್ನು 12 ಟೆಸ್ಟ್‌ಗಳಲ್ಲಿ ನ್ಯೂಜಿಲ್ಯಾಂಡ್‌ ತಂಡವನ್ನು ಪ್ರತಿನಿಧಿಸಬೇಕಾಗಿದೆ.

Story first published: Tuesday, January 7, 2020, 11:22 [IST]
Other articles published on Jan 7, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X