ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸೂರ್ಯಕುಮಾರ್ ಅನ್ನು ಇಷ್ಟು ಬೇಗ ಎಬಿಡಿಗೆ ಹೋಲಿಸಬೇಡಿ: ಸಲ್ಮಾನ್ ಬಟ್‌

ABD

ಟೀಂ ಇಂಡಿಯಾ ಸೆನ್ಷೇಷನ್ ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್‌ರನ್ನ ದಕ್ಷಿಣ ಆಫ್ರಿಕಾದ ಲೆಜೆಂಡ್ ಎಬಿ ಡಿವಿಲಿಯರ್ಸ್‌ಗೆ ಹೋಲಿಸಬೇಡಿ ಎಂದು ಪಾಕಿಸ್ತಾನದ ಮಾಜಿ ಆಟಗಾರ ಸಲ್ಮಾನ್ ಬಟ್ ಹೇಳಿದ್ದಾರೆ. ಆಸ್ಟ್ರೇಲಿಯಾದ ಚಾಂಪಿಯನ್‌, ವಿಶ್ವಕಪ್ ವಿಜೇತ ರಿಕಿ ಪಾಂಟಿಂಗ್ ಇತ್ತೀಚೆಗಷ್ಟೇ ಸೂರ್ಯಕುಮಾರ್‌ ಬ್ಯಾಟಿಂಗ್ ಶೈಲಿಯು ಎಬಿ ಡಿವಿಲಿಯರ್ಸ್‌ ಆಟವನ್ನ ನೆನಪಿಸುತ್ತದೆ ಎಂದು ಹೇಳಿಕೆ ನೀಡಿದ್ದರು.

ಸೂರ್ಯಕುಮಾರ್ ಮತ್ತು ಎಬಿಡಿ ನಡುವೆ ಹೋಲಿಕೆ ಸರಿಯಲ್ಲ ಎಂದಿರುವ ಸಲ್ಮಾನ್‌, ಮಾಜಿ ಆಟಗಾರ ಎಬಿಡಿ ಆಡಿರುವ ಅಪಾರ ಪ್ರಮಾಣದ ಕ್ರಿಕೆಟ್‌ ಅನುಭವದ ಮುಂದೆ, ಹೋಲಿಕೆ ಮಾಡುವುದು ಸಮಂಜಸವಲ್ಲ ಎಂದಿದ್ದಾರೆ. ರಿಕಿ ಪಾಂಟಿಂಗ್ ಹೇಳಿಕೆ ಬಳಿಕ ಪಾಕ್ ಮಾಜಿ ಆಟಗಾರ ಈ ಮಾತನ್ನ ತಿಳಿಸಿದ್ದಾರೆ. ಎಬಿಡಿ ಕಳೆದ ವರ್ಷ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಲ್ಲದೆ, 2022ರಲ್ಲಿ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ಗುಡ್‌ ಬೈ ಹೇಳಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಎಬಿ ಡಿವಿಲಿಯರ್ಸ್ ರೀತಿಯಲ್ಲಿ ಯಾರು ಆಡಿಲ್ಲ!

ಇತ್ತೀಚಿನ ವರ್ಷಗಳಲ್ಲಿ ಎಬಿ ಡಿವಿಲಿಯರ್ಸ್ ರೀತಿಯಲ್ಲಿ ಯಾರು ಆಡಿಲ್ಲ!

'' ಎಬಿ ಡಿವಿಲಿಯರ್ಸ್ ಆಡಿರುವ ರೀತಿಯನ್ನು ಗಮನಿಸಿದ್ರೆ, ನನಗೆ ಅನ್ನಿಸುತ್ತಿದೆ ಇತ್ತೀಚಿನ ವರ್ಷಗಳಲ್ಲಿ ಆತನ ರೀತಿಯಲ್ಲಿ ಯಾರೂ ಆಡಿಲ್ಲ. ಎದುರಾಳಿ ತಂಡದ ವಿರುದ್ಧ ಆತ ಬೀರುತ್ತಿದ್ದ ಪ್ರಭಾವ ಎಷ್ಟಿತ್ತೆಂದರೆ, ಆತನನ್ನು ಔಟ್ ಮಾಡದೇ ಇದ್ರೆ ಪಂದ್ಯವನ್ನ ಗೆಲ್ಲಲು ಸಾಧ್ಯವಿಲ್ಲ ಎಂದು ತಿಳಿದಿತ್ತು'' ಎಂದು ಸಲ್ಮಾನ್ ಬಟ್ ಹೇಳಿದ್ದಾರೆ.

