ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಏಕದಿನ ಕ್ರಿಕೆಟ್‌ ವಿಶ್ವಕಪ್‌ ಗೆಲ್ಲದೇ ಹೋದ ದಿಗ್ಗಜ ತಾರೆಗಳು ಇವರು!

The Greatest players who never won a Cricket World Cup

ಬೆಂಗಳೂರು, ಮೇ 30: ವಿಶ್ವಕಪ್‌ನಲ್ಲಿ ಆಡುವುದೇ ಬಹುತೇಕ ಆಟಗಾರರ ಬಹುದೊಡ್ಡ ಕನಸಾಗಿರುತ್ತದೆ. ಇನ್ನು ವಿಶ್ವಕಪ್‌ ಗೆಲ್ಲುವುದು ಪ್ರತಿಯೊಬ್ಬ ಕ್ರಿಕೆಟಿಗನಿಗೆ ಸಾರ್ಥಕತೆಯನ್ನೇ ತಂದುಕೊಡುತ್ತದೆ.

ವಿಶ್ವಕಪ್‌ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು

ಅಂದಹಾಗೆ ಈವರೆಗೆ ನಡೆದಿರುವ ಒಟ್ಟು 11 ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಗಳಲ್ಲಿ ಆಸ್ಟ್ರೇಲಿಯಾ ತಂಡ ಐದು ಬಾರಿ ಚಾಂಪಿಯನ್ಸ್‌ ಪಟ್ಟ ಪಡೆದಿದ್ದು, ಉಳಿದೆಲ್ಲಾ ತಂಡಗಳಿಗೆ ಹೋಲಿಸಿದರೆ ಕಾಂಗರೂ ನಾಡಿನ ಕ್ರಿಕೆಟಿಗರಿಗೆ ವಿಶ್ವಕಪ್‌ ಗೆದ್ದ ಸಂಭ್ರಮ ಹೆಚ್ಚು. ಅಂದಹಾಗೆ ವೆಸ್ಟ್‌ ಇಂಡೀಸ್‌ ಮತ್ತು ಭಾರತ ತಂಡಗಳು ತಲಾ ಎರಡು ಬಾರಿ ಈ ಸಾಧನೆ ಮೆರೆದರೆ, ಪಾಕಿಸ್ತಾನ ಮತ್ತು ಶ್ರೀಲಂಕಾ ತಂಡಗಳು ತಲಾ ಒಂದು ಬಾರಿ ಟ್ರೋಫಿ ಎತ್ತಿ ಹಿಡಿದಿವೆ.

ಏಕದಿನ ವಿಶ್ವಕಪ್‌ನಲ್ಲಿ ಎರಡು ತಂಡಗಳನ್ನು ಪ್ರತಿನಿಧಿಸಿದ ಆಟಗಾರರಿವರು!ಏಕದಿನ ವಿಶ್ವಕಪ್‌ನಲ್ಲಿ ಎರಡು ತಂಡಗಳನ್ನು ಪ್ರತಿನಿಧಿಸಿದ ಆಟಗಾರರಿವರು!

ಆದರೂ, ಕ್ರಿಕೆಟ್‌ ಜಗತ್ತಿನಲ್ಲಿ ಅಬ್ಬರಿಸಿದ ಹಲವು ದಿಗ್ಗಜರಿಗೆ ವಿಶ್ವಕಪ್‌ ಗೆಲ್ಲುವ ಸೌಭಾಗ್ಯ ಒಲಿದಿಲ್ಲ ಎಂಬುದು ವಿಪರ್ಯಾಸದ ಸಂಗತಿ. ಭಾರತದ ಬ್ಯಾಟಿಂಗ್‌ ಮಾಂತ್ರಿಕ ಸಚಿನ್‌ ತೆಂಡೂಲ್ಕರ್‌ ವಿಶ್ವಕಪ್‌ ಗೆಲುವಿಗಾಗಿ 1992ರಿಂದ 6 ಟೂರ್ನಿಗಳಲ್ಲಿ ನಡೆಸಿದ ತಪ್ಪಸಿಗೆ ಕೊನೆಗೂ 2011ರಲ್ಲಿ ವರ ಸಿಕ್ಕಿತು. ಆದರೆ, ಸಚಿನ್‌ ಸಮಕಾಲೀನರಲ್ಲಿನ ಬಹುತೇಕ ದಿಗ್ಗಜರಿಗೆ ಈ ಸೌಭಾಗ್ಯ ಇಲ್ಲವಾಯಿತು.

