ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2022 ಹರಾಜಿನಲ್ಲಿ ಬೇಡಿಕೆಯೇ ಇಲ್ಲ: 2ನೇ ಅವಕಾಶ ಪಡೆದು ಅಬ್ಬರಿಸಿದ 3 ಆಟಗಾರರು ಇವರು!

These 3 players unsold in mega Auction but later became match-winners for the teams who signed them

ಐಪಿಎಲ್ 2022ರ ಆವೃತ್ತಿಯ ಆರಂಭಕ್ಕೂ ಮುನ್ನ ಮೆಗಾ ಹರಾಜು ಪ್ರಕ್ರಿಯೆ ನಡೆದಿತ್ತು. ಈ ಬಾರಿಯ ಆವೃತ್ತಿಗೆ ಎರಡು ಹೊಸ ತಂಡಗಳು ಸೇರ್ಪಡೆಯಾದ ಹಿನ್ನೆಲೆಯಲ್ಲಿ ಬಿಸಿಸಿಐ ಈ ಬಾರಿ ನಾಲ್ವರು ಆಟಗಾರರನ್ನು ರೀಟೈನ್ ಮಾಡುವ ಅವಕಾಶ ನೀಡಿತ್ತು. ಉಳಿದ ಆಟಗಾರರು ಹರಾಜು ಪಟ್ಟಿಗೆ ಬಿಡುಗಡೆಯಾಗಿದ್ದರು. ಇದರಲ್ಲಿ ಎರಡು ಹೊಸ ತಂಡಗಳು ತಲಾ ಮೂವರು ಆಟಗಾರರನ್ನು ಡ್ರಾಫ್ಟ್‌ಗೆ ಸೇರ್ಪಡೆಗೊಳಿಸುವ ಅವಕಾಶ ಪಡೆದು ಉಳಿದ ಆಟಗಾರರು ಹರಾಜು ಪಟ್ಟಿಯಲ್ಲಿ ಉಳಿದುಕೊಂಡಿದ್ದರು.

ಕಳೆದ ಫೆಬ್ರವರಿ ತಿಂಗಳಿನಲ್ಲಿ ನಡೆದ ಈ ಹರಾಜು ಪ್ರಕ್ರಿಯೆಯಲ್ಲಿ ಕೆಲ ಅನಿರೀಕ್ಷಿತ ಬೆಳವಣಿಗೆಗಳು ನಡೆದು ಎಲ್ಲರು ಅಚ್ಚರಿಗೊಳಗಾಗುವಂತಾಗಿತ್ತು. ಖ್ಯಾತನಾಮರಲ್ಲದ ಕೆಲ ಆಟಗಾರರು ಕೂಡ ಅದ್ಭುತ ಮೊತ್ತಕ್ಕೆ ಹರಾಜಾಗಿ ಅಚ್ಚರಿ ಮೂಡಿಸಿದ್ದರು. ಆದರೆ ಕೆಲ ಆಟಗಾರರು ಈಗಾಗಲೇ ಮ್ಯಾಚ್ ವಿನ್ನರ್‌ಗಳೂ ಎನಿಸಿಕೊಂಡಿದ್ದರೂ ಹರಾಜಾಗದೆ ಉಳಿದುಕೊಂಡಿದ್ದರು. ಆದರೆ ಎರಡನೇ ಅವಕಾಶದಲ್ಲಿ ಐಪಿಎಲ್ ಫ್ರಾಂಚೈಸಿಗಳು ಈ ಆಟಗಾರರನ್ನು ತಮ್ಮ ತಂಡಕ್ಕೆ ಸೇರ್ಪಡೆಗೊಳಿಸಿದ್ದಾರೆ.

IPL 2022: ಈ ಐವರು ಆಟಗಾರರು ಮುಂದಿನ ಐಪಿಎಲ್‌ ಸೀಸನ್ ಆಡುವುದು ಡೌಟ್IPL 2022: ಈ ಐವರು ಆಟಗಾರರು ಮುಂದಿನ ಐಪಿಎಲ್‌ ಸೀಸನ್ ಆಡುವುದು ಡೌಟ್

ಈ ಪೈಕಿ ಮೂವರು ಆಟಗಾರರು ಈ ಬಾರಿಯ ಆವೃತ್ತಿಯಲ್ಲಿ ಅದ್ಭುತ ಪ್ರದರ್ಶನ ನೀಡಿ ಮಿಂಚಿದ್ದಾರೆ. ಮೊದಲ ಸುತ್ತಿನ ಹರಾಜಿನಲ್ಲಿ ಯಾವುದೇ ತಂಡಗಳು ಖರೀದಿಸದಿದ್ದರೂ ಎರಡನೇ ಸುತ್ತಿನಲ್ಲಿ ಅವಕಾಶ ಪಡೆದ ಮೂವರು ಆಟಗಾರರು ಐಪಿಎಲ್ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನೀಡಿದ್ದಾರೆ. ಆ ಮೂವರು ಆಟಗಾರರು ಯಾರು? ಇಲ್ಲಿದೆ ಮಾಹಿತಿ