'' ಜೋ ರೂಟ್, ಕೇನ್ ವಿಲಿಯಮ್ಸನ್, ಕೊಹ್ಲಿ ವಿಶ್ವದ ನಂಬರ್ 1 ಪ್ಲೇಯರ್ ಆಗಿದ್ದರು ಮತ್ತು ಅದ್ಭುತ ಶತಕಗಳನ್ನ ದಾಖಲಿಸಿದ್ದಾರೆ. ರೋಹಿತ್ ಶರ್ಮಾ ತನ್ನ ಅದ್ಭುತ ಫಾರ್ಮ್‌ನಲ್ಲಿ ಏಕದಿನ ಕ್ರಿಕೆಟ್‌ನಲ್ಲಿ 250ಕ್ಕೂ ಹೆಚ್ಚು ರನ್ ಕಲೆಹಾಕಿದ್ದಾರೆ. ರಿಕಿ ಪಾಂಟಿಂಗ್ ಹೋಲಿಕೆ ಮಾಡುವ ಮೂಲಕ ಆತುರ ಮಾಡಿದ್ದಾರೆ'' ಎಂದು ಸಲ್ಮಾನ್ ಬಟ್ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ತಿಳಿಸಿದ್ದಾರೆ.

ಒಂದಲ್ಲಾ ಎರಡಲ್ಲ ಮೂರು ಬಾರಿ ಈ ಬಾರಿಯ ಏಷ್ಯಾಕಪ್‌ನಲ್ಲಿ ಮುಖಾಮುಖಿಯಾಗಲಿವೆ ಭಾರತ ಮತ್ತು ಪಾಕ್!

ಸತ್ಯ ಏನಂದ್ರೆ ಎಬಿ ಡಿವಿಲಿಯರ್ಸ್ ರೀತಿಯಲ್ಲಿ ಯಾವೊಬ್ಬ ಆಟಗಾರ ಇಲ್ಲ!

ಸತ್ಯ ಏನಂದ್ರೆ ಎಬಿ ಡಿವಿಲಿಯರ್ಸ್ ರೀತಿಯಲ್ಲಿ ಯಾವೊಬ್ಬ ಆಟಗಾರ ಇಲ್ಲ!

ಎಬಿ ಡಿವಿಲಿಯರ್ಸ್ ಕುರಿತು ಮತ್ತಷ್ಟು ಮಾತನಾಡಿರುವ ಸಲ್ಮಾನ್ ಬಟ್‌, ಎಬಿ ಡಿವಲಿಯರ್ಸ್ ವಿಶಿಷ್ಟ ಬ್ಯಾಟಿಂಗ್ ಶೈಲಿಯನ್ನು ಯಾರಿಗೂ ಹೋಲಿಸಲು ಸಾಧ್ಯವಿಲ್ಲ. ಸದ್ಯ ಸೂರ್ಯಕುಮಾರ್‌ ಯಾದವ್ ದೊಡ್ಡ ಟೂರ್ನಮೆಂಟ್‌ಗಳಲ್ಲಿ ಭಾಗಿಯಾಗಿಲ್ಲ. ಮುಂಬರುವ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ ಆತನಿಗೆ ಮೊದಲ ದೊಡ್ಡ ಟೂರ್ನಿಯಾಗಿದೆ ಎಂದಿದ್ದಾರೆ.

'' ಆತ ಈಗಷ್ಟೇ ಅಂತರಾಷ್ಟ್ರೀಯ ಕ್ರಿಕೆಟ್ ಆಡುತ್ತಿದ್ದಾನೆ. ಆತ ಟ್ಯಾಲೆಂಟ್ ಹೊಂದಿರುವ ಆಟಗಾರನಾಗಿದ್ದು, ಉತ್ತಮ ಆಟವಾಡುತ್ತಿದ್ದಾರೆ. ಆದ್ರೆ ನೇರವಾಗಿ ಆತನನ್ನು ಎಬಿಡಿಗೆ ಹೋಲಿಕೆ ಮಾಡುವುದು ಸರಿಯೇ? ರಿಕಿ ಪಾಂಟಿಂಗ್ ಇನ್ನಷ್ಟು ಸಮಯ ಕಾಯಬೇಕಿತ್ತು. ಆತ ಈಗಷ್ಟೇ ದೊಡ್ಡ ಟೂರ್ನಿಗಳನ್ನ ಆಡಬೇಕಿದೆ. ಸತ್ಯ ಏನಂದ್ರೆ ಎಬಿ ಡಿವಿಲಿಯರ್ಸ್‌ ರೀತಿಯಲ್ಲಿ ಮತ್ತೊಬ್ಬ ಆಟಗಾರ ಇಲ್ಲ. ಆತನನ್ನು ಬೇಕಾದರೆ ವಿಂಡೀಸ್ ಲೆಜೆಂಡ್ ವಿವ್ ರಿಚರ್ಡ್ಸ್‌ ಜೊತೆಗೆ ಹೋಲಿಕೆ ಮಾಡಬಹುದು'' ಎಂದು ಸಲ್ಮಾನ್ ಬಟ್ ತಿಳಿಸಿದ್ದಾರೆ.