ಅಂದಹಾಗೆ ವಿಶ್ವಕಪ್‌ ಗೆಲ್ಲದೇ ಹೋದ ಕ್ರಿಕೆಟ್‌ ಜಗತ್ತಿನ ದೈತ್ಯ ಪ್ರತಿಭೆಗಳ ವಿವರ ಇಲ್ಲಿದೆ.

ಸೌರವ್‌ ಗಂಗೂಲಿ (ಭಾರತ): 1999, 2003, 2007

ಸೌರವ್‌ ಗಂಗೂಲಿ (ಭಾರತ): 1999, 2003, 2007

ಪಂದ್ಯ 21, ರನ್‌ 1006, ಸರಾಸರಿ 55.88

ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಸೌರವ್‌ ಗಂಗೂಲಿ, 2003ರಲ್ಲಿ ತಮ್ಮ ಸಾರಥ್ಯದಲ್ಲಿ ಭಾರತ ತಂಡವನ್ನು ಫೈನಲ್‌ಗೆ ಕೊಂಡೊಯ್ದಿದ್ದರು. ಆದರೆ ಪ್ರಶಸ್ತಿಗಾಗಿ ನಡೆದ ಕಾಳಗದಲ್ಲಿ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ಭಾರತ ಸೋಲುಂಡ ಪರಿಣಾಮ ದಾದಾ ಖ್ಯಾತಿಯ ಗಂಗೂಲಿ ಅವರ ವಿಶ್ವಕಪ್‌ ಗೆಲುವಿನ ಕನಸು ನನಸಾಗಲಿಲ್ಲ.

ಗ್ರಹಾಮ್‌ ಗೂಚ್‌ (ಇಂಗ್ಲೆಂಡ್‌): 1979, 1987, 1992
ಪಂದ್ಯ 21, ರನ್‌ 897, ಸರಾಸರಿ 44.85

ಗ್ರಹಾಮ್‌ ಗೂಚ್‌ ಇಂಗ್ಲೆಂಡ್‌ ಪರ ಮೂರು ವಿಶ್ವಕಪ್‌ಗಳಲ್ಲಿ ಆಡಿದರೂ ಟ್ರೋಫಿ ಗೆಲ್ಲುವ ಕನಸು ಮಾತ್ರ ಸಾಕಾರವಾಗಲಿಲ್ಲ. 1992ರಲ್ಲಿ ಇಂಗ್ಲೆಂಡ್ ತಂಡದ ನಾಯಕತ್ವ ವಹಿಸಿದ್ದರಾದರೂ, ತಂಡ ಯಶಸ್ಸು ಕಾಣಲಿಲ್ಲ.

ಬ್ರಿಯಾನ್‌ ಲಾರಾ (ವೆಸ್ಟ್‌ ಇಂಡೀಸ್‌): 1992, 1996, 1999, 2003, 2007

ಬ್ರಿಯಾನ್‌ ಲಾರಾ (ವೆಸ್ಟ್‌ ಇಂಡೀಸ್‌): 1992, 1996, 1999, 2003, 2007

ಪಂದ್ಯ 34, ರನ್‌ 1225, ಸರಾಸರಿ 42.24
ಕ್ರಿಕೆಟ್‌ ಜಗತ್ತಿನ ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳ ಸಾಲಿನಲ್ಲಿ ಅಗ್ರಪಂಕ್ತಿಯಲ್ಲಿ ಕಾಣಿಸಿಕೊಳ್ಳುವ ಬ್ಯಾಟ್ಸ್‌ಮನ್‌ ವೆಸ್ಟ್‌ ಇಂಡೀಸ್‌ನ ಬ್ರಿಯಾನ್‌ ಲಾರಾ. ಲಾರಾ, 1992ರಿಂದ 2007ರವರೆಗೆ ಒಟ್ಟು 5 ವಿಶ್ವಕಪ್‌ ಟೂರ್ನಿಗಳನ್ನು ಆಡಿದರಾದರೂ ವೆಸ್ಟ್‌ ಇಂಡೀಸ್‌ಗೆ 3ನೇ ವಿಶ್ವಕಪ್‌ ಗೆದ್ದುಕೊಡಲು ಅವರಿಂದ ಸಾಧ್ಯವಾಗಲಿಲ್ಲ. 1996ರಲ್ಲಿ ಸೆಮಿಫೈನಲ್ಸ್‌ನಲ್ಲಿ ತಲುಪಿದ್ದು ಅವರ ಶ್ರೇಷ್ಠ ಸಾಧನೆ.

