ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

2021ರಲ್ಲಿ ಡೆಲ್ಲಿ ವಿರುದ್ಧ ಅಬ್ಬರಿಸಿದ್ದ ಈ ಮೂವರು ಪ್ಲೇಯರ್ಸ್, ಈಗ ಡೆಲ್ಲಿ ತಂಡದಲ್ಲೇ ಇದ್ದಾರೆ!

Delhi capitals

ಐಪಿಎಲ್ 2022 ಸೀನಸ್ ಆರಂಭಕ್ಕೆ ಕ್ಷಣಗಣನೆ ಶುರುವಾಗಿದ್ದು, ಮಾರ್ಚ್‌ 26ರಂದು ಅಧಿಕೃತ ಚಾಲನೆ ಸಿಗಲಿದೆ. ಪ್ರತಿ ತಂಡಗಳು ಕೂಡ ಟೂರ್ನಿಗೆ ಸಜ್ಜಾಗಿದ್ದು, ಡೆಲ್ಲಿ ಕ್ಯಾಪಿಟಲ್ಸ್ ಪರ ಮೂವರು ವಿಶೇಷ ಆಟಗಾರರು ಕಣಕ್ಕಿಳಿಯಲಿದ್ದಾರೆ.

2021ರ ಸೀಸನ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಅಬ್ಬರಿಸಿದ್ದ ಆ ಮೂವರು ಆಟಗಾರರನ್ನೇ ಡೆಲ್ಲಿ ಕ್ಯಾಪಿಟಲ್ಸ್ 2022ರ ಹರಾಜು ಪ್ರಕ್ರಿಯೆಯಲ್ಲಿ ತನ್ನ ತೆಕ್ಕೆಗೆ ಹಾಕಿಕೊಂಡಿದೆ.

ಐಪಿಎಲ್‌ ಇತಿಹಾಸದಲ್ಲಿ ಯಾವುದೇ ಬದಲಾವಣೆ ಕಾಣದೆ ಪ್ರತಿ ಸೀಸನ್‌ ಆಡಿರುವ ಐದು ತಂಡಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಕೂಡ ಒಂದು. ಇಷ್ಟು ಸೀಸನ್‌ನಲ್ಲಿ ಒಂದು ಬಾರಿ ಕಪ್ ಗೆಲ್ಲದೆ ಇರುವ ಕೆಲವೇ ಟೀಮ್‌ಗಳಲ್ಲಿ ಡೆಲ್ಲಿ ಒಂದಾಗಿದೆ. ಬಹುತೇಕ ಆಟಗಾರರನ್ನ ರಿಲೀಸ್ ಮಾಡಿ ಹೊಸ ತಂಡ ಕಟ್ಟಿರುವ ಡೆಲ್ಲಿ ಈ ಬಾರಿ ಕಪ್ ಗೆಲ್ಲಲು ಪಣತೊಟ್ಟಿದೆ. ಅದಕ್ಕೂ ಮೊದಲು ಡೆಲ್ಲಿ ಪರ ಆಡುತ್ತಿರುವ ಆ ಮೂವರು ವಿಶೇಷ ಆಟಗಾರರು ಯಾರು ಎಂದು ಈ ಕೆಳಗೆ ತಿಳಿಯಿರಿ.

ಕೆ.ಎಸ್ ಭರತ್

ಕೆ.ಎಸ್ ಭರತ್

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಪರ ಉತ್ತಮ ಪ್ರದರ್ಶನ ನೀಡುವ ಮೂಲಕ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಕೆ.ಎಸ್‌ ಭರತ್ ಬೆಳಕಿಗೆ ಬಂದರು. ಕಳೆದ ಐಪಿಎಲ್ ಸೀಸನ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಮ್ಯಾಚ್ ವಿನ್ನಿಂಗ್ಸ್ ಆಡುವ ಮೂಲಕ ಮಿಂಚಿದ್ದರು.

