ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಶ್ರೀಲಂಕಾ vs ಇಂಗ್ಲೆಂಡ್: 2ನೇ ಟೆಸ್ಟ್ ಗೆದ್ದು ಸರಣಿ ಕ್ಲೀನ್‌ಸ್ವೀಪ್ ಮಾಡಿದ ಇಂಗ್ಲೆಂಡ್

Test Series: England won the test series against sri lanka

ಶ್ರೀಲಂಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲೂ ಪ್ರವಾಸಿ ಇಂಗ್ಲೆಂಡ್ ತಂಡ ಭರ್ಜರಿಯಾಗಿ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಇಂಗ್ಲೆಂಡ್ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಎರಡನ್ನೂ ಗೆಲ್ಲುವ ಮೂಲಕ ಸರಣಿ ಕ್ಲೀನ್ ಸ್ವೀಪ್ ಮಾಡುವಲ್ಲಿ ಯಶಸ್ವಿಯಾಗಿದೆ.

ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಶ್ರೀಲಂಕಾ ಉತ್ತಮ ಪ್ರದರ್ಶನ ನೀಡಿತ್ತು. ಏಂಜಲೋ ಮ್ಯಾಥ್ಯೂಸ್ ಸಿಡಿಸಿದ ಭರ್ಜರಿ ಶತಕ, ನಾಯಕ ಚಾಂಡಿಮಲ್, ಡಿಕ್‌ವೆಲ್ಲಾ ಹಾಗೂ ದಿಲ್ರುವಾನ್ ಪೆರೆರಾ ಅವರ ಅರ್ಧ ಶತಕಗಳ ನೆರವಿನಿಂದ ಲಂಕಾ 381 ರನ್‌ಗಳನ್ನು ಸಿಡಿಸಿತ್ತು.

ಭಾರತದ ಪರ ಟೆಸ್ಟ್‌ನಲ್ಲಿ ಆರಂಭಿಕನಾಗಿ ಕಣಕ್ಕಿಳಿಯುವ ಕನಸು ವ್ಯಕ್ತಪಡಿಸಿದ ವಾಶಿಂಗ್ಟನ್ ಸುಂದರ್ಭಾರತದ ಪರ ಟೆಸ್ಟ್‌ನಲ್ಲಿ ಆರಂಭಿಕನಾಗಿ ಕಣಕ್ಕಿಳಿಯುವ ಕನಸು ವ್ಯಕ್ತಪಡಿಸಿದ ವಾಶಿಂಗ್ಟನ್ ಸುಂದರ್

ಇದಕ್ಕೆ ಪ್ರತಿಯಾಗಿ ಬ್ಯಾಟಿಂಗ್ ಆರಂಭಿಸಿದ ಆರಂಭದಲ್ಲಿಯೇ ಆಘಾತವನ್ನು ಅನುಭವಿಸಿತ್ತು. ಆದರೆ ನಾಯಕ ಜೋ ರೂಟ್ ಸಿಡಿಸಿದ 186 ರನ್‌ಗಳ ಕೊಡುಗೆ ಹಾಗೂ ಜೋಸ್ ಬಟ್ಲರ್ ಸಿಡಿಸಿದ 55 ರನ್‌ಗಳ ಸಹಾಯದಿಂದ ಇಂಗ್ಲೆಂಡ್ 344 ರನ್ ಸಿಡಿಸಿ ಅಲ್ಪ ಮೊತ್ತದ ಹಿನ್ನಡೆಯನ್ನು ಅನುಭವಿಸಿತು.

ಆದರೆ ಎರಡನೇ ಇನ್ನಿಂಗ್ಸ್‌ನಲ್ಲಿ ಶ್ರೀಲಂಕಾ ಕಳಪೆ ಪ್ರದರ್ಶನವನ್ನು ನೀಡಿತು. ಶ್ರೀಲಂಕಾದ ಯಾವೊಬ್ಬ ಆಟಗಾರ ಕೂಡ ಇಂಗ್ಲೆಂಡ್ ತಂಡದ ಬೌಲಿಂಗ್ ದಾಳಿಗೆ ಸೂಕ್ತ ಉತ್ತರ ನೀಡಲು ವಿಫಲರಾದರು. ಹೀಗಾಗಿ ಎರಡನೇ ಇನ್ನಿಂಗ್ಸ್‌ನಲ್ಲಿ ಲಂಕಾ ಕೇವಲ 126 ರನ್ ಗಳಿಸಲಷ್ಟೇ ಶಕ್ತವಾಗಿತ್ತು. ಬೌಲರ್ ಲಸಿತ್ ಎಂಬುಲ್ಡೇನಿಯಾ ಸಿಡಿಸಿದ 40 ರನ್‌ಗಳೇ ಲಂಕಾ ಪರ ಎರಡನೇ ಇನ್ನಿಂಗ್ಸ್‌ನಲ್ಲಿ ದಾಖಲಾದ ದೊಡ್ಡ ಸ್ಕೋರ್ ಆಗಿದೆ.

'ಆಸ್ಟ್ರೇಲಿಯಾ ಆಟಗಾರರೊಂದಿಗೆ ಲಿಫ್ಟ್‌ಗೆ ಹತ್ತೋಕೂ ಅವಕಾಶ ಇರಲ್ಲಿಲ್ಲ''ಆಸ್ಟ್ರೇಲಿಯಾ ಆಟಗಾರರೊಂದಿಗೆ ಲಿಫ್ಟ್‌ಗೆ ಹತ್ತೋಕೂ ಅವಕಾಶ ಇರಲ್ಲಿಲ್ಲ'

ಹೀಗಾಗಿ ಇಂಗ್ಲೆಂಡ್ ಕ್ರಿಕೆಟ್ ತಂಡಕ್ಕೆ ಎರಡೇ ಇನ್ನಿಂಗ್ಸ್‌ನಲ್ಲಿ 163 ರನ್‌ಗಳಿಸುವ ಸುಲಭ ಸವಾಲು ಮುಂದಿತ್ತು. ಶ್ರೀಲಂಕಾ ತಂಡ ನೀಡಿದ ಈ ಮೊತ್ತವನ್ನು ಇಂಗ್ಲೆಂಡ್ 4 ವಿಕೆಟ್ ಕಳೆದುಕೊಂಡು ತಲುಪುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಶ್ರೀಲಂಕಾ ವಿರುದ್ಧದ ಎರಡನೇ ಟೆಸ್ಟ್ ಸರಣಿಯನ್ನು ಇಂಗ್ಲೆಂಡ್ 2-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಭಾರತ ವಿರುದ್ಧದ ಪ್ರಮುಖ ಸರಣಿಗೆ ಇಂಗ್ಲೆಂಡ್ ದೊಡ್ಡ ಹುಮ್ಮಸ್ಸನ್ನು ಗಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

Story first published: Monday, January 25, 2021, 17:44 [IST]
Other articles published on Jan 25, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X