ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಬಾಂಗ್ಲಾ ವಿರುದ್ಧದ ಟೆಸ್ಟ್ ಸರಣಿಗೆ 12 ಸದಸ್ಯರ ಬಳಗ ಘೋಷಿಸಿದ ವಿಂಡೀಸ್: ಪ್ರಮುಖ ಆಟಗಾರನಿಗೆ ವಿಶ್ರಾಂತಿ!

Test series: West Indies announced 12-member squad for 2 match test series against Bangladesh

ಬಾಂಗ್ಲಾದೇಶ ಹಾಗೂ ವೆಸ್ಟ್ ಇಂಡೀಸ್ ತಂಡಗಳು ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆಡಲು ಸಜ್ಜಾಗಿದೆ. ಈ ಸರಣಿಯಲ್ಲಿ ಭಾಗಿಯಾಗುವ 12 ಆಟಗಾರರ ಬಳಗವನ್ನು ವೆಸ್ಟ್ ಇಂಡೀಸ್ ಪ್ರಕಟಿಸಿದ್ದು ಪ್ರಮುಖ ಆಟಗಾರನಿಗೆ ವಿಶ್ರಾಂತಿ ನೀಡಲಾಗಿದೆ. ಈ ಸರಣಿಯ ಆತಿಥ್ಯವನ್ನು ವೆಸ್ಟ್ ಇಂಡೀಸ್ ವಹಿಸಿಕೊಂಡಿದೆ.

ಪ್ರಮುಖ ಆಟಗಾರ ಜೇಸನ್ ಹೋಲ್ಡರ್ ಅವರು ಈ ಸರಣಿಯಿಂದ ವಿಶ್ರಾಂತಿ ಕೇಳಿದ್ದು ಅವರನ್ನು ಸರಣಿಯಿಂದ ಕೈಬಿಡಲಾಗಿದೆ. ಹಾಗಿದ್ದರೂ ಬಲಿಷ್ಠ 12 ಆಟಗಾರರ ಪಡೆ ಬಾಂಗ್ಲಾದೇಶದ ವಿರುದ್ಧ ಸೆಣೆಸಲು ಸಜ್ಜಾಗಿದೆ. ಈ ಸರಣಿಯ ಮೊದಲ ಪಂದ್ಯ ಜೂನ್ 16ರಿಂದ ಆರಂಭವಾಗಲಿದ್ದು ಆಂಟಿಗುವಾದಲ್ಲಿ ನಡೆಯಲಿದೆ.

ಈ ಸರಣಿಯ ಆಯ್ಕೆಯ ಬಳಿಕ ಕ್ರಿಕೆಟ್ ವೆಸ್ಟ್ ಇಂಡೀಸ್ ಮಾಧ್ಯಮ ಹೇಳಿಕೆ ಬಿಡುಗಡೆಗೊಳಿಸಿದೆ. "ಜೇಸನ್ ಹೋಲ್ಡರ್ ವಿಶ್ರಾಂತಿಯನ್ನು ಕೇಳಿದ್ದು ಕ್ರಿಕೆಟ್ ವೆಸ್ಟ್ ಇಂಡೀಸ್ ಅವರಿಗೆ ವಿಶ್ರಾಂತಿಯನ್ನು ನೀಡಿದೆ. ಹೀಗಾಗಿ ಈ ಸರಣಿಯ ಆಯ್ಕೆಗೆ ಜೇಸನ್ ಹೋಲ್ಡರ್ ಲಭ್ಯವಿರಲಿಲ್ಲ. ಅವರು ಬಾಂಗ್ಲಾದೇಶ ವಿರುದ್ಧಧ ಎಲ್ಲಾ ಮಾದರಿಯ ಸರಣಿಯಿಂದಲೂ ಹೊರಗುಳಿಯಲಿದ್ದಾರೆ" ಎಂದು ಮಾಹಿತಿ ನೀಡಿದೆ.

IND vs SA: ಟಿ20 ಮುಖಾಮುಖಿಯಲ್ಲಿ ಹೆಚ್ಚು ವಿಕೆಟ್ ಪಡೆದ 5 ಬೌಲರ್‌ಗಳ ಪಟ್ಟಿ; ಯಾವ ತಂಡ ಟಾಪ್?IND vs SA: ಟಿ20 ಮುಖಾಮುಖಿಯಲ್ಲಿ ಹೆಚ್ಚು ವಿಕೆಟ್ ಪಡೆದ 5 ಬೌಲರ್‌ಗಳ ಪಟ್ಟಿ; ಯಾವ ತಂಡ ಟಾಪ್?

