ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್‌ನಲ್ಲಿ ಆಟಗಾರರ ಹರಾಜು ಯೋಚನೆ ಹೇಗೆ ಬಂದಿತ್ತು? : ಕುತೂಹಲಕಾರಿ ಸಂಗತಿ ಬಿಚ್ಚಿಟ್ಟ ಮಾಜಿ ಸಿಒಒ

The Story Behind Ipl Auction-Sundar Raman

ಕ್ರಿಕೆಟ್‌ನಲ್ಲಿ ಐಪಿಎಲ್ ಟೂರ್ನಮೆಂಟ್ ಅತಿ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡಿದೆ. ಆದರೆ ಮೊದಲ ಐಪಿಎಲ್ ಆವೃತ್ತಿಗೆ ಮುನ್ನ ಇದರ ಪ್ರಕ್ರಿಯೆ ಹೇಗಿರಬೇಲು ಎಂಬುದರ ಬಗ್ಗೆ ಸಹಜವಾಗಿಯೇ ದೊಡ್ಡ ದೊಡ್ಡ ಚರ್ಚೆಗಳು ಟೂರ್ನಿ ಆಯೋಜಕರ ಮಧ್ಯೆ ನಡೆದಿರುತ್ತದೆ. ಅದರಲ್ಲಿ ಮಹತ್ವದ ವಿಚಾರವೆಂದರೆ ಆಟಗಾರರ ವಿಂಗಡಣೆ ಹೇಗೆ ಎಂಬುದು.

ಆಟಗಾರರನ್ನು ಬೇರೆ ಬೇರೆ ಫ್ರಾಂಚೈಸಿಗಳಿಗೆ ಯಾವ ರೀತಿ ವಿಂಗಡಣೆ ಮಾಡಬಹುದು ಎಂಬ ಪ್ರಶ್ನೆಗೆ ಯಾರಿಗೂ ನಿಖರ ಉತ್ತರ ಸಿಕ್ಕಿರಲಿಲ್ಲ. ಹೀಗಾಗಿ ನೂರಾರು ಸಾಧ್ಯತೆಗಳನ್ನು ಮುಂದಿಟ್ಟುಕೊಂಡು ಚರ್ಚೆಯನ್ನು ನಡೆಸುತ್ತಿದ್ದರಂತೆ. ಈ ಬಗ್ಗೆ ಐಪಿಎಲ್‌ನ ಮಾಜಿ ಮುಖ್ಯ ಕಾರ್ಯಾಚರಣಾ ಅಧಿಕಾರಿ ಸುಂದರ್ ರಾಮನ್ ಕುತೂಹಲಕಾರಿ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ.

ಕೆರಿಬಿಯನ್ ಪ್ರೀಮಿಯರ್ ಲೀಗ್ ಆಟಗಾರರ ಪಟ್ಟಿಯಲ್ಲಿ ಇಬ್ಬರು ಭಾರತೀಯರು!ಕೆರಿಬಿಯನ್ ಪ್ರೀಮಿಯರ್ ಲೀಗ್ ಆಟಗಾರರ ಪಟ್ಟಿಯಲ್ಲಿ ಇಬ್ಬರು ಭಾರತೀಯರು!

ಫ್ರಾಂಚೈಸಿ ಮಾರಾಟ ನಡೆದಿತ್ತು

ಫ್ರಾಂಚೈಸಿ ಮಾರಾಟ ನಡೆದಿತ್ತು

ಐಪಿಎಲ್‌ನಲ್ಲಿ ಎಷ್ಟು ತಂಡಗಳು ಇರಬೇಕು ಯಾವೆಲ್ಲಾ ನಗರಗಳ ತಂಡಗಳನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ಮೊದಲೇ ನಿರ್ಧರಿಸಿಯಾಗಿತ್ತು. ಆಟಗಾರರ ವಿಂಗಡಣೆಗೂ ಮುನ್ನವೇ ತಂಡಗಳ ಫ್ರಾಂಚೈಸಿಯನ್ನು ಮಾರಾಟ ಮಾಡಿ ಆಗಿತ್ತು. ಹೀಗಾಗಿ ಆಟಗಾರರ ವಿಂಗಡಣೆಯ ಕುರಿತಾಗಿ ಫ್ರಾಂಚೈಸಿಗಳ ಜೊತೆಗೆ ನಿರಂತರ ಮಾತುಕತೆಯನ್ನು ನಡೆಸಲಾಗುತ್ತಿತ್ತು. ಹೇಗೆ ಆಟಗಾರರನ್ನು ಪಡೆಯಲು ಸಾಧ್ಯವಿದೆ ಎಂಬ ಚರ್ಚೆಗಳು ನಡೆಯುತ್ತಿತ್ತು ಎಂದು ಸುಂದರ್ ರಾಮನ್ ತಿಳಿಸಿದರು.

