ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೆಸ್ಟ್ ಕ್ರಿಕೆಟ್‌ನ 4ನೇ ಇನ್ನಿಂಗ್ಸ್‌ನಲ್ಲಿ ವೇಗದ ಶತಕ ಸಿಡಿಸಿದ ಟಾಪ್ 3 ಬ್ಯಾಟ್ಸ್‌ಮನ್‌ಗಳು

Test

ಕ್ರಿಕೆಟ್‌ನ ಮೂರು ಮಾದರಿಯಲ್ಲಿ ಟೆಸ್ಟ್ ಕ್ರಿಕೆಟ್‌ ಅತ್ಯಂತ ಕಠಿಣವಾದ ಫಾರ್ಮೆಟ್ ಆಗಿದೆ. ಇಲ್ಲಿ ಆಡಲು ತಾಳ್ಮೆ, ಶ್ರದ್ಧೆ, ಕಠಿಣ ಶ್ರಮ ಜೊತೆಗೆ ಪ್ರತಿಭೆಯು ಇರಬೇಕಾಗುತ್ತದೆ. ಇದು ಕೇವಲ ಬ್ಯಾಟ್ಸ್‌ಮನ್ ಅಷ್ಟೇ ಅಲ್ಲದೆ ಬೌಲರ್‌ಗೂ ಇರಬೇಕಾದ ಪ್ರಮುಖ ಗುಣಗಳಾಗಿವೆ.

ಈ ಎಲ್ಲಾ ಹಂತಗಳನ್ನ ಮೆಟ್ಟಿ ನಿಲ್ಲುವ ಆಟಗಾರನು ಟೆಸ್ಟ್ ಕ್ರಿಕೆಟ್‌ನಲ್ಲಿ ಯಶಸ್ಸು ಸಾಧಿಸುತ್ತಾನೆ. ಜೊತೆಗೆ ಅನೇಕ ದಾಖಲೆಗಳಲ್ಲೂ ತನ್ನ ಹೆಸರನ್ನ ದಾಖಲಿಸುತ್ತಾನೆ.

ಟೆಸ್ಟ್‌ ಕ್ರಿಕೆಟ್‌ನಲ್ಲಿ ಅನೇಕ ಕ್ರಿಕೆಟಿಗರು ಸಾವಿರಾರು ರನ್ ಕಲೆಹಾಕಿದ್ದಾರೆ. ಇದರಲ್ಲಿ ಕೆಲವರು ಮಾತ್ರ ತಾಳ್ಮೆಯುತ ಇನ್ನಿಂಗ್ಸ್ ಮೂಲಕ ದೀರ್ಘಕಾಲದವರೆಗೂ ಫಾರ್ಮ್‌ನಲ್ಲಿ ಉಳಿದು ರನ್ ಕಲೆಹಾಕುತ್ತಾರೆ. ಅದ್ರಲ್ಲೂ ನಾಲ್ಕನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡುವುದು ತುಂಬಾನೆ ಕಷ್ಟಸಾಧ್ಯ.

ಏಕೆಂದರೆ ನಾಲ್ಕನೇ ಇನ್ನಿಂಗ್ಸ್‌ ವೇಳೆಯಲ್ಲಿ ಪಿಚ್ ಸಾಕಷ್ಟು ಕಠಿಣವಾಗಿರುತ್ತದೆ. ಬೌಲರ್‌ಗಳಿಗೆ ಪಿಚ್ ಹೆಚ್ಚು ನೆರವಾಗುತ್ತದೆ. ಆದ್ರೆ ಕೆಲವು ಬ್ಯಾಟರ್‌ಗಳು ನಾಲ್ಕನೇ ಇನ್ನಿಂಗ್ಸ್‌ನಲ್ಲಿ ಟಿ20 ಕ್ರಿಕೆಟ್‌ ಸ್ಟೈಲ್‌ನಲ್ಲಿ ಬ್ಯಾಟಿಂಗ್ ಮಾಡಿರುವುದನ್ನ ಕಂಡಿದ್ದೇವೆ. ಈ ಲೇಖನದಲ್ಲಿ ಟೆಸ್ಟ್ ಕ್ರಿಕೆಟ್ ಪಂದ್ಯವೊಂದರ ನಾಲ್ಕನೇ ಇನ್ನಿಂಗ್ಸ್‌ನಲ್ಲಿ ವೇಗವಾಗಿ ಶತಕ ಸಿಡಿಸಿದ ಮೂವರು ಬ್ಯಾಟ್ಸ್‌ಮನ್‌ಗಳನ್ನು ನಿಮಗೆ ತಿಳಿಸುತ್ತೇವೆ. ಮುಂದೆ ಓದಿ

