ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿರಾಟ್ ಕೊಹ್ಲಿ ನಂತರದಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಕಾಲಿಟ್ಟ ಈ ಮೂವರು ಕ್ರಿಕೆಟಿಗರು 2022ರಲ್ಲಿ ನಿವೃತ್ತಿ

Virat kohli

ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಸದ್ಯ ವಿಶ್ರಾಂತಿ ಪಡೆದು ವೆಸ್ಟ್ ಇಂಡೀಸ್ ಸರಣಿಗಳಿಂದ ಹೊರಗುಳಿದಿದ್ದಾರೆ. ಇದಕ್ಕೂ ಮೊದಲು ದಕ್ಷಿಣ ಆಫ್ರಿಕಾ, ಐರ್ಲೆಂಡ್ ಟಿ20 ಸರಣಿಯಿಂದ ಹೊರಗಿದ್ದ ವಿರಾಟ್‌, ಮುಂಬರುವ ಜಿಂಬಾಬ್ವೆ ಪ್ರವಾಸಕ್ಕೂ ಅಲಭ್ಯರಾಗಿದ್ದಾರೆ.

ಸದ್ಯ ಫಾರ್ಮ್‌ ಉತ್ತಮವಾಗಿರಲಿಲ್ಲದಿದ್ರೂ ಕೊಹ್ಲಿ ಭಾರತ ಕ್ರಿಕೆಟ್ ಕಂಡಂತಹ ಲೆಜೆಂಡರಿ ಕ್ರಿಕೆಟಿಗರಲ್ಲಿ ಒಬ್ಬರಾಗಿದ್ದಾರೆ. ಆತ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿಟ್ಟಾಗಿನಿಂದಲೂ ಹಿಂದೆ ತಿರುಗಿ ನೋಡಿದ್ದೇ ಇಲ್ಲ. ಪ್ರತಿ ವರ್ಷ ಮೂರು ಫಾರ್ಮೆಟ್‌ನಲ್ಲಿ ಸಾವಿರಾರು ರನ್ ಕಲೆಹಾಕುವ ಮೂಲಕ ಕಿಂಗ್ ಕೊಹ್ಲಿ ಎಂಬ ಬಿರುದನ್ನು ಗಿಟ್ಟಿಸಿದರು.

ಮೂರು ಫಾರ್ಮೆಟ್‌ನಲ್ಲಿ 50ಕ್ಕೂ ಹೆಚ್ಚು ಸರಾಸರಿ ಹೊಂದಿದ್ದ ಏಕೈಕ ಪ್ಲೇಯರ್ ಆಗಿದ್ದ ವಿರಾಟ್ ಕೊಹ್ಲಿ ಸಾಕಷ್ಟು ದಾಖಲೆಗಳ ಸರದಾರನಾಗಿದ್ದಾನೆ. ಕೊಹ್ಲಿ ಆಟವನ್ನ ಹಾಗೂ ದಾಖಲೆಯನ್ನ ಸಚಿನ್ ತೆಂಡೂಲ್ಕರ್, ರಿಕಿ ಪಾಂಟಿಂಗ್‌ ಹೋಲಿಸಿದ ಉದಾಹರಣೆಗಳಿವೆ.