ಮಾರ್ಟಿನ್‌ ಕ್ರೋವ್‌ (ನ್ಯೂಜಿಲೆಂಡ್‌): 1983, 1987, 1992
ಪಂದ್ಯ 21, ರನ್‌ 880, ಸರಾಸರಿ 55.00

ನ್ಯೂಜಿಲೆಂಡ್‌ ತಂಡದ ಎವರ್‌ಗ್ರೀನ್‌ ಬ್ಯಾಟ್ಸ್‌ಮನ್‌ ಮಾರ್ಟಿನ್‌ ಕ್ರೋವ್‌, 1992ರಲ್ಲಿ ಅತಿ ಹೆಚ್ಚು ರನ್‌ಗಳಿಸಿದ ಬ್ಯಾಟ್ಸ್‌ಮನ್‌ ಆದರೂ ಸಹ ತಂಡ ವಿಶ್ವಕಪ್‌ ಗೆಲ್ಲಲಿಲ್ಲ. ಏಕದಿನ ಕ್ರಿಕೆಟ್‌ನಲ್ಲಿ ಆರಂಭಿಕ ಓವರ್‌ಗಳಲ್ಲೇ ಬಿರುಸಿನ ಬ್ಯಾಟಿಂಗ್‌ ಪರಿಚಯಿಸಿದ ಖ್ಯಾತಿ ಕ್ರೋವ್‌ ಅವರದ್ದು. ಆದರೆ, ಮೂರು ವಿಶ್ವಕಪ್‌ಗಳನ್ನು ಆಡಿದರೂ ಅವರಿಂದ ಕಿವೀಸ್‌ ಪಡೆಗೆ ವಿಶ್ವಕಪ್‌ ಗೆದ್ದುಕೊಡಲು ಸಾಧ್ಯವಾಗಲಿಲ್ಲ.

ಎಬಿ ಡಿ'ವಿಲಿಯರ್ಸ್‌ (ದಕ್ಷಿಣ ಆಫ್ರಿಕಾ): 2007, 2011, 2015

ಎಬಿ ಡಿ'ವಿಲಿಯರ್ಸ್‌ (ದಕ್ಷಿಣ ಆಫ್ರಿಕಾ): 2007, 2011, 2015

ಪಂದ್ಯ 23, ರನ್‌ 1207, ಸರಾಸರಿ 63.52
ಮಿಸ್ಟರ್‌ 360 ಖ್ಯಾತಿಯ ದಕಷ್ಷಿಣ ಆಫ್ರಿಕಾದ ಸ್ಟಾರ್‌ ಬ್ಯಾಟ್ಸ್‌ಮನ್‌ ಎಬಿ ಡಿ'ವಿಲಿಯರ್ಸ್‌ ಅವರಿಂದಲೂ ವಿಶ್ವಕಪ್‌ ಗೆಲ್ಲಲು ಸಾಧ್ಯವಾಗಲಿಲ್ಲ. 2015ರಲ್ಲಿ ತಮ್ಮ ನಾಯಕತ್ವದಲ್ಲಿ ಹರಿಣ ಪಡೆಯನ್ನು ಸೆಮಿಫೈನಲ್ಸ್‌ಗೆ ಕರೆದೊಯ್ದಿದ್ದರಾದರೂ, ನ್ಯೂಜಿಲೆಂಡ್‌ ಎದುರು ತಂಡ ಸೋಲುಂಡಿತ್ತು.

ಜಾಕ್‌ ಕಾಲಿಸ್‌ (ದಕ್ಷಿಣ ಆಫ್ರಿಕಾ): 1996, 1999, 2003, 2007, 2011
ಪಂದ್ಯ 36, ರನ್‌ 1148, ಸರಾಸರಿ 45.92, ವಿಕೆಟ್‌ 21

ವಿಶ್ವ ಶ್ರೇಷ್ಠ ಆಲ್‌ರೌಂಡರ್‌ ದಕ್ಷಿಣ ಆಫ್ರಿಕಾದ ಜಾಕ್‌ ಕಾಲಿಸ್‌ ಅವರಿಗೂ ವಿಶ್ವಕಪ್‌ ಎತ್ತಿ ಹಿಡಿಯುವ ಸೌಭಾಗ್ಯ ಒಲಿಯಲಿಲ್ಲ. 1999 ಮತ್ತು 2007ರಲ್ಲಿ ಸೆಮಿಫೈನಲ್ಸ್‌ ತಲುಪಿರುವುದು ಅವರ ಶ್ರೇಷ್ಠ ಸಾಧನೆಯಾಗಿದೆ.