ಮೊದಲ ಸುತ್ತಿನಲ್ಲಿ ಹರಾಜಾಗದೆ ಉಳಿದಿದ್ದ ಡೇವಿಡ್ ಮಿಲ್ಲರ್

ಮೊದಲ ಸುತ್ತಿನಲ್ಲಿ ಹರಾಜಾಗದೆ ಉಳಿದಿದ್ದ ಡೇವಿಡ್ ಮಿಲ್ಲರ್

ಕಳೆದ ಹಲವು ವರ್ಷಗಳಿಂದ ಐಪಿಎಲ್‌ನಲ್ಲಿ ಭಾಗವಹಿಸುತ್ತಿರುವ ಡೇವಿಡ್ ಮಿಲ್ಲರ್ ಈ ಬಾರಿಯ ಮೆಗಾ ಹರಾಜಿನ ಮೊದಲ ಸುತ್ತಿನಲ್ಲಿ ಯಾವುದೇ ತಂಡಕ್ಕೂ ಬೇಡವಾಗದೆ ಉಳಿದುಕೊಂಡಿದ್ದರು. ದಕ್ಷಿಣ ಆಫ್ರಿಕಾ ತಂಡದ ಪರವಾಗಿ ಮಿಲ್ಲರ್ ಉತ್ತ ಪ್ರದರ್ಶನ ನೀಡಿದ್ದರೂ ಕಳೆದ ಕೆಲ ಐಪಿಎಲ್ ಆವೃತ್ತಿಗಳಲ್ಲಿ ಮಿಲ್ಲರ್ ಗಮನಾರ್ಹ ಪ್ರದರ್ಶನ ನಿಡುವಲ್ಲಿ ವಿಫಲವಾಗಿದ್ದರು. ಹೀಗಾಗಿ ಫ್ರಾಂಚೈಸಿಗಳಿಗೆ ಮಿಲ್ಲರ್ ಮೇಲೆ ಭರವಸೆಯಿರಲಿಲ್ಲ. ಆದರೆ ಎರಡನೇ ಸುತ್ತಿನಲ್ಲಿ ಗುಜರಾತ್ ಟೈಟನ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳು ಪೈಪೋಟಿ ನಡೆಸಿದ ಕಾರಣ 3 ಕೋಟಿ ಮೊತ್ತಕ್ಕೆ ಮಿಲ್ಲರ್ ಗುಜರಾತ್ ಟೈಟನ್ಸ್ ತಂಡದ ಪಾಲಾದರು.

ಈ ಅವಕಾಶವನ್ನು ಅದ್ಭುತವಾಗಿ ಬಳಸಿಕೊಂಡ ಡೇವಿಡ್ ಮಿಲ್ಲರ್ ಈ ಮೊತ್ತಕ್ಕೆ ನ್ಯಾಯ ಒದಗಿಸುವ ಪ್ರದರ್ಶನ ನೀಡಿದ್ದಾರೆ. 15 ಪಂದ್ಯಗಳನ್ನು ಆಡಿರುವ ಮಿಲ್ಲರ್ 64.14ರ ಸರಾಸರಿಯಲ್ಲಿ 449 ರನ್‌ಗಳನ್ನು ಗಳಿಸಿದ್ದಾರೆ. ಎರಡು ಅರ್ಧ ಶತಕಗಳನ್ನು ಕೂಡ ಈ ಅನುಭವಿ ಆಟಗಾರ ಸಿಡಿಸಿದ್ದು 141.19ರ ಸರಾಸರಿಯಲ್ಲಿ ಬ್ಯಾಟ್‌ ಬೀಸಿದ್ದಾರೆ.

ಕೆಕೆಆರ್ ಪರ ಉಮೇಶ್ ಯಾದವ್ ಮಿಂಚು

ಕೆಕೆಆರ್ ಪರ ಉಮೇಶ್ ಯಾದವ್ ಮಿಂಚು

ಕಳೆದ ವರ್ಷದ ಐಪಿಎಲ್ ಆವೃತ್ತಿಯಲ್ಲಿ ಉಮೇಶ್ ಯಾದವ್ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿದ್ದರೂ ಬೆಂಚ್ ಕಾದಿದ್ದರು. ವೈಟ್‌ಬಾಲ್ ತಂಡದಲ್ಲಿ ಸ್ಥಾನವನ್ನು ಕಳೆದುಕೊಂಡಿರುವ ಕಾರಣ ಮೆಗಾ ಹರಾಜಿನಲ್ಲಿ ಯಾವುದೇ ತಂಡ ಕೂಡ ಉಮೇಶ್ ಯಾದವ್ ಅವರನ್ನು ತಂಡಕ್ಕೆ ಸೇರ್ಪಡೆಗೊಳಿಸುವ ಮನಸ್ಸು ಮಾಡಿರಲಿಲ್ಲ. ನಂತರ ಅನ್‌ಸೋಲ್ಡ್ ಆಟಗಾರರ ಹರಾಜಿನಲ್ಲಿ ಎರಡನೇ ಅವಕಾಶ ಪಡೆದ ಉಮೇಶ್ ಯಾದವ್ ಅವರನ್ನು ಕೆಕೆಆರ್ ತಂಡ ಮೂಲಬೆಲೆ 2 ಕೋಟಿಗೆ ಖರೀದಿಸಿತ್ತು.

