ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮಹೇಂದ್ರಸಿಂಗ್ ಧೋನಿಗೆ ಗೌರವ ಸೂಚಿಸಿದ ಬಿಸಿಸಿಐ: ಟ್ವಿಟ್ಟರ್‌ನಲ್ಲಿ ಪೋಸ್ಟ್‌

Thank You MS Dhoni: BCCI Pays Tribute To MSD After Announcing India Team To Tour Australia

ಐಪಿಎಲ್‌ 13ನೇ ಆವೃತ್ತಿಯಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವನ್ನು ಮುನ್ನೆಡೆಸುತ್ತಿರುವ ಟೀಮ್ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತನ್ನ ಅಧಿಕೃತ ಟ್ವಿಟ್ಟರ್ ಖಾತೆಯ ಮೂಲಕ ಗೌರವ ಸಲ್ಲಿಸಿದೆ.

ಇದೇ ವರ್ಷ ಆಗಸ್ಟ್‌ 15ರಂದು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುವ ಮೂಲಕ ಧೋನಿ ಕೋಟ್ಯಾಂತರ ಅಭಿಮಾನಿಗಳಿಗೆ ಆಘಾತ ನೀಡಿದರು. ಇನ್ನೂ ಸಾಂಕ್ರಾಮಿಕ ರೋಗದ ಸಮಯದಲ್ಲಿ ಧೋನಿ ನಿವೃತ್ತಿ ಘೋಷಿಸಿದ ಪರಿಣಾಮ ವಿದಾಯದ ಆಟವನ್ನು ಏರ್ಪಡಿಸಲು ಬಿಸಿಸಿಐಗೆ ಯಾವುದೇ ಆಯ್ಕೆ ಇರಲಿಲ್ಲ.

ಕ್ರೀಡಾ ಜಗತ್ತಿನಲ್ಲಿ ಧೋನಿ ಅತ್ಯಂತ ಗೌರವಾನ್ವಿತ ಸೆಲೆಬ್ರಿಟಿ: ಸಮೀಕ್ಷೆಕ್ರೀಡಾ ಜಗತ್ತಿನಲ್ಲಿ ಧೋನಿ ಅತ್ಯಂತ ಗೌರವಾನ್ವಿತ ಸೆಲೆಬ್ರಿಟಿ: ಸಮೀಕ್ಷೆ

ಆದರೆ, ಧೋನಿ ನಿವೃತ್ತಿಯ ಬಳಿಕ ಟೀಮ್ ಇಂಡಿಯಾ ತನ್ನ ಮೊದಲ ಸರಣಿಯನ್ನು ಆಡಲು ಆಸ್ಟ್ರೇಲಿಯಾಕ್ಕೆ ತೆರಳಲಿದ್ದು, ಧೋನಿಗೆ ಬಿಸಿಸಿಐ ಗೌರವ ಸೂಚಿಸಿದೆ. ಕಳೆದ ಸೋಮವಾರವಷ್ಟೇ ಆಸ್ಟ್ರೇಲಿಯಾ ವಿರುದ್ಧ ಮೂರು ಫಾರ್ಮೆಟ್‌ನಲ್ಲಿ ಆಡಲಿರುವ ಟೀಮ್ ಇಂಡಿಯಾವನ್ನು ಪ್ರಕಟಿಸಲಾಯಿತು.

ವಿರಾಟ್‌ ಕೊಹ್ಲಿ ನೇತೃತ್ವದ ಭಾರತ ತಂಡವು ಮೂರು ಏಕದಿನ, ಮೂರು ಟಿ20 ಮತ್ತು ನಾಲ್ಕು ಟೆಸ್ಟ್ ಪಂದ್ಯಗಳನ್ನು ಆಡಲಿದೆ. ನವೆಂಬರ್ ತಿಂಗಳಿನಿಂದ ಈ ಸರಣಿಗೆ ಚಾಲನೆ ಸಿಗಲಿದ್ದು ಇದಕ್ಕೂ ಮೊದಲು ಬಿಸಿಸಿಐ ತಮ್ಮ ತಂಡದ ಮಾಜಿ ನಾಯಕನಿಗೆ ಅವರ ಚಿತ್ರದ ಜೊತೆಗೆ #ThankYouMSDhoni ಎಂದು ಪೋಸ್ಟ್ ಮಾಡಿದೆ.

ಸದ್ಯ ಧೋನಿ ನೇತೃತ್ವದ ಸಿಎಸ್‌ಕೆ ಐಪಿಎಲ್ 2020ರಲ್ಲಿ ಹೀನಾಯ ಪ್ರದರ್ಶನ ತೋರಿ ಪಾಯಿಂಟ್ಸ್ ಟೇಬಲ್‌ನಲ್ಲಿ ತಳಮುಟ್ಟಿದೆ.

Story first published: Thursday, October 29, 2020, 16:14 [IST]
Other articles published on Oct 29, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X