ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸಚಿನ್, ಪಾಂಟಿಂಗ್ ರೀತಿಯ ದಿಗ್ಗಜರೇ ಆಡಿರುವ ಐಪಿಎಲ್‌ನಲ್ಲಿ ಈ ಮೂವರು ಒಮ್ಮೆಯೂ ಪಾಲ್ಗೊಂಡಿಲ್ಲ!

These 3 players never played a single match in IPL till now

ಆಗ ತಾನೇ ಟಿ ಟ್ವೆಂಟಿ ಕ್ರಿಕೆಟ್ ಮಾದರಿ ಜನಪ್ರಿಯತೆಯನ್ನು ಪಡೆದುಕೊಳ್ಳಲು ಆರಂಭಿಸಿತ್ತು. 2007ರಲ್ಲಿ ಟಿ ಟ್ವೆಂಟಿ ಮಾದರಿಯ ವಿಶ್ವಕಪ್ ಕೂಡ ಆಯೋಜನೆಯಾಗಿ ಯಶಸ್ವಿಯಾಗಿತ್ತು. ಹೀಗಿರುವಾಗಲೇ ನಂತರದ ವರ್ಷದಲ್ಲಿ ಭಾರತದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಎಂಬ ಟಿ ಟ್ವೆಂಟಿ ಫ್ರಾಂಚೈಸಿ ಕ್ರಿಕೆಟ್ ಟೂರ್ನಿಯನ್ನು ಭಾರತದಲ್ಲಿ ಆರಂಭಿಸಲಾಗಿತ್ತು. ಈ ಐಪಿಎಲ್ ಟೂರ್ನಿ ಪ್ರಥಮ ವರ್ಷದಲ್ಲಿಯೇ ದೊಡ್ಡ ಮಟ್ಟದ ಯಶಸ್ಸನ್ನು ಸಾಧಿಸಿತು. ಇಲ್ಲಿಯವರೆಗೂ ಒಟ್ಟು ಹದಿನೈದು ಐಪಿಎಲ್ ಆವೃತ್ತಿಗಳು ಮುಕ್ತಾಯಗೊಂಡಿದ್ದು, ಸದ್ಯ ಅತಿದೊಡ್ಡ ಹಾಗೂ ಜಗತ್ತಿನ ಶ್ರೀಮಂತ ಫ್ರಾಂಚೈಸಿ ಕ್ರಿಕೆಟ್ ಲೀಗ್ ಎಂಬ ಹೆಗ್ಗಳಿಕೆಯನ್ನು ಈ ಐಪಿಎಲ್ ಹೊಂದಿದೆ.

ಏಕದಿನ ಕ್ರಿಕೆಟ್‍ನಲ್ಲಿ ಅತಿಹೆಚ್ಚು ಶತಕ ಬಾರಿಸಿರುವ ಕೀಪರ್‌ಗಳ ಪಟ್ಟಿ; 23 ಶತಕ ಹೊಂದಿರುವ ಈತ ನಂಬರ್ 1ಏಕದಿನ ಕ್ರಿಕೆಟ್‍ನಲ್ಲಿ ಅತಿಹೆಚ್ಚು ಶತಕ ಬಾರಿಸಿರುವ ಕೀಪರ್‌ಗಳ ಪಟ್ಟಿ; 23 ಶತಕ ಹೊಂದಿರುವ ಈತ ನಂಬರ್ 1

ಇನ್ನು ಈ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗಳಲ್ಲಿ ದಿಗ್ಗಜ ಕ್ರಿಕೆಟಿಗರು ಎನಿಸಿಕೊಂಡಿರುವ ಸಚಿನ್ ತೆಂಡೂಲ್ಕರ್, ರಿಕಿ ಪಾಂಟಿಂಗ್, ಜಾಕ್ ಕಾಲೀಸ್, ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ ಇನ್ನೂ ಮುಂತಾದವರು ಭಾಗವಹಿಸಿದ್ದು, ಅಂತರರಾಷ್ಟ್ರೀಯ ಕ್ರಿಕೆಟ್ ಆಡಿರುವ ಅನುಭವ ಹೊಂದಿರುವ ಆಟಗಾರರ ಜತೆ ಅನ್‌ಕ್ಯಾಪ್ಡ್ ಆಟಗಾರರೂ ಸಹ ಕಣಕ್ಕಿಳಿದಿದ್ದಾರೆ.

