ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಶ್ರೇಯಾಂಕದ ಬಗ್ಗೆ ಮತ್ತೆ ಅಸಮಾಧಾನ ವ್ಯಕ್ತಪಡಿಸಿದ ಕೊಹ್ಲಿ

There is no logic for somethings, says Kohli after India drop to 4th on WTC table

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿನ ಸೋಲಿನ ಬಳಿಕ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪ್ರತಿಕ್ರಿಯಿಸಿದ್ದಾರೆ. ಈ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಐಸಿಸಿಯ ಹೊಸ ಮಾನದಂಡದ ವಿಚಾರವಾಗಿ ಮತ್ತೊಂದು ಬಾರಿ ವಿರಾಟ್ ಕೊಹ್ಲಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

"ಲಾಕ್‌ಡೌನ್‌ನ ಸಂದರ್ಭದಲ್ಲಿ ಇದ್ದಕ್ಕಿಂತೆಯೇ ನಿಯಮಗಳು ಬದಲಾದರೆ, ಯಾವುದು ಕೂಡ ನಿಮ್ಮ ನಿಯಂತ್ರಣದಲ್ಲಿಲ್ಲ" ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಸೋಲು ಕಂಡ ಬಳಿಕ ಈ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಕುಸಿದಿದೆ.

ಕುಲ್‌ದೀಪ್ ಆಡಿಸದಕ್ಕೆ ಯಾವುದೇ ಕಾರಣಕ್ಕೂ ವಿಷಾದವಿಲ್ಲ: ವಿರಾಟ್ ಕೊಹ್ಲಿಕುಲ್‌ದೀಪ್ ಆಡಿಸದಕ್ಕೆ ಯಾವುದೇ ಕಾರಣಕ್ಕೂ ವಿಷಾದವಿಲ್ಲ: ವಿರಾಟ್ ಕೊಹ್ಲಿ

"ನಮ್ಮಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಆದರೆ ನೀವು ಲಾಕ್‌ಡೌನ್‌ನಲ್ಲಿದ್ದಾಗ ಇದ್ದಕ್ಕಿದ್ದಂತೆಯೇ ನಿಯಮಗಳು ಬದಲಾದರೆ ನಿಮ್ಮ ನಿಯಂತ್ರಣದಲ್ಲಿ ಯಾವುದು ಕೂಡ ಇರಲಾರದು. ನೀವು ಅಂಗಳದಲ್ಲಿ ಏನು ಮಾಡಬಲ್ಲಿರು ಎಂಬುವುದಷ್ಟೇ ನಿಮ್ಮ ನಿಯಂತ್ರಣದಲ್ಲಿ ಇರುತ್ತದೆ" ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.

"ಅಂಕಪಟ್ಟಿ ಸೇರಿದಂತೆ ಹೊರಗೆ ನಡೆಯುತ್ತಿರುವ ಯಾವ ವಿಚಾರಗಳ ಬಗ್ಗೆಯೂ ನಾವು ತಲೆಕೆಡಿಸಿಕೊಂಡಿಲ್ಲ. ಕೆಲ ವಿಚಾರಗಳಿಗೆ ಯಾವುದೇ ತರ್ಕಗಳು ಇರುವುದಿಲ್ಲ" ಎನ್ನುವ ಮೂಲಕ ಅಂಕಪಟ್ಟಿಯಲ್ಲಿನ ಹೊಸ ಮಾನದಂಡದ ಬಗ್ಗೆ ತಮ್ಮ ಅಸಮಾಧಾನವನ್ನು ವಿರಾಟ್ ಕೊಹ್ಲಿ ವ್ಯಕ್ತಪಡಿಸಿದ್ದಾರೆ.

ಅಜಿಂಕ್ಯ ರಹಾನೆ ಕಳಪೆ ಪ್ರದರ್ಶನಕ್ಕೆ ಅಭಿಮಾನಿಗಳಿಂದ ಕಿಡಿಅಜಿಂಕ್ಯ ರಹಾನೆ ಕಳಪೆ ಪ್ರದರ್ಶನಕ್ಕೆ ಅಭಿಮಾನಿಗಳಿಂದ ಕಿಡಿ

ಈ ಟೆಸ್ಟ್ ಪಂದ್ಯದ ಆರಂಭಕ್ಕೆ ಮುನ್ನ ನಾವು ಇಂಗ್ಲೆಂಡ್‌ಗೆ ಇರುವ ಸಾಧ್ಯತೆಗಳ ಬಗ್ಗೆ ಆಲೋಚನೆಯನ್ನೂ ಮಾಡಿರಲಿಲ್ಲ. ಆದರೆ ಈಗ ಇದ್ದಕ್ಕಿಂತೆ ನಾವು ಅವರು ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ ಎಂದು ಮಾತನಾಡಿಕೊಳ್ಳುತ್ತಿದ್ದೇವೆ. ಈ ಬದಲಾವಣೆಗಳು ನಿರಂತರವಾಗಿ ನಡೆಯುತ್ತಿದೆ. ಈ ವಿಚಾರವಾಗಿ ನೀವು ಆಡಿ ಆಡದಿರಿ, ನಮ್ಮ ಚಿತ್ತ ಕಠಿಣ ಪರಿಶ್ರಮವನ್ನು ಪಡುವುದಾಗಿದೆ, ನಾವು ಅದನ್ನು ಮಾಡುತ್ತೇವೆ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.

Story first published: Tuesday, February 9, 2021, 20:14 [IST]
Other articles published on Feb 9, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X