ವಿರಾಟ್ ಇದುವರೆಗೆ 102 ಟೆಸ್ಟ್ ಪಂದ್ಯಗಳನ್ನಾಡಿದ್ದು 8074ರನ್ ಕಲೆಹಾಕಿದ್ದಾರೆ. ಆತ ಕಳೆದೆರಡು ವರ್ಷಗಳಲ್ಲಿ ಫಾರ್ಮ್ ಕಳೆದುಕೊಳ್ಳಲಿದ್ರೆ 10,000 ಗಡಿ ದಾಟಿದ್ರೂ ಆಶ್ಚರ್ಯವಿರಲಿಲ್ಲ. ಹೀಗೆ ಕೊಹ್ಲಿ 2011ರಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದಾಗಿನಿಂದಲೂ 11 ವರ್ಷಗಳ ಕಾಲ ಟೆಸ್ಟ್ ಕ್ರಿಕೆಟ್ ಆಡಿದ್ದಾರೆ. ಕೊಹ್ಲಿ ಎಂಟ್ರಿ ಬಳಿಕ ಮತ್ಯಾವ ಕ್ರಿಕೆಟ್‌ ಇಷ್ಟು ದೊಡ್ಡ ಮಟ್ಟಿನ ಯಶಸ್ಸು ಕಂಡಿಲ್ಲ. ಹೀಗೆ ವಿರಾಟ್ ಟೆಸ್ಟ್‌ ಕ್ರಿಕೆಟ್‌ ಪದಾರ್ಪಣೆ ಬಳಿಕ ಟೆಸ್ಟ್‌ ಕ್ರಿಕೆಟ್‌ಗೆ ಆಡಿರುವ ಮೂವರು ಕ್ರಿಕೆಟಿಗರು 2022ರಲ್ಲಿ ನಿವೃತ್ತಿ ಘೋಷಿಸಿದ್ದಾರೆ. ಅವರು ಯಾರು ಎಂಬುದನ್ನ ಈ ಕೆಳಗೆ ತಿಳಿಯಿರಿ.

ಸ್ಟುವರ್ಟ್ ಬಿನ್ನಿ

ಸ್ಟುವರ್ಟ್ ಬಿನ್ನಿ

ಭಾರತದ ಮಾಜಿ ಕ್ರಿಕೆಟಿಗ ರೋಜರ್ ಬಿನ್ನಿ ಮಗನೇ ಸ್ಟುವರ್ಟ್ ಬಿನ್ನಿ. ವಿರಾಟ್ ಕೊಹ್ಲಿ ಟೆಸ್ಟ್‌ಗೆ ಎಂಟ್ರಿ ಕೊಟ್ಟ ಬಳಿಕ ಚೊಚ್ಚಲ ಟೆಸ್ಟ್ ಪಂದ್ಯವನ್ನಾಡಿರುವ ಬಿನ್ನಿ 2014ರಲ್ಲಿ ಟ್ರೆಂಟ್‌ಬ್ರಿಡ್ಜ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್ ಪಂದ್ಯವನ್ನಾಡಿದ್ದಾರೆ. ಇದಲ್ಲದೆ 2015ರಲ್ಲಿ ಬೆಂಗಳೂರಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಕೊನೆಯ ಟೆಸ್ಟ್ ಪಂದ್ಯವನ್ನಾಡಿದ್ದಾರೆ.

6 ಟೆಸ್ಟ್, 14 ಒಡಿಐ, 3 ಟಿ20 ಪಂದ್ಯಗಳನ್ನಾಡಿರುವ ಸ್ಟುವರ್ಟ್ ಬಿನ್ನಿ ಬ್ಯಾಟ್ ಹಾಗೂ ಬೌಲಿಂಗ್ ಎರಡರಲ್ಲೂ ಮಿಂಚುವಲ್ಲಿ ವಿಫಲರಾಗಿ 2022ರಲ್ಲಿ ಎಲ್ಲಾ ಮಾದರಿಗೆ ನಿವೃತ್ತಿ ಘೋಷಿಸಿದರು. ಏಕದಿನ ಫಾರ್ಮೆಟ್‌ನಲ್ಲಿ ಜಿಂಬಾಬ್ವೆ ವಿರುದ್ಧ 4 ರನ್‌ಗೆ 6 ವಿಕೆಟ್ ಪಡೆದಿರುವುದು ಭಾರತದ ಪರ ಏಕದಿನ ಕ್ರಿಕೆಟ್‌ನಲ್ಲಿ ಬೆಸ್ಟ್‌ ಬೌಲಿಂಗ್ ಆಗಿದೆ.

ಮಹಾರಾಜ ಟ್ರೋಫಿ: ಹೊಸ ಕೆಪಿಎಲ್‌ನ ಎಲ್ಲಾ 6 ತಂಡಗಳ ನಾಯಕರ ಘೋಷಣೆ; ಬೆಂಗಳೂರಿಗೆ ಮಯಾಂಕ್ ನಾಯಕ!

