ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಫ್ಯಾಶ್‌ಬ್ಯಾಕ್ 2020: ಕೆಎಲ್ ರಾಹುಲ್ ಪಾಲಿಗೆ ಇದು ಸ್ಮರಣೀಯ ವರ್ಷ

the year 2020 best for team india batsman KL Rahul

ಕೆಎಲ್ ರಾಹುಲ್ ಕಳೆದ ಎರಡ್ಮೂರು ವರ್ಷಗಳಿಂದ ಭಾರತದ ಪ್ರಮುಖ ಬ್ಯಾಟ್ಸ್‌ಮನ್ ಆಗಿದ್ದಾರೆ. ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ರಾಹುಲ್ ತಂಡದ ಮುಖ್ಯ ವಿಕೆಟ್ ಕೀಪರ್ ಆಗಿಯೂ ರಾಹುಲ್ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ತಂಡಕ್ಕೆ ಅನುಕೂಲವಾಗುವ ಯಾವುದೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿಯಲು ಶಕ್ತವಾಗಿರುವ ರಾಹುಲ್ ನಾಯಕ ವಿರಾಟ್ ಕೊಹ್ಲಿಗೆ ಆಪತ್ಬಾಂಧವನಂತಾಗಿದ್ದಾರೆ. ಆರಂಭಿಕನಾಗಿ ಕಣ್ಕಕಿಳಿಯುವುದರಿಂದ ಹಿಡಿದು ಆರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸಲು ಕೂಡ ರಾಹುಲ್ ಸೈ ಎನಿಸಿಕೊಂಡಿದ್ದಾರೆ.

2020 ಕೆಎಲ್ ರಾಹುಲ್ ಪರವಾಗಿ ಕೆಎಲ್ ರಾಹುಲ್‌ಗೆ ಹೆಚ್ಚು ಸ್ಮರಣೀಯ ವರ್ಷವೆನಿಸಿಕೊಂಡಿದೆ. ಅದಕ್ಕೆ ಕಾರಣ ರಾಹುಲ್ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ನೀಡಿದ ಅದ್ಭುತ ಪ್ರದರ್ಶನ. ಈ ವರ್ಷದ ಬಹುತೇಕ ಕೊರೊನಾ ವೈರಸ್‌ನ ಕಾರಣದಿಂದಾಗಿ ಕಳೆದುಹೋದರೂ ಇದ್ದ ಅವಕಾಶದಲ್ಲಿ ರಾಹುಲ್ ಟೀಮ್ ಇಂಡಿಯಾ ಪರವಾಗಿ ಶ್ರೇಷ್ಠ ಆಟವನ್ನು ಪ್ರದರ್ಶಿಸಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲೂ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ರಾಹುಲ್ ಉತ್ತಮ ಆಟವನ್ನು ಪ್ರದರ್ಶಿಸಿದ್ದಾರೆ. ಆದರೆ ಸದ್ಯ ನಡೆಯುತ್ತಿರುವ ಟೆಸ್ಟ್‌ ಸರಣಿಯ ಮೊದಲ ಪಂದ್ಯದಲ್ಲಿ ಆಡುವ ಬಳಗದಲ್ಲಿ ಅವಕಾಶ ಪಡೆಯುವಲ್ಲಿ ವಿಫಲರಾಗಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧ ರಾಹುಲ್ ದ್ರಾವಿಡ್ ಹೆಸರಿನಲ್ಲಿದೆ ವಿಶಿಷ್ಠ ದಾಖಲೆ!ಆಸ್ಟ್ರೇಲಿಯಾ ವಿರುದ್ಧ ರಾಹುಲ್ ದ್ರಾವಿಡ್ ಹೆಸರಿನಲ್ಲಿದೆ ವಿಶಿಷ್ಠ ದಾಖಲೆ!

ಏಕದಿನ ಕ್ರಿಕೆಟ್‌ನಲ್ಲಿ ಟಾಪ್ ಸ್ಕೋರರ್

ಏಕದಿನ ಕ್ರಿಕೆಟ್‌ನಲ್ಲಿ ಟಾಪ್ ಸ್ಕೋರರ್

ಟೀಮ್ ಇಂಡಿಯಾ ಪರವಾಗಿ 2020ರ ಕ್ಯಾಲೆಂಡರ್ ವರ್ಷದಲ್ಲಿ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್ ಎನಿಸಿದ್ದಾರೆ ಕೆಎಲ್ ರಾಹುಲ್. 9 ಏಕದಿನ ಪಂದ್ಯಗಳನ್ನು ಆಡಿರುವ ರಾಹುಲ್ 443 ರನ್ ಬಾರಿಸಿದ್ದಾರೆ. ಈ ವರ್ಷ ಅವರು ಏಕದಿನ ಕ್ರಿಕೆಟ್‌ನಲ್ಲಿ 55.4 ಸರಾಸರಿಯನ್ನು ಕಾಯ್ದುಕೊಂಡಿದ್ದಾರೆ.

