ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅಖ್ತರ್ ಬೌನ್ಸರ್‌ಗೆ ಸಚಿನ್ ಕಣ್ಣುಮುಚ್ಚಿದ್ದರು: ಭಾರತ-ಪಾಕ್ ಪಂದ್ಯ ನೆನೆದ ಆಸಿಫ್!

Tendulkar closed his eyes while facing Akhtar’s bouncers: Mohammad Asif

ಲಾಹೋರ್, ಮೇ 27: ವಿಶ್ವಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡವರು ಭಾರತ ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್. ಅದು ವೇಗ, ಸ್ವಿಂಗ್, ಸ್ಪಿನ್ ಎಂಥ ಬೌಲಿಂಗೇ ಇರಲಿ; ಮಾಸ್ಟರ್ ಬ್ಲಾಸ್ಟರ್ ಅದನ್ನು ದಿಟ್ಟವಾಗೇ ಎದುರಿಸುತ್ತಿದ್ದರು. ಸಚಿನ್ ಸ್ಪಿನ್ನರ್‌ಗಳಿಗೆ ಸ್ಕೋರ್‌ ಮಾಡಿದ್ದು ಕಡಿಮೆಯಿದ್ದರೂ ವೇಗಿಗಳಿಗಂತೂ ಸಚಿನ್ ಹೆದರಿದ್ದೇ ಇಲ್ಲ. ಲಿಟ್ಲ್ ಮಾಸ್ಟರ್ ದೊಡ್ಡ ಹೊಡೆತಗಳ ಮೊರೆ ಹೋಗುವುದಕ್ಕಿಂತ ಕೌಶಲಭರಿತ ಹೊಡೆತಗಳಿಗೆ ಹೆಚ್ಚು ಜನಪ್ರಿಯರೆನಿಸಿದ್ದರು. ಕ್ರಿಕೆಟ್‌ ಕೌಶಲಗಳು, ಸಾಧನೆಯ ಕಾರಣಕ್ಕೇ ಸಚಿನ್, 'ಕ್ರಿಕೆಟ್‌ನ ದೇವರು' ಎನಿಸಿಕೊಂಡಿದ್ದಾರೆ.

ನೀವು ಇಂದಿಗೂ ನಿಜವೆಂದು ನಂಬಿರುವ ಕ್ರಿಕೆಟ್ ಲೋಕದ 3 ಅತಿ ದೊಡ್ಡ ಸುಳ್ಳುಗಳುನೀವು ಇಂದಿಗೂ ನಿಜವೆಂದು ನಂಬಿರುವ ಕ್ರಿಕೆಟ್ ಲೋಕದ 3 ಅತಿ ದೊಡ್ಡ ಸುಳ್ಳುಗಳು

ವಿಶ್ವದ ಬೆಸ್ಟ್ ವೇಗಿಗಳೆನಿಸಿದ್ದ ಆಸ್ಟ್ರೇಲಿಯಾದ ಗ್ಲೆನ್ ಮೆಗ್ರಾತ್, ದಕ್ಷಿಣ ಆಫ್ರಿಕಾದ ಶಾನ್ ಪೊಲಕ್, ಪಾಕಿಸ್ತಾನದ ವಾಸಿಮ್ ಅಕ್ರಮ್, ವಾಕರ್ ಯೂನಿಸ್, ಆಸ್ಟ್ರೇಲಿಯಾದ ಬ್ರೆಟ್ ಲೀ, ಪಾಕ್‌ ವೇಗಿ, ರಾವಲ್ಪಿಂಡಿ ಎಕ್ಸ್‌ಪ್ರೆಸ್ ಖ್ಯಾತಿಯ ಶೋಯೆಬ್ ಅಖ್ತರ್ ಮೊದಲಾದವರಿಗೆಲ್ಲ ಸಚಿನ್ ಬ್ಯಾಟ್‌ ಬೀಸಿ ಸೈ ಎನಿಸಿಕೊಂಡಿದ್ದಾರೆ.

ಗಂಭೀರ ಗಾಯ, WWE ಸ್ಟಾರ್ ರೇ ಮಿಸ್ಟೀರಿಯೋ ಮುಂದಿನ ವಾರ ನಿವೃತ್ತಿ!ಗಂಭೀರ ಗಾಯ, WWE ಸ್ಟಾರ್ ರೇ ಮಿಸ್ಟೀರಿಯೋ ಮುಂದಿನ ವಾರ ನಿವೃತ್ತಿ!

ಆದರೆ ಸಚಿನ್ ಒಮ್ಮೆ ಅಖ್ತರ್ ಬೌನ್ಸರ್‌ಗೆ ಹೆದರಿದ್ದರು ಎಂದು ಪಾಕಿಸ್ತಾನದ ವೇಗಿ ಮೊಹಮ್ಮದ್ ಆಸಿಫ್ ಹೇಳಿದ್ದಾರೆ. ಅಸಲಿಗೆ ಆ ಪಂದ್ಯದಲ್ಲಿ ನಡೆದಿದ್ದೇನು? ಗೆದ್ದಿದ್ಯಾರು ಇತ್ಯಾದಿ ಚಿತ್ರಣ ಇಲ್ಲಿದೆ.