ವಿನಯ್ ಕುಮಾರ್

ವಿನಯ್ ಕುಮಾರ್

ಕರ್ನಾಟಕ ರಣಜಿ ತಂಡದ ಮಾಜಿ ನಾಯಕ, ಪೇಸ್ ಬೌಲರ್ ವಿನಯ್ ಕುಮಾರ್, ಕೊಹ್ಲಿ ಟೆಸ್ಟ್ ಕ್ರಿಕೆಟ್ ಆಡಿದ ಬಳಿಕ ಪದಾರ್ಪಣೆ ಮಾಡಿ ಈಗಾಗಲೇ ನಿವೃತ್ತಿ ಘೋಷಿಸಿದ ಆಟಗಾರರಲ್ಲಿ ಒಬ್ಬರಾಗಿದ್ದಾರೆ. ದೇಶೀಯ ಕ್ರಿಕೆಟ್‌ನಲ್ಲಿ ಸಾಕಷ್ಟು ಹೆಸರು ಮಾಡಿರುವ ವಿನಯ್ ಕುಮಾರ್ ಕರ್ನಾಟಕ ಮತ್ತು ಪುದುಚೇರಿ ಪರ ಆಡಿದ್ದಾರೆ.

ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 500ಕ್ಕೂ ಹೆಚ್ಚು ವಿಕೆಟ್ ಪಡೆದಿರುವ ವಿನಯ್ ಕುಮಾರ್ ಅಂತರಾಷ್ಟ್ರೀಯ ಕ್ರಿಕೆಟ್ ಕೆರಿಯರ್ ಅಷ್ಟು ಯಶಸ್ಸು ಕಂಡಿಲ್ಲ. 2012ಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ವಿನಯ್‌ ಕುಮಾರ್‌ ಟೆಸ್ಟ್ ಕ್ರಿಕೆಟ್ ಆಡಿದ್ದು ಕೂಡ ಅದೇ ಕೊನೆ. 2021ರಲ್ಲಿ ವಿನಯ್ ಕುಮಾರ್ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದರು.

ಭಾರತದ ಈ ಪ್ಲೇಯರ್ ವಿಶ್ವದ ನಂ 1 ಆಗೋದ್ರಲ್ಲಿ ಅನುಮಾನವಿಲ್ಲ, ವಿಶ್ವಕಪ್‌ಗೆ ಆಯ್ಕೆ ಮಾಡಿ: ಕೃಷ್ಣಮಾಚಾರಿ ಶ್ರೀಕಾಂತ್

ನಮನ್ ಓಜಾ

ನಮನ್ ಓಜಾ

ಕ್ರಿಕೆಟ್ ಪದಾರ್ಪಣೆ ವೇಳೆಯಲ್ಲಿ ಯುವ ನಮನ್ ಓಜಾರನ್ನ ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಬ್ಯಾಕಪ್ ಆಗಿ ಕಾಣಲು ಪ್ರಯತ್ನ ನಡೆಸಲಾಯಿತು. ಆದ್ರೆ ನಮನ್ ಓಜಾ ವೃತ್ತಿಜೀವನ ಅಂದುಕೊಂಡಂತೆ ಸಾಗಲಿಲ್ಲ. ದೇಶೀಯ ಕ್ರಿಕೆಟ್‌ನಲ್ಲಿ ಮಧ್ಯಪ್ರದೇಶ ಪರ ಆಡಿದ ನಮನ್ ಓಜಾ 2015ರಲ್ಲಿ ವಿನಯ್ ಕುಮಾರ್ ರೀತಿಯಲ್ಲಿ ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಸರಣಿಯೇ ಕೊನೆಯಾಗಿತ್ತು. ಆದ್ರೆ ದೇಶೀಯ ಕ್ರಿಕೆಟ್‌ನಲ್ಲಿ ಓಜಾ ರೆಕಾರ್ಡ್‌ ಚೆನ್ನಾಗಿದೆ. 2021ರಲ್ಲಿ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಮನ್ ಓಜಾ ನಿವೃತ್ತಿ ಘೋಷಿಸಿದರು.

Story first published: Friday, August 5, 2022, 10:10 [IST]
Other articles published on Aug 5, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X