Ind vs SA: ಐಪಿಎಲ್ ಕಳಪೆ ಫಾರ್ಮ್‌ನಿಂದ ಹೊರಬರಲೇ ಬೇಕಿದೆ ಈ 3 ಟೀಮ್ ಇಂಡಿಯಾ ಆಟಗಾರರು

ಐಪಿಎಲ್ ಮುಕ್ತಾಯದ ಬಳಿಕ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ಭಾರತೀಯ ಕ್ರಿಕೆಟ್ ತಂಡದ ಆಟಗಾರರು ಸಜ್ಜಾಗುತ್ತಿದ್ದಾರೆ. ಐದು ಒಂದ್ಯಗಳ ಟಿ20 ಸರಣಿಯಲ್ಲಿ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಮೊದಲ ಪಂದ್ಯ ನಡೆಯುತ್ತಿದ್ದು ಜೂನ್ 9ರಂದು ಈ ಪಂದ್ಯ ನಡೆಯಲಿದೆ. ಈ ಟಿ20 ಪಂದ್ಯಕ್ಕೆ ಭಾರತ ಕ್ರಿಕೆಟ್ ತಂಡದ ಆಟಗಾರರು ಅಭ್ಯಾಸವನ್ನು ಆರಂಭಿಸಿದ್ದು ಇದರ ವಿಡಿಯೋವನ್ನು ಕೂಡ ಬಿಸಿಸಿಐ ಹಂಚಿಕೊಂಡಿದೆ.

ಇನ್ನು ಪ್ರಮುಖ ಆಟಗಾರರಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಹಾಗೂ ಜಸ್ಪ್ರೀತ್ ಬೂಮ್ರಾ ಇಲ್ಲದೆ ಕಣಕ್ಕಿಳಿಯುತ್ತಿರುವ ಈ ಸರಣಿಯಲ್ಲಿ ಭಾರತ ಕ್ರಿಕೆಟ್ ತಂಡದ ಕೆಲ ಆಟಗಾರರಿಗೆ ಕಠಿಣ ಸವಾಲು ಎದುರಾಗುವುದರಲ್ಲಿ ಅನುಮಾನವಿಲ್ಲ. ಅದರಲ್ಲೂ ಈ ಬಾರಿಯ ಐಪಿಎಲ್‌ನಲ್ಲಿ ಕೆಲ ಆಟಗಾರರು ಕಳಪೆ ಪ್ರದರ್ಶನ ನೀಡಿದ್ದು ದಕ್ಷಿಣ ಆಫ್ರಿಕಾ ವಿರುದ್ಧದ ಈ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿ ಕಳಪೆ ಫಾರ್ಮ್‌ನಿಂದ ಹೊರಬರಲೇ ಬೇಕಿದೆ. ಹಾಗಾದರೆ ಫಾರ್ಮ್ ಕಂಡುಕೊಳ್ಳಲೇ ಬೇಕಿರುವ ಆ ಮೂವರು ಆಟಗಾರರು ಯಾರು? ಮುಂದೆ ಓದಿ

IND vs SA ಟಿ20 ಸರಣಿ: ಕೆಎಲ್ ರಾಹುಲ್ ನಾಯಕತ್ವದ ಕುರಿತು ಸುರೇಶ್ ರೈನಾ ಹೇಳಿದ್ದೇನು?IND vs SA ಟಿ20 ಸರಣಿ: ಕೆಎಲ್ ರಾಹುಲ್ ನಾಯಕತ್ವದ ಕುರಿತು ಸುರೇಶ್ ರೈನಾ ಹೇಳಿದ್ದೇನು?

