ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸಚಿನ್‌ಗೂ ಮುನ್ನ ದ್ರಾವಿಡ್, ಕುಂಬ್ಳೆಗೆ 'ಐಸಿಸಿ ಹಾಲ್ ಆಫ್ ಫೇಮ್' ಲಭಿಸಿದ್ದೇಕೆ?!

Tendulkar inducted in ICC Hall of Fame after Dravid and Kumble-why?

ನವದೆಹಲಿ, ಜುಲೈ 19: ಭಾರತದ ಕ್ರಿಕೆಟ್ ದಂತಕತೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್‌ಗೆ ಶುಕ್ರವಾರ (ಜುಲೈ 19) ಪ್ರತಿಷ್ಠಿತ ಐಸಿಸಿ ಹಾಲ್ ಆಫ್‌ ಫೇಮ್ ಗೌರವ ಲಭಿಸಿತು. ಈ ಪ್ರಶಸ್ತಿ ಪಡೆದುಕೊಂಡ ಭಾರತದ 6ನೇ ಕ್ರಿಕೆಟಿಗನಾಗಿ ತೆಂಡೂಲ್ಕರ್ ಗುರುತಿಸಿಕೊಂಡರು.

ಟೀಮ್ ಇಂಡಿಯಾದ ಭವಿಷ್ಯದ ಮೂವರು ಕೀಪರ್‌ಗಳ ಹೆಸರಿಸಿದ ಗಂಭೀರ್!ಟೀಮ್ ಇಂಡಿಯಾದ ಭವಿಷ್ಯದ ಮೂವರು ಕೀಪರ್‌ಗಳ ಹೆಸರಿಸಿದ ಗಂಭೀರ್!

ಇದಕ್ಕೂ ಮುನ್ನ ಬಿಶಾನ್ ಸಿಂಗ್ ಬೇಡಿ (2009), ಕಪಿಲ್ ದೇವ್ (2009), ಸುನಿಲ್ ಗವಾಸ್ಕರ್ (2009), ಅನಿಲ್ ಕುಂಬ್ಳೆ (2015) ಮತ್ತು ರಾಹುಲ್ ದ್ರಾವಿಡ್ (2018) ಈ ಗೌರವಕ್ಕೆ ಪಾತ್ರರಾಗಿದ್ದರು. ಅಸಲಿಗೆ ಕನ್ನಡಿಗರಾದ ದ್ರಾವಿಡ್ ಮತ್ತು ಕುಂಬ್ಳೆಗಿಂತ ಸಚಿನ್ ಸಾಧನೆ ಕೊಂಚ ಹೆಚ್ಚೇ ಇತ್ತು. ಆದರೂ ಸಚಿನ್ ಅವರು ದ್ರಾವಿಡ್, ಕುಂಬ್ಳೆಗಿಂತ ತಡವಾಗಿ ಹಾಲ್ ಆಫ್ ಫ್ರೇಮ್‌ಗೆ ಪರಿಗಣಿಸಲ್ಪಟ್ಟಿದ್ದೇಕೆ?

ಲಾರ್ಡ್ಸ್‌ ಪ್ರೇಕ್ಷಕರಿಗೆ 360 ಡಿಗ್ರಿ ದರ್ಶನ ಮಾಡಿಸಿದ ಎಬಿ ಡಿ'ವಿಲಿಯರ್ಸ್‌ಲಾರ್ಡ್ಸ್‌ ಪ್ರೇಕ್ಷಕರಿಗೆ 360 ಡಿಗ್ರಿ ದರ್ಶನ ಮಾಡಿಸಿದ ಎಬಿ ಡಿ'ವಿಲಿಯರ್ಸ್‌

ಸಚಿನ್‌ಗಿಂತ ಮೊದಲು ಕನ್ನಡಿಗರಾದ ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ ಐಸಿಸಿ ಹಾಲ್ ಆಫ್ ಫೇಮ್ ಗೌರವ ಪಡೆದಿದ್ದಕ್ಕೆ ಇಲ್ಲೊಂದಿಷ್ಟು ಮಾಹಿತಿಯಿದೆ.

87 ಕ್ರಿಕೆಟಿಗರಿಗೆ ಗೌರವ

87 ಕ್ರಿಕೆಟಿಗರಿಗೆ ಗೌರವ

ಇಲ್ಲೀವರೆಗೆ ಒಟ್ಟಾರೆ 87 ಕ್ರಿಕೆಟಿಗರು ಐಸಿಸಿ ಹಾಲ್ ಆಫ್ ಫೇಮ್‌ ಗೌರವಕ್ಕೆ ಪಾತ್ರರಾಗಿದ್ದಾರೆ. ಇದರಲ್ಲಿ 28 ಮಂದಿ ಇಂಗ್ಲೆಂಡ್ ಆಟಗಾರರು, 18 ಮಂದಿ ವೆಸ್ಟ್ ಇಂಡೀಸ್‌ನಿಂದ, ಭಾರತದ 6, 5 ಮಂದಿ ಪಾಕ್ ಕ್ರಿಕೆಟಿಗರು, ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾದಿಂದ ತಲಾ 3 ಮಂದಿ, ಶ್ರೀಲಂಕಾದಿಂದ ಒಬ್ಬರು ಈ ಗೌರವ ಪಡೆದುಕೊಂಡಿದ್ದಾರೆ.

