ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೀಮ್ ಇಂಡಿಯಾದ ಇಬ್ಬರು ಅದ್ಭುತ ಪ್ರತಿಭೆಗಳ ಹೆಸರಿಸಿದ ತೆಂಡೂಲ್ಕರ್

ವಿಶ್ವಕಪ್ ನಲ್ಲಿ ಭಾರತದ ಪರ ಶ್ರೇಷ್ಠ ಆಟವಾಡಿದ್ದು ಇವರಿಬ್ಬರೇ..? | Oneindia Kannada
Tendulkar names two standout performers from Team India in World Cup 2019

ಮುಂಬೈ, ಜುಲೈ 18: ಇಂಗ್ಲೆಂಡ್ ಮತ್ತು ವೇಲ್ಸ್‌ನಲ್ಲಿ ನಡೆದ ಐಸಿಸಿ ವಿಶ್ವಕಪ್‌ 2019ರಲ್ಲಿ ಟೀಮ್ ಇಂಡಿಯಾ ಪರ ಗಮನಾರ್ಹ ಪ್ರದರ್ಶನ ನೀಡಿದ ಆಟಗಾರರನ್ನು ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಹೆಸರಿಸಿದ್ದಾರೆ. ಪ್ರತಿಷ್ಠಿತ ಟೂರ್ನಿಯಲ್ಲಿ ಭಾರತ ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್‌ ವಿರುದ್ಧ ಸೋತು ಹೊರ ಬಿದ್ದಿತ್ತಾದರೂ ಟೂರ್ನಿಯಲ್ಲಿ ಕೊಹ್ಲಿ ಪಡೆ ಉತ್ತಮ ಪ್ರದರ್ಶನ ನೀಡಿತ್ತು.

ಟೆಸ್ಟ್‌ ಕ್ರಿಕೆಟ್‌: ಸ್ಫೋಟಕ ಬ್ಯಾಟ್ಸ್‌ಮನ್‌ಗೆ ಬುಲಾವ್ ನೀಡಿದ ಇಂಗ್ಲೆಂಡ್‌ಟೆಸ್ಟ್‌ ಕ್ರಿಕೆಟ್‌: ಸ್ಫೋಟಕ ಬ್ಯಾಟ್ಸ್‌ಮನ್‌ಗೆ ಬುಲಾವ್ ನೀಡಿದ ಇಂಗ್ಲೆಂಡ್‌

ವಿಶ್ವಕಪ್‌ ವೇಳೆ ಕಾಮೆಂಟರಿ ಪ್ಯಾನೆಲ್‌ನಲ್ಲಿ ಕಾಣಿಸಿಕೊಂಡಿದ್ದ ಸಚಿನ್, ಭಾರತದ ಉಪನಾಯಕ ರೋಹಿತ್ ಶರ್ಮಾ ಮತ್ತು ವಿಶ್ವ ನಂ.1 ವೇಗಿ ಜಸ್‌ಪ್ರೀತ್‌ ಬೂಮ್ರಾ ಅವರನ್ನು ಭಾರತ ತಂಡದ ಪರ ಅದ್ಭುತ ಪ್ರದರ್ಶನ ನೀಡಿದ ಆಟಗಾರರನ್ನಾಗಿ ಹೆಸರಿಸಿದ್ದಾರೆ.

ಪಾಂಡೆ-ಪಾಂಡ್ಯ ಅಬ್ಬರ, ವಿಂಡೀಸ್ 'ಎ' ವಿರುದ್ಧ ಭಾರತ 'ಎ'ಗೆ ಏಕದಿನ ಸರಣಿಪಾಂಡೆ-ಪಾಂಡ್ಯ ಅಬ್ಬರ, ವಿಂಡೀಸ್ 'ಎ' ವಿರುದ್ಧ ಭಾರತ 'ಎ'ಗೆ ಏಕದಿನ ಸರಣಿ