ಏಕದಿನ ಕ್ರಿಕೆಟ್‍ನಲ್ಲಿ ಅತಿ ಹೆಚ್ಚು ಬಾರಿ 300ಕ್ಕೂ ಅಧಿಕ ರನ್ ಕಲೆ ಹಾಕಿರುವ ತಂಡ ಯಾವುದು?ಏಕದಿನ ಕ್ರಿಕೆಟ್‍ನಲ್ಲಿ ಅತಿ ಹೆಚ್ಚು ಬಾರಿ 300ಕ್ಕೂ ಅಧಿಕ ರನ್ ಕಲೆ ಹಾಕಿರುವ ತಂಡ ಯಾವುದು?

ಹೌದು, ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗಳಲ್ಲಿ ಭಾಗವಹಿಸಿ ಮಿಂಚಿದ ನಂತರ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾಗವಹಿಸುವ ಅವಕಾಶ ಸಿಕ್ಕ ಹಲವಾರು ಕ್ರಿಕೆಟಿಗರ ಉದಾಹರಣೆಗಳು ನಮ್ಮೆಲ್ಲರ ಮುಂದೆಯೇ ಇದ್ದು, ಇನ್ನೂ ಸಹ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿಡದ ಯುವ ಪ್ರತಿಭೆಗಳು ಅನುಭವಿ ಸ್ಟಾರ್ ಆಟಗಾರರ ಜೊತೆ ಒಂದೇ ಡ್ರೆಸಿಂಗ್ ರೂಮ್ ಹಂಚಿಕೊಂಡಿದ್ದಾರೆ. ವಿರಾಟ್ ಕೊಹ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾಗವಹಿಸುವ ಮುನ್ನವೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ ಮತ್ತು ಜಾಕ್ ಕಾಲೀಸ್ ರೀತಿಯ ಅನುಭವಿ ಕ್ರಿಕೆಟಿಗರ ಜೊತೆ ಕಣಕ್ಕಿಳಿದಿದ್ದ ಅನುಭವವನ್ನು ಪಡೆದುಕೊಂಡಿದ್ದರು. ಹೀಗೆ ಸಾಕಷ್ಟು ವಿಭಿನ್ನ ಅನುಭವವನ್ನು ಕ್ರಿಕೆಟಿಗರಿಗೆ ನೀಡಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗಳಲ್ಲಿ ಹಲವಾರು ದಿಗ್ಗಜ ಕ್ರಿಕೆಟಿಗರು ಹಾಗೂ ಅದೆಷ್ಟೋ ಕ್ರಿಕೆಟ್ ಅಭಿಮಾನಿಗಳಿಗೆ ಪರಿಚಯವೇ ಇಲ್ಲದ ಯುವ ಕ್ರಿಕೆಟಿಗರು ಭಾಗವಹಿಸಿದ್ದರೆ, ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮಿಂಚಿ ತಮ್ಮನ್ನು ತಾವು ಗುರುತಿಸಿಕೊಂಡಿರುವ ಈ ಮೂವರಿಗೆ ಮಾತ್ರ ಇಲ್ಲಿಯವರೆಗೂ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಯಾವುದೇ ತಂಡವನ್ನು ಪ್ರತಿನಿಧಿಸುವ ಅವಕಾಶವನ್ನು ಪಡೆದುಕೊಂಡಿಲ್ಲ. ಆ ಮೂವರು ಆಟಗಾರರ ಪಟ್ಟಿ ಈ ಕೆಳಕಂಡಂತಿದೆ.

ಜೋ ರೂಟ್

ಜೋ ರೂಟ್

ಇಂಗ್ಲೆಂಡ್ ತಂಡದ ಸ್ಪೋಟಕ ಆಟಗಾರ ಜೋ ರೂಟ್‌ಗೆ ಇಲ್ಲಿಯವರೆಗೂ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಕಣಕ್ಕಿಳಿಯುವ ಅವಕಾಶ ಲಭಿಸಿಲ್ಲ. ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲಿ ಕಳೆದೊಂದು ದಶಕದಲ್ಲಿ ಉತ್ತಮ ಆಟವನ್ನಾಡುವ ಮೂಲಕ ಮಿಂಚಿರುವ ಜೋ ರೂಟ್ ಆಸ್ಟ್ರೇಲಿಯಾದ ಬಿಗ್‌ ಬ್ಯಾಷ್ ಲೀಗ್‌ನಲ್ಲಿ ಸಿಡ್ನಿ ಥಂಡರ್ಸ್ ತಂಡದ ಪರ ಆಡಿದ್ದಾರೆ, ಆದರೆ ಒಮ್ಮೆಯೂ ಇಂಡಿಯನ್ ಪ್ರೀಮಿಯರ್ ಲೀಗ್‌ ಟೂರ್ನಿಯಲ್ಲಿ ಆಡಿಲ್ಲ.