ನಿಷೇಧಕ್ಕೆ ಗುರಿಯಾಗಿದ್ದ ಆಸಿಫ್

ನಿಷೇಧಕ್ಕೆ ಗುರಿಯಾಗಿದ್ದ ಆಸಿಫ್

2010ರಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್‌ ಪಂದ್ಯದಲ್ಲಿ ಸ್ಪಾಟ್ ಫಿಕ್ಸಿಂಗ್ ನಡೆಸಿದ ಆರೋಪದಲ್ಲಿ ಏಳು ವರ್ಷಗಳ ನಿಷೇಧಕ್ಕೆ ಗುರಿಯಾಗಿದ್ದ ಮೊಹಮ್ಮದ್ ಆಸಿಫ್, 2006ರಲ್ಲಿ ಕರಾಚಿಯಲ್ಲಿ ನಡೆದಿದ್ದ ಮೂರನೇ ಟೆಸ್ಟ್‌ ವೇಳೆ ಶೋಯೆಬ್ ಕೆಲವು ಬೌನ್ಸರ್‌ಗಳಿಗೆ ಸಚಿನ್ ಕಣ್ಣು ಮುಚ್ಚಿದ್ದರು ಎಂದಿದ್ದಾರೆ.

ಪಠಾಣ್ ಹ್ಯಾಟ್ರಿಕ್ ಸಾಧನೆ

ಪಠಾಣ್ ಹ್ಯಾಟ್ರಿಕ್ ಸಾಧನೆ

'ಪಂದ್ಯ ಶುರುವಾದಾಗ ಇರ್ಫಾನ್ ಪಠಾಣ್ ತನ್ನ ಚೊಚ್ಚಲ ಟೆಸ್ಟ್ ಹ್ಯಾಟ್ರಿಕ್ ವಿಕೆಟ್ ಪಡೆದಿದ್ದರು. ಆಗ ನಮ್ಮ ಆತ್ಮಸ್ಥೈರ್ಯ ಕುಗ್ಗಿತ್ತು. ಆದರೆ ಲೋವರ್ ಡೌನ್ ಆರ್ಡರ್‌ನಲ್ಲಿ ಬಂದಿದ್ದ ಕಮ್ರನ್ ಅಕ್ಮಲ್ ಶತಕ ಬಾರಿಸಿದರು. ನಾವು 240 ರನ್ ಗಳಿಸಿದ್ದೆವು,' ಎಂದು ಆಸಿಫ್ ಪಂದ್ಯದ ಕ್ಷಣ ನೆನಪಿಗೆ ತಂದರು. ಆವತ್ತು ಇರ್ಫಾನ್ ಪಠಾಣ್ ಭಾರತ ಪರ ಟೆಸ್ಟ್ ಹ್ಯಾಟ್ರಿಕ್ ಪಡೆದ ಎರಡನೇ ಆಟಗಾರನೆನಿಸಿದ್ದರು.

ಸಚಿನ್ ಕಣ್ಣು ಮುಚ್ಚಿದ್ದರು

ಸಚಿನ್ ಕಣ್ಣು ಮುಚ್ಚಿದ್ದರು

'ನಾವು ಬೌಲಿಂಗ್ ಆರಂಭಿಸಿದಾಗ ಶೋಯೆಬ್ ಅಖ್ತರ್ ಎಕ್ಸ್‌ಪ್ರೆಸ್ ವೇಗದಲ್ಲಿ ಬೌಲಿಂಗ್ ಮಾಡಿದ್ದರು. ಅಂಪೈರ್ ಸಮೀಪ ಕ್ವೇರ್ ಲೆಗ್‌ನಲ್ಲಿ ನಾನು ನಿಂತಿದ್ದೆ. ಶೋಯೆಬ್ ಅವರ ಒಂದೆರಡು ಬೌನ್ಸರ್‌ಗಳಿಗೆ ಸಚಿನ್ ತನ್ನ ಕಣ್ಣುಮುಚ್ಚಿದ್ದನ್ನು ನಾನು ನೋಡಿದೆ. ಭಾರತೀಯರು ಆವತ್ತು ಬ್ಯಾಕ್‌ ಫೂಟ್‌ನಲ್ಲಿ ಆಡಿದ್ದರು. ಮೊದಲ ಇನ್ನಿಂಗ್ಸ್‌ನಲ್ಲಿ ಅವರನ್ನು ನಾವು 240 ರನ್ ಕೂಡ ಮಾಡಲು ಅವಕಾಶ ನೀಡಲಿಲ್ಲ,' ಎಂದು ಆಸಿಫ್ ಪಂದ್ಯದ ಕ್ಷಣ ವಿವರಿಸಿದ್ದಾರೆ.

ಪಂದ್ಯದ ಫಲಿತಾಂಶ, ಮಾಹಿತಿ

ಪಂದ್ಯದ ಫಲಿತಾಂಶ, ಮಾಹಿತಿ

2006ರಲ್ಲಿ ಪಾಕಿಸ್ತಾನಕ್ಕೆ ಪ್ರವಾಸ ಹೋಗಿದ್ದ ಭಾರತ ಅಲ್ಲಿ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಪಾಲ್ಗೊಂಡಿತ್ತು. ಆಸಿಫ್ ಇಲ್ಲಿ ಸ್ಮರಿಸಕೊಂಡಿರೋದು ಕರಾಚಿಯಲ್ಲಿ ನಡೆದಿದ್ದ ಮೂರನೇ ಪಂದ್ಯವನ್ನು. ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟಿದ್ದ ಪಾಕಿಸ್ತಾನ 245-10 (60.1), 599-7 (140.1) ಸ್ಕೋರ್ ಮಾಡಿದ್ದರೆ, ಭಾರತ 238-10 (54.1), 265-10 (58.4) ರನ್ ಬಾರಿಸಿ 341 ರನ್‌ನಿಂದ ಸೋತಿತ್ತು. ಸಚಿನ್ 23+26 ರನ್ ಗಳಿಸಿದ್ದರು.

Story first published: Wednesday, May 27, 2020, 17:58 [IST]
Other articles published on May 27, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X