ವೆಂಕಟೇಶ್ ಐಯ್ಯರ್

ವೆಂಕಟೇಶ್ ಐಯ್ಯರ್

2021ರ ಐಪಿಎಲ್‌ನಲ್ಲಿ ಅಮೋಘ ಪ್ರದರ್ಶನ ನೀಡಿ ಮಿಂಚಿದ ವೆಂಕಟೇಶ್ ಐಯ್ಯರ್ ಆ ಆವೃತ್ತಿಯಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಫೈನಲ್ ಹಂತಕ್ಕೇರಲು ಪ್ರಮುಖ ಕಾರಣವಾಗಿದ್ದರು. ಅಲ್ಲದೆ ಈ ಪ್ರದರ್ಶನದಿಂದಾಗಿ ಅವರು ಭಾರತೀಯ ತಂಡದಲ್ಲಿಯೂ ಸ್ಥಾನವನ್ನು ಪಡೆದುಕೊಂಡಿದ್ದರು. ಆದರೆ 2022ರ ಐಪಿಎಲ್ ಆವೃತ್ತಿ ವೆಂಕಟೇಶ್ ಐಯ್ಯರ್ ಪಾಲಿಕೆ ಕಹಿ ಅನುಭವ ನೀಡಿದೆ. ಭಾರೀ ನಿರೀಕ್ಷೆ ಮೂಡಿಸಿದ್ದ ಈ ಆಟಗಾರ ಕಳಪೆ ಪ್ರದರ್ಶನ ನೀಡಿದ್ದಾರೆ. 2022ರ ಐಪಿಎಲ್ ಆವೃತ್ತಿಯಲ್ಲಿ ಆಡಿದ 12 ಪಂದ್ಯಗಳಲ್ಲಿ 16.55 ಸರಾಸರಿಯ್ಲಲಿ ಐಯ್ಯರ್ ಗಳಿಸಿದ್ದು ಕೇವಲ 182 ರನ್ ಮಾತ್ರ. ಅವರ ಸ್ಟ್ರೈಕ್‌ರೆಟ್ 107.69. ಈ ಬಾರಿಯ ಆವೃತ್ತಿಯಲ್ಲಿ ಏಕೈಕ ಅರ್ಧ ಶತಕವನ್ನು ವೆಂಕಟೇಶ್ ಐಯ್ಯರ್ ಸಿಡಿಸಿದ್ದು ಅದು ಕೂಡ ಪರಿಣಾಮಕಾರಿಯಾಗಿರಲಿಲ್ಲ. ಇನ್ನು ವೆಂಕಟೇಶ್ ಐಯ್ಯರ್ ಅವರನ್ನು ಕೆಳ ಕ್ರಮಾಂಕದಲ್ಲಿ ಕಣಕ್ಕಿಳಿಸಿದರೂ ಅದರಿಂದ ಹೆಚ್ಚಿನ ಲಾಭವೇನೂ ಆಗಲಿಲ್ಲ. ಈ ಮೂಲಕ ವೆಂಕಟೇಶ್ ಐಯ್ಯರ್ ಈ ಬಾರಿಯ ಐಪಿಎಲ್ ಆವೃತ್ತಿಯ ಕಳಪೆ ಪ್ರದರ್ಶನವನ್ನು ಮರೆಯಬೇಕಾದರೆ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಮಿಂಚುಹರಿಸಬೇಕಿದೆ.

ಅಕ್ಷರ್ ಪಟೇಲ್

ಅಕ್ಷರ್ ಪಟೇಲ್

ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆಲ್‌ರೌಂಡರ್ ಅಕ್ಷರ್ ಪಟೇಲ್‌ಗೆ ಕೂಡ ಈ ಬಾರಿಯ ಆವೃತ್ತಿ ಸ್ಮರಣೀಯವಾಗಿರಲಿಲ್ಲ. ಈಗಾಗಲೇ ತಾನೋರ್ವ ಮ್ಯಾಚ್ ವಿನ್ನರ್ ಆಟಗಾರ ಎನಿಸಿಕೊಂಡಿರುವ ಅಕ್ಷರ್ ಆಡಿದ 13 ಪಂದ್ಯಗಳಲ್ಲಿ ಪಡೆದುಕೊಂಡಿದ್ದು ಕೇವಲ 6 ವಿಕೆಟ್ ಮಾತ್ರ. ಅವರ ಸರಾಸರಿ 53.50 ಆಗಿದ್ದರೆ ಎಕಾನಮಿ 7.47 ಆಗಿತ್ತು. ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ಅಕ್ಷರ್ ಪಟೇಲ್ ಎದುರಾಳಿಗೆ ಯಾವ ಸಂದರ್ಭದಲ್ಲಿಯೂ ಅಪಾಯಕಾರಿಯಾಗಿ ಪರಿಣಮಿಸಲಿಲ್ಲ. ಆದರೆ ಬ್ಯಾಟಿಂಗ್‌ನಲ್ಲಿ ಒಂದೆರಡು ಅದ್ಭುತ ಪ್ರದರ್ಶನವನ್ನು ನಿಡಿದ್ದಾರೆ ಅಕ್ಷರ್. ಆದರೆ ಅಕ್ಷರ್ ಅವರಿಂದ ಬೌಲಿಂಗ್‌ನಲ್ಲಿ ದೊಡ್ಡ ಮಟ್ಟದ ನಿರೀಕ್ಷೆಯಿದೆ. ಹೀಗಾಗಿ ಈ ಬಾರಿಯ ದಕ್ಷಿಣ ಆಪ್ರಿಕಾ ಪ್ರವಾಸದಲ್ಲಿ ದೊರೆಯುವ ಅವಕಾಶವನ್ನು ಮತ್ತೊಮ್ಮೆ ಅದ್ಭುತ ರೀತಿಯಲ್ಲಿ ಬಳಸಿಕೊಳ್ಳಬೇಕಿದೆ.

