ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನನ್ನ ಬದುಕಿನ ಕಗ್ಗತ್ತಲ ದಿನವಿದು: ಕೋಚ್ ರಮೇಶ್‌ಗೆ ಕುಟುಕಿದ ಮಿಥಾಲಿ

The darkest day of my life: Mithali Raj on charges of Ramesh Powar

ನವದೆಹಲಿ, ನವೆಂಬರ್ 29: ಮಿಥಾಲಿ ರಾಜ್ ವಿವಾದ ಶುರುವಾಗಿ ಇಂದಿಗೆ (ನವೆಂಬರ್ 29) ವಾರ ಕಳೆಯುತ್ತಿದೆ. ಆದರೆ ವಿವಾದ ತಣ್ಣಗಾಗುವ ಮುನ್ಸೂಚನೆಯೇ ಕಾಣುತ್ತಿಲ್ಲ. ಬದಲಿಗೆ ದಿನದಿಂದ ದಿನಕ್ಕೆ ವಿವಾದ ತಿರುವನ್ನು ಪಡೆಯುತ್ತಲೇ ಇದೆ. ಮಿಥಾಲಿ ಮತ್ತು ತಂಡ ಸಮಿತಿ ಮೇಲಿನ ಕೆಸರೆರೆಚಾಟ ಮುಂದುವರೆದಿದೆ.

ಕೋಚ್ ರಮೇಶ್ ಹೇಳಿಕೆಯಿಂದ ಮಿಥಾಲಿ ಪ್ರಕರಣಕ್ಕೆ ಸಕತ್ ಟ್ವಿಸ್ಟ್ಕೋಚ್ ರಮೇಶ್ ಹೇಳಿಕೆಯಿಂದ ಮಿಥಾಲಿ ಪ್ರಕರಣಕ್ಕೆ ಸಕತ್ ಟ್ವಿಸ್ಟ್

ಐಸಿಸಿ ಮಹಿಳಾ ಟಿ20 ಸೆಮಿಫೈನಲ್ ನಲ್ಲಿ ಭಾರತದ ಆಡುವ ತಂಡದಿಂದ ಮಿಥಾಲಿಯನ್ನು ಹೊರಗಿಟ್ಟಿದ್ದು ವಿವಾದದ ಹುಟ್ಟಿಗೆ ಕಾರಣ. ಆರಂಭದಲ್ಲಿ ತಂಡ ಸಮಿತಿಯ ಮೇಲಿದ್ದ ಕೋಪ ಈಗ ಮಿಥಾಲಿಯತ್ತಲೂ ತಿರುಗುತ್ತಿದೆ. ಮತ್ತೆ ತಂಡ ಸಮಿತಿಯತ್ತಲೂ ಹೊರಳುತ್ತಿದೆ.

ಮಿಥಾಲಿ ರಾಜ್ ವಿವಾದ: ಶುರುವಾದಂದಿನಿಂದ ಈವರೆಗಿನ 'ಆಗು-ಹೋಗು'ಗಳುಮಿಥಾಲಿ ರಾಜ್ ವಿವಾದ: ಶುರುವಾದಂದಿನಿಂದ ಈವರೆಗಿನ 'ಆಗು-ಹೋಗು'ಗಳು

ಕಮಿಟಿ ಆಫ್ ಅಡ್ಮಿನಿಸ್ಟ್ರೇಟರ್ ಸದಸ್ಯೆ ಡಯಾನಾ ಎಡುಲ್ಜಿ ಮತ್ತು ಕೋಚ್ ರಮೇಶ್ ಪೊವಾರ್ ಸರಿಯಿಲ್ಲ ಎಂದು ಮಿಥಾಲಿ ಆರೋಪ ಹೊರಿಸಿದ್ದರು. ಆದರೆ ಈಗ ರಮೇಶ್ ಅವರೇ ಮಿಥಾಲಿ ಮೇಲೆ ಆರೋಪ ಮಾಡಿದ್ದು, ವಿವಾದಕ್ಕೆ ತಿರುವು ನೀಡಿದೆ.

ಹತ್ತು ಪುಟಗಳ ಆರೋಪ

ಹತ್ತು ಪುಟಗಳ ಆರೋಪ

ಬಿಸಿಸಿಐ ಅಧಿಕಾರಿಗಳಿಗೆ ಬುಧವಾರ (ನವೆಂಬರ್ 28) ಸುಮಾರು 10 ಪುಟಗಳ ವರದಿ ಸಲ್ಲಿಸಿರುವ ರಮೇಶ್ ಪೊವಾರ್, ತನ್ನ ಸಾಧನೆಗಾಗಿ ಗುರುತಿಸಿಕೊಂಡ ಬಳಿಕ ಮಿಥಾಲಿ ತಂಡದಲ್ಲಿ ಆಡುವುದಿಲ್ಲವೆಂದು ನಮ್ಮನ್ನು ಬ್ಲ್ಯಾಕ್ ಮೇಲೆ ಮಾಡುತ್ತಿದ್ದರು ಎಂದು ಆರೋಪಿಸಿದ್ದಾರೆ.

ವರದಿಯಲ್ಲಿ ಇನ್ನೇನಿತ್ತು?

ವರದಿಯಲ್ಲಿ ಇನ್ನೇನಿತ್ತು?