ಪೌಲ್ ಸ್ಟರ್ಲಿಂಗ್

ಪೌಲ್ ಸ್ಟರ್ಲಿಂಗ್

ಐರ್ಲೆಂಡ್ ತಂಡ ಕ್ರಿಕೆಟ್ ಜಗತ್ತಿಗೆ ನೀಡಿದ ಉತ್ತಮ ಆಟಗಾರರಲ್ಲಿ ಪೌಲ್ ಸ್ಟರ್ಲಿಂಗ್ ಕೂಡ ಓರ್ವರು. ಆರಂಭಿಕ ಆಟಗಾರನಾಗಿ ಕಣಕ್ಕಿಳಿಯುವ ಈ ಬಲಗೈ ಬ್ಯಾಟ್ಸ್‌ಮನ್ ದೊಡ್ಡ ಹೊಡೆತ ಬಾರಿಸುವಲ್ಲಿ ಹೆಸರುವಾಸಿಯಾಗಿದ್ದಾರೆ ಹಾಗೂ ಪ್ರಸ್ತುತ ಕ್ರಿಕೆಟ್ ಜಗತ್ತಿನಲ್ಲಿ ಇರುವ ಪವರ್ ಹಿಟ್ಟಿಂಗ್ ಆಟಗಾರರಲ್ಲಿ ಓರ್ವರಾಗಿದ್ದಾರೆ. ವಿಶ್ವದ ಹಲವು ಫ್ರಾಂಚೈಸಿ ಕ್ರಿಕೆಟ್ ಲೀಗ್‌ಗಳಲ್ಲಿ ಭಾಗವಹಿಸಿ ಇಸ್ಲಾಮಾಬಾದ್ ಯುನೈಟೆಡ್, ಡಂಬುಲ್ಲಾ ಜೈಂಟ್ಸ್ ಮತ್ತು ಖುಲ್ನಾ ಟೈಗರ್ಸ್ ತಂಡಗಳನ್ನು ಪ್ರತಿನಿಧಿಸಿರುವ ಪೌಲ್ ಸ್ಟರ್ಲಿಂಗ್ ಒಮ್ಮೆಯೂ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಭಾಗವಹಿಸುವ ಅವಕಾಶವನ್ನು ಪಡೆದುಕೊಂಡಿಲ್ಲ.

ಮುಷ್ಫಿಕರ್ ರಹೀಮ್

ಮುಷ್ಫಿಕರ್ ರಹೀಮ್

ಬಾಂಗ್ಲಾದೇಶದ ಆಟಗಾರರು ಇಂಡಿಯನ್ ಪ್ರೀಮಿಯರ್ ಲೀಗ್‌ಗೆ ಆಯ್ಕೆಯಾಗಿರುವುದು ಬೆರಳೆಣಿಕೆಯಷ್ಟು ಎಂದೇ ಹೇಳಬಹುದು. ಬಾಂಗ್ಲಾ ಪರ ಸೀಮಿತ ಓವರ್‌ ಕ್ರಿಕೆಟ್‌ನಲ್ಲಿ ಮಿಂಚಿ ಹೆಸರುವಾಸಿಯಾಗಿರುವ ಮುಷ್ಫಿಕರ್ ರಹೀಮ್ ಇಂಡಿಯನ್ ಪ್ರೀಮಿಯರ್ ಲೀಗ್ ಶುರುವಾಗುವುದಕ್ಕೂ ಮುನ್ನವೇ ಟಿ ಟ್ವೆಂಟಿ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಹೀಗೆ ದೊಡ್ಡ ಮಟ್ಟದ ಅನುಭವವನ್ನು ಹೊಂದಿದ್ದರೂ ಸಹ ಈತನಿಗೆ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಭಾಗವಹಿಸುವ ಅವಕಾಶ ಮಾತ್ರ ಒಮ್ಮೆಯೂ ಲಭಿಸಿಲ್ಲ.

Story first published: Wednesday, July 27, 2022, 16:44 [IST]
Other articles published on Jul 27, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X