ಮೊದಲು ಬ್ಯಾಟಿಂಗ್‌ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ 5 ವಿಕೆಟ್ ನಷ್ಟಕ್ಕೆ 164 ರನ್‌ ಕಲೆಹಾಕಿತು. ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಆರ್‌ಸಿಬಿ ಆರಂಭದಲ್ಲೇ ವಿರಾಟ್ ಕೊಹ್ಲಿ ಮತ್ತು ದೇವದತ್ ಪಡಿಕ್ಕಲ್ ವಿಕೆಟ್ ಕಳೆದುಕೊಂಡಿತು. ಈ ವೇಳೆ ಎಬಿ ಡಿವಿಲಿಯರ್ಸ್ ಜೊತೆಗೂಡಿ ಮಿಂಚಿದ ಕೆ.ಎಸ್ ಭರತ್ ತಂಡವನ್ನ ಗೆಲುವಿನ ದಡ ತಲುಪಿಸುವಲ್ಲಿ ಯಶಸ್ವಿಯಾದ್ರು.

ಎಬಿ ಡಿವಿಲಿಯರ್ಸ್ ವಿಕೆಟ್ ಉರುಳಿದ ಬಳಿಕ ಗ್ಲೆನ್ ಮ್ಯಾಕ್ಸ್‌ವೆಲ್ ಜೊತೆಗೆ ಸೇರಿಕೊಂಡ ಆರ್‌ಸಿಬಿ ಗೆಲುವು ತಂದುಕೊಟ್ರು. 52 ಎಸೆತಗಳಲ್ಲಿ ಅಜೇಯ 78 ರನ್ ಸಿಡಿಸಿದ ಭರತ್ ಕೊನೆಯ ಎಸೆತದಲ್ಲಿ ಸಿಕ್ಸರ್ ಸಿಡಿಸುವ ಮೂಲಕ ಆರ್‌ಸಿಬಿಗೆ ರೋಚಕ ಗೆಲುವು ತಂದುಕೊಟ್ಟರು.

IPL 2022: ಈ ಸೀಸನ್‌ನಲ್ಲಿ ಭಾಗವಹಿಸುತ್ತಿರುವ ಸುಂದರ ನಿರೂಪಕಿಯರು

ಶಾರ್ದೂಲ್ ಠಾಕೂರ್

ಶಾರ್ದೂಲ್ ಠಾಕೂರ್

ಚೆನ್ನೈ ಸೂಪರ್ ಕಿಂಗ್ಸ್‌ ತಂಡದ ಪ್ರಮುಖ ಆಲ್‌ರೌಂಡರ್ ಆಗಿದ್ದ ಶಾರ್ದೂಲ್ ಠಾಕೂರ್ 2022ರ ಐಪಿಎಲ್ ಹರಾಜಿನಲ್ಲಿ 10.75 ಕೋಟಿ ರೂಪಾಯಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ತೆಕ್ಕೆಗೆ ಬಿದ್ದರು. ಆದ್ರೆ ಕಳೆದ ಸೀಸನ್‌ನಲ್ಲಿ ಸಿಎಸ್‌ಕೆ ಪರ ಆಡಿದ್ದ ಠಾಕೂರ್‌ ಡೆಲ್ಲಿ ವಿರುದ್ಧ ಗಮನಾರ್ಹ ಪ್ರದರ್ಶನ ನೀಡಿದ್ದರು.

