ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕ್ರಿಕೆಟ್ : ಏಷ್ಯಾಕಪ್ ಇತಿಹಾಸ 1984ರಿಂದ ಇಲ್ಲಿತನಕದ ವಿಜೇತರು

By Malenadiga
Asia cup cricket 2018: ಏಷ್ಯಾಕಪ್ ಕ್ರಿಕೆಟ್ ಇತಿಹಾಸ | Oneindia Kannada
The Asia Cup Championship 1984-2018 Winners list

ಏಷ್ಯಾಕಪ್ ಮತ್ತೊಮ್ಮೆ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಅಂಗಳದಲ್ಲಿ ನಡೆಯಲಿದೆ. ಮೊದಲ ಏಷ್ಯಾ ಕಪ್ ಟೂರ್ನಿ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನಲ್ಲಿ 1983-84ರಲ್ಲಿ ಜರುಗಿತ್ತು. ಆರಂಭಿಕ ಟೂರ್ನಿಯಲ್ಲಿ ಶ್ರೀಲಂಕಾ ತಂಡವನ್ನು ಸೋಲಿಸಿ ಭಾರತ ಕಪ್ ಎತ್ತಿ ಸಂಭ್ರಮಿಸಿತ್ತು.

ದ್ವೆವಾರ್ಷಿಕ ಟೂರ್ನಮೆಂಟ್ ನಲ್ಲಿ ಏಷ್ಯಾದ ದಿಗ್ಗಜ ತಂಡಗಳಾದ ಭಾರತ, ಶ್ರೀಲಂಕಾ ಹಾಗೂ ಪಾಕಿಸ್ತಾನ ಪ್ರಾಬಲ್ಯ ಮೆರೆಯುತ್ತಾ ಬಂದಿವೆ. 50 ಓವರ್ ಗಳ ಮಾದರಿ ಅಲ್ಲದೆ 2016ರಲಿ ಟ್ವೆಂಟಿ20 ಮಾದರಿಯಲ್ಲೂ ಏಷ್ಯಾಕಪ್ ಟೂರ್ನಮೆಂಟ್ ಆಯೋಜನೆಗೊಂಡಿದೆ.

ಏಷ್ಯಾಕಪ್ 2018 ಕದನ ಮುನ್ನೋಟ, ಎಲ್ಲಾ ತಂಡಗಳ ವಿವರ ಏಷ್ಯಾಕಪ್ 2018 ಕದನ ಮುನ್ನೋಟ, ಎಲ್ಲಾ ತಂಡಗಳ ವಿವರ

1984 ಹಾಗೂ 1995ರ ನಂತರ ಮೂರನೇ ಬಾರಿಗೆ ಯುಎಇಯಲ್ಲಿ ಈ ಪ್ರತಿಷ್ಠಿತ ಟೂರ್ನಮೆಂಟ್ ನಡೆಯಲಿದೆ. ಭಾರತ ಹಾಲಿ ಚಾಂಪಿಯನ್ ಆಗಿದೆ. ಬಾಂಗ್ಲಾದೇಶದಲ್ಲೂ 2012, 2014 ಹಾಗೂ 2016ರಲ್ಲಿ ಟ್ವೆಂಟಿ20 ಮಾದರಿಯಲ್ಲಿ ಏಷ್ಯಾಕಪ್ ಆಯೋಜನೆಯಾಗಿತ್ತು.

ಕೆಪಿಎಲ್ ಫೈನಲ್ Live: ಬಿಜಾಪುರ್ ಎದುರು ಬೆಂಗಳೂರು 2 ವಿಕೆಟ್ ಪತನ ಕೆಪಿಎಲ್ ಫೈನಲ್ Live: ಬಿಜಾಪುರ್ ಎದುರು ಬೆಂಗಳೂರು 2 ವಿಕೆಟ್ ಪತನ

ಭಾರತ ಹಾಗೂ ಶ್ರೀಲಂಕಾ ತಲಾ ಐದು ಬಾರಿ ಏಷ್ಯನ್ ಚಾಂಪಿಯನ್ ಆಗಿ ಮೆರೆದಿವೆ. ಪಾಕಿಸ್ತಾನ ಎರಡು ಬಾರಿ ಕಪ್ ಎತ್ತಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಹಾಗೂ ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಸಹಯೋಗದಿಂದ ಟೂರ್ನಮೆಂಟ್ ನಡೆಸಲಾಗುತ್ತದೆ.

ವರ್ಷ ಅತಿಥೇಯ ರಾಷ್ಟ್ರ ಗೆದ್ದವರು ರನ್ನರ್ ಅಪ್
1983/84 ಯುಎಇ ಭಾರತ ಶ್ರೀಲಂಕಾ
1985/86 ಶ್ರೀಲಂಕಾ ಶ್ರೀಲಂಕಾ ಪಾಕಿಸ್ತಾನ
1988/89 ಬಾಂಗ್ಲಾದೇಶ ಭಾರತ ಶ್ರೀಲಂಕಾ
1990/91 ಭಾರತ ಭಾರತ ಶ್ರೀಲಂಕಾ
1994/95 ಯುಎಇ ಭಾರತ ಶ್ರೀಲಂಕಾ
1997 ಶ್ರೀಲಂಕಾ ಶ್ರೀಲಂಕಾ ಭಾರತ
2000 ಬಾಂಗ್ಲಾದೇಶ ಪಾಕಿಸ್ತಾನ ಶ್ರೀಲಂಕಾ
2004 ಶ್ರೀಲಂಕಾ ಶ್ರೀಲಂಕಾ ಭಾರತ
2008 ಪಾಕಿಸ್ತಾನ ಶ್ರೀಲಂಕಾ ಭಾರತ
2010 ಶ್ರೀಲಂಕಾ ಭಾರತ ಶ್ರೀಲಂಕಾ
2012 ಬಾಂಗ್ಲಾದೇಶ ಪಾಕಿಸ್ತಾನ ಬಾಂಗ್ಲಾದೇಶ
2014 ಬಾಂಗ್ಲಾದೇಶ ಶ್ರೀಲಂಕಾ ಪಾಕಿಸ್ತಾನ
2016(T20) ಬಾಂಗ್ಲಾದೇಶ ಭಾರತ ಬಾಂಗ್ಲಾದೇಶ

Story first published: Saturday, September 15, 2018, 17:21 [IST]
Other articles published on Sep 15, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X