ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಈ ಇಬ್ಬರು ಆಟಗಾರರು ಕೀವಿಸ್ ಪರಿಸ್ಥಿತಿಗೆ ಸೂಕ್ತವಾಗಿದ್ದರು : ಮಂಜ್ರೆಕರ್

Their bowling was more suited to conditions - Sanjay Manjrekar
Sanjay manjrekar thinks these players might have won us the game

ಟೀಮ್ ಇಂಡಿಯಾ ವಿರುದ್ಧ ನ್ಯೂಜಿಲೆಂಡ್ ಟೆಸ್ಟ್ ಹಾಗೂ ಏಕದಿನ ಸರಣಿಯಲ್ಲಿ ಭಾರೀ ಗೆಲುವನ್ನು ಪಡೆದುಕೊಂಡಿದೆ. ಟೀಮ್ ಇಂಡಿಯಾ ಬ್ಯಾಟಿಂಗ್ ಪಡೆಯನ್ನು ಕಿವೀಸ್ ಬೌಲರ್‌ಗಳು ಚೆಂಡಾಡಿ ಭಾರಿ ಗೆಲುವನ್ನು ಧಕ್ಕಿಸಿಕೊಂಡಿದ್ದಾರೆ.

ಆದರೆ ಟೀಮ್ ಇಂಡಿಯಾ ಬೌಲಿಂಗ್ ಪಡೆ ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಉತ್ತಮ ಆಟವನ್ನು ಪ್ರದರ್ಶಿಸುವಲ್ಲಿ ಯಶಸ್ವಿಯಾಗಲಿಲ್ಲ. ಟೀಮ್ ಇಂಡಿಯಾದ ಮೊಹಮದ್ ಶಮಿ, ಜಸ್ಪ್ರಿತ್ ಬೂಮ್ರಾ ನ್ಯೂಜಿಲೆಂಡ್ ನೆಲದಲ್ಲಿ ಯಶಸ್ಸನ್ನು ಕಾಣಲಿಲ್ಲ.

70 ಶತಕ ಸಿಡಿಸಿದ ಆಟಗಾರನ ಕೌಶಲ್ಯ ಪ್ರಶ್ನಿಸ್ತೀರಾ?: ಕೊಹ್ಲಿ ಬೆನ್ನಿಗೆ ನಿಂತ ಹಕ್70 ಶತಕ ಸಿಡಿಸಿದ ಆಟಗಾರನ ಕೌಶಲ್ಯ ಪ್ರಶ್ನಿಸ್ತೀರಾ?: ಕೊಹ್ಲಿ ಬೆನ್ನಿಗೆ ನಿಂತ ಹಕ್

ಈ ವಿಚಾರವಾಗಿ ಟೀಮ್ ಇಂಡಿಯಾದ ಮಾಜಿ ಆಟಗಾರ ಕಾಮೆಂಟೇಟರ್ ಸಂಜಯ್ ಮಂಜ್ರೇಕರ್ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಟೀಮ್ ಇಂಡಿಯಾದ ಇಬ್ಬರು ವೇಗಿಗಳು ತಂಡದಲ್ಲಿ ಇದ್ದರೆ ನ್ಯೂಜಿಲೆಂಡ್‌ನ ವಾತಾವರಣದಲ್ಲಿ ಟೀಮ್ ಇಂಡಿಯಾಗೆ ಅನುಕೂಲವಾಗುತ್ತಿತ್ತು ಎಂದಿದ್ದಾರೆ.

ಮಂಜ್ರೇಕರ್ ಹೇಳಿದ್ದು ಬೇರೆ ಯಾರ ಬಗ್ಗೆಯೂ ಅಲ್ಲ. ಟೀಮ್ ಇಂಡಿಯಾದ ವೇಗಿಗಳಾದ ಭುವನೇಶ್ವರ್ ಕುಮಾರ್ ಮತ್ತು ದೀಪಕ್ ಚಾಹರ್ ಬಗ್ಗೆ. ಈ ಇಬ್ಬರು ವೇಗಿಗಳು ತಂಡದಲ್ಲಿ ಇದ್ದರೆ ಟೀಮ್ ಇಂಡಿಯಾಗೆ ಅನುಕೂಲವಾಗುತ್ತಿತ್ತು ಎಂಬ ಮಾತನ್ನು ಮಂಜ್ರೇಕರ್ ಹೇಳಿದ್ದಾರೆ.

ಭುವನೇಶ್ವರ್ ಕುಮಾರ್ ಗಾಯಗೊಂಡ ಕಾರಣ ಕೆಲ ಸರಣಿಗಳಿಂದ ಟೀಮ್ ಇಂಡಿಯಾದಿಂದ ದೂರವಾಗಿದ್ದಾರೆ. ದೀಪಕ್ ಚಾಹರ್ ಚುಟುಕು ಕ್ರಿಕೆಟ್‌ನಲ್ಲಿ ತನ್ನದೇ ಛಾಪು ಮೂಡಿಸಿದ್ದಾರೆ. ಟ್ವಿಟ್ಟರ್‌ನಲ್ಲಿ ಅಭಿಮಾನಿಯೊಬ್ಬರು ಕೇಳಿದ ಪ್ರಶ್ನೆಗೆ ಮಂಜ್ರೇಕರ್ ಈ ಉತ್ತರವನ್ನು ನೀಡಿದ್ದಾರೆ.

Story first published: Tuesday, March 3, 2020, 15:32 [IST]
Other articles published on Mar 3, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X