4 ಓವರ್‌ ಬೌಲಿಂಗ್‌ ಮಾಡಿ ಕೇವಲ 13 ರನ್ ನೀಡಿದ್ದ ಠಾಕೂರ್ ಎರಡು ವಿಕೆಟ್ ಕಬಳಿಸಿದ್ರು. ಅದ್ರಲ್ಲೂ ಕೊನೆಯ ಓವರ್‌ನಲ್ಲಿ ಬೌಲಿಂಗ್‌ ಮಾಡಿ ಎರಡು ವಿಕೆಟ್ ಉರುಳಿಸಿ ಸಿಎಸ್‌ಕೆಗೆ ಗೆಲುವಿನ ಅವಕಾಶ ನೀಡಿದ್ರು. ಡೆಲ್ಲಿ ಪರ ಆಡಿದ್ದ ಶಿಖರ್ ಧವನ್ ಮತ್ತು ರವಿಚಂದ್ರನ್ ಅಶ್ವಿನ್ ವಿಕೆಟ್ ಕಬಳಿಸಿದ್ದರು. ಆದ್ರೆ ಕೊನೆಯಲ್ಲಿ ಡೆಲ್ಲಿ ಮೂರು ವಿಕೆಟ್‌ಗಳ ಗೆಲುವು ಸಾಧಿಸಿತ್ತು.

ಐಪಿಎಲ್ 2022: ಕ್ಯಾಂಪ್‌ಗೆ ನೂತನ ಆಟಗಾರನ ಆಗಮನ; ನಮ್ಮ ರಾಜ ಬಂದಾಯ್ತು ಎಂದ ಆರ್‌ಸಿಬಿ

ಮುಸ್ತಾಫಿಜುರ್ ರಹಮಾನ್

ಮುಸ್ತಾಫಿಜುರ್ ರಹಮಾನ್

ಬಾಂಗ್ಲಾದೇಶ ಮೂಲದ ಬೌಲರ್ ಮುಸ್ತಫಿಜುರ್ ರಹಮಾನ್ ಡೆಲ್ಲಿ ಕ್ಯಾಪಿಟಲ್ಸ್ ಪರ 2 ಕೋಟಿ ರೂಪಾಯಿಗೆ ತಂಡ ಸೇರಿಕೊಂಡಿದ್ದಾರೆ. ಕಳೆದ ವರ್ಷದಲ್ಲಿ ಡೆಲ್ಲಿ ಪರ ಮಿಂಚಿದ್ದ ರಹಮಾನ್ ರಾಜಸ್ತಾನ್ ರಾಯಲ್ಸ್ ಪರ ಆಡಿದ್ರು. ಡೆಲ್ಲಿ ವಿರುದ್ಧದ ಪಂದ್ಯವೊಂದರಲ್ಲಿ ನಾಲ್ಕು ವಿಕೆಟ್ ಕಬಳಿಸಿದ್ದ ರಹಮಾನ್ ಸ್ಫೋಟಕ ಆಟಗಾರ ಮಾರ್ಕಸ್ ಸ್ಟೋಯ್ನಿಸ್, ಟಾಮ್ ಕರನ್ ವಿಕೆಟ್ ಪಡೆದಿದ್ದರು.

ಶೇಕ್ ಜಾಯೆದ್ ಸ್ಟೇಡಿಯಂನಲ್ಲಿ ನಡೆದಿದ್ದ ಪಂದ್ಯದಲ್ಲಿ ರಹಮಾನ್, ಡೆಲ್ಲಿ ತಂಡದ ರಿಷಭ್ ಪಂತ್ ಮತ್ತು ಶಿಮ್ರಾನ್ ಹೆಟ್ಮಾಯರ್‌ನನ್ನ ಪೆವಿಲಿಯನ್‌ಗೆ ಅಟ್ಟಿದರು. ಈತನ ವಿಕೆಟ್ ಪಡೆಯುವ ಸಾಮರ್ಥ್ಯ ನೋಡಿ ಡೆಲ್ಲಿ ಕ್ಯಾಪಿಟಲ್ಸ್ 2022ರ ಸೀಸನ್‌ನಲ್ಲಿ ತನ್ನ ತೆಕ್ಕೆಗೆ ಹಾಕಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

Story first published: Wednesday, March 23, 2022, 11:06 [IST]
Other articles published on Mar 23, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X