ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಒಂದೇ ಓವರ್‌ನಲ್ಲಿ 5 ಸಿಕ್ಸರ್ ಚಚ್ಚಿದ ತೆವಾಟಿಯಗೆ ಥ್ಯಾಂಕ್ಸ್‌ ಹೇಳಿದ ಯುವಿ..!

ರಾಹುಲ್ ತೆವಾಟಿಯಾ.. ಸದ್ಯ ಕ್ರಿಕೆಟ್ ಅಭಿಮಾನಿಗಳ ಬಾಯಲ್ಲಿ ಓಡಾಡುತ್ತಿರುವ ಐಪಿಎಲ್ ಆಟಗಾರನ ಹೆಸರು. ನಿನ್ನೆಯವರೆಗೂ ರಾಹುಲ್ ತೇವಾಟಿಯ ಅಂದ್ರೆ, ಯಾರು ಅಂತನೇ ಅನೇಕರಿಗೆ ಗೊತ್ತಿರ್ಲಿಲ್ಲ. ಆದರೆ ಇದೀಗ ರಾಹುಲ್ ಏಕಾಏಕಿ ಸೂಪರ್ ಪ್ಲೇಯರ್‌ ಎಂಬ ಹೊಗಳಿಗೆ ಕಾರಣವಾಗಿದ್ದಾನೆ.

ನಿನ್ನೆ ಭಾನುವಾರ (ಸೆಪ್ಟೆಂಬರ್ 28) ಶಾರ್ಜಾದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಪಂದ್ಯದ ನಂತರ, ರಾಹುಲ್ ತೇವಾಟಿಯ ಯಾರೆಂದೂ ಇಡೀ ವಿಶ್ವಕ್ಕೆ ಗೊತ್ತಾಗಿದೆ. ಹೌದು ಈ ಎಡಗೈ ದಾಂಡಿಗ ತಾನೊಬ್ಬ ಸಾಮಾನ್ಯ ಐಪಿಎಲ್ ಆಟಗಾರನಲ್ಲ ಎಂಬುದನ್ನ ಜಗಜ್ಜಾಹೀರು ಮಾಡಿದ್ದಾನೆ. ಇದಕ್ಕೆ ಕಾರಣ ಆ ಒಂದೇ ಒಂದು ಸ್ಫೋಟಕ ಇನ್ನಿಂಗ್ಸ್‌..

ಒಂದೇ ಓವರ್: ವಿಲನ್ ಆಗಿದ್ದ ತೇವಾಟಿಯಾ ಹೀರೋ ಆಗ್ಬಿಟ್ಟ!ಒಂದೇ ಓವರ್: ವಿಲನ್ ಆಗಿದ್ದ ತೇವಾಟಿಯಾ ಹೀರೋ ಆಗ್ಬಿಟ್ಟ!

ಮೊದಲ 19 ಎಸೆಗಳಲ್ಲಿ ಗಳಿಸಿದ್ದು ಕೇವಲ 8ರನ್

ಮೊದಲ 19 ಎಸೆಗಳಲ್ಲಿ ಗಳಿಸಿದ್ದು ಕೇವಲ 8ರನ್

ಶಾರ್ಜಾದಲ್ಲಿ ಕಿಂಗ್ಸ್‌ ಇಲೆವೆನ್ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ರಾಹು್ಲ್ ತೆವಾಟಿಯರನ್ನ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಕಳುಹಿಸಲಾಯಿತು. ಕಿಂಗ್ಸ್ ಇಲೆವೆನ್ ಪಂಜಾಬ್‌ನ ಬೆಟ್ಟದಂತಹ ಗುರಿಯನ್ನ ಅದಾಗಲೇ ಸಂಜು ಸ್ಯಾಮ್ಸನ್ ಮತ್ತು ಸ್ಟೀವನ್ ಸ್ಮಿತ್ ಜೋಡಿ ಅರ್ಧ ಹತ್ತಿ ಮುಗಿಸಿತ್ತು. ಈ ವೇಳೆ ರಾಬಿನ್ ಉತ್ತಪ್ಪಗೂ ಮೊದಲೇ ರಾಹುಲ್ ತೆವಾಟಿಯ ಕಣಕ್ಕಿಳಿದರು.

