ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೀಮ್ ಇಂಡಿಯಾ ಯಾವುದೇ ಸವಾಲು ಸ್ವೀಕರಿಸಲು ಸಿದ್ಧ: ವಿರಾಟ್ ಕೊಹ್ಲಿ

Virat Kohli address media ahead of 2nd Test match | Oneindia kannada
The team is open for any challenge, says Virat Kohli

ಕೋಲ್ಕತ್ತಾ, ನವೆಂಬರ್ 21: ಭಾರತ ಕ್ರಿಕೆಟ್‌ ತಂಡ ಯಾವುದೇ ರೀತಿಯ ಸವಾಲು ಸ್ವೀಕರಿಸಲು ಯಾವಾಗಲೂ ಸಿದ್ಧವಾಗಿದೆ ಎಂದು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ. ಅವರು ಭಾರತ vs ಬಾಂಗ್ಲಾದೇಶ ನಡುವಿನ ದ್ವಿತೀಯ ಟೆಸ್ಟ್‌ ಕುರಿತು ಕೋಲ್ಕತ್ತಾದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಭಾರತ vs ವೆಸ್ಟ್ ಇಂಡೀಸ್ ಟಿ20ಐ ಪಂದ್ಯವೊಂದರ ದಿನಾಂಕ ಬದಲು?!ಭಾರತ vs ವೆಸ್ಟ್ ಇಂಡೀಸ್ ಟಿ20ಐ ಪಂದ್ಯವೊಂದರ ದಿನಾಂಕ ಬದಲು?!

ಭಾರತ ಪ್ರವಾಸದಲ್ಲಿರುವ ಬಾಂಗ್ಲಾದೇಶ ತಂಡ ನವೆಂಬರ್ 22ರಂದು ಕೊಹ್ಲಿ ಪಡೆ ವಿರುದ್ಧ ದ್ವಿತೀಯ ಟೆಸ್ಟ್ ಪಂದ್ಯವನ್ನಾಡಲಿದೆ. ಇದು ಡೇ-ನೈಟ್ ಟೆಸ್ಟ್ ಪಂದ್ಯವಾಗಿರುವುದರಿಂದ ಎರಡೂ ತಂಡಗಳಿಗೂ ವಿಶೇಷವೆನಿಸಿದೆ. ಯಾಕೆಂದರೆ ಭಾರತ-ಬಾಂಗ್ಲಾ ಎರಡೂ ತಂಡಗಳು ಈ ಮೊದಲು ಡೇ-ನೈಟ್ ಟೆಸ್ಟ್‌ನಲ್ಲಿ ಆಡಿಲ್ಲ.

ತಾಯಿ ಕಳೆದುಕೊಂಡ ಮರುದಿನವೇ ಕ್ರಿಕೆಟ್‌ ಅಂಗಳಕ್ಕಿಳಿದ ಪಾಕ್ ಯುವ ವೇಗಿ ಅಂತರಾಷ್ಟ್ರೀಯ ಪದಾರ್ಪಣೆಗೆ ಸಜ್ಜುತಾಯಿ ಕಳೆದುಕೊಂಡ ಮರುದಿನವೇ ಕ್ರಿಕೆಟ್‌ ಅಂಗಳಕ್ಕಿಳಿದ ಪಾಕ್ ಯುವ ವೇಗಿ ಅಂತರಾಷ್ಟ್ರೀಯ ಪದಾರ್ಪಣೆಗೆ ಸಜ್ಜು

ಕೋಲ್ಕತ್ತಾ ಈಡನ್ ಗಾರ್ಡನ್ ಸ್ಟೇಡಿಯಂನಲ್ಲಿ ನಡೆಸಲುದ್ದೇಶಿಸಿರುವ ಚೊಚ್ಚಲ ಡೇ-ನೈಟ್ ಟೆಸ್ಟ್ ಪಂದ್ಯದಲ್ಲಿ ಮೊದಲ ಬಾರಿಗೆ ಭಾರತ-ಬಾಂಗ್ಲಾ ತಂಡಗಳು ಪಿಂಕ್‌ಬಾಲನ್ನು ಎದುರಿಸಲಿದೆ. ಹೀಗಾಗಿ ಎರಡೂ ತಂಡಗಳ ಪಾಲಿಗೂ ಕೋಲ್ಕತ್ತಾ ಪಂದ್ಯ ಸವಾಲಿನದ್ದು. ಆದರೆ ಭಾರತ ಈ ಸವಾಲು ಸ್ವೀಕರಿಸಲು ಸಜ್ಜಾಗಿದೆ ಎಂಬರ್ಥದಲ್ಲಿ ಕೊಹ್ಲಿ ಮಾತನಾಡಿದ್ದಾರೆ.

ವಿಂಡೀಸ್ ಸರಣಿಗೆ ಭಾರತ ತಂಡ: ಹೇಗಿರಲಿದೆ ಟೀಮ್ ಇಂಡಿಯಾ!ವಿಂಡೀಸ್ ಸರಣಿಗೆ ಭಾರತ ತಂಡ: ಹೇಗಿರಲಿದೆ ಟೀಮ್ ಇಂಡಿಯಾ!

ಸುದ್ದಿ ಗೋಷ್ಠಿಯಲ್ಲಿ ಮಾತನಾಡುತ್ತ ಕೊಹ್ಲಿ, 'ಪಿಂಕ್‌ ಬಾಲ್ ಟೆಸ್ಟ್ ಮ್ಯಾಚ್ ನಮ್ಮ ಪಾಲಿಗೆ ಸವಾಲಿನದ್ದು. ಇಲ್ಲಿ ಶಕ್ತಿ ಪ್ರದರ್ಶನ ಹೆಚ್ಚಿನ ಮಟ್ಟದಲ್ಲಿ ಬೇಕಾಗಿರುವುದರಿಂದ ನಮಗೂ ರೋಮಾಂಚನ ತಂದಿದೆ. ಪಿಂಕ್‌ ಬಾಲ್ ಟೆಸ್ಟ್ ಪಂದ್ಯ ಹೊಸ ಮೈಲಿಗಲ್ಲಾಗಿಯೂ ಗುರುತಿಸಿಕೊಳ್ಳಲಿದೆ,' ಎಂದರು. ನವೆಂಬರ್ 22-26ರ ವರೆಗೆ ನಡೆಯುವ ಡೇ-ನೈಟ್ ಟೆಸ್ಟ್ ಪಂದ್ಯ 1 pmಗೆ ಆರಂಭವಾಗಲಿದೆ.

Story first published: Thursday, November 21, 2019, 11:57 [IST]
Other articles published on Nov 21, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X