ಕುಮಾರ ಸಂಗಕ್ಕಾರ (ಶ್ರೀಲಂಕಾ): 2003, 2007, 2011, 2015

ಕುಮಾರ ಸಂಗಕ್ಕಾರ (ಶ್ರೀಲಂಕಾ): 2003, 2007, 2011, 2015

ಪಂದ್ಯ 37, ರನ್‌ 1532, ಸರಾಸರಿ 56.74
ಶ್ರೀಲಂಕಾ ತಂಡದ ಮಾಜಿ ವಿಕೆಟ್‌ಕೀಪರ್‌ ಬ್ಯಾಟ್ಸ್‌ಮನ್‌ ಕುಮಾರ ಸಂಗಕ್ಕಾರ 2007 ಮತ್ತು 2011ರ ವಿಶ್ವಕಪ್‌ ಫೈನಲ್‌ಗಳಲ್ಲಿಆಡಿದರೂ ಟ್ರೋಫಿ ಮಾತ್ರ ಕೈಗೆ ಸಿಗದ ಮರಿಚಿಕೆಯಾಯಿತು.

ಇಯಾನ್‌ ಬಾತಮ್‌ (ಇಂಗ್ಲೆಂಡ್‌): 1979, 1983, 1992
ಪಂದ್ಯ 22, ರನ್‌ 297, ಸರಾಸರಿ 53, ವಿಕೆಟ್‌ 30

ಇಯಾನ್‌ ಬಾಥಮ್‌ 1979 ಮತ್ತು 1992ರ ವಿಶ್ವಕಪ್ ಫೈನಲ್‌ನಲ್ಲಿ ಆಡಿದರೂ ಟ್ರೋಫಿ ಗೆಲ್ಲುವ ಅದೃಷ್ಟ ಅವರಿಗೆ ಒಲಿಯಲಿಲ್ಲ.

ಅನಿಲ್‌ ಕುಂಬ್ಳೆ (ಭಾರತ): 1996, 1999, 2003, 2007

ಅನಿಲ್‌ ಕುಂಬ್ಳೆ (ಭಾರತ): 1996, 1999, 2003, 2007

ಪಂದ್ಯ 18, ವಿಕೆಟ್‌ 31, ಸರಾಸರಿ 22.83

1996ರ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ವಿಕೆಟ್‌ ಪಡೆದ ಬೌಲರ್‌ ಭಾರತದ ಅನಿಲ್‌ ಕುಂಬ್ಳೆ. ಆದರೆ ತಂಡಸೆಮಿಫೈನಲ್ಸ್‌ನಲ್ಲಿ ಶ್ರೀಲಂಕಾ ವಿರುದ್ಧ ಸೋಲುಂಡಿತ್ತು. ಇನ್ನು 2003ರ ಫೈನಲ್‌ನಲ್ಲಿ ಕುಂಬ್ಳೆ ಆಡುವ 11ರಿಂದ ಹೊರಗುಳಿದಿದ್ದರು.

ಸಕ್ಲೇನ್‌ ಮುಷ್ತಾಕ್‌ (ಪಾಕಿಸ್ತಾನ): 1996, 1999, 2003
ಪಂದ್ಯ 14, ವಿಕೆಟ್‌ 23, ಸರಾಸರಿ 21.47

ಆಫ್‌ಸ್ಪಿನ್ನರ್‌ ಅಕ್ಲೇನ್‌ ಮುಷ್ತಾಕ್‌ ಪಾಕಿಸ್ತಾನ ತಂಡದ ಪರ ಮೂರು ವಿಶ್ವಕಪ್‌ಗಳಲ್ಲಿ ಆಡಿದ್ದಾರೆ. ಆದರೆ, ಅವರಿಗೆ ಸ್ಮರಣೀಯ ಟೂರ್ನಿ 1999ರದ್ದು. ತಂಡ ಫೈನಲ್‌ನಲ್ಲಿ ಸೋತರೂ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್‌ ಪಡೆದ ಸ್ಪಿನ್ನರ್‌ ಎನಿಸಿದ್ದರು.

Story first published: Thursday, May 30, 2019, 21:42 [IST]
Other articles published on May 30, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X