ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೆಸ್ಟ್‌ ರ‍್ಯಾಂಕಿಂಗ್: ಕೊಹ್ಲಿಗೆ ಸಡ್ಡು ಹೊಡೆಯುವತ್ತ ಸಮೀಪಿಸಿದ ಸ್ಟೀವ್‌ ಸ್ಮಿತ್‌

ವಿರಾಟ್, ಸ್ಮಿತ್ ನಡುವೆ ತೀವ್ರ ಪೈಪೋಟಿ..? | Oneindia Kannada
Steve Smith Virat Kohli 2019

ದುಬೈ, ಆಗಸ್ಟ್‌ 19: ಇಂಗ್ಲೆಂಡ್‌ ವಿರುದ್ಧದ ಆ್ಯಷಸ್‌ ಟೆಸ್ಟ್‌ ಸರಣಿಯ ಪ್ರಥಮ ಟೆಸ್ಟ್‌ ಪಂದ್ಯದ ಎರಡೂ ಇನಿಂಗ್ಸ್‌ಗಳಲ್ಲಿ ಶತಕ ಬಾರಿಸಿದ ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್‌ ಸ್ಟೀವ್‌ ಸ್ಮಿತ್‌, ಐಸಿಸಿ ಪ್ರಕಟಿಸಿದ ನೂತನ ಟೆಸ್ಟ್‌ ಬ್ಯಾಟ್ಸ್‌ಮನ್‌ಗಳ ರ‍್ಯಾಂಕಿಂಗ್ ಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದ್ದಾರೆ.

ದ್ವಿತೀಯ ಟೆಸ್ಟ್‌ ಪಂದ್ಯದಲ್ಲೂ 92 ರನ್‌ ಗಳಿಸಿದ ಸ್ಮಿತ್‌, ಸರಣಿಯಲ್ಲಿ ಆಡಿದ ಮೂರು ಇನಿಂಗ್ಸ್‌ಗಳಿಂದ 126ರ ಸರಾಸರಿಯಲ್ಲಿ ಒಟ್ಟು 378 ರನ್‌ಗಳನ್ನು ಗಳಿಸಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್‌ನಿಂದ ಒಂದು ವರ್ಷ ನಿಷೇಧಕ್ಕೊಳಗಾಗಿದ್ದರೂ ಕೂಡ ಇದೀಗ ಮರಳಿ 2ನೇ ಶ್ರೇಯಾಂಕ ಅಲಂಕರಿಸಿದ್ದಾರೆ.

ಐಪಿಎಲ್‌ 2020: ನೂತನ ಸಹಾಯಕ ಕೋಚ್‌ ನೇಮಕ ಮಾಡಿದ ಸನ್‌ರೈಸರ್ಸ್‌ಐಪಿಎಲ್‌ 2020: ನೂತನ ಸಹಾಯಕ ಕೋಚ್‌ ನೇಮಕ ಮಾಡಿದ ಸನ್‌ರೈಸರ್ಸ್‌

ಈ ಮೂಲಕ ಐಸಿಸಿ ಟೆಸ್ಟ್‌ ಬ್ಯಾಟ್ಸ್‌ಮನ್‌ಗಳ ರ‍್ಯಾಂಕಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಟೀಮ್‌ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ಜೊತೆಗಿನ ಅಂತರವನ್ನು ಕೇವಲ 9 ಅಂಕಗಳಿಗೆ ತಗ್ಗಿಸುವಲ್ಲಿ ಸ್ಮಿತ್‌ ಯಶಸ್ವಿಯಾಗಿದ್ದಾರೆ.