ಶಾಹಿದ್ ಅಫ್ರಿದಿ

ಶಾಹಿದ್ ಅಫ್ರಿದಿ

ಬೂಮ್ ಬೂಮ್ ಅಫ್ರಿದಿ, ಪಾಕಿಸ್ತಾನ ಸ್ಫೋಟಕ ಬ್ಯಾಟರ್ ಮತ್ತು ಮಾಜಿ ಪಾಕಿಸ್ತಾನ ತಂಡದ ನಾಯಕ ಶಾಹಿದ್ ಅಫ್ರಿದಿ ಹೆಸರಿನಲ್ಲಿ ಅನೇಕ ದಾಖಲೆಗಳಿವೆ. ಮೂರು ಫಾರ್ಮೆಟ್‌ ಅನ್ನು ಬಹುತೇಕ ಒಂದೇ ರೀತಿಯಲ್ಲಿ ಆಡುತ್ತಿದ್ದ ಶಾಹಿದ್ ಅಫ್ರಿದಿ ಏಕದಿನ ಕ್ರಿಕೆಟ್‌ನಲ್ಲಿ ವೇಗದ ಶತಕ ಸಿಡಿಸಿದವರ ಟಾಪ್ 10 ಪಟ್ಟಿಯಲ್ಲಿದ್ದಾರೆ.

ಟೆಸ್ಟ್ ಕ್ರಿಕೆಟ್‌ನಲ್ಲೂ ವೇಗವಾಗಿ ಬ್ಯಾಟಿಂಗ್ ಮಾಡುವ ಅಫ್ರಿದಿ 2005ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಟೆಸ್ಟ್ ಪಂದ್ಯದ ನಾಲ್ಕನೇ ಇನ್ನಿಂಗ್ಸ್‌ನಲ್ಲಿ ಕೇವಲ 78 ಎಸೆತಗಳಲ್ಲಿ ಶತಕ ಸಿಡಿಸಿದ್ದು, ನಾಲ್ಕನೇ ಇನ್ನಿಂಗ್ಸ್‌ ವೇಗವಾಗಿ ಶತಕ ಸಿಡಿಸಿದ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.

2005ರಲ್ಲಿ ಪಾಕಿಸ್ತಾನ ತಂಡವು ವೆಸ್ಟ್‌ ಇಂಡೀಸ್ ಪ್ರವಾಸ ಕೈಗೊಂಡಿತ್ತು. ಎರಡು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಟೆಸ್ಟ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವು ಪಾಕಿಸ್ತಾನ ತಂಡವನ್ನು 276ರನ್‌ಗಳಿಂದ ಸೋಲಿಸಿತು. ಆದ್ರೆ ಪಾಕಿಸ್ತಾನ ಪರ ಅದ್ಭುತ ಆಟವಾಡಿದ ಅಫ್ರಿದಿ ನಾಲ್ಕನೇ ಇನ್ನಿಂಗ್ಸ್‌ನಲ್ಲಿ 95 ಎಸೆತಗಳಲ್ಲಿ 122 ರನ್ ಚಚ್ಚಿದರು. ಇವರ ಇನ್ನಿಂಗ್ಸ್‌ನಲ್ಲಿ 9 ಬೌಂಡರಿ ಮತ್ತು 6 ಸಿಕ್ಸರ್‌ಗಳಿದ್ದವು.

ಪ್ರಸ್ತುತ ಈತನೇ ವಿಶ್ವದ ಗ್ರೇಟ್‌ ಪ್ಲೇಯರ್ ಎಂದ ಸೈಮನ್ ಡೌಲ್: ಕೊಹ್ಲಿ, ವಿಲಿಯಮ್ಸನ್, ರೋಹಿತ್‌ ಅಲ್ವೇ ಅಲ್ಲ!