'ಟೀಮ್ ಇಂಡಿಯಾದ ಪ್ರತೀ ಆಟಗಾರರೂ ಅವರವರ ಪಾತ್ರವನ್ನು ಪ್ರಾಮಾಣಿಕವಾಗಿ ಮಾಡಿದ್ದಾರೆ. ಆದರೆ ನಾನು ರೋಹಿತ್ ಶರ್ಮಾ ಮತ್ತು ಜಸ್‌ಪ್ರೀತ್‌ ಬೂಮ್ರಾ ಅವರನ್ನು ಆರಿಸುತ್ತೇನೆ. ಯಾಕೆಂದರೆ ಇವರಿಬ್ಬರೂ ಅದ್ಭುತ ಆಟಗಾರರು,' ಎಂದು '100 ಎಂಬಿ' ಜೊತೆ ಮಾತನಾಡುತ್ತ ತೆಂಡೂಲ್ಕರ್ ಹೇಳಿದ್ದಾರೆ.

2019-2020ರಲ್ಲಿ ಭಾರತ ತವರಿನಲ್ಲಿ ಆಡುವ ಕ್ರಿಕೆಟ್‌ ಸರಣಿಗಳ ವಿವರ ಇಲ್ಲಿದೆ2019-2020ರಲ್ಲಿ ಭಾರತ ತವರಿನಲ್ಲಿ ಆಡುವ ಕ್ರಿಕೆಟ್‌ ಸರಣಿಗಳ ವಿವರ ಇಲ್ಲಿದೆ

'ಟೂರ್ನಿಯುದ್ದಕ್ಕೂ ರೋಹಿತ್ ಅತ್ಯುತ್ತಮ ಪ್ರದರ್ಶನ ನೀಡಿದರು. ಜೊತೆಗೆ ರೋಹಿತ್ ವಿಶ್ವಕಪ್‌ನಲ್ಲಿ 5 ಶತಕಗಳನ್ನೂ ಬಾರಿಸಿದ್ದಾರೆ. ರೋಹಿತ್ ಬ್ಯಾಟಿಂಗ್‌ನಲ್ಲಿ ಪ್ರಭಾವಶಾಲಿ ವಿಚಾರವೇನೆಂದರೆ, ಅವರು ಅವರ ವಿಕೆಟ್‌ನ ಮಹತ್ವವನ್ನು ಅರ್ಥ ಮಾಡಿಕೊಂಡು ಆಡುತ್ತಾರೆ,' ಎಂದು ಸಚಿನ್ ಹೇಳಿಕೊಂಡಿದ್ದಾರೆ.

ವಿಶ್ವಕಪ್ ವಿಜೇತ ಮಾಜಿ ನಾಯಕನ ಮೇಲೆ ಮುಖ್ಯ ಕೋಚ್ ಆಯ್ಕೆಯ ಹೊಣೆ!ವಿಶ್ವಕಪ್ ವಿಜೇತ ಮಾಜಿ ನಾಯಕನ ಮೇಲೆ ಮುಖ್ಯ ಕೋಚ್ ಆಯ್ಕೆಯ ಹೊಣೆ!

ವಿಶ್ವಕಪ್ 2019ರಲ್ಲಿ ರೋಹಿತ್ ಶರ್ಮಾ ಅತ್ಯಧಿಕ ರನ್‌ಗಾಗಿ ನಂ.1 ಸ್ಥಾನದಲ್ಲಿ ಗುರುತಿಸಿಕೊಂಡಿದ್ದಾರೆ. ಒಟ್ಟು 9 ಇನ್ನಿಂಗ್ಸ್‌ಗಳಲ್ಲಿ ಶರ್ಮಾ 648 ರನ್ ಕಲೆ ಹಾಕಿದ್ದರು. ಆದರೆ ಸೆಮಿಪೈನಲ್‌ನಲ್ಲಿ ರೋಹಿತ್ ಕೇವಲ 1 ರನ್ನಿಗೆ ವಿಕೆಟ್ ನೀಡಿದ್ದರು. ಈ ಪಂದ್ಯದಲ್ಲಿ ಭಾರತ ಕಿವೀಸ್ ವಿರುದ್ಧ 18 ರನ್‌ಗಳ ಸೋಲನುಭವಿಸಿತ್ತು.

Story first published: Thursday, July 18, 2019, 10:22 [IST]
Other articles published on Jul 18, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X