ವಿರಾಟ್‌ ಕೊಹ್ಲಿಯ ಫೇವರಿಟ್ ಮೂರನೇ ಕ್ರಮಾಂಕದ ಮೇಲೆ ಈ ಮೂವರ ಕಣ್ಣು!

ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 20,000 ರನ್

ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 20,000 ರನ್

ಎಬಿಡಿಯ ರೆಕಾರ್ಡ್‌ಗಳ ಕುರಿತು ಮಾತನಾಡುವುದಾದರೆ, ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಎಬಿಡಿ 47 ಶತಕಗಳು, 109 ಅರ್ಧಶತಕಗಳನ್ನ ಒಳಗೊಂಡಂತೆ 20,000 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಒಟ್ಟಾರೆ ಟಿ 20, ಲಿಸ್ಟ್-ಎ ಕ್ರಿಕೆಟ್ ಮತ್ತು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಅವರ ದಾಖಲೆ ಕೂಡ ದಿಗ್ಭ್ರಮೆಗೊಳಿಸುವಂತಿದೆ.

2004ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮೊದಲ ಹೆಜ್ಜೆಯಿಟ್ಟ ಎಬಿ ಡಿವಿಲಿಯರ್ಸ್ ದಕ್ಷಿಣ ಆಫ್ರಿಕಾದ ಪ್ರಮುಖ ಆಟಗಾರನಾಗಲು ಹೆಚ್ಚು ಸಮಯ ತೆಗೆದುಕೊಳ್ಳಲಿಲ್ಲ. ಟೆಸ್ಟ್ ಪಂದ್ಯಗಳಿರಲಿ, ಅಥವಾ ವೈಟ್‌ ಬಾಲ್ ಕ್ರಿಕೆಟ್‌ ಆಗಿರಲಿ ಎದುರಾಳಿ ಬೌಲರ್‌ಗಳನ್ನ ಪೀಡಿಸುವಲ್ಲಿ ನಿಸ್ಸೀಮನಾಗಿದ್ದರು. ಅದ್ರಲ್ಲೂ ಹರಿಣಗಳ ಅನೇಕ ಪಂದ್ಯಗಳ ಗೆಲುವಿನಲ್ಲಿ ಎಬಿಡಿ ಪಾತ್ರ ಬಹಳ ದೊಡ್ಡದು.

ನಾನು ಬೆಂಕಿ ಅಂತಾ Ishan Kishan BCCI ಗೆ ಬಿಸಿ‌ ಮುಟ್ಟಿಸಿದ್ದು ಯಾಕೆ? |*Cricket | OneIndia Kannada
ಎಬಿ ಡಿವಿಲಿಯರ್ಸ್‌ನ 10 ವಿಶೇಷ ದಾಖಲೆಗಳು

ಎಬಿ ಡಿವಿಲಿಯರ್ಸ್‌ನ 10 ವಿಶೇಷ ದಾಖಲೆಗಳು

1. ಎಬಿ ಡಿವಿಲಿಯರ್ಸ್ ಏಕದಿನ ಕ್ರಿಕೆಟ್‌ನಲ್ಲಿ ಅತಿ ವೇಗದ 50, 100 ಮತ್ತು 150 ರನ್‌ಗಳನ್ನು ಕ್ರಮವಾಗಿ 16, 31 ಮತ್ತು 64 ಎಸೆತಗಳಲ್ಲಿ ತಲುಪುವ ಸಾಧನೆ ಮಾಡಿದ್ದಾರೆ.

2. 50 ಓವರ್‌ಗಳ ವಿಶ್ವಕಪ್‌ನಲ್ಲಿ ಡಿವಿಲಿಯರ್ಸ್ ಬ್ಯಾಟಿಂಗ್ ಸರಾಸರಿ 63.52 ರಷ್ಟಿದ್ದು, ಕನಿಷ್ಠ 20 ಪಂದ್ಯಗಳನ್ನು ಆಡಿದ ಬ್ಯಾಟರ್‌ಗಳಲ್ಲಿ ಇವರದ್ದೇ ಹೆಚ್ಚು.

