ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪಾಕ್‌ ಅಭಿಮಾನಿಗೆ 2011ರಿಂದಲೂ ವಿಶ್ವಕಪ್ ಟಿಕೆಟ್ ಕೊಡಿಸುತ್ತಿದ್ದಾರೆ ಧೋನಿ!

ICC World Cup 2019 : ಧೋನಿ ಮಾಡಿದ್ದು ನೋಡಿ ಅಚ್ಚರಿ ಪಡುತ್ತಿದೆ ಕ್ರಿಕೆಟ್ ಜಗತ್ತು..? | Oneindia Kannada
The Pakistan-born fan who gets match tickets from Dhoni, since 2011

ನವದೆಹಲಿ, ಜೂನ್ 14: ಮೊಹಾಲಿ ಸ್ಟೇಡಿಯಂನಲ್ಲಿ 2011ರಲ್ಲಿ ವಿಶ್ವಕಪ್ ಸೆಮಿಫೈನಲ್‌ಗಾಗಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಿದ್ದವು. ಆಗ ಹೇಗೋ ಕೂಲ್ ಕ್ಯಾಪ್ಟನ್ ಎಂಎಸ್ ಗೆ ಕರಾಚಿಯಲ್ಲಿ ಜನಿಸಿದ ಚಿಕಾಗೋ ನಿವಾಸಿ ಮೊಹಮ್ಮದ್ ಬಶೀರ್ ಅವರ ಪರಿಚಯವಾಗಿತ್ತು. ಅಲ್ಲಿಂದ ಇಲ್ಲೀವರೆಗೂ ಇಬ್ಬರ ಬಾಂಧವ್ಯ ಬಂಧ ಗಟ್ಟಿಯಾಗುತ್ತಲೇ ಸಾಗಿದೆ.

ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ

ವಿಶೇಷವೆಂದರೆ 'ಚಾಚಾ ಚಿಕಾಗೋ' ಎಂದು ಕರೆಯಲ್ಪಡುವ ಈ ಅಜ್ಜನಿಗೆ ಪರಿಚಯವಾದಾಗಿನಿಂದಲೂ ಧೋನಿ, ಭಾರತ vs ಪಾಕಿಸ್ತಾನ ಪಂದ್ಯಗಳ ವಿಶ್ವಕಪ್ ಟಿಕೆಟ್ ಕೊಡಿಸುತ್ತಾ ಬಂದಿದ್ದಾರೆ. ಈ ಬಾರಿಯೂ ಭಾರತ-ಪಾಕ್ ಪಂದ್ಯ ವೀಕ್ಷಿಸಲು ಓಲ್ಡ್ ಟ್ರಾಫರ್ಡ್ ಸ್ಟೇಡಿಯಂಗೆ ಬಂದಿದ್ದ ಬಶೀರ್ ಮಾತಿಗೆ ಸಿಕ್ಕರು.

ನಟಸಾರ್ವಭೌಮ ನಟಿಯೊಂದಿಗೆ ಬುಮ್ರಾ ಡೇಟಿಂಗ್‌ ಮಾಡ್ತಿದ್ದಾರಂತೆ!ನಟಸಾರ್ವಭೌಮ ನಟಿಯೊಂದಿಗೆ ಬುಮ್ರಾ ಡೇಟಿಂಗ್‌ ಮಾಡ್ತಿದ್ದಾರಂತೆ!

'ನೆನ್ನೆತಾನೆ (ಜೂನ್ 13) ಇಲ್ಲಿಗೆ ತಲುಪಿದೆ. 800-900 ಪೌಂಡ್ (ಸುಮಾರು 70, 80 ಸಾವಿರ ರೂ.) ಕೊಟ್ಟು ಒಂದು ಟಿಕೆಟ್ ಖರೀದಿಸಲು ಇಲ್ಲಿ ಸಾಕಷ್ಟು ಮಂದಿ ತಯಾರಿದ್ದಾರೆ. ನನಗೆ ಚಿಕಾಗೋಗೆ ವಾಪಸ್ಸಾಗಲು ಟಿಕೆಟಿನ ದರವೂ ಸರಿ ಸುಮಾರು ಇಷ್ಟೇನೆ. ಆದರೆ ಟಿಕೆಟ್‌ಗಾಗಿ ನಾನು ಪರದಾಡುವಂತಿಲ್ಲ. ಧೋನಿಗೆ ನನ್ನ ಧನ್ಯವಾದಗಳು' ಎಂದು ಪಿಟಿಐ ಜೊತೆ ಮಾತನಾಡುತ್ತಾ ಬಶೀರ್ ಹೇಳಿದರು.

The Pakistan-born fan who gets match tickets from Dhoni, since 2011

'ಧೋನಿ ತುಂಬಾ ಬ್ಯುಸಿ ಇರೋದ್ರಿಂದ ನಾನು ಅವರಿಗೆ ಕರೆ ಮಾಡೋದಿಲ್ಲ. ಆದ್ರೆ ಟೆಕ್ಸ್ಟ್ ಮೆಸೇಜ್ ಮೂಲಕ ಸಂಪರ್ಕದಲ್ಲಿದ್ದೇನೆ. ಧೋನಿ ನನಗೆ ಈ ಬಾರಿಯೂ ಟಿಕೆಟ್ ಒದಗಿಸುವ ಭರವಸೆ ನೀಡಿದ್ದಾರೆ. ಧೋನಿಯೊಬ್ಬ ಶ್ರೇಷ್ಠ ವ್ಯಕ್ತಿತ್ವವುಳ್ಳವರು' ಎಂದು ಬಶೀರ್ ಖುಷಿ ಹಂಚಿಕೊಂಡರು.

ನಮ್ಮ ಜೊತೆ ಕ್ರಿಕೆಟ್ ಆಡಿ ಅಂತ ನಾವು ಭಾರತವನ್ನು ಬೇಡಲ್ಲ: ಪಾಕ್ನಮ್ಮ ಜೊತೆ ಕ್ರಿಕೆಟ್ ಆಡಿ ಅಂತ ನಾವು ಭಾರತವನ್ನು ಬೇಡಲ್ಲ: ಪಾಕ್

ಚಿಕಾಗೋದಲ್ಲಿ ಸ್ವಂತ ರೆಸ್ಟೋರೆಂಟ್ ಇಟ್ಟುಕೊಂಡಿರುವ ಚಾಚಾ ಚಿಕಾಗೋಗೆ ಈಗ 63ರ ಹರೆಯ. ಅವರ ಬಳಿ ಅಮೆರಿಕಾ ಪಾಸ್‌ಪೋರ್ಟ್‌ ಕೂಡ ಇದೆ. ಇತ್ತಂಡಗಳ ಪಂದ್ಯಗಳ ವೇಳೆ ಭಾರತ-ಪಾಕಿಸ್ತಾನ ರಾಷ್ಟ್ರ ಧ್ವಜಗಳನ್ನು ಒಂದಕ್ಕೊಂದು ಅಂಟಿಸಿ ಎರಡೂ ದೇಶಗಳ ನಡುವೆ ಸಾಮರಸ್ಯದ ಸಂದೇಶ ಸಾರುತ್ತ ನಿಂತಿರುವ ಬಶೀರ್ ಕಂಡರೆ ಧೋನಿಗೂ ಪ್ರೀತಿ.

Story first published: Friday, June 14, 2019, 18:17 [IST]
Other articles published on Jun 14, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X