ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೊಹ್ಲಿ, ಧೋನಿ ಮೇಲೆ ಅಪಾರ ಗೌರವವಿದೆ: ಆರೊನ್‌ ಫಿಂಚ್‌

‘Thank you Virat Kohli and MS Dhoni: Aaron Finch lauds duo for incredible gesture

ಮೆಲ್ಬೋರ್ನ್‌, ಏಪ್ರಿಲ್‌ 30: ಆಸ್ಟ್ರೇಲಿಯಾ ಏಕದಿನ ಕ್ರಿಕೆಟ್‌ ತಂಡದ ನಾಯಕ ಆರೊನ್‌ ಫಿಂಚ್‌, ಟೀಮ್‌ ಇಂಡಿಯಾದ ನಾಯಕ ವಿರಾಟ್‌ ಕೊಹ್ಲಿ ಮತ್ತು ಮಾಜಿ ನಾಯಕ ಎಂ.ಎಸ್‌ ಧೋನಿ ಅವರ ಮೇಲೆ ಅಪಾರ ಗೌರವವಿದೆ ಎಂದು ಹೇಳಿದ್ದಾರೆ.

 ಐರ್ಲೆಂಡ್‌, ಪಾಕಿಸ್ತಾನ ಸರಣಿಗಳಿಗೆ ಇಂಗ್ಲೆಂಡ್‌ ತಂಡದಲ್ಲಿ ಡಕೆಟ್‌, ಮಲಾನ್‌ಗೆ ಸ್ಥಾನ ಐರ್ಲೆಂಡ್‌, ಪಾಕಿಸ್ತಾನ ಸರಣಿಗಳಿಗೆ ಇಂಗ್ಲೆಂಡ್‌ ತಂಡದಲ್ಲಿ ಡಕೆಟ್‌, ಮಲಾನ್‌ಗೆ ಸ್ಥಾನ

ಕಳೆದ ಮಾರ್ಚ್‌ನಲ್ಲಿಇಮಡಿಯನ್‌ ಪ್ರೀಮಿಯರ್‌ ಲೀಗ್‌ 2019ರ ಆರಂಭಕ್ಕೂ ಮೊದಲು ನಡೆದ ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಏಕದಿನ ಕ್ರಿಕೆಟ್‌ ಸರಣಿಯಲ್ಲಿ ಫಿಂಚ್‌ ನಾಯಕತ್ವದ ಆಸೀಸ್‌ ಪಡೆ ಸರಣಿ ಜಯ ದಾಖಲಿಸಿತ್ತು. ಈ ಸಂದರ್ಭದಲ್ಲಿ ವಿರಾಟ್‌ ಮತ್ತು ಧೋನಿ ತಮ್ಮ ಜರ್ಸಿಯನ್ನು ಉಡುಗೊರೆಯಾಗಿ ಫಿಂಚ್‌ಗೆ ನೀಡಿದ್ದರು.

 ನಾನು 'ಗೇ' ಅಲ್ಲ ಎಂದ ಆಸ್ಟ್ರೇಲಿಯಾ ಕ್ರಿಕೆಟಿಗ ಜೇಮ್ಸ್‌ ಫಾಕ್ನರ್‌ ನಾನು 'ಗೇ' ಅಲ್ಲ ಎಂದ ಆಸ್ಟ್ರೇಲಿಯಾ ಕ್ರಿಕೆಟಿಗ ಜೇಮ್ಸ್‌ ಫಾಕ್ನರ್‌

