ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸಿಡಿದಿದ್ದ ಸಚಿನ್-ಸಿಧು: ಆವತ್ತು ಪಾಕ್ ವಿರುದ್ಧ ಭಾರತ ದಾಖಲೆ ಜಯ ಸಾಧಿಸಿತ್ತು!

Tendulkar, Sidhu help India post their first 300-plus total in ODIs

ನವದೆಹಲಿ, ಏಪ್ರಿಲ್ 15: ಈ ದಿನಗಳಲ್ಲಾಗಿದ್ದರೆ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ರೋಹಿತ್ ಶರ್ಮಾ ಅಥವಾ ಕೆಎಲ್ ರಾಹುಲ್‌ನಂತ ಬ್ಯಾಟ್ಸ್‌ಮನ್‌ಗಳು ಭಾರತ ಪರ ಭರ್ಜರಿ ಬ್ಯಾಟಿಂಗ್‌ ನಡೆಸಿ 300+ ರನ್ ಕಲೆ ಹಾಕಿದರೆ ಅದರಲ್ಲಿ ಅಂಥ ವಿಶೇಷತೆ ಕಾಣಲಾರದು. ಆದರೆ ಭಾರತ ಅದ್ಭುತ ಪ್ರದರ್ಶನಕ್ಕಾಗಿ ವಿಶ್ವದ ಗಮನ ಸೆಳೆದಿದ್ದ 90ರ ದಶಕದಲ್ಲಿ. ಅಂದ್ಹಾಗೆ ಇದು ಸುಮಾರು 24 ವರ್ಷಗಳ ಹಿಂದಿನ ರೋಮಾಂಚಕ ಪಂದ್ಯದ ಕತೆ (ಚಿತ್ರಕೃಪೆ: ಟೈಮ್ಸ್ ಆಫ್ ಇಂಡಿಯಾ).

ಚಿಕ್ಕ ಹುಡುಗನೊಂದಿಗೆ ತಾಯಿಯ ಸಖ್ಯಕ್ಕೆ ಒಪ್ಪಿಗೆ ಸೂಚಿಸಿದ ನೇಮರ್!ಚಿಕ್ಕ ಹುಡುಗನೊಂದಿಗೆ ತಾಯಿಯ ಸಖ್ಯಕ್ಕೆ ಒಪ್ಪಿಗೆ ಸೂಚಿಸಿದ ನೇಮರ್!

24 ವರ್ಷಗಳ ಹಿಂದೆ ಅಂದರೆ 1996ರಂದು ಏಪ್ರಿಲ್ 15ರ ಇದೇ ದಿನ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತ ಅಪರೂಪದ ಗೆಲುವು ದಾಖಲಿಸಿತ್ತು. ಆ ಪಂದ್ಯ ಯಾಕೆ ಅಪರೂಪದ್ದು ಎಂದರೆ, ಆ ಪಂದ್ಯದಲ್ಲಿ ಟೀಮ್ ಇಂಡಿಯಾ ಚೊಚ್ಚಲ ಬಾರಿಗೆ ಏಕದಿನದಲ್ಲಿ 300+ ರನ್ ಬಾರಿಸಿದ ಮೈಲುಗಲ್ಲು ಸ್ಥಾಪಿಸಿತ್ತು.

ಇಂಗ್ಲೆಂಡ್‌ನ ಈ ಸಹೋದರರಿಗೆ ಜೊತೆಯಾಗಿ ಟೆಸ್ಟ್ ಕ್ರಿಕೆಟ್‌ನಲ್ಲಿ ಆಡುವಾಸೆಇಂಗ್ಲೆಂಡ್‌ನ ಈ ಸಹೋದರರಿಗೆ ಜೊತೆಯಾಗಿ ಟೆಸ್ಟ್ ಕ್ರಿಕೆಟ್‌ನಲ್ಲಿ ಆಡುವಾಸೆ

ವಿಶೇಷವೆಂದರೆ ಅಂದಿನ ಪಂದ್ಯದಲ್ಲಿ ಕರ್ನಾಟಕ ಬೌಲರ್‌ಗಳು ಕೂಡ ತಂಡದ ಗೆಲುವಿಗೆ ಕಾರಣರಾಗಿದ್ದರು. ಆ ಪಂದ್ಯದ ಕ್ಷಣವನ್ನೊಮ್ಮೆ ನೆನಪಿಸಿಕೊಳ್ಳೋಣ, ಇದೇ ಸಾಲಿನ ಬೆನ್ನು ಹಿಡಿದು ಹಾಗೇ ಬಂದುಬಿಡಿ.