ಕೀವಿಸ್ ವಿರುದ್ಧ 112 ರನ್ ಸಿಡಿಸಿದ ರಾಹುಲ್

ಕೀವಿಸ್ ವಿರುದ್ಧ 112 ರನ್ ಸಿಡಿಸಿದ ರಾಹುಲ್

ಈ ವರ್ಷದಲ್ಲಿ ಕೆಎಲ್ ರಾಹುಲ್ ಏಕದಿನ ಕ್ರಿಕೆಟ್‌ನಲ್ಲಿ ಒಂದು ಶತಕವನ್ನು ಸಿಡಿಸಿದ್ದಾರೆ. ಕಳೆದ ಫೆಬ್ರವರಿಯಲ್ಲಿ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯ ಮೂರನೇ ಪಂದ್ಯದಲ್ಲಿ 112 ರನ್ ಗಳಿಸಿರುವುದು ಏಕದಿನ ಕ್ರಿಕೆಟ್‌ನಲ್ಲಿ ಭಾರತದ ಪರವಾಗಿ ಈ ವರ್ಷದ ಎರಡನೇ ಹೈಯೆಸ್ಟ್ ರನ್ ಎನಿಸಿಕೊಂಡಿದೆ. ರೋಹಿತ್ ಶರ್ಮಾ ಮೊದಲ ಸ್ಥಾನದಲ್ಲಿದ್ದಾರೆ.

ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಭಾರತೀಯ

ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಭಾರತೀಯ

ಇನ್ನು ಏಕದಿನ ಕ್ರಿಕೆಟ್‌ನಲ್ಲಿ ಹಾಗೂ ಟಿ20 ಕ್ರಿಕೆಟ್‌ನಲ್ಲಿ ಭಾರತದ ಪರವಾಹಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಆಟಗಾರ ಎಂಬ ಹೆಗ್ಗಳಿಕೆಯೂ ರಾಹುಲ್ ಪಾಲಾಗಿದೆ. ಏಕದಿನ ಕ್ರಿಕೆಟ್‌ನಲ್ಲಿ 16 ಸಿಕ್ಸರ್ ಬಾರಿಸಿರುವ ರಾಹುಲ್ ಟಿ20ಯಲ್ಲಿ ಈ ವರ್ಷ 13 ಸಿಕ್ಸರ್ ಬಾರಿಸಿದ್ದಾರೆ.

ಟಿ20 ಕ್ರಿಕೆಟ್‌ನಲ್ಲೂ ಕೆಎಲ್ ಮಿಂಚು

ಟಿ20 ಕ್ರಿಕೆಟ್‌ನಲ್ಲೂ ಕೆಎಲ್ ಮಿಂಚು

ಟಿ20 ಕ್ರಿಕೆಟ್‌ನಲ್ಲೂ ರಾಹುಲ್ ಶ್ರೇಷ್ಠ ಪ್ರದರ್ಶನವನ್ನು ನೀಡಿದ್ದಾರೆ. 10 ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಕಣಕ್ಕಿಳಿದಿರುವ ರಾಹುಲ್ 404 ರನ್ ಗಳಿಸಿದ್ದು ಭಾರತದ ಪರವಾಗಿ ಚುಟುಕು ಕ್ರಿಕೆಟ್‌ನಲ್ಲಿ ಅತ್ಯಂತ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ. ಟಿ20ಐನಲ್ಲಿ ನಾಲ್ಕು ಅರ್ಧ ಶತಕವನ್ನು ಬಾರಿಸಿದ್ದು ಭಾರತದ ಪರ ಹೆಚ್ಚು ಅರ್ಧ ಶತಕ ಬಾರಿಸಿದ ಆಟಗಾರನೂ ಕೆಎಲ್ ರಾಹುಲ್ ಆಗಿದ್ದಾರೆ.

ಐಪಿಎಲ್‌ನಲ್ಲಿ ರಾಹುಲ್ ಆರ್ಭಟ

ಐಪಿಎಲ್‌ನಲ್ಲಿ ರಾಹುಲ್ ಆರ್ಭಟ

ಈ ಬಾರಿಯ ಐಪಿಎಲ್‌ನಲ್ಲೂ ಕೆಎಲ್ ರಾಹುಲ್ ಅಮೋಘ ಪ್ರದರ್ಶನವನ್ನು ನೀಡಿದ್ದಾರೆ. ಮೊದ ಬಾರಿಗೆ ಕಿಂಗ್ಸ್ ಇಲವೆನ್ ಪಂಜಾಬ್ ತಂಡವನ್ನು ಮುನ್ನಡೆಸಿದ ಜವಾಬ್ಧಾರಿ ಹೊತ್ತ ರಾಹುಲ್ ಟೂರ್ನಿಯಲ್ಲಿ ಅತ್ಯಂತ ಹೆಚ್ಚು ರನ್ ಗಳಿಸಿದ ಆಟಗಾರನಾಗಿ ಹೊರಹೊಮ್ಮಿದ್ದಾರೆ. 14 ಪಂದ್ಯಗಳಲ್ಲಿ ರಾಹುಲ್ 5 ಅರ್ಧ ಶತಕ ಹಾಗೂ ಒಂದು ಭರ್ಜರಿ ಶತಕದ ನೆರವಿನಿಂದ 670 ರನ್ ಕಲೆ ಹಾಕಿದ್ದಾರೆ. ಈ ಮೂಲಕ ಆರಂಜ್ ಕ್ಯಾಪ್ ತನ್ನದಾಗಿಸಿಕೊಂಡಿದ್ದಾರೆ.

Story first published: Friday, December 18, 2020, 14:33 [IST]
Other articles published on Dec 18, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X