ಇದೇ ವೇಳೆ ಲಾರ್ಡ್ಸ್‌ ಟೆಸ್ಟ್‌ ಮೂಲಕ ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿ ಮಿಂಚಿದ ಇಂಗ್ಲೆಂಡ್‌ನ ಯುವ ವೇಗದ ಬೌಲರ್‌ ಜೋಫ್ರಾ ಆರ್ಚರ್‌, 82ನೇ ರ‍್ಯಾಂಕ್‌ ಪಡೆದುಕೊಂಡಿದ್ದಾರೆ. ಆಸೀಸ್‌ನ ವೇಗಿ ಪ್ಯಾಟ್‌ ಕಮಿನ್ಸ್‌ ಬೌಲರ್‌ಗಳ ಪೈಕಿ ತಮ್ಮ ಅಗ್ರಸ್ಥಾನ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಟಿ20 ಕ್ರಿಕೆಟ್‌: ಮಹಿಳಾ ಸೂಪರ್‌ ಲೀಗ್‌ನಲ್ಲಿ ಡೇನಿಯೆಲ್‌ ವ್ಯಾಟ್‌ ಐತಿಹಾಸಿಕ ಶತಕಟಿ20 ಕ್ರಿಕೆಟ್‌: ಮಹಿಳಾ ಸೂಪರ್‌ ಲೀಗ್‌ನಲ್ಲಿ ಡೇನಿಯೆಲ್‌ ವ್ಯಾಟ್‌ ಐತಿಹಾಸಿಕ ಶತಕ

ಮತ್ತೊಂದೆಡೆ ನ್ಯೂಜಿಲೆಂಡ್‌ ಎದುರಿನ ಮೊದಲ ಟೆಸ್ಟ್‌ ಪಂದ್ಯದಲ್ಲಿ ನಾಲ್ಕನೇ ಇನಿಂಗ್ಸ್‌ನಲ್ಲಿ ಶತಕ ಬಾರಿಸಿದ ಲಂಕಾ ನಾಯಕ ದಿಮುತ್‌ ಕರುಣಾರತ್ನೆ (122 ರನ್‌) ಕೂಡ ರ‍್ಯಾಂಕಿಂಗ್‌ನಲ್ಲಿ ಏರಿಕೆ ಕಂಡಿದ್ದು, ನಾಲ್ಕು ಸ್ಥಾನ ಮೇಲೇರುವ ಮೂಲಕ 8ನೇ ರ‍್ಯಾಂಕ್‌ ಪಡೆದಿದ್ದಾರೆ. ಇದು ಅವರ ಏಳು ವರ್ಷಗಳ ಟೆಸ್ಟ್‌ ಕ್ರಿಕೆಟ್‌ ವೃತ್ತಿ ಬದುಕಿನಲ್ಲಿ ಪಡೆದ ಶ್ರೇಷ್ಠ ರ‍್ಯಾಂಕಿಂಗ್‌ ಸಾಧನೆಯಾಗಿದೆ.

ಟೀಮ್‌ ಇಂಡಿಯಾದ ಸಹಾಯಕ ಕೋಚ್‌ಗಳ ನೇಮಕಾತಿ ಪ್ರಕ್ರಿಯೆ ಶುರುಟೀಮ್‌ ಇಂಡಿಯಾದ ಸಹಾಯಕ ಕೋಚ್‌ಗಳ ನೇಮಕಾತಿ ಪ್ರಕ್ರಿಯೆ ಶುರು

ಭಾರತ ತಂಡ ವೆಸ್ಟ್‌ ಇಂಡೀಸ್‌ ವಿರುದ್ಧ ಎರಡು ಟೆಸ್ಟ್‌ ಪಂದ್ಯಗಳನ್ನು ಆಡಲಿದ್ದು, ಮೊದಲ ಪಂದ್ಯ ಆಗಸ್ಟ್‌ 22ರಂದು (ಗುರುವಾರ) ಆರಂಭವಾಗಲಿದೆ. ವಿರಾಟ್‌ ಇಲ್ಲಿ ಶತಕ ಬಾರಿಸಿದರೆ ಟೆಸ್ಟ್‌ ರ‍್ಯಾಂಕಿಂಗ್‌ನ ಅಗ್ರಸ್ಥಾನವನ್ನು ಮತ್ತಷ್ಟು ಬಲ ಪಡಿಸಿಕೊಳ್ಳಲಿದ್ದಾರೆ.

Story first published: Monday, August 19, 2019, 19:55 [IST]
Other articles published on Aug 19, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X