ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೊಹ್ಲಿ ಸ್ಲೆಡ್ಜಿಂಗ್: ನನ್ನ ಹಾಗೂ ವಿರಾಟ್ ನಡುವೆ ಯಾವುದೇ ಒಳಜಗಳವಿಲ್ಲ: ಜಾನಿ ಬೈಸ್ಟ್ರೋವ್

Kohli vs Bairstow
Kohli ಹಾಗು Bairstow ನಡುವೆ ಏನಿದು ಗಲಾಟೆ | *Cricket | OneIndia Kannada

ಬರ್ಮಿಂಗ್‌ಹ್ಯಾಮ್‌ನ ಎಡ್ಜ್‌ಬಾಸ್ಟನ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಐದನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ತನ್ನ ಹಿಡಿತವನ್ನು ಬಿಗಿಗೊಳಿಸಿದೆ. ಮೊದಲ ಇನಿಂಗ್ಸ್‌ನಲ್ಲಿ 132 ರನ್‌ಗಳ ಉತ್ತಮ ಮುನ್ನಡೆ ಸಾಧಿಸಿತು.

ಎರಡನೇ ಇನ್ನಿಂಗ್ಸ್ ನಲ್ಲಿ ಕೊಂಚ ಎಡವಿದರೂ ಸಹ ಟೀಂ ಇಂಡಿಯಾ ಮೂರನೇ ದಿನದಾಟದಂತ್ಯದಲ್ಲಿ ಕಂಬ್ಯಾಕ್ ಮಾಡಿತು. ಎರಡನೇ ಇನ್ನಿಂಗ್ಸ್‌ನಲ್ಲಿ ಆರಂಭಿಕರಾದ ಶುಭಮನ್ ಗಿಲ್, ಹನುಮ ವಿಹಾರಿ ಮತ್ತು ವಿರಾಟ್ ಕೊಹ್ಲಿ ವಿಕೆಟ್ ಬೇಗನೆ ಉರುಳಿದರೂ ಸಹ, ದಿನದಾಟದ ಅಂತ್ಯಕ್ಕೆ ಚೇತೇಶ್ವರ ಪೂಜಾರ ಅಜೇಯ 50, ಮೊದಲ ಇನಿಂಗ್ಸ್‌ನ ಶತಕ ಹೀರೋ ವಿಕೆಟ್‌ಕೀಪರ್ ರಿಷಬ್ ಪಂತ್ ಅಜೇಯ 30 ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ.

ಸದ್ಯ ಭಾರತ 257 ರನ್‌ಗಳ ಮುನ್ನಡೆಯಲ್ಲಿದ್ದು, ದೊಡ್ಡ ಮೊತ್ತದ ಲೀಡ್ ಪಡೆದು ಇನ್ನಿಂಗ್ಸ್‌ ಡಿಕ್ಲೇರ್ ಮಾಡಿಕೊಳ್ಳುವುದು ಟೀಮ್ ಇಂಡಿಯಾದ ಗೇಮ್ ಪ್ಲಾನ್ ಎನಿಸುತ್ತಿದೆ. ಕೊನೆಯ ಗಂಟೆಯಲ್ಲಿ ಸಾಧ್ಯವಾದಷ್ಟು ವಿಕೆಟ್ ಕಬಳಿಸಿ ಇಂಗ್ಲೆಂಡ್ ಅನ್ನು ಒತ್ತಡಕ್ಕೆ ಸಿಲುಕಿಸುವುದು ಟೀಂ ಇಂಡಿಯಾದ ತಂತ್ರ. ಟೆಸ್ಟ್ ಪಂದ್ಯ ಐದನೇ ದಿನಕ್ಕೆ ಕಾಲಿಡುವ ವೇಳೆಗೆ ಇಂಗ್ಲೆಂಡ್ ತಂಡ ಒತ್ತಡಕ್ಕೆ ಸಿಲುಕುವ ಪ್ಲಾನ್ ಮಾಡಿದೆ.