ಈ ಅವಕಾಶ ಪಡೆದ ಉಮೇಶ್ ಯಾದವ್ ಈ ಆವೃತ್ತಿಯಲ್ಲಿ ಅದ್ಭುತ ಪ್ರದರ್ಶನ ನೀಡಿ ಗಮನಸೆಳೆದಿದ್ದಾರೆ. ಆರಂಭಿಕ ಪಂದ್ಯದಲ್ಲಿಯೇ ಮಿಂಚಿದ ಯಾದವ್ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಈ ಪಂದ್ಯದಲ್ಲಿ ತಮ್ಮದಾಗಿಸಿಕೊಂಡಿದ್ದರು. ಆಡಿರುವ 14 ಪಂದ್ಯಗಳಲ್ಲಿ ಉಮೇಶ್ ಯಾದವ್ 16 ವಿಕೆಟ್ ಪಡೆದುಕೊಂಡಿದ್ದು 7.06ರ ಎಕಾನಮಿಯಲ್ಲಿ ಉಮೇಶ್ ಯಾದವ್ ಬೌಲಿಂಗ್ ಮಾಡಿದ್ದಾರೆ.

Lucknow ತಂಡ ಸೋತಾಗ Gambhir ಕೋಪ ನೆತ್ತಿಗೇರಿತು | Oneindia Kannada
ಆರಂಭಿಕನಾಗಿ ಯಶಸ್ಸು ಸಾಧಿಸಿದ ವೃದ್ಧಿಮಾನ್ ಸಾಹಾ

ಆರಂಭಿಕನಾಗಿ ಯಶಸ್ಸು ಸಾಧಿಸಿದ ವೃದ್ಧಿಮಾನ್ ಸಾಹಾ

ಈ ಪಟ್ಟಿಯಲ್ಲಿ ಕಾಣಿಸಿಕೊಳ್ಳುವ ಮತ್ತೋರ್ವ ಭಾರತದ ಅನುಭವಿ ಆಟಗಾರ ವೃದ್ಧಿನಮಾನ್ ಸಾಹಾ. ಅನುಭವಿ ವಿಕೆಟ್ ಕೀಪರ್ ಬ್ಯಾಟರ್ ಭಾರತೀಯ ತಂಡದಲ್ಲಿ ಸ್ಥಾನವನ್ನು ಕಳೆದುಕೊಂಡಿದ್ದಾರೆ. ಹೀಗಾಗಿ ಫ್ರಾಂಚೈಸಿಗಳು ಕೂಡ ಸಾಹಾ ಅವರನ್ನು ತಂಡಕ್ಕೆ ಸೇರ್ಪಡೆಗೊಳಿಸಲು ಹಿಂದೇಟು ಹಾಕಿದ್ದವು. ಅಲ್ಲದೆ ವಯಸ್ಸು ಕೂಡ ಸಾಹಾ ಪರವಾಗಿ ಇಲ್ಲದಿರುವುದು ಸಾಹಾಗೆ ಹರಾಜಿನಲ್ಲಿ ಮೊದಲ ಸುತ್ತಿನಲ್ಲಿ ಹಿನ್ನಡೆಯಾಯಿತು. ಆದರೆ ನಂತರ ಗುಜರಾತ್ ಟೈಟನ್ಸ್ ಫ್ರಾಂಚೈಸಿ ಸಾಹಾ ಅವರಲ್ಲಿನ ಕೌಶಲ್ಯದ ಮೇಲೆ ನಂಬಿಕೆಯಿಟ್ಟು 1.90 ಕೋಟಿ ಮೊತ್ತಕ್ಕೆ ಸೇರ್ಪಡೆಗೊಳಿಸಿತ್ತು.

ಈ ಅವಕಾಶವನ್ನು ಬಳಸಿಕೊಂಡ ವೃದ್ಧಿಮಾನ್ ಸಾಹಾ ಆರಂಭಿಕ ಆಟಗಾರನಾಗಿಯೂ ಯಶಸ್ಸು ಸಾಧಿಸಿದರು. ಆಡಿದ 10 ಪಂದ್ಯಗಳಲ್ಲಿ ಸಾಹಾ 312 ರನ್‌ಗಳನ್ನು ಗಳಿಸಿದ್ದಾರೆ. ಇದರಲ್ಲಿ ಮೂರು ಅರ್ಧ ಶತಕ ಸೇರಿದೆ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ನೀಡಿದ ಪ್ರದರ್ಶನಕ್ಕೆ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಕೂಡ ಪಡೆದುಕೊಂಡಿದ್ದಾರೆ ಸಾಹಾ.

Story first published: Thursday, May 26, 2022, 10:36 [IST]
Other articles published on May 26, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X