ತ್ರಿಕೋನ ಸರಣಿಯ ಪಂದ್ಯ

ತ್ರಿಕೋನ ಸರಣಿಯ ಪಂದ್ಯ

ಇದು ಭಾರತ, ಪಾಕಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವಣ ತ್ರಿಕೋನ ಸರಣಿಯ 4ನೇ ಏಕದಿನ ಪಂದ್ಯದ ಕತೆ. ಯುನೈಟೆಡ್ ಅರಬ್ ಎಮಿರೇಟ್ಸ್‌ನ ಶಾರ್ಜಾ ಮೈದಾನದಲ್ಲಿ ಪಂದ್ಯ ನಡೆದಿತ್ತು. ಸಚಿನ್ ತೆಂಡೂಲ್ಕರ್ ಮತ್ತು ನವಜೋತ್ ಸಿಧು ಶತಕ ಬಾರಿಸಿ ಭಾರತಕ್ಕೆ ಗೆಲುವಿನ ಉಡುಗೊರೆ ನೀಡಿದ್ದರು (ಸಾಂದರ್ಭಿಕ ಚಿತ್ರ).

ಸಚಿನ್-ಸಿಧು ಭರ್ಜರಿ ಬ್ಯಾಟಿಂಗ್

ಸಚಿನ್-ಸಿಧು ಭರ್ಜರಿ ಬ್ಯಾಟಿಂಗ್

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಭಾರತ, ವಿಕ್ರಮ್ ರಾಥೋರ್ 2, ಸಚಿನ್ 118, ಸಿಧು 101, ಅಜಯ್ ಜಡೇಜಾ 17, ಜಾವಗಲ್ ಶ್ರೀನಾಥ್ 16, ಮೊಹಮ್ಮದ್ ಅಝರುದ್ದೀನ್ 29 ರನ್‌ನೊಂದಿಗೆ 50 ಓವರ್‌ಗೆ 5 ವಿಕೆಟ್ ನಷ್ಟದಲ್ಲಿ 305 ರನ್ ಕಲೆ ಹಾಕಿತ್ತು. ಸಚಿನ್ 8 ಬೌಂಡರಿ, 2 ಸಿಕ್ಸರ್ ಬಾರಿಸಿದ್ದರೆ, ಸಿಧು 3 ಬೌಂಡರಿ, 3 ಸಿಕ್ಸರ್‌ಗಳನ್ನು ಸೇರಿಸಿದ್ದರು.

ಗೆಲುವಿನ ಸಮೀಪ ಎಡವಿದ ಪಾಕ್

ಗೆಲುವಿನ ಸಮೀಪ ಎಡವಿದ ಪಾಕ್

ಗುರಿ ಬೆನ್ನಟ್ಟಿದ ಪಾಕಿಸ್ತಾನ ತಂಡ, ಆಮೀರ್ ಸೊಹೈಲ್ 78, ರಶೀದ್ ಲತೀಫ್ 50, ಇಜಾಝ್ ಅಹ್ಮದ್ 42, ಸಲೀಮ್ ಮಲಿಕ್ 42 ರನ್‌ನೊಂದಿಗೆ 46.1 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 277 ರನ್ ಬಾರಿಸಿ 28 ರನ್‌ಗಳಿಂದ ಭಾರತಕ್ಕೆ ಶರಣಾಗಿತ್ತು. ಸಚಿನ್ ತೆಂಡೂಲ್ಕರ್ ಪಂದ್ಯಶ್ರೇಷ್ಠರೆನಿಸಿದ್ದರು.

ಮಿಂಚಿದ್ದ ಕರ್ನಾಟಕದ ಬೌಲರ್‌ಗಳು

ಮಿಂಚಿದ್ದ ಕರ್ನಾಟಕದ ಬೌಲರ್‌ಗಳು

ಅಂದಿನ ಪಂದ್ಯದಲ್ಲಿ ಭಾರತ ಗೆಲ್ಲಲು ಬ್ಯಾಟ್ಸ್‌ಮನ್‌ಗಳಷ್ಟೇ ಅಲ್ಲ ಬೌಲರ್‌ಗಳೂ ಪ್ರಮುಖ ಕಾರಣರಾಗಿದ್ದರು. ಅದೂ ಕರ್ನಾಟಕದ ಬೌಲರ್‌ಗಳೇ ಮಿಂಚಿದ್ದು ವಿಶೇಷವೆನಿಸಿತ್ತು. ಆವತ್ತು ಜಾವಗಲ್ ಶ್ರೀನಾಥ್ 3, ವೆಂಕಟೇಶ್ ಪ್ರಸಾದ್ 2, ಅನಿಲ್ ಕುಂಬ್ಳೆ 2, ಸಚಿನ್ ತೆಂಡೂಲ್ಕರ್ 2 ವಿಕೆಟ್ ಮುರಿದಿದ್ದರು.

Story first published: Sunday, May 3, 2020, 22:09 [IST]
Other articles published on May 3, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X