ಈ ಸರಣಿಯ ಎರಡು ಟೆಸ್ಟ್ ಪಂದ್ಯಗಳು ಆಂಟಿಗುವಾದ ನಾರ್ತ್ ಸೌಂಡ್‌ನಲ್ಲಿರುವ ಸರ್ ವಿವಿಯನ್ ರಿಚರ್ಡ್ಸ್ ಸ್ಟೇಡಿಯಂ ಮತ್ತು ಸೇಂಟ್ ಲೂಸಿಯಾದ ಗ್ರೋಸ್ ಐಲೆಟ್‌ನಲ್ಲಿರುವ ಡೇರೆನ್ ಸಮಿ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿವೆ. ಇನ್ನು ವೆಸ್ಟ್ ಇಂಡೀಸ್ ಈ ಸರಣಿಗೆ ಎಡಗೈ ಸ್ಪಿನ್ನರ್ ಗುಡಾಕೇಶ್ ಮೋಟಿ, ವಿಕೆಟ್ ಕೀಪರ್ ಬ್ಯಾಟರ್ ಡೆವೊನ್ ಥಾಮಸ್ ಮತ್ತು ಬಲಗೈ ವೇಗಿ ಆಂಡರ್ಸನ್ ಫಿಲಿಪ್ ಎಂಬ ಮೂವರು ಅನ್‌ಕ್ಯಾಪ್ಡ್ ಆಟಗಾರರನ್ನು ಆಯ್ಕೆ ಮಾಡಿದೆ. ಮೋಟಿ ಮತ್ತು ಥಾಮಸ್ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಕೆರಿಬಿಯನ್ ತಂಡವನ್ನು ಪ್ರತಿನಿಧಿಸಿದ್ದರೆ ಫಿಲಿಪ್ ಇದೇ ಮೊದಲ ಬಾರಿಗೆ ರಾಷ್ಟ್ರೀಯ ತಂಡದ ಪರವಾಗಿ ಆಡುವ ಅವಕಾಶ ಗಳಿಸಿಕೊಂಡಿದ್ದಾರೆ.

ನಮ್ಮೂರ ಪ್ರತಿಭೆ: ಡಿಸ್ಕಸ್ ಎಸೆತದಲ್ಲಿ ದೇಶದ ಕೀರ್ತಿ ಪತಾಕೆ ಹಾರಿಸಿದ ಸಾಧಕ ವಿಕಾಸ್ ಗೌಡನಮ್ಮೂರ ಪ್ರತಿಭೆ: ಡಿಸ್ಕಸ್ ಎಸೆತದಲ್ಲಿ ದೇಶದ ಕೀರ್ತಿ ಪತಾಕೆ ಹಾರಿಸಿದ ಸಾಧಕ ವಿಕಾಸ್ ಗೌಡ

ಇಂಗ್ಲೆಂಡ್‌ನಲ್ಲಿ ಕೌಂಟಿ ಚಾಂಪಿಯನ್‌ಶಿಪ್‌ನಲ್ಲಿ ಭಾಗಿಯಾಗಿ ಗಾಯಗೊಂಡಿದ್ದ ವೇಗಿ ಕೆಮರ್ ರೋಚ್ ಅವರು ವೆಸ್ಟ್ ಇಂಡೀಸ್ ತಂಡದಿಂದ ಹೊರಗುಳಿದಿದ್ದಾರೆ. ಅಲ್ಲದೆ ಈ ವರ್ಷದ ಆರಂಭದಲ್ಲಿ ಇಂಗ್ಲೆಂಡ್ ವಿರುದ್ಧ ಆಡಿದ ವೀರಸಮ್ಮಿ ಪೆರ್ಮೌಲ್ ಮತ್ತು ಶಮರ್ ಬ್ರೂಕ್ಸ್ ಅವರಿಗೆ ಕೂಡ ಸ್ಥಾನ ದೊರೆತಿಲ್ಲ. ಇನ್ನು ಮಾಜಿ ಆಟಗಾರ ಶಿವನಾರಾಯಣ್ ಚಂದ್ರಪಾಲ್ ಅವರ ಪುತ್ರ ಟಗೆನರೈನ್ ಚಂದ್ರಪಾಲ್ ಅವರನ್ನು ಮೀಸಲು ಆಟಗಾರನಾಗಿ ಹೆಸರಿಸಲಾಗಿದೆ.

South Africa ಸರಣಿಯಿಂದ ಕೊನೇಕ್ಷಣದಲ್ಲಿ ತಂಡದಿಂದ ಹೊರಬಿದ್ದ KL Rahul | *Cricket | Oneindia Kannada

ವಿಂಡೀಸ್ ಸ್ಕ್ವಾಡ್ ಹೀಗಿದೆ: ಕ್ರೈಗ್ ಬ್ರಾಥ್‌ವೈಟ್ (ನಾಯಕ), ಜೆರ್ಮೈನ್ ಬ್ಲಾಕ್‌ವುಡ್ (ಉಪ ನಾಯಕ), ಎನ್ಕ್ರುಮಾ ಬೊನ್ನರ್, ಜಾನ್ ಕ್ಯಾಂಪ್‌ಬೆಲ್, ಜೋಶುವಾ ಡಾ ಸಿಲ್ವಾ, ಅಲ್ಜಾರಿ ಜೋಸೆಫ್, ಕೈಲ್ ಮೇಯರ್ಸ್, ಗುಡಾಕೇಶ್ ಮೋಟಿ, ಆಂಡರ್ಸನ್ ಫಿಲಿಪ್, ರೇಮನ್ ರೈಫರ್, ಜೇಡನ್ ಸೀಲ್ಸ್, ಡೆವೊನ್ ಥಾಮಸ್
ಮೀಸಲು ಆಟಗಾರರು: ಟ್ಯಾಗರ್ನರಿನ್ ಚಂದ್ರಪಾಲ್, ಶೆರ್ಮನ್ ಲೆವಿಸ್

Story first published: Thursday, June 9, 2022, 16:10 [IST]
Other articles published on Jun 9, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X