ಅರ್ಹತೆಗೆ ನಿಯಮಗಳಿವೆ

ಅರ್ಹತೆಗೆ ನಿಯಮಗಳಿವೆ

ಐಸಿಸಿ ಹಾಲ್ ಆಫ್ ಫೇಮ್ ಗೌರವ ಲಭಿಸಬೇಕಾದರೆ ಅದಕ್ಕೆ ಕೆಲ ನಿಯಮಗಳಿವೆ. ಬ್ಯಾಟ್ಸ್ಮನ್ ಆಗಿದ್ದರೆ, ಆತ ಏಕದಿನ ಮತ್ತು ಟೆಸ್ಟ್‌ನಲ್ಲಿ ಒಟ್ಟು 20 ಶತಕಗಳನ್ನು ಸೇರಿಸಿ ಕನಿಷ್ಠ 8,000 ರನ್ ಮಾಡಿರಬೇಕು. ಬೌಲರ್ ಆಗಿದ್ದರೆ, ಕನಿಷ್ಠ 200 ವಿಕೆಟ್‌ನೊಂದಿಗೆ ಟೆಸ್ಟ್ ನಲ್ಲಿ 50 ಸ್ಟ್ರೈಕ್ ರೇಟ್, ಏಕದಿನದಲ್ಲಿ 30 ಸ್ಟ್ರೈಕ್‌ ರೇಟ್ ಹೊಂದಿರಬೇಕು.

ಸಾಧನೆ ಸಾಕಾಗುವಷ್ಟಿತ್ತು

ಸಾಧನೆ ಸಾಕಾಗುವಷ್ಟಿತ್ತು

ಬ್ಯಾಟ್ಸ್ಮನ್ ಆಗಿ ಗುರುತಿಸಿಕೊಂಡಿದ್ದರಿಂದ ಈ ಯಾದಿಯಲ್ಲಿ ಸಚಿನ್ ಸಾಧನೆ ಹಾಲ್ ಆಫ್‌ ಫೇಮ್‌ಗೆ ಸಾಕಾಗುವಷ್ಟಿತ್ತು. ಎಲ್ಲಾ ಮಾದರಿಯ ಕ್ರಿಕೆಟ್‌ ಸೇರಿ ಒಟ್ಟು 34,357ರನ್ ದಾಖಲೆ ಹೊಂದಿರುವ ತೆಂಡೂಲ್ಕರ್, ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲಿ 100 ಶತಕಗಳ ವಿಶ್ವದಾಖಲೆ ಹೊಂದಿದ್ದಾರೆ. ಆದರೂ ಸಚಿನ್‌ಗೆ ಈಗಷ್ಟೇ ಐಸಿಸಿ ಹಾಲ್‌ ಆಫ್ ಫೇಮ್ ಲಭಿಸಿದೆ.

ವಿಳಂಬಕ್ಕೆ ಕಾರಣ

ವಿಳಂಬಕ್ಕೆ ಕಾರಣ

ಹಾಲ್ ಆಫ್‌ ಫೇಮ್‌ಗೆ ಅರ್ಹರಾಗಿದ್ದರೂ ಸಚಿನ್ ಅವರನ್ನು ಐಸಿಸಿಯ ಇನ್ನೊಂದು ನಿಯಮ ತಡೆದಿತ್ತು. ಅದೇನೆಂದರೆ ಈ ಗೌರವ ಲಭಿಸಬೇಕಾದರೆ ಕ್ರಿಕೆಟಿಗನೊಬ್ಬ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಹೇಳಿ 5 ವರ್ಷ ಕಳೆದಿರಬೇಕು. ಹೀಗಾಗಿಯೇ 2008ರಲ್ಲಿ ನಿವೃತ್ತಿ ನೀಡಿದ್ದ ಕುಂಬ್ಳೆ, 2012ರಲ್ಲಿ ಕ್ರಿಕೆಟ್‌ ವೃತ್ತಿಗೆ ವಿದಾಯ ಹೇಳಿದ್ದ ದ್ರಾವಿಡ್ ಸಚಿನ್‌ಗಿಂತ ಮೊದಲು ಐಸಿಸಿ ಹಾಲ್ ಆಫ್ ಫೇಮ್ ಆಗಿ ಗುರುತಿಸಿಕೊಂಡಿದ್ದಾರೆ. ಸಚಿನ್ ನಿವೃತ್ತಿ ಹೇಳಿದ್ದು 2013ರಲ್ಲಿ!

Story first published: Friday, July 19, 2019, 17:00 [IST]
Other articles published on Jul 19, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X