ಕೊಹ್ಲಿ-ಬೈಸ್ಟ್ರೋವ್ ನಡುವೆ ವಾಗ್ವಾದ

ಮೂರನೇ ದಿನದ ಪಂದ್ಯದ ವೇಳೆ ವಿರಾಟ್ ಕೊಹ್ಲಿ ಮತ್ತು ಜಾನಿ ಬೈರ್‌ಸ್ಟೋ ನಡುವೆ ನಡೆದ ವಾಗ್ವಾದವೇ ಚರ್ಚೆಗೆ ಗ್ರಾಸವಾಗಿತ್ತು. ಇಬ್ಬರೂ ಎದುರಾಗೆ ವಾದಕ್ಕಿಳಿದಿದ್ದು ಅಭಿಮಾನಿಗಳನ್ನ ಕೆರಳಿಸಿತು. ಬೈರ್‌ಸ್ಟೋವ್ ಅವರ ಗಮನ ಚೆಂಡಿನ ಮೇಲೆ ಅಲ್ಲ, ಇಡೀ ಕ್ರೀಡಾಂಗಣದ ಮೇಲೆ ಎಂದು ವಿರಾಟ್ ಕೊಹ್ಲಿ ಕಾಮೆಂಟ್‌ಗಳು ಈ ವಾಗ್ವಾದಕ್ಕೆ ಕಾರಣವಾಯಿತು. ಕೊಹ್ಲಿ ಅವರದೇ ಶೈಲಿಯಲ್ಲಿ ಸ್ಲೆಡ್ಜಿಂಗ್ ಮಾಡಿರುವುದು ಇಬ್ಬರ ನಡುವೆ ಕೋಪಕ್ಕೆ ಕಾರಣವಾಗಿದ್ದಲ್ಲದೆ, ಕೊನೆಯಲ್ಲಿ ಬೈಸ್ಟ್ರೋವ್ ಅದ್ಭುತ ಶತಕಕ್ಕೆ ಕಾರಣವಾಯಿತು.

ಕೊಹ್ಲಿ ಹಾಗೂ ನನ್ನ ನಡುವೆ ಯಾವುದೇ ಕಿರಿಕ್ ಇಲ್ಲ

ಬೈರ್‌ಸ್ಟೋವ್ ಕೊಹ್ಲಿ ಜೊತೆಗೆ ಘರ್ಷಣೆಯ ಕುರಿತಾಗಿ ದಿನದಾಟದಂತ್ಯದ ಪತ್ರಿಕಾಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದರು. ಕೊಹ್ಲಿ ಜೊತೆಗೆ ಯಾವುದೇ ತಕರಾರು ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದಲ್ಲದೆ, ಕೊಹ್ಲಿ ವಿರುದ್ಧ ಸ್ಪರ್ಧಿಸಲು ನಾನು ಅದೃಷ್ಟಶಾಲಿ ಎಂದು ಭಾವಿಸುತ್ತೇನೆ ಎಂದು ಹೇಳಿದರು. ಇಬ್ಬರೂ ಪರಸ್ಪರ ಗೌರವಿಸುತ್ತಾರೆ ಎಂದು ಹೇಳಿದರು. ಕೊಹ್ಲಿಗೆ ಕ್ರಿಕೆಟ್ ಬಗ್ಗೆ ಅಪಾರ ಪ್ರೀತಿ ಮತ್ತು ಭಕ್ತಿ ಇದೆ ಮತ್ತು ಅವರು ಆ ಆಕ್ರಮಣಕಾರಿ ಆಟದಲ್ಲಿ ಆಡುತ್ತಾರೆ ಎಂದು ಬೈಸ್ಟ್ರೋವ್ ಪ್ರತಿಕ್ರಿಯಿಸಿದ್ದಾರೆ. ಕ್ರಿಕೆಟ್ ಮೇಲಿನ ಭಕ್ತಿ ಅವರನ್ನು ಉತ್ತಮಗೊಳಿಸುತ್ತಿದೆ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

"ನಾವು ಈಗ 10 ವರ್ಷಗಳಿಂದ ಪರಸ್ಪರ ವಿರುದ್ಧವಾಗಿ ಆಡಿದ್ದೇವೆ. ಇದು ಸ್ವಲ್ಪ ಕಿರಿಕ್ ಆಗಿದೆ. ನಾವು ಮೈದಾನದಲ್ಲಿ ತೀವ್ರ ಪೈಪೋಟಿ ಹೊಂದಿದ್ದೇವೆ ಮತ್ತು ಅದು ಇಲ್ಲಿದೆ. ನಾವು ಟೆಸ್ಟ್ ಕ್ರಿಕೆಟ್ ಆಡುತ್ತಿದ್ದೇವೆ ಮತ್ತು ನಾವು ಇಬ್ಬರು ಸ್ಪರ್ಧಿಗಳು. ನಮ್ಮಿಂದ ಉತ್ತಮವಾದದ್ದು ಹೊರತರಲು ಹಾಗೂ ತಂಡವನ್ನು ಅಂತಿಮ ಗೆರೆಯತ್ತ ಕೊಂಡೊಯ್ಯಲು ಬಯಸುತ್ತೇವೆ ಮತ್ತು ಅದು ಆಟದ ಭಾಗವಾಗಿದೆ" ಎಂದು ಬೈರ್‌ಸ್ಟೋ ದಿನದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

IND vs ENG 5ನೇ ಟೆಸ್ಟ್: ಕೊಹ್ಲಿ ಮತ್ತೆ ಫ್ಲಾಪ್, ಪೂಜಾರ-ಪಂತ್ ಆಸರೆ; 3ನೇ ದಿನ ಭಾರತಕ್ಕೆ ಮುನ್ನಡೆ