ಪ್ರಮುಖ ಆಟಗಾರರ ವಿಂಗಡಣೆಯಾಗಿತ್ತು

ಪ್ರಮುಖ ಆಟಗಾರರ ವಿಂಗಡಣೆಯಾಗಿತ್ತು

ಫ್ರಾಂಚೈಸಿಗಳ ಮಾರಾಟದ ಬಳಿಕ ಪ್ರಮುಖ ಆಟಗಾರನ್ನು ಅವರ ತವರೂರಿಗೆ ಅನುಗುಣವಾಗಿ ವಿಂಗಡಣೆ ಮಾಡಿ ಆಗಿತ್ತು. ಅದರ ಪ್ರಕಾರ ಮುಂಬೈ ತಂಡಕ್ಕೆ ಸಚಿನ್ ತೆಂಡೂಲ್ಕರ್, ಡೆಲ್ಲಿ ತಂಡಕ್ಕೆ ವೀರೇಂದ್ರ ಸೆಹ್ವಾಗ್, ಪಂಜಾಬ್‌ಗೆ ಯುವರಾಜ್ ಸಿಂಗ್, ಸೌರವ್ ಗಂಗೂಲಿ ಕೊಲ್ಕತ್ತಾ ತಂಡಕ್ಕೆ ಹಾಗೂ ಧೋನಿ ಮಾತ್ರ ತವರು ತಂಡವೇ ಇಲ್ಲದೆ ಇದ್ದರು ಎಂದು ಸುಂದರ್ ರಾಮನ್ ವಿವರಿಸಿದರು.

ಟೀ ಕುಡಿಯುತ್ತಾ ಬಂದಿತ್ತು ಹರಾಜು ಯೋಚನೆ

ಟೀ ಕುಡಿಯುತ್ತಾ ಬಂದಿತ್ತು ಹರಾಜು ಯೋಚನೆ

ಆಟಗಾರರ ವಿಂಗಡಣೆ ಹೇಗೆ ಎಂಬ ಪ್ರಶ್ನೆಗೆ ಸೂಕ್ತ ಮಾರ್ಗ ಯಾರಿಗೂ ಹೊಳೆದಿರಲಿಲ್ಲ. ಆಗ ಎಲ್ಲಾ ಫ್ರಾಂಚೈಸಿಗಳ ಜೊತೆಗೆ ಯಾವೆಲ್ಲಾ ಸಾಧ್ಯತೆಗಳು ಇದೆ ಎಂಬುದಾಗಿ ನೂರಾರು ಮಾರ್ಗಗಳನ್ನು ಮುಂದಿಟ್ಟುಕೊಂಡು ಚರ್ಚೆ ನಡೆಯುತ್ತಿತ್ತು ಆದರೆ ಯಾವುದೂ ಅಂತಿಮವಾಗಿರಲಿಲ್ಲ. ಆಗ ಯಾವುದೋ ಒಂದು ಫ್ರಾಂಚೈಸಿ ಹರಾಜು ಮಾಡಿದರೆ ಹೇಗೆ ಎಂದು ತಮ್ಮ ಆಲೋಚನೆಯನ್ನು ಮುಂದಿಟ್ಟರು ಎಂದು ಯುಟ್ಯೂಬ್ ಚಾನೆಲ್‌ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಸುಂದರ್ ರಾಮನ್ ಹೇಳಿದ್ದಾರೆ.

ಉತ್ತಮ ಆಲೋಚನೆಯಾಗಿತ್ತು

ಉತ್ತಮ ಆಲೋಚನೆಯಾಗಿತ್ತು

'ಯಾವ ಫ್ರಾಂಚೈಸಿ ಮಾಲಿಕರು ಈ ಆಲೋಚನೆಯನ್ನು ಆ ಸಂದರ್ಭದಲ್ಲಿ ನೀಡಿದರು ಎಂಬುದನ್ನು ನಾನು ಮರೆತಿದ್ದೇನೆ. ಆದರೆ ಈ ಬಗ್ಗೆ ಒಂದೆರಡು ನಿಮಿಷಗಳಕಾಲ ಚರ್ಚೆ ನಡೆಯಿತು, ಅದಾದ ಬಳಿಕ ನಾನು ಇದೊಂದು ಉತ್ತಮ ಯೋಚನೆ, ಇದು ಗ್ರಾಹಕರ ಆಸಕ್ತಿಯನ್ನು ಕೂಡ ಒಳಗೊಂಡಿರುತ್ತದೆ. ಅದೇ ಯಾವ ಆಟಗಾರರು ಯಾವ ತಂಡಕ್ಕೆ ಸೇರ್ಪಡೆಗೊಳ್ಳುತ್ತರೆ ಎಂಬುದನ್ನು ನಿರ್ಧರಿಸುತ್ತದೆ ಎಂದು ವಿವರಿಸಿದ್ದಾಗಿ ಸುಂದರ್ ರಾಮನ್ ಹೇಳಿದ್ದಾರೆ.

Story first published: Friday, June 26, 2020, 21:47 [IST]
Other articles published on Jun 26, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X