ಜಾನಿ ಬೈಸ್ಟ್ರೋವ್

ಜಾನಿ ಬೈಸ್ಟ್ರೋವ್

ಟೆಸ್ಟ್ ಕ್ರಿಕೆಟ್‌ನಲ್ಲಿ ನಾಲ್ಕನೇ ಇನ್ನಿಂಗ್ಸ್‌ನಲ್ಲಿ ವೇಗದ ಶತಕ ಸಿಡಿಸಿದ ದಾಖಲೆಯ ಪಟ್ಟಿಯಲ್ಲಿ ಇಂಗ್ಲೆಂಡ್‌ ವಿಕೆಟ್ ಕೀಪರ್ ಬ್ಯಾಟರ್ ಜಾನಿ ಬೈಸ್ಟ್ರೋವ್ ಎರಡನೇ ಸ್ಥಾನ ಅಲಂಕರಿಸಿದ್ದಾರೆ. ಪ್ರಸ್ತುತ ನಡೆಯುತ್ತಿರುವ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಅಂತಿಮ ಪಂದ್ಯಕ್ಕೂ ಮೊದಲು ನಡೆದ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಜಾನಿ ಅಂತಹ ಒಂದು ಸಾಧನೆ ಮಾಡಿದ್ದಾರೆ.

ಟ್ರೆಂಟ್‌ಬ್ರಿಡ್ಜ್‌ನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ನೀಡಿದ್ದ 299ರನ್‌ಗಳ ಮೊತ್ತವನ್ನ ಸುಲಭವಾಗಿ ಬೆನ್ನತ್ತಿದ ಇಂಗ್ಲೆಂಡ್ ತಂಡವು ಕೇವಲ 50 ಓವರ್‌ಗಳಲ್ಲಿ ಗುರಿ ತಲುಪಿ ಐದು ವಿಕೆಟ್‌ಗಳ ರೋಚಕ ಗೆಲುವು ದಾಖಲಿಸಿತು. ಇದಕ್ಕೆ ಕಾರಣ ಜಾನಿ ಬೈಸ್ಟ್ರೋವ್ ಅಬ್ಬರದ ಆಟವಾಗಿದೆ.

ಟೆಸ್ಟ್ ಕ್ರಿಕೆಟ್‌ನಲ್ಲಿ ಟಿ20 ಸ್ಟೈಲ್‌ನಲ್ಲಿ ಬ್ಯಾಟ್ ಬೀಸಿದ ಜಾನಿ ಬೈಸ್ಟ್ರೋವ್ ಬೌಂಡರಿ ಮತ್ತು ಸಿಕ್ಸರ್‌ಗಳ ಮಳೆ ಸುರಿಸಿದ್ದಾರೆ. ಕೇವಲ 77 ಎಸೆತಗಳಲ್ಲಿ ಶತಕ ದಾಖಲಿಸಿದ ಇಂಗ್ಲೆಂಡ್ ಬ್ಯಾಟರ್ ಅಮೋಘ ಇನ್ನಿಂಗ್ಸ್‌ನಲ್ಲಿ 9 ಬೌಂಡರಿ ಮತ್ತು ಐದು ಸಿಕ್ಸರ್‌ಗಳಿದ್ದವು.

ಮೊದಲು 50 ಎಸೆತಗಳಲ್ಲಿ 50 ರನ್ ದಾಖಲಿಸಿದ್ದ ಬೈಸ್ಟ್ರೋವ್, ನಂತರದ 50 ರನ್‌ಗಳನ್ನ ಕೇವಲ 27 ಎಸೆತಗಳಲ್ಲಿ ದಾಖಲಿಸಿರುವುದು ವಿಶೇಷ. ಇದರ ಜೊತೆಗೆ ನಾಲ್ಕನೇ ಇನ್ನಿಂಗ್ಸ್‌ನಲ್ಲಿ ವೇಗವಾಗಿ ಶತಕ ದಾಖಲಿಸಿದ ಎರಡನೇ ಬ್ಯಾಟರ್ ಎಂಬ ಸಾಧನೆ ಇವರದ್ದಾಗಿದೆ.