ಹೀಗೆ ನಾಲ್ಕನೇ ಕ್ರಮಾಂಕದಲ್ಲಿ ಆಡಿದ ರಾಹುಲ್ ತೆವಾಟಿಯ ಆರಂಭದಲ್ಲಿ ಮೊದಲ 19 ಎಸೆತಗಳಲ್ಲಿ ಗಳಿಸಿದ್ದು ಕೇವಲ 8ರನ್. ಇದು ರಾಜಸ್ಥಾನ್ ರಾಯಲ್ಸ್‌ ಅಭಿಮಾನಿಗಳ ಕಣ್ಣನ್ನು ಕೆಂಪು ಮಾಡಿತ್ತು. ಈತ ಯಾರಪ್ಪಾ..! ಚೆಂಡನ್ನು ಎದುರಿಸಲು ಇಷ್ಟು ಕಷ್ಟ ಪಡ್ತಿದ್ದಾನೆ, ಮೊದಲು ರಿಟೈರ್ಡ್ ಆಗಿ ಹೋಗಲಿ ಎಂದು ಶಾಪ ಹಾಕಿದ್ದುಂಟು. ಆದರೆ ಆನಂತರ ಆಗಿದ್ದೇ ಬೇರೆ, ಕಹಾನಿ ಮೇ ಟ್ವಿಸ್ಟ್ ಎಂಬಂತೆ ರಾಹುಲ್ ತೆವಾಟಿಯ ಒಂದೇ ಓವರ್‌ನಲ್ಲಿ ಸೂಪರ್ ಸ್ಟಾರ್ ಆಗಿಬಿಟ್ಟ.

ಶೆಲ್ಡನ್ ಕಾಟ್ರಲ್‌ಗೆ ಐದು ಭರ್ಜರಿ ಸಿಕ್ಸರ್ ಸಿಡಿಸಿದ ತೆವಾಟಿಯಾ

ಶೆಲ್ಡನ್ ಕಾಟ್ರಲ್‌ಗೆ ಐದು ಭರ್ಜರಿ ಸಿಕ್ಸರ್ ಸಿಡಿಸಿದ ತೆವಾಟಿಯಾ

ಹೌದು 17 ಒವರ್ ಮುಕ್ತಾಯದವರೆಗೂ ತೆವಾಟಿಯ ಗಳಿಸಿದ್ದು 23 ಎಸೆಗಳಿಗೆ 17ರನ್‌ ಮಾತ್ರ. ಆದರೆ 18ನೇ ಓವರ್‌ನಲ್ಲಿ ಆತ ಕ್ರೀಡಾಂಗಣದಲ್ಲಿ ದೊಡ್ಡ ಮ್ಯಾಜಿಕ್ ಸೃಷ್ಠಿಸಿದ. ಶೆಲ್ಡನ್ ಕಾಟ್ರೆಲ್‌ನ ಓವರ್‌ನಲ್ಲಿ ಒಂದರ ಹಿಂದೆ ಮತ್ತೊಂದರಂತೆ ಸಿಕ್ಸರ್ ಚಚ್ಚಿದ. ಆರು ಎಸೆಗಳಲ್ಲಿ ಐದನೇ ಎಸೆತ ಒಂದು ಬೀಟ್ ಆಗಿದ್ದು ಬಿಟ್ಟರೆ ಉಳಿದ ಐದು ಎಸೆತಗಳಲ್ಲಿ ಚೆಂಡು ಬೌಂಡರಿ ಗೆರೆ ದಾಟಿತ್ತು. ಓವರ್‌ನಲ್ಲಿ ಐದು ಭರ್ಜರಿ ಸಿಕ್ಸರ್ ಗಳಿದ್ದವು.

ಈ ಮೂಲಕ ಎಲ್ಲರ ಪಾಲಿನ ವಿಲನ್ ಆಗಿದ್ದ ತೆವಾಟಿಯ ಏಕ್ ಧಮ್ ಹೀರೋ ಆಗ್ಬಿಟ್ಟ. ತಂಡವನ್ನ ಗೆಲುವಿನ ದಡ ಸಮೀಪಿಸಿ 53ರನ್‌ಗೆ ಔಟಾಗಿ ಪೆವಿಲಿಯನ್ ಸೇರಿಕೊಂಡ.