ದೇಶದ ಪರ ಆಡುವಾಗ ಗೆಲುವಿಗಾಗಿ ಹಂಬಲವಿರುತ್ತದೆ

ದೇಶದ ಪರ ಆಡುವಾಗ ಗೆಲುವಿಗಾಗಿ ಹಂಬಲವಿರುತ್ತದೆ

ಯಾವುದೇ ತಂಡವು ತನ್ನ ದೇಶಕ್ಕಾಗಿ ಆಡುತ್ತದೆ ಮತ್ತು ಪಂದ್ಯವನ್ನು ಗೆಲ್ಲುವ ಮೂಲಕ ದೇಶಕ್ಕೆ ಹೆಸರು ತರುತ್ತದೆ ಎಂದು ಬೈರ್‌ಸ್ಟೋವ್ ಹೇಳಿದರು. ಇಬ್ಬರಿಗೂ ಅದೇ ಆಯಿತು ಎಂದು ವಿವರಿಸಿದರು. ಇದೇ ವೇಳೆಯಲ್ಲಿ ಭಾರತ ತಂಡವನ್ನು ಎದುರಿಸುವುದು ಯಾವಾಗಲೂ ಕಷ್ಟ ಎಂದು ಹೇಳಿದರು. ಟೀಂ ಇಂಡಿಯಾ ಆಟಗಾರರು ಸರಣಿಗಳ ನಂತರ ಸರಣಿಗೆ ಗೆಲುವಿಗಾಗಿ ಹೋಗುತ್ತಾರೆ, ಇದಕ್ಕೆ ಕೊಹ್ಲಿ ಹೊರತಾಗಿಲ್ಲ. ಇಬ್ಬರನ್ನೂ ಪ್ರತಿಸ್ಪರ್ಧಿಯಾಗಿ ಎದುರಿಸಿ ಖುಷಿ ಪಡುತ್ತೇನೆ ಎಂದರು.

IND vs ENG 5ನೇ ಟೆಸ್ಟ್: ಶತಕ ಗಳಿಸಲು ತಮ್ಮ ಮನಸ್ಥಿತಿ ಬದಲಾಯಿಸಿದ್ದೇಗೆಂದು ವಿವರಿಸಿದ ಜಡೇಜಾ

ಇಂಗ್ಲೆಂಡ್‌ ತಂಡವನ್ನ 284ರನ್‌ಗಳಿಗೆ ಆಲೌಟ್ ಮಾಡಿದ ಟೀಂ ಇಂಡಿಯಾ

ಇಂಗ್ಲೆಂಡ್‌ ತಂಡವನ್ನ 284ರನ್‌ಗಳಿಗೆ ಆಲೌಟ್ ಮಾಡಿದ ಟೀಂ ಇಂಡಿಯಾ

ರಿಷಭ್ ಪಂತ್ ಹಾಗೂ ಜಡೇಜಾ ಶತಕದ ನೆರವಿನಿಂದ ಹಾಗೂ ಬುಮ್ರಾ ಒಂದು ಓವರ್‌ನಲ್ಲಿ ಅಬ್ಬರದ ಆಟದಿಂದಾಗಿ ಭಾರತ 416 ರನ್ ಕಲೆಹಾಕಿತು. ಇದಕ್ಕುತ್ತರವಾಗಿ ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ಭಾರತದ ಬೌಲಿಂಗ್ ದಾಳಿಗೆ ತತ್ತರಿಸಿತು. ಬೈಸ್ಟ್ರೋವ್ ಶತಕ(106), ಜೋ ರೂಟ್ 31, ಬಿಲ್ಲಿಂಗ್ಸ್‌ 36, ಸ್ಟೋಕ್ಸ್‌ 25ರನ್ ಹೊರತುಪಡಿಸಿ ಬೇರೆ ಯಾವೊಬ್ಬ ಆಟಗಾರನು ತಂಡಕ್ಕೆ ಆಧಾರವಾಗಲಿಲ್ಲ. ಪರಿಣಾಮ ಇಂಗ್ಲೆಂಡ್ 284ರನ್‌ಗಳಿಗೆ ಆಲೌಟ್ ಆಗುವ ಮೂಲಕ 132ರನ್‌ಗಳ ಹಿನ್ನಡೆ ಅನುಭವಿಸಿದೆ.

ಎರಡನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡಿದ ಭಾರತ 3 ವಿಕೆಟ್ ನಷ್ಟಕ್ಕೆ 125ರನ್ ಕಲೆಹಾಕಿದ್ದು, 257ರನ್‌ಗಳ ಹಿನ್ನಡೆ ಅನುಭವಿಸಿದೆ.

Story first published: Monday, July 4, 2022, 14:32 [IST]
Other articles published on Jul 4, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X