ನಮ್ಮ ಮೇಲೆ ಬೆದರಿಕೆಯೊಡ್ಡುವುದನ್ನು ಮಿಥಾಲಿ ನಿಲ್ಲಿಸುತ್ತಾರೆಂದು ನಾವು ಭಾವಿಸುತ್ತೇವೆ. ಅವರಿಗೆ ತಂಡದ ಹಿತಾಸಕ್ತಿಗಿಂತ ಸ್ವ-ಹಿತಾಸಕ್ತಿ ಮುಖ್ಯ. ಐಸಿಸಿ ಮಹಿಳಾ ಟಿ20 ಟೂರ್ನಿಯಲ್ಲಿ ಪಾಕಿಸ್ತಾನದ ವಿರುದ್ಧ ಪಂದ್ಯಕ್ಕೂ ಮುನ್ನ ಬ್ಯಾಟಿಂಗ್ ಕ್ರಮಾಂಕದ ವಿಚಾರದಲ್ಲಿ ಮುನಿಸಿಕೊಂಡಿದ್ದ ಮಿಥಾಲಿ ತಾನು ಪಂದ್ಯವನ್ನಾಡೋದಿಲ್ಲ, ನಿವೃತ್ತಿ ಘೋಷಿಸುತ್ತೇನೆ ಎಂದು ಹೊರಟಿದ್ದರು ಎಂದು ವರದಿಯಲ್ಲಿ ಪೊವಾರ್ ವಿವರಿಸಿದ್ದಾರೆ.

ಮಿಥಾಲಿ ಯಾಕೆ ಅರಂಭಿಕ ಆಟಗಾರ್ತಿಯಲ್ಲ?

ಮಿಥಾಲಿ ಯಾಕೆ ಅರಂಭಿಕ ಆಟಗಾರ್ತಿಯಲ್ಲ?

ಪೊವಾರ್ ದೂರಿರುವ ಪ್ರಕಾರ ಮಿಥಾಲಿ ತಾನು ಆರಂಭಿಕ ಆಟಗಾರ್ತಿಯಾಗಿ ಬರಲು ಬಯಸಿದ್ದರು ಎನ್ನಲಾಗಿದೆ. ಆದರೆ ಮಿಥಾಲಿಗೆ ಮಧ್ಯಮ ಬ್ಯಾಟಿಂಗ್ ಕ್ರಮಾಂಕ ನೀಡಲಾಗಿತ್ತು. ಇದೇ ವಿಚಾರಕ್ಕೆ ಮಿಥಾಲಿ ಮುನಿಸಿಕೊಂಡಿದ್ದರು ಎಂದು ವರದಿಯಲ್ಲಿ ದೂರಲಾಗಿದೆ. ಅಭ್ಯಾಸದ ವೇಳೆ ಆರಂಭಿಕ ಆಟಗಾರ್ತಿಗೆ ಒಗ್ಗುವಂತ ಆಟ ಪ್ರದರ್ಶಿಸಿರಲಿಲ್ಲ. ಹೀಗಾಗಿ ಮಿಥಾಲಿಯನ್ನು ಮಧ್ಯಮ ಕ್ರಮಾಂಕಕ್ಕೆ ಬದಲಾಯಿಸಿದ್ದೆವು. ಇದಕ್ಕೆ ಆಕೆ ಅಸಮಾಧಾನಗೊಂಡಿದ್ದರು ಎಂದು ಪೊವಾರ್ ತಿಳಿಸಿದ್ದಾರೆ.

ಪೊವಾರ್‌ನತ್ತ ತಿರುಗುಬಾಣ

ಪೊವಾರ್‌ನತ್ತ ತಿರುಗುಬಾಣ

ಆದರೆ ಪೊವಾರ್ ಆರೋಪಕ್ಕೆ ಮಿಥಾಲಿ ಮತ್ತೆ ತಿರುಗೇಟು ನೀಡಿದ್ದಾರೆ. 'ನಾನು ದೂರದಲ್ಲೆಲ್ಲೂ ಕುಳಿತಿದ್ದಾಗ ಇತರರು ಬ್ಯಾಟಿಂಗ್ ಮಾಡುತ್ತಿದ್ದರೆ ಅದನ್ನು ರಮೇಶ್ ನೋಡುತ್ತಿದ್ದರು. ಅದೇ ನಾನು ನೆಟ್‌ನಲ್ಲಿ ಬ್ಯಾಟಿಂಗ್ ಅಭ್ಯಾಸಕ್ಕೆ ನಿಂತಾಗ ಅಲ್ಲಿಂದ ಎದ್ದು ಹೋಗುತ್ತಿದ್ದರು. ಹೀಗ್ಯಾಕೆ ಮಾಡುತ್ತೀರಿ ಅಂತ ಕೇಳಲು ನಾನು ಅವರ ಬಳಿ ಹೋದಾಗಲೂ ಮೊಬೈಲ್ ದಿಟ್ಟಿಸುತ್ತ ಅಲ್ಲಿ ನಡೆಯುವ ಮೂಲಕ ನನ್ನನ್ನು ರಮೇಶ್ ಅವಮಾನಿಸುತ್ತಿದ್ದರು. ಆದರೂ ನಾನು ತಾಳ್ಮೆ ಕಳೆದುಕೊಂಡಿರಲಿಲ್ಲ' ಎಂದು ಮಿಥಾಲಿ ಹೇಳಿದ್ದಾರೆ.

Story first published: Thursday, November 29, 2018, 15:48 [IST]
Other articles published on Nov 29, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X