ರಾಜಸ್ಥಾನ ವಿರುದ್ಧ ಪಂಜಾಬ್ ಸೋಲಿನ ಕಾರಣ ಬಿಚ್ಚಿಟ್ಟ ಸಚಿನ್

ಸ್ವಲ್ಪದರಲೇ ಮಿಸ್‌ ಆಯ್ತು ಯುವಿ ರೆಕಾರ್ಡ್

ಸ್ವಲ್ಪದರಲೇ ಮಿಸ್‌ ಆಯ್ತು ಯುವಿ ರೆಕಾರ್ಡ್

ಹೌದು, ಯುವಿ ರೆಕಾರ್ಡ್ ಸ್ವಲ್ಪದರಲ್ಲೇ ಮಿಸ್ತಾಗಿದ್ದಂತು ನಿಜ. 2007 ಚೊಚ್ಚಲ ಟಿ20 ವಿಶ್ವಕಪ್‌ನಲ್ಲಿ ಯುವರಾಜ್ ಸಿಂಗ್ ಇಂಗ್ಲೆಂಡ್ ವಿರುದ್ಧ ಸ್ಟುವರ್ಟ್ ಬ್ರಾಡ್‌ ಓವರ್‌ನಲ್ಲಿ ಆರು ಸಿಕ್ಸರ್ ಸಿಡಿಸಿದ್ದನ್ನ ಯಾರು ಮರೆಯಲು ಸಾಧ್ಯವಿಲ್ಲ. ಹೀಗಿರುವಾಗ ಯುವಿ ಬಳಿಕ ಟಿ೨೦ ಮ್ಯಾಚ್‌ನಲ್ಲಿ ಓವರ್‌ನಲ್ಲಿ ಆರು ಸಿಕ್ಸರ್‌ ಸಿಡಿಸುವ ಅವಕಾಶ ರಾಹುಲ್ ತೆವಾಟಿಯಗೆ ಇತ್ತು. ಆದರೆ ಅದು ಜಸ್ಟ್‌ ಒಂದು ಬಾಲ್‌ನಲ್ಲಿ ಮಿಸ್‌ ಆಗಿದೆ. ಓವರ್‌ವೊಂದರಲ್ಲಿ ತೆವಾಟಿಯ ಐದು ಸಿಕ್ಸರ್‌ ಸಿಡಿಸಿ ತಂಡದ ಗೆಲುವಿಗೆ ಕಾರಣನಾದ.

ರಾಹುಲ್‌ ತೆವಾಟಿಯಾಗೆ ದೊಡ್ಡ ಧನ್ಯವಾದ ಎಂದ ಯುವರಾಜ್ ಸಿಂಗ್

ರಾಹುಲ್ ತೆವಾಟಿಯಾ ಆಟಕ್ಕೆ ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್ ಕೂಡ ಒಮ್ಮೆಲೆ ಬೆಚ್ಚಿ ಬಿದ್ದಿದ್ದಾರೆ. ಇದಕ್ಕೆ ಕಾರಣ ತೆವಾಟಿಯ ಎಲ್ಲಿ ತನ್ನ ದಾಖಲೆ ಬ್ರೇಕ್ ಮಾಡ್ತಾರೋ ಅಂತ, ಯುವಿ ತಲೆಕೆಡಿಸಿಕೊಂಡಿದ್ದರಂತೆ. ಆದರೆ ಒಂದು ಸಿಕ್ಸರ್‌ನಲ್ಲಿ ತನ್ನ ದಾಖಲೆ ಉಳಿಯಿತು ಎಂದು ಯುವಿ ನಿಟ್ಟುಸಿರು ಬಿಟ್ಟು ಥ್ಯಾಂಕ್ಸ್‌ ಎಂದು ಟ್ವೀಟ್ ಮಾಡಿದ್ದಾರೆ.

ಇನ್ನು ಗಾಡ್ ಆಫ್ ಕ್ರಿಕೆಟ್ ಸಚಿನ್ ತೆಂಡುಲ್ಕರ್ ಸೇರಿದಂತೆ, ಅನೇಕ ದಿಗ್ಗಜರು ರಾಹುಲ್ ತೇವಾಟಿಯ ಆಟಕ್ಕೆ ಮನಸೋತಿದ್ದಾರೆ.

Story first published: Monday, September 28, 2020, 15:18 [IST]
Other articles published on Sep 28, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X