ಈ ಪಂದ್ಯದಲ್ಲಿ ಜಾನಿ 92 ಎಸೆತಗಳಲ್ಲಿ 136 ರನ್ ಸಿಡಿಸಿದ್ದು, ಇವರ ಇನ್ನಿಂಗ್ಸ್‌ನಲ್ಲಿ 14 ಬೌಂಡರಿ ಮತ್ತು ಏಳು ಅಮೋಘ ಸಿಕ್ಸರ್‌ಗಳಿದ್ದವು.

SL-W vs IND-W 3ನೇ ಟಿ20: ಫ್ಯಾಂಟಸಿ ಡ್ರೀಮ್ ಟೀಮ್, ಸಂಭಾವ್ಯ 11ರ ಬಳಗ: ಭಾರತಕ್ಕೆ ಕ್ಲೀನ್‌ಸ್ವೀಪ್ ಗುರಿ

Rohit ಅಲಭ್ಯತೆಯಲ್ಲಿ ಇಂಗ್ಲೆಂಡ್ ನಲ್ಲಿ‌ ಮಿಂಚುತ್ತಾರಾ ಮಯಾಂಕ್ ಅಗರ್ವಾಲ್ | *Cricket | OneIndia Kannada
ಗಿಲ್ಬರ್ಟ್ ಜೆಸ್ಸಾಪ್

ಗಿಲ್ಬರ್ಟ್ ಜೆಸ್ಸಾಪ್

ಟೆಸ್ಟ್ ಕ್ರಿಕೆಟ್‌ ಇತಿಹಾಸದಲ್ಲಿ ನಾಲ್ಕನೇ ಇನ್ನಿಂಗ್ಸ್‌ ವೇಗದ ಶತಕ ಸಿಡಿಸಿದ ದಾಖಲೆಯು ಶತಮಾನವೇ ಉರುಳಿದರೂ ಇಂಗ್ಲೆಂಡ್ ಬ್ಯಾಟ್ಸ್‌ಮನ್ ಗಿಲ್ಬರ್ಟ್ ಜೆಸ್ಸಾಪ್ ಹೆಸರಿನಲ್ಲಿದೆ.

ಇಂಗ್ಲಿಷ್ ಬ್ಯಾಟರ್ ಗಿಲ್ಬರ್ಟ್ ಜೆಸ್ಸಾಪ್ ಅವರು 1902 ರಲ್ಲಿ ಸಾಂಪ್ರದಾಯಿಕ ಎದುರಾಳಿ ಆಸ್ಟ್ರೇಲಿಯಾ ವಿರುದ್ಧ 76 ಎಸೆತಗಳಲ್ಲಿ ಶತಕ ಗಳಿಸಿದರು. ಸುಮಾರು 120 ವರ್ಷಗಳ ಹಳೆಯ ದಾಖಲೆಯನ್ನ ಮುರಿಯುವ ಅವಕಾಶ ಬೈಸ್ಟ್ರೋವ್‌ಗಿತ್ತು. ಆದ್ರೆ ಸ್ವಲ್ಪದರಲ್ಲೇ ಮಿಸ್ ಆಗಿ 77 ಎಸೆತಗಳಲ್ಲಿ ಶತಕ ದಾಖಲಿಸಿದ್ರು.

ಜೆಸ್ಸಾಪ್ ಇನ್ನಿಂಗ್ಸ್‌ 17 ಬೌಂಡರಿಗಳಿದ್ದವು, ಇವರ ಇನ್ನಿಂಗ್ಸ್‌ನಿಂದಾಗಿ ಇಂಗ್ಲೆಂಡ್ ತಂಡವು ಸಾಂಪ್ರದಾಯಿಕ ಎದುರಾಳಿ ಆಸಿಸ್ ವಿರುದ್ಧ ಒಂದು ವಿಕೆಟ್‌ಗಳ ಗೆಲುವನ್ನ ಸಾಧಿಸಿತ್ತು.

Story first published: Monday, June 27, 2022, 15:32 [IST]
Other articles published on Jun 27, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X