ರಿಷಭ್ ಪಂತ್

ರಿಷಭ್ ಪಂತ್

ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಭ್ ಪಂತ್ ಈ ಬಾರಿಯ ಐಪಿಎಲ್‌ನಲ್ಲಿ ಅಭಿಮಾನಿಗಳನ್ನು ಹೆಚ್ಚು ನಿರಾಸೆಗೊಳಿಸಿದ ಆಟಗಾರ ಎಂದರೆ ತಪ್ಪಾಗಲಾರದು. ಫಾರ್ಮ್ ಕಳೆದುಕೊಳ್ಳದೆ ಇದ್ದರೂ ರಿಷಭ್ ಪಂತ್ ಅದ್ಭುತ ಆರಂಭವನ್ನು ದೊಡ್ಡ ಮೊತ್ತವನ್ನಾಗಿ ಪರಿವರ್ತಿಸಲು ಹೆಚ್ಚಿನ ಸಂದರ್ಭಗಳಲ್ಲಿ ವಿಫಲವಾಗಿದ್ದಾರೆ. ಅನಾವಶ್ಯಕ ಹೊಡೆತಗಳ ಮೂಲಕ ತಮ್ಮ ವಿಕೆಟ್‌ಗಳನ್ನು ಪಂತ್ ಉಡುಗೊರೆಯಾಗಿ ನೀಡುತ್ತಿದ್ದರು. ಆದರೆ ನಾಯಕನಾಗಿ ಪಂತ್ ಅವರಿಂದ ಮತ್ತಷ್ಟು ಜವಾಬ್ಧಾರಿಯ ಪ್ರದರ್ಶನಗಳನ್ನು ನಿರೀಕ್ಷಿಸಲಾಗುತ್ತಿತ್ತು. ಈ ಬಾರಿಯ ಐಪಿಎಲ್‌ನಲ್ಲಿ ಆಡಿದ 14 ಪಂದ್ಯಗಳಲ್ಲಿ ಪಂತ್ 340 ರನ್ ಗಳಿಸಿದ್ದಾರೆ. ಅವರ ಸರಾಸರಿ 30.91. ಇನ್ನು ಸ್ಟ್ರೈಕ್‌ರೇಟ್ ವಿಚಾರಕ್ಕೆ ಬಂದರೆ ಅದ್ಭುತವಾಗಿದ್ದು 151.79ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ್ದಾರೆ. ಆದರೆ ದುರದೃಷ್ಟವಶಾತ್ ರಿಷಭ್ ಪಂತ್ ಈ ಬಾರಿಯ ಐಪಿಎಲ್‌ನಲ್ಲಿ ಒಂದೇ ಒಂದು ಅರ್ಧ ಶತಕವನ್ನು ಬಾರಿಸಿಲ್ಲ. ಹೀಗಾಗಿ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ರಿಷಭ್ ಪಂತ್ ಮೇಲೆ ದೊಡ್ಡ ನಿರೀಕ್ಷೆಯಿದೆ.

For Quick Alerts
ALLOW NOTIFICATIONS
For Daily Alerts
Story first published: Tuesday, June 7, 2022, 11:27 [IST]
Other articles published on Jun 7, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X