3. ಡಿವಿಲಿಯರ್ಸ್ ಅವರ 20,014 ರ ಅಂತರರಾಷ್ಟ್ರೀಯ ರನ್‌ಗಳು ಯಾವುದೇ ದಕ್ಷಿಣ ಆಫ್ರಿಕಾದ ಆಟಗಾರನ ಎರಡನೇ ಅತಿ ಹೆಚ್ಚು ರನ್ ಆಗಿದೆ. ಜಾಕ್ವೆಸ್ ಕಾಲಿಸ್ 25,534 ರನ್ ಗಳಿಸಿ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

4. ಸತತ ಮೂರು ಏಕದಿನ ಶತಕಗಳನ್ನು ಸಿಡಿಸಿದ ಒಂಬತ್ತು ಬ್ಯಾಟ್ಸ್‌ಮನ್‌ಗಳಲ್ಲಿ ಮಾಜಿ ದಕ್ಷಿಣ ಆಫ್ರಿಕ ನಾಯಕ ಕೂಡ ಒಬ್ಬರು.

5. ಡಿವಿಲಿಯರ್ಸ್ ಟೆಸ್ಟ್ ಪಂದ್ಯವೊಂದರಲ್ಲಿ ವಿಕೆಟ್ ಕೀಪರ್ ಆಗಿ ವಿಕೆಟ್ ಹಿಂಬದಿ 11 ಔಟ್‌ ಮಾಡಿದ್ದಾರೆ. ಇದು ರಿಷಭ್ ಪಂತ್, ಜಾಕ್ ರಸೆಲ್ ಜಂಟಿಯಾದ ದಾಖಲೆಯನ್ನು ಹಂಚಿಕೊಂಡಿದ್ದರೆ.

6. ಡಿವಿಲಿಯರ್ಸ್ ಟೆಸ್ಟ್ ಕ್ರಿಕೆಟ್‌ನಲ್ಲಿ ತಮ್ಮ ಮೊದಲ ಡಕ್ ಆಗುವ ಮೊದಲು ಹೆಚ್ಚಿನ ಇನ್ನಿಂಗ್ಸ್‌ಗಳನ್ನು ಆಡಿದ್ದಾರೆ.

7. ಎಬಿಡಿ ಸತತ 12 ಟೆಸ್ಟ್ ಪಂದ್ಯಗಳಲ್ಲಿ ಅರ್ಧಶತಕ ಸಿಡಿಸಿದ್ದಾರೆ. ಜೋ ರೂಟ್ ಮಾತ್ರ ಟೆಸ್ಟ್‌ನಲ್ಲಿ ಇನ್ನೂ ಹೆಚ್ಚಿನ ಅರ್ಧಶತಕಗಳನ್ನು ದಾಖಲಿಸಿದ್ದಾರೆ.

8. ಎಬಿ ಡಿವಿಲಿಯರ್ಸ್‌ ಏಕದಿನ ಇನ್ನಿಂಗ್ಸ್‌ನಲ್ಲಿ ಎರಡನೇ ಅತಿ ಹೆಚ್ಚು ಸಿಕ್ಸರ್‌ಗಳನ್ನು (16) ಬಾರಿಸಿದ ದಾಖಲೆಯನ್ನು ಹೊಂದಿದ್ದಾರೆ. ಅವರು ಕ್ರಿಸ್ ಗೇಲ್ ಮತ್ತು ರೋಹಿತ್ ಶರ್ಮಾ ಅವರೊಂದಿಗೆ ಈ ಸಾಧನೆಯನ್ನು ಹಂಚಿಕೊಂಡಿದ್ದಾರೆ.

9. ಡಿವಿಲಿಯರ್ಸ್ ಐಪಿಎಲ್‌ನಲ್ಲಿ 251 ಸಿಕ್ಸರ್‌ಗಳನ್ನ ಸಿಡಿಸಿದ್ದು, ಐಪಿಎಲ್ ಇತಿಹಾಸದಲ್ಲಿ ಯಾವುದೇ ಬ್ಯಾಟರ್‌ನಿಂದ ಎರಡನೇ ಅತಿ ಹೆಚ್ಚು ಸಿಕ್ಸರ್ ಆಗಿದೆ.

10. ಎಬಿ ಡಿವಿಲಿಯರ್ಸ್ ಅವರು ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ 25 ಪಂದ್ಯಗಳಲ್ಲಿ ಪಂದ್ಯ ಪುರುಷೋತ್ತಮ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಇದು ಐಪಿಎಲ್‌ನಲ್ಲಿ ಅತಿ ಹೆಚ್ಚಿನ ದಾಖಲೆಯಾಗಿದೆ.

Story first published: Wednesday, August 17, 2022, 12:04 [IST]
Other articles published on Aug 17, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X