ಈ ಜರ್ಸಿಗಳೊಂದಿಗೆ ಭಾನುವಾರ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಸಂದೇಶ ಪ್ರಕಟಿಸಿರುವ ಫಿಂಚ್‌, "ಥ್ಯಾಂಕ್ಯೂ ವಿರಾಟ್‌ ಕೊಹ್ಲಿ ಮತ್ತು ಎಂ.ಎಸ್‌ ಧೋನಿ. ಭಾರತ ವಿರುದ್ಧದ ಕಡೆಯ ಏಕದಿನ ಸರಣಿ ವೇಳೆ ನಿಮ್ಮಿಬ್ಬರಿಂದಲೂ ಜರ್ಸಿ ಸ್ವೀಕರಿಸಿರುವುದು ನನ್ನ ಅದೃಷ್ಟ. ಇಬ್ಬರು ಸಾರ್ವಕಾಲಿಕ ಶ್ರೇಷ್ಠ ಆಟಗಾರರ ಬಗ್ಗೆ ನನಗೆ ಅಪಾರ ಗೌರವವಿದೆ,'' ಎಂದು ಬರೆದುಕೊಂಡಿದ್ದಾರೆ.

 ಕುಮಾರ ಸಂಗಕ್ಕರ ಸರಿಗಟ್ಟಿ ಟಿ20 ಇತಿಹಾಸ ನಿರ್ಮಿಸಿದ ರಿಷಬ್ ಪಂತ್ ಕುಮಾರ ಸಂಗಕ್ಕರ ಸರಿಗಟ್ಟಿ ಟಿ20 ಇತಿಹಾಸ ನಿರ್ಮಿಸಿದ ರಿಷಬ್ ಪಂತ್

ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಮುಂಬರುವ ಮೇ 30ರಂದು ಆರಂಭವಾಗಲಿರುವ ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ನಲ್ಲಿ ಮುಖಾಮುಖಿಯಾಗಲಿವೆ. ಟೀಮ್‌ ಇಂಡಿಯಾ ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಜೂನ್‌ 5ರಂದು ಮೊದಲ ಪಂದ್ಯವನ್ನಾಡಲಿದ್ದು, ಜೂನ್‌ 9ರಂದು ತನ್ನ ಎರಡನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಪೈಪೋಟಿ ನಡೆಸಲಿದೆ.

 ಇಂಗ್ಲೆಂಡ್ ವಿಶ್ವಕಪ್ ಕ್ರಿಕೆಟ್ ತಂಡದಿಂದ ಹೊರಬಿದ್ದ ಅಲೆಕ್ಸ್ ಹೇಲ್ಸ್ ಇಂಗ್ಲೆಂಡ್ ವಿಶ್ವಕಪ್ ಕ್ರಿಕೆಟ್ ತಂಡದಿಂದ ಹೊರಬಿದ್ದ ಅಲೆಕ್ಸ್ ಹೇಲ್ಸ್

ಈ ಬಾರಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಪ್ರಶಸ್ತಿ ಗೆಲ್ಲುವ ಹಾಟ್‌ ಫೇವರಿಟ್‌ಗಳಾಗಿವೆ. ಅದರಲ್ಲೂ ಇತ್ತೀಚೆಗೆ ಭಾರತ ಮತ್ತು ಪಾಕಿಸ್ತಾನ ವಿರುದ್ಧದ ಏಕದಿನ ಸರಣಿಗಳನ್ನು ಗೆದ್ದು ಆತ್ಮವಿಶ್ವಾಸ ಹೆಚ್ಚಿಸಿಕೊಂಡಿರುವ ಆಸ್ಟ್ರೇಲಿಯಾ ತಂಡಕ್ಕೆ ನಿಷೇಧ ಶಿಕ್ಷೆಯಿಂದ ಹೊರ ಬಂದಿರುವ ಸ್ಟೀವನ್‌ ಸ್ಮಿತ್‌ ಮತ್ತು ಡೇವಿಡ್‌ ವಾರ್ನರ್‌ ಅವರ ಸೇವೆಯೂ ಲಭ್ಯವಾಗಿರುವುದು ಆನೆ ಬಲ ತಂದುಕೊಟ್ಟಂತಾಗಿದೆ.

Story first published: Tuesday, April 30, 2019, 15:11 [